
ಅಂಡರ್ 19 ವಿಶ್ವಕಪ್ ಗೆದ್ದ ಭಾರತ ಕಿರಿಯರ ತಂಡಕ್ಕೆ ಭರ್ಜರಿ ಬಹುಮಾನ; ಆಟಗಾರರಿಗೆ ಬಿಸಿಸಿಐ ಕೊಟ್ಟ ಮೊತ್ತ ಎಷ್ಟು?
ಆ್ಯಂಟಿಗಾ: ಹಲವು ಸವಾಲುಗಳನ್ನ ಮೆಟ್ಟಿನಿಂತು ಭಾರತದ ಕಿರಿಯರ ತಂಡ 5ನೇ ಬಾರಿ ಅಂಡರ್-19 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ನಲ್ಲಿ ಇಂಗ್ಲೆಂಡನ್ನು ಮಣಿಸಿದ ತಂಡ ದೇಶಕ್ಕೆ ಮತ್ತೊಂದು ಪ್ರಶಸ್ತಿ ಗೆದ್ದುಕೊಟ್ಟಿದೆ. ದಾಖಲೆಯ ಐದನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡ ಯಂಗಿಸ್ತಾನಕ್ಕೆ ಬಿಸಿಸಿಐ ಬಂಪರ್ ಬಹುಮಾನ ಘೋಷಿಸಿದೆ. ಕಳೆದ ಬಾರಿ ಬಾಂಗ್ಲಾದೇಶ ವಿರುದ್ಧ ಫೈನಲ್ನಲ್ಲಿ ಸೋತು ರನ್ನರ್-ಅಪ್ ಆಗಿದ್ದ ತಂಡ ಈ ಬಾರಿ ಆ ತಪ್ಪನ್ನು ಮಾಡಲಿಲ್ಲ. ಟೂರ್ನಿಯುದ್ದಕ್ಕೂ ಅಜೇಯವಾಗಿಯೇ ಫೈನಲ್ ತಲುಪಿದ್ದ ಯಶ್ ಧುಳ್ ನಾಯಕತ್ವದ ತಂಡ ಫೈನಲಲ್ಲಿ ಮಾಜಿ ಚಾಂಪಿಯನ್ನರನ್ನು ಬಗ್ಗುಬಡಿಯಿತು. ಭಾರತೀಯ ಕ್ರಿಕೆಟ್ ಭವಿಷ್ಯವನ್ನು ಬೆಳಗಿಸುವ ತಾರೆಗಳಾಗಿ ಉದಯಿಸಿ ಬಂದವರ ಬಗ್ಗೆ ದೇಶದೆಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.