Home Crime ಅಂಕಲ್ ಇಲ್ಲದಾಗ ಆಂಟಿ ಜೊತೆ ನಡೆಸ್ತಿದ್ದ ತುಂಟಾಟ..! ಕಪ್ಪು ಸುoದರಿಯ ಮೈದಾನಕ್ಕೆ ಮನಸೋತು ಕಟ್ಟಿದ್ದ ಚಟ್ಟ..!

ಅಂಕಲ್ ಇಲ್ಲದಾಗ ಆಂಟಿ ಜೊತೆ ನಡೆಸ್ತಿದ್ದ ತುಂಟಾಟ..! ಕಪ್ಪು ಸುoದರಿಯ ಮೈದಾನಕ್ಕೆ ಮನಸೋತು ಕಟ್ಟಿದ್ದ ಚಟ್ಟ..!

6023
0
SHARE

ಅವತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಜಾಲಿಗೆರೆ ಅನ್ನೋ ಗ್ರಾಮದಲ್ಲಿ ಅವತ್ತು ಜನ ಬೆಳಗ್ಗೆ ಎದ್ದವರು ಮಾಮೂಲಿನಂತೆ ಇರಲಿಲ್ಲ. ಆ ಊರಿನ ಜನಕ್ಕೆ ಅವತ್ತು ಕೂತಲ್ಲಿ ಕೂರೋದಕ್ಕೆ ಆಗ್ತಿರಲಿಲ್ಲ. ನಿಂತಲ್ಲಿ ನಿಲ್ಲೋದಕ್ಕೆ ಆಗ್ತಿರಲಿಲ್ಲ.

ಜನರೆಲ್ಲಾ ಅವತ್ತು ತಲೆ ಮೇಲೆ ಬಿಸಿಲು ಸುಡ್ತಿದ್ರು ತಮ್ಮದೇ ಗ್ರಾಮದ ಬೆಟ್ಟವೊಂದನ್ನ ಹತ್ತೋದಕ್ಕೆ ಶುರುಮಾಡಿದ್ರು. ಹುಡುಗರು, ಮುದುಕರು ಎಲ್ಲಾ ಸೇರಿ ಆ ಕಲ್ಲುಬಂಡೆಗಳ ಬೆಟ್ಟವನ್ನ ಹತ್ತೋದಕ್ಕೆ ಶುರುಮಾಡಿದ್ರು. ಏದುಸಿರು ಬಿಡುತ್ತಾ ಆ ಬಿಸಿಲಿನಲ್ಲಿ ಬೆಟ್ಟ ಹತ್ತುತ್ತಾ ಇದ್ರು. ಅವತ್ತು ಜನರೆಲ್ಲಾ ಅತ್ತ ಹೋಗೋದಕ್ಕೆ ಕಾರಣನು ಇತ್ತು. ಯಾಕಂದ್ರೆ ಅವತ್ತು ಬೆಳಗ್ಗೆ ಗುಡ್ಡದ ಮೇಲೆ ಚೊಂಬು ಹಿಡಿದು ಹೋದವನಿಗೆ ದೂರದಲ್ಲಿ ಯಾರು ಮಲಗಿದ್ದ ಹಾಗೆ ಕಾಣಿಸಿತ್ತು. ಯಾರೋ ಕುಡಿದು ಬಿದ್ದಿರಬೇಕು ಅಂತ ಆತ ಅಂದುಕೊಂಡಿದ್ದ. ನಂತ್ರ ಆತ ತನ್ನ ಕೆಲಸ ಮುಗಿಸಿಕೊಂಡು ಸ್ವಲ್ಪ ದೂರ ನಡೆದು ಹೋಗಿ ಏನಾಗಿದೆ ಅಂತ ನೋಡಿದ್ದ.ಅಲ್ಲಿ ಹೋಗಿ ಬಗ್ಗಿ ನೋಡ್ತಿದ್ದ ಹಾಗೆ ಅವನಿಗೆ ಜೀವವೆಲ್ಲಾ ಬಾಯಿಗೆ ಬಂದಿತ್ತು.

ಯಾಕಂದ್ರೆ ಯಾರೋ ಮಲಗಿದ್ದಾರೆ ಅಂತ ಹೋಗಿ ನೋಡಿದ್ದ ಆತನಿಗೆ ಕಂಡಿದ್ದು ಡೆಡ್ ಬಾಡಿ. ಫುಲ್ ಕೊಳೆತು ನಾರುತ್ತಿದ್ದ ಬಾಡಿಯನ್ನ ನೋಡಿ ಆತ ಸತ್ನೋ ಬದಕಿದ್ನೋ ಅಂತ ಅಲ್ಲಿಂದ ಪಂಚೆ ಮೇಲಕ್ಕೆ ಕಟ್ಟಿಕೊಂಡು ಓಡಿ ಬಂದಿದ್ದ. ಒಂದೇ ಉಸಿರಿಗೆ ಆ ಕಣಿವೆ ಪ್ರದೇಶದಿಂದ ಆತ ಊರಿನ ಕಡೆ ಓಡಿ ಬಂದಿದ್ದ. ಅಲ್ಲದೆ ಜನರಿಗೆ ಅಲ್ಲಿ ತಾನು ನೋಡಿದ ದೃಶ್ಯದ ಬಗ್ಗೆ ವಿವರವಾಗಿ ಹೇಳಿದ್ದ. ಅಲ್ಯಾರೋ ಯಾವನನ್ನೋ ಕೊಲೆ ಮಾಡಿ ಹಾಕಿದ್ದಾರೆ ಅಂತ ಹೇಳಿದ್ದ. ಹೀಗಾಗಿ ಜನರೆಲ್ಲಾ ಅದ್ಯಾರು ಅಂತ ನೋಡೋಣ ಅಂದುಕೊಂಡು ಅಲ್ಲಿಗೆ ಹೊರಟಿದ್ರು. ಆ ಬಿಸಿಲಲ್ಲಿ ಜನರೆಲ್ಲಾ ಆ ಡೆಡ್ ಬಾಡಿಯನ್ನ ನೋಡಿ ವಾಂತಿ ಮಾಡಿಕೊಳ್ಳೋದು ಒಂದು ಬಾಕಿಯಿತ್ತು. ಯಾಕಂದ್ರೆ ಅದಾಗ್ಲೇ ಕೊಲೆಯಾಗಿ ಎರಡು ಮೂರು ದಿನ ಕಳೆದು ಹೋಗಿತ್ತು.

ಹೀಗಾಗಿ ಬಾಡಿ ಫುಲ್ ವಾಸನೆ ಬರೋದಕ್ಕೆ ಶುರುವಾಗಿತ್ತು.ಆ ಹೆಣದ ಮುಖವನ್ನ ಬೇರೆ ಕಲ್ಲು ಎತ್ತಿಹಾಕಿ ಜಜ್ಜಿದ್ದ ಕಾರಣ ಮುಖದ ಗುರುತು ಪತ್ತೆಯಾಗ್ತಿರಲಿಲ್ಲ. ಅಲ್ಲದೆ ಅವನನ್ನ ನೋಡಿದ್ರೆ ಆ ಊರಿನವರು ಅಂತಾನು ಅನಿಸ್ತಿರಲಿಲ್ಲ. ಹೀಗಾಗಿ ಊರೋರೆಲ್ಲಾ ಸೇರಿ ಪೊಲೀಸ್ರಿಗೆ ಫೋನ್ ಮಾಡಿದ್ರು. ನಂತ್ರ ಬೆಳವಂಗಲ ಪೊಲೀಸ್ರು ಅಲ್ಲಿಗೆ ಬಂದು ವಿಚಾರಣೆ ಶುರುಮಾಡಿದ್ರು. ಪೊಲೀಸ್ರು ಆ ಬಾಡಿಯ ಫೋಟೋವನ್ನ ತೆಗೆದುಕೊಂಡ್ರು. ಅಲ್ಲದೆ ಇವನು ಯಾರಿಗಾದ್ರು ಈ ಊರಲ್ಲಿ ಪರಿಚಯ ಇದ್ದಾನ, ಇವನ ಊರು ಯಾವುದು ಅನ್ನೋದು ಯಾರಿಗಾದ್ರು ಗೊತ್ತಾ ಅಂತ ವಿಚಾರಿಸಿದ್ರು. ಆದ್ರೆ ಅಲ್ಲಿ ಬಂದಿದ್ದವರಿಗೆ ಇವನ್ಯಾರು ಅನ್ನೋದು ಗೊತ್ತೇ ಇರಲಿಲ್ಲ. ಇವನನ್ನ ಈ ಹಿಂದೆ ಎಲ್ಲಿಯೂ ನೋಡಿಲ್ಲ ಅಂತಾನು ಹೇಳಿದ್ರು. ಹೀಗಾಗಿ ಪೊಲೀಸ್ರು ಬಾಡಿಯನ್ನ ಪೋಸ್ಟ್ ಮಾರ್ಟ್ ಗೆ ಶಿಫ್ಟ್ ಮಾಡಿದ್ರು. ಅಲ್ಲದ ಆ ಜಾಗದದಲ್ಲಿ ಏನಾದ್ರು ಸಾಕ್ಷಿ ಸಿಗಬಹುದ ಅಂತ ಹುಡುಕಾಡಿದ್ರು.

ಅಲ್ಲದೆ ಆ ಬಾಡಿಯನ್ನ ಶಿಫ್ಟ್ ಮಾಡೋ ಮೊದಲು ಅವರಿಗೆ ಒಂದು ಸಣ್ಣ ಸುಳಿವು ಸಿಕ್ಕಿತ್ತು. ಅದೇನಪ್ಪಾ ಅಂದ್ರೆ ಅವನು ಹಾಕಿದ್ದ ಶರ್ಟ್ ನಲ್ಲಿ ಹೆಸರುಘಟ್ಟದ ಟೈಲರ್ ಅಂಗಡಿಯೊಂದರ ಹೆಸರಿತ್ತು.ಹೀಗೆ ಪೊಲೀಸ್ರಿಗೆ ಅವನದ್ದು ಹೆಸರುಘಟ್ಟ ಇರಬಹುದು ಅಂತ ಅಂದುಕೊಂಡಿದ್ರು. ಅಲ್ಲದೆ ಅವ್ರು ಆ ಶವದ ಶರ್ಟ್ ಅನ್ನ ಚೆಕ್ ಮಾಡಿದಾಗ ಯಶವಂತಪುರ ಟು ಮಾದನಾಯಕನಹಳ್ಳಿಯ ಒಂದು ಬಸ್ ಟಿಕೆಟ್ ಸಿಕ್ಕಿತ್ತು. ಪೊಲೀಸ್ರಿಗೆ ಈಗ ಮತ್ತೆ ಕನ್ ಫ್ಯೂಸ್ ಶುರುವಾಗಿತ್ತು. ಯಾಕಂದ್ರೆ ಒಂದು ಕಡೆ ಹೆಸರುಘಟ್ಟದ ಟೈಲರ್ ಶಾಪ್ ನ ವಿಳಾಸವಿದೆ. ಇನ್ನೊಂದು ಕಡೆ ಮಾದನಾಯಕನಹಳ್ಳಿಯ ಟಿಕೆಟ್ ಬೇರೆ ಇದ್ದಿದ್ರಿಂದ ಪೊಲೀಸ್ರಿಗೆ ಯಾವ ಊರು ಅನ್ನೋದು ಸ್ವಲ್ಪ ಕನ್ ಫ್ಯೂಸ್ ಆಗಿತ್ತು. ಆದ್ರು ಪೊಲೀಸ್ರು ಮೊದಲು ಹೆಸರುಘಟ್ಟಕ್ಕೆ ಹೋಗಿ ನೋಡೋಣ ಅಂತ ಹೇಳಿ ಹೋಗಿದ್ರು.

ಆಗ ಅವ್ರಿಗೆ ಆ ಟೈಲರ್ ಅಂಗಡಿಯವನು ಆತನ ಗುರುತು ಯಾವುದು ಅವನ ಊರು ಯಾವುದು ಅನ್ನೋದನ್ನೆಲ್ಲಾ ಅವರಿಗೆ ಹೇಳಿದ್ದ. ನಂತ್ರ ಪೊಲೀಸ್ರು ಆ ಊರನ್ನ ಹುಡ್ಕೊಂಡು ಹೋಗಿ ಅವನ ಮನೆಯನ್ನ ಪತ್ತೆ ಹಚ್ಚಿದ್ರು. ನಂತ್ರ ಪೊಲೀಸ್ರು ಅವನ ಮನೆಗೆ ಹೋಗಿ ನಡೆದದ್ದೆಲ್ಲವನ್ನ ಹೇಳಿದ್ರು. ಆ ಮನೆಯಲ್ಲಿದ್ದ ಆತನ ಪತ್ನಿಗೆ ಬಾರಮ್ಮ ಆ ಬಾಡಿಯನ್ನ ಐಡೆಂಟಿ ಫೈ ಮಾಡು. ನಿನ್ನ ಗಂಡನದ್ದೆ ಆ ಶವ ಆಗಿದ್ರೆ ನಿನಗೆ ಆ ಬಾಡಿಯನ್ನ ಹಸ್ತಾಂತರ ಮಾಡ್ತೀವಿ ಅಂತ ಹೇಳಿದ್ರು.ಪೊಲೀಸ್ರು ತನಿಖೆ  ಶುರುಮಾಡಿದ ಮೇಲೆ ಆತನ ಊರಿಗೆ ಹೋಗಿ ಒಂದಷ್ಟು ಮಾಹಿತಿಯನ್ನ ಕಲೆಹಾಕಿದ್ರು. ಆ ಮಾಹಿತಿ ಪೊಲೀಸ್ರ ಇನ್ವೆಸ್ಟಿಗೇಷನ್ ಗೆ ಅಷ್ಟೇನು ಹೆಲ್ಪ್ ಮಾಡಲಿಲ್ಲ. ಯಾಕಂದ್ರೆ ಊರಲ್ಲಿ ಯಾರು ಕೂಡಾ ಆತನ ಬಗ್ಗೆ ನೆಗೆಟಿವ್ ಆಗಿ ಮಾತನಾಡಲಿಲ್ಲ.

ಆ ಬೆಟ್ಟದ ಮೇಲೆ ಕೊಲೆಯಾಗಿ ಬಿದ್ದಿದ್ದ ವ್ಯಕ್ತಿ ಉಮೇಶ್ ಅಂತ. ಅವನು ಪ್ಲಂಬಿಂಗ್ ಕೆಲಸ ಮಾಡ್ಕೊಂಡಿದ್ದ.  ಅವನಾಯ್ತು ಅವನ ಕೆಲಸ ಆಯ್ತು ಅಂತ ಇದ್ದ. ಅದನ್ನ ಬಿಟ್ಟು ಬೇರೆ ಯಾರಿಗೂ ತೊಂದರೆ ಕೊಡುವಂತಹ ವ್ಯಕ್ತಿ ಅವನು ಆಗಿರಲಿಲ್ಲ ಅಂತ ಊರಿನ ಜನ ಹೇಳಿದ್ರು. ಇನ್ನು ಪೊಲೀಸ್ರು ಇದೆಲ್ಲಾ ಮುಗಿದ ಬಳಿಕ ಆತನ ಪತ್ನಿ ಗಾಯತ್ರಿಯನ್ನ ವಿಚಾರಿಸೋಣ ಅಂತ ಮನೆಗೆ ಹೋಗಿದ್ರು. ಆದ್ರೆ ಆತನ ಬಗ್ಗೆ ಆಕೆಗೆ ಯಾವುದೇ ಸರಿಯಾದ ಮಾಹಿತಿಯೇ ಇರಲಿಲ್ಲ. ಸರ್ ಅವನು ಯಾವಾಗ್ಲೂ ಕೆಲಸಕ್ಕೆ ಹೋಗ್ತಿರಿಲಿಲ್ಲ. ಕೆಲಸ ಸಿಕ್ಕಿದಾಗ ಹೋಗ್ತಿದ್ದ, ಬರ್ತಿದ್ದ ಅಷ್ಟೆ. ನಾನು ಗಾರ್ಮೆಂಟ್ಸ್ ಒಂದಕ್ಕೆ ಕೆಲಸಕ್ಕೆ ಹೋಗ್ತಿದ್ದೀನಿ. ಅದ್ರಿಂದಲೇ ಮನೆಯನ್ನ ನೋಡಿಕೊಳ್ತಿದ್ದೀನಿ ಸರ್ ಅಂತ ಆಕೆ ಹೇಳಿದ್ಲು. ಅಲ್ಲದೆ ಅವನನ್ನ ಯಾರು ಯಾಕೆ ಕೊಲೆ ಮಾಡಿದ್ದಾರೆ ಅನ್ನೋದು ನನಗೆ ಗೊತ್ತೇ ಇಲ್ಲ ಅಂತ ಅವಳು ಪೊಲೀಸ್ರು ಮುಂದೆ ಕಣ್ಣೀರು ಹಾಕಿದ್ಲು.

ಗಂಡ ಸತ್ತ ಹೆಣ್ಣುಮಗಳೊಬ್ಬಳನ್ನ ಜಾಸ್ತಿ ನೋಯಿಸಬಾರದು ಅಂತ ಪೊಲೀಸ್ರು ಹಾಗೆ ಎದ್ದು ಬಂದಿದ್ದರು.ಅದಕ್ಕೂ ಮೊದಲು ಪೊಲೀಸ್ರು ಆತನ ಬಗ್ಗೆ ವಿಚಾರಿಸಿದ್ರು. ಆತನಿಗೆ ಯಾರ ಜೊತೆನಾದ್ರು ಗಲಾಟೆ ಇತ್ತ ಅನ್ನೋದನ್ನ ಕೇಳಿದ್ರು. ಅಲ್ಲದೆ ಯಾರ ಹತ್ತಿರನಾದ್ರು ಹಣಕಾಸಿನ ವ್ಯವಹಾರ ಮಾಡಿದ್ನ ಅಂತೆಲ್ಲಾ ಕೇಳಿದ್ರು. ಆದ್ರೆ ಆಕೆ ಅವರು ಯಾವ ವಿಚಾರವನ್ನು ನನ್ನ ಹತ್ತಿರ ಹೇಳ್ತಿರಲಿಲ್ಲ. ಅಲ್ಲದೆ ಹಣಕಾಸಿನ ವಿಚಾರಕ್ಕೂ ಯಾರ ಹತ್ತಿರವು ಗಲಾಟೆ ಮಾಡಿಕೊಂಡಿರಲಿಲ್ಲ ಅಂತ ಹೇಳಿದ್ಲು. ಇನ್ನು ಬೇರೆ ಯಾವುದೇ ಗಲಾಟೆಯ ಬಗ್ಗೆ.ಯೂ ನನಗೆ ಗೊತ್ತಿಲ್ಲ ಅಂತ ಹೇಳಿದ್ಲು. ಕಣ್ಣೀರು ಹಾಕ್ತ ಅಷ್ಟಕ್ಕೆ ಉತ್ತರ ಕೊಟ್ಟಿದ್ದ ಆಕೆಯನ್ನ ನೋಡಿ ಪೊಲೀಸ್ರಿಗೆ ಬೇಸರವಾಗಿತ್ತು. ಯಾಕಂದ್ರೆ ಈಗಷ್ಟೇ ಗಂಡನನ್ನ ಕಳೆದುಕೊಂಡಿದ್ದಾಳೆ.

ಈ ಅಮ್ಮ ಸ್ವಲ್ಪ ಸುಧಾರಿಸಿಕೊಳ್ಳಿ ಆರೋಪಿಗಳು ಇವತ್ತಲ್ಲ ನಾಳೆ ಸಿಗ್ತಾರೆ ಅಂತ ಪೊಲೀಸ್ರು ಮನೆಯಿಂದ ಹೊರಗೆ ಬಂದಿದ್ರು. ಪಾಪಾ ಬಡತನ ಬೇರೆ ಈಗ ಗಂಡ ಕೂಡಾ ಇಲ್ಲ. ಹೀಗಿರುವಾಗ ನಾವು ಅವಳಿಗೆ ತೊಂದರೆ ಕೊಡಬಾರದು ಅಂತ ಅಂದುಕೊಂಡಿದ್ರು. ಆದ್ರೆ ಪೊಲೀಸ್ರು ಇಂತಹ ಕಣ್ಣೀರಿನ ಕಥೆಯನ್ನ ತುಂಬಾನೇ ನೋಡಿರ್ತಾರೆ. ಅವರಿಗೆ ಈ ಕಣ್ಣೀರಿನ ಕಥೆಯ ಹಿಂದೆ ಬೇರೆ ಏನೋ ಇದ್ದ ಹಾಗೆ ಇದೆ ಅನ್ನೋದು ಗೊತ್ತಿತ್ತು. ಆದ್ರೆ ಅದನ್ನ ಅವ್ರು ಅವತ್ತು ಆಕೆಯ ಎದುರಿಗೆ ತೋರಿಸಿರಲಿಲ್ಲ. ಯಾವುದೇ ಅನುಮಾನಗಳು ಮತ್ತು ಸಾಕ್ಷಿಗಳು ಇಲ್ಲದೆ ಆಕೆಯನ್ನ ವಿಚಾರಿಸೋದು ಬೇಡ ಅಂತಾನೆ ಸುಮ್ಮನಿದ್ರು.ಆದ್ರೆ ಒಂದೆರಡು ದಿನ ಕಳೆಯೋ ಹೊತ್ತಿಗೆ ಪೊಲೀಸ್ರು ಮತ್ತೆ ಆಕೆಯ ಮನೆಗೆ ಬಂದಿದ್ರು. ಆಗ ನಿಜಕ್ಕೂ ಆಕೆ ಶಾಕ್ ಆಗಿದ್ರು. ಅವತ್ತು ಹೋಗಿದ್ದ ಪೊಲೀಸ್ರು ಮತ್ತೆ ಯಾಕೆ ಬಂದಿದ್ದಾರೆ ಅನ್ನೋದು ಆಕೆಗೆ ಗೊತ್ತಾಗಲಿಲ್ಲ. ಈ ಸಾರಿ ಪೊಲೀಸ್ರು ಆಕೆಯನ್ನ ಮನೆಯಲ್ಲಿ ಏನು ಮಾತನ್ನೇ ಆಡಿಸಲಿಲ್ಲ.

ಬಾರಮ್ಮ  ಗಾಡಿಯನ್ನ ಕೂತ್ಕೊ ಅಂತ ಹೇಳಿ ಆಕೆಯನ್ನ ಪೊಲೀಸ್ ಸ್ಟೇಷನ್ ಗೆ ಕರ್ಕೊಂಡು ಹೋಗಿದ್ದಾರೆ. ಅಲ್ಲಿ ಪೊಲೀಸ್ರು ಈ ಸಾರಿ ಬೇರೆ ಭಾಷೆಯಲ್ಲಿಯೇ ಮಾತನಾಡಿದ್ದಾರೆ. ಆಗ ಗಾಯತ್ರಿ ಬಾಯಲ್ಲಿ ಇಷ್ಟು ದಿನ ಗುಟ್ಟಾಗಿ ಇದ್ದ ವಿಷಯ ಅವತ್ತು ಹೊರಗೆ ಬಂದಿತ್ತು. ಪೊಲೀಸ್ರು ಅದ್ಯಾವಾಗ ಕೈಯಲ್ಲಿರೋ ಲಾಠಿಗೆ ಸ್ವಲ್ಪ ಕೆಲಸ ಕೊಟ್ರೋ ಆಗ ಆಕೆ ಒಂದು ಭಯಾನಕ ವಿಷಯವನ್ನ ಹೇಳಿದ್ಲು.ಸರ್ ನಾನೇ ಈ ಕೊಲೆ ಮಾಡಿಸಿದ್ದು. ಆದ್ರೆ ಕೊಲೆ ಮಾಡಿದವನು ಮಾತ್ರ ಬೇರೆ ಅಂತ ಹೇಳಿದ್ಲು. ಅಲ್ಲದೆ ಈ ಕೊಲೆಯನ್ನ ಕಿರಣ್ ಮತ್ತು ಅವನ ತಮ್ಮ ಸೇರಿ ಮಾಡಿದ್ದಾರೆ ಸರ್ ಅಂತ ಆಕೆ ಪೊಲೀಸ್ರ ಹತ್ತಿರ ಒನ್ ಶಾಟ್ ನಲ್ಲಿ ಎಲ್ಲಾ ವಿಷಯ ಹೇಳಿ ಮುಗಿಸಿದ್ಲು.  ಆ ಕಥೆಯನ್ನ ಕೇಳಿ ಖಾಕಿಗಳು ಕಕ್ಕಾಬಿಕ್ಕಿಯಾಗಿದ್ರ. ಏನು ಗೊತ್ತಿಲ್ಲದ ಅನಕ್ಷರಸ್ಥ ಹೆಣ್ಣೊಬ್ಬಳು ಏನೇನು ಮಾಡೋದಕ್ಕೆ ಸಾಧ್ಯ ಅನ್ನೋದು ಅವರಿಗೆ ಅನಿಸಿತ್ತು.

ಇವಳೇನಾದ್ರು ಸ್ವಲ್ಪ ಓದಿಕೊಂಡು ಬುದ್ಧಿವಂತಳಾಗಿ ಬಿಟ್ಟಿದ್ರೆ ಬೇರೆ ಇನ್ನೇನನ್ನೋ ಮಾಡ್ತಿದ್ಲು ಅಂತ ಅವರಿಗೆ ಅನಿಸಿತ್ತು. ಸರ್ ನನ್ನ ಗಂಡನನ್ನ ನಾನೇ ಕಿರಣ್ ಗೆ ಹೇಳಿ ಕೊಲ್ಲಿಸಿದೆ. ಅವನು ಸರಿಯಾಗಿ ಇದ್ದಿದ್ರೆ ನಾನ್ಯಾಕೆ ಇದನ್ನೆಲ್ಲಾ ಮಾಡಿಸ್ತಿದ್ದೆ ಅಂತ ಖಡಕ್ ಆಗಿ ಪೊಲೀಸ್ರಿಗೆ ಹೇಳಿದ್ಲು.ಗಾಯತ್ರಿ ಅವತ್ತು ಪೊಲೀಸ್ರ ಮುಂದೆ ಹೇಳಿದ್ದ ಕತೆಯನ್ನ ನಿಮ್ಮ ಮುಂದೆ ಇಡ್ತೀವಿ ನೋಡಿ. ಈ ಬ್ಲ್ಯಾಕ್ ಬ್ಯೂಟಿ ಕಿರಣ್ ಅನ್ನೋ ಇನ್ನು ಮೀಸೆ ಚಿಗುರದ ಹುಡುಗನನ್ನ ಹಿಡ್ಕೊಂಡು ಈ ಕೊಲೆ ಮಾಡಿಸಿದ್ಲು. ಈ ಕಿರಣ್ ಬೇರ್ಯಾರು ಅಲ್ಲ ಈ ಗಾಯತ್ರಿಗೆ ಸೆಕೆಂಡ್ ಗಂಡ ಆಗೋದಕ್ಕೆ ರೆಡಿಯಾಗಿದ್ದ ಭೂಪ. ಇವಳಲ್ಲಿ ಅದೇನು ಇದೆ ಅಂತ ಆಸೆ ಪಟ್ಟು ಕೊಲೆ ಮಾಡಿದ ಅನ್ನೋದನ್ನ ಆತನನ್ನೇ ಕೇಳಬೇಕು. ಈ ಕಿರಣ್ ತಾಯಿಯ ಊರು ಮಧುರೆ ಬಳಿಯ ಕೋಡಿಹಳ್ಳಿ. ಅಲ್ಲಿಗೆ ಆಗಾಗ ಹೋದಾಗ ಈ ಗಾಯತ್ರಿ ಪರಿಚಯವಾಗಿದ್ಲು. ಇವರಿಬ್ಬರ ಪರಿಚಯ ಕಾಫಿ ಟೀಗೆ ಮಾತ್ರವೇ ಸೀಮಿತವಾಗಿದ್ರೆ ಇವತ್ತು ಇಬ್ಬರು ಜೈಲಲ್ಲಿ ಕಾಲಕಳೆಯಬೇಕಿರಲಿಲ್ಲ.

ಆದ್ರೆ ಇವ್ರು ಮಾಡಿದ್ದು ಬೇರೆಯದ್ದೇ ಆಗಿತ್ತು. ಕಾಫಿ ಟೀ ಅಂತ ಮನೆಗೆ ಹೋದವನು ಗಾಯತ್ರಿಯನ್ನ ಪಟಾಯಿಸಿದ್ದ. ಗಾರ್ಮೆಂಟ್ಸ್ ಆಂಟಿ ಒಂದೇ ದಿನಕ್ಕೆ ಅವನ ಬಲೆಗೆ ಬಿದ್ದಿತ್ತು. ಅಲ್ಲಿಂದ ಅವಳ ಮನೆಯಲ್ಲಿ ಗಂಡನಿಲ್ಲದಾಗ ಕೆಲವು ಗಂಟೆಗೆ ಇವನೇ ಅವಳಿಗೆ ಗಂಡನಾಗಿ ಸಂಸಾರ ಮಾಡ್ತಿದ್ದ.ಸುಮಾರು ದಿನ ಇದು ಗುಟ್ಟಾಗಿಯೇ ಇತ್ತು. ಆದ್ರೆ ಎಷ್ಟು ದಿನ ಅಂತ ಇದ್ದು ಗುಟ್ಟಾಗಿ ಇರೋದಕ್ಕೆ ಸಾಧ್ಯ ಅಲ್ವಾ. ಇದು ಆಕೆಯ ಗಂಡನಿಗು ಗೊತ್ತಾಗಿತ್ತು. ಹೀಗಾಗಿ ಇನ್ನು ಇವನನ್ನ ಸುಮ್ಮನೆ ಬಿಡಬಾರದು ಅಂತ ಇಬ್ಬರು ಒಂದು ತೀರ್ಮಾನಕ್ಕೆ ಬಂದಿದ್ರು. ಅಲ್ಲದೆ ಅವಳೇ ನೀನು ಇವನನ್ನ ಮುಗಿಸಿಬಿಟ್ರೆ ನಾನು ನಿನಗೆ ಪರ್ಮನೆಂಟ್ ಆಗಿ ಸಿಕ್ತೀನಿ ಅಂತ ಹೇಳಿದ್ಲು. ಈಗಷ್ಟೇ ವಯಸ್ಸಿಗೆ ಬಂದಿದ್ದವನು ಇವಳ ಹತ್ತಿರ ಅದೇನು ಸುಖ ನೋಡಿದ್ನೋ ಗೊತ್ತಿಲ್ಲ. ಗಾಯತ್ರಿ ನಿನಗಾಗಿ ನಾನು ಅವನನ್ನ ಮುಗಿಸ್ತೀನಿ ಅಂತ ಹೇಳಿದ್ದ.

ನಂತ್ರ ಒಂದು ತಾನೇ ಬಂದು ಈ ಉಮೇಶ್ ನನ್ ತನ್ನ ಊರಾದ ರಾಜಘಟ್ಟಕ್ಕೆ ಕರ್ಕೊಂಡು ಹೋಗಿದ್ದಾನೆ. ನಂತ್ರ ಅಲ್ಲಿ  ಆತನಿಗೆ ಚೆನ್ನಾಗಿ ಕುಡಿಸಿದ್ದಾನೆ. ಅಲ್ಲದೆ ಮನೆಯಲ್ಲಿ ಬಾಡೂಟ ಮಾಡಿಸಿ ಮತ್ತೆ ಕುಡಿಸಿದ್ದಾನೆ. ಅವನು ಫುಲ್ ಟೈಟ್ ಆಗಿದ್ದಾನೆ ಅನ್ನೋದು ಗೊತ್ತಾಗ್ತಿದ್ದ ಹಾಗೆ ಕಿರಣ್ ತನ್ನ ತಮ್ಮನನ್ನ ಕರ್ಕೊಂಡು ಇವನನ್ನ ಬೈಕ್ ನಲ್ಲಿ ಕೂರಿಸಿಕೊಂಡು ಬೆಟ್ಟಕ್ಕೆ ಹೋಗಿದ್ದಾರೆ.ಅಲ್ಲಿಗೆ ಹೋಗ್ತಿದ್ದ ಹಾಗೆ ವೈರ್ ನಿಂದ ಇಬ್ಬರು ಆತನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತ್ರ ಯಾರಿಗೂ ಅನುಮಾನ ಬರಬಾರದು ಅನ್ನೋ ಕಾರಣಕ್ಕೆ ಮುಖದ ಮೇಲೆ ಕಲ್ಲು ಎತ್ತಿ ಹಾಕಿದ್ರು. ನಂತ್ರ ಕಿರಣ್ ಮತ್ತು ಆತನ ಅಪ್ರಾಪ್ತ ತಮ್ಮ ಇಬ್ಬರು ಅಲ್ಲಿಂದ ಕಾಲು ಕಿತ್ತಿದ್ರು. ಇಷ್ಟು ಕಥೆಯನ್ನ ಆಕೆ ಪೊಲೀಸ್ರ ಮುಂದೆ ಹೇಳಿದ್ಲು.

ಈ ಕಥೆ ಕೇಳಿನೇ ಪೊಲೀಸ್ರು ಶಾಕ್ ಆಗಿದ್ದು. ನಂತ್ರ ಇವಳು ಕೊಟ್ಟ ಮಾಹಿತಿಯ ಮೇಲೆ ಕಿರಣ್ ಮತ್ತು ಆತನ ಅಪ್ರಾಪ್ತ ತಮ್ಮನನ್ನ ಬಂಧಿಸಿದ್ದಾರೆ. ಆತನನ್ನ ಠಾಣೆಗೆ ಕರ್ಕೊಂಡು ಬಂದು ವಿಚಾರಣೆ ನಡೆಸಿದಾಗ ಆತ ಕೂಡಾ ಈ ಆಂಟಿ ಅಂದ್ರೆ ನನಗೆ ತುಂಬಾನೆ ಇಷ್ಟ ಸರ್ ಅದಕ್ಕೆ ಅಡ್ಡಯಿದ್ದ ಅಂಕಲ್ ನನ್ನ ಮುಗಿಸಿಬಿಟ್ಟೆ ಅಂತ ಹೇಳಿದ್ದ.ಇದೀಗ ಪೊಲೀಸ್ರು ಮೂವರನ್ನ ಬಂಧಿಸಿದ್ದಾರೆ. ಓದಿ ಬುದ್ಧಿವಂತರಾದ ಹೆಣ್ಣಿಗಿಂತ ಅನಕ್ಷರಸ್ಥ ಹೆಣ್ಣ ಬಹಳ ಅಪಾಯಕಾರಿ. ಆಕೆ ಒಮ್ಮೆ ಕೆಟ್ಟದನ್ನ ಮಾಡಬೇಕು ಅಂತ ಪ್ಲಾನ್ ಮಾಡಿದ್ರೆ ಅದನ್ನ ಸದ್ದಿಲ್ಲದೆ ಮಾಡಿ ಮುಗಿಸಿಬಿಡ್ತಾಳೆ. ಅದ್ರಲ್ಲು ಹಳ್ಳಿಯಿಂದ ಬಂದು ಸಿಟಿ ಲೈಫ್ ಅನ್ನ ನೋಡಿದ ಹೆಣ್ಣು ಮಕ್ಕಳು ಇಂತಹ ಕ್ರಿಮಿನಲ್ ಗಳಾಗಿ ಬದಲಾಗಿರೋ ಪಟ್ಟಿಗೆ ಇವಳು ಸೇರ್ಕೊಂಡಿದ್ದಾಳೆ.  ಅವರಿಬ್ಬರು ಸೇರಿ ಎಲ್ಲಾದ್ರು ತಮಗಿಷ್ಟ ಬಂದ ಹಾಗೆ ಬದುಕಬಹುದಿತ್ತು. ಆದ್ರೆ ತಪ್ಪನ್ನೇ ಮಾಡದ ಉಮೇಶನ್ನ ಅದ್ಯಾಕೆ ಕೊಲೆ ಮಾಡಿದ್ರೋ ಗೊತ್ತಿಲ್ಲ.

LEAVE A REPLY

Please enter your comment!
Please enter your name here