Home District ಅಂತರಜಾತಿ ವಿವಾಹಕ್ಕೆ ಪೋಷಕರ ವಿರೋಧ..!ಮೈಸೂರಿನ ಒಡನಾಡಿ ಪೌರೋಹಿತ್ಯದಲ್ಲಿ ದಂಪತಿಗಳಾದ ಪ್ರೇಮಿಗಳು..

ಅಂತರಜಾತಿ ವಿವಾಹಕ್ಕೆ ಪೋಷಕರ ವಿರೋಧ..!ಮೈಸೂರಿನ ಒಡನಾಡಿ ಪೌರೋಹಿತ್ಯದಲ್ಲಿ ದಂಪತಿಗಳಾದ ಪ್ರೇಮಿಗಳು..

557
0
SHARE

ಅಂತರ ಜಾತಿ ಎಂಬ ಕಾರಣಕ್ಕೆ ಪೋಷಕರು ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳು ಮೈಸೂರಿನ ಒಡನಾಡಿ ಪೌರೋಹಿತ್ಯದಲ್ಲಿ ಸತಿ ಪತಿಗಳಾಗಿದ್ದಾರೆ. ಒಡನಾಡಿ ಸಂಸ್ಥೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಾಹ ನಡೆದಿದ್ದು, ದೇವರ ಮಕ್ಕಳು ಈ ಅಂತರಜಾತಿ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ.

ಅಂತರ ಜಾತಿ ಎಂಬ ಕಾರಣಕ್ಕೆ ಪ್ರೇಮಿಗಳ ವಿವಾಹಕ್ಕೆ ಹುಡುಗಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದಕ್ಕೆ , ಒಡನಾಡಿ ಸಂಸ್ಥೆ ಪೌರೋಹಿತ್ಯ ವಹಿಸಿ ಪ್ರೇಮಿಗಳನ್ನು ಒಂದುಗೂಡಿಸಿದೆ. ಮೈಸೂರಿನ ಅರವಿಂದ ನಗರದ ಶಿಲ್ಪ ಹಾಗೂ ವಿಜಯನಗರದ ಸಾಗರ್ ಎಂಬುವರು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ರು. ಹುಡುಗ ದಲಿತ ಎಂಬ ಕಾರಣಕ್ಕೆ ಶಿಲ್ಪಳ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ವಿಚಲಿತರಾದ ಪ್ರೇಮಿಗಳು ಒಡನಾಡಿ ಆಶ್ರಯ ಪಡೆದು ದಂಪತಿಗಳಾಗಿದ್ದಾರೆ.

ಆದರೆ, ಈ ಪ್ರೀತಿಗೆ ಹುಡುಗನ ಪೋಷಕರು ಒಪ್ಪಿಗೆ ಸೂಚಿಸಿ ಮದುವೆಯಲ್ಲೂ ಪಾಲ್ಗೊಂಡು ಆಶೀರ್ವಾದ ಮಾಡಿದ್ದಾರೆ. ಒಡನಾಡಿ ಸಂಸ್ಥೆಯ ಬುದ್ದ ಪ್ರತಿಮೆ ಮುಂದೆ ಹೂ ಮಾಲೆ ಬದಲಿಸಿಕೊಂಡ ಈ ನವ ಜೋಡಿಗೆ ಒಡನಾಡಿ ಸಂಸ್ಥೆಯ ಮಕ್ಕಳು ಅರಸಿ ಹಾರೈಸಿದ್ರು. ಜಾತಿಯನ್ನು ಮೀರಿದ ಪ್ರೀತಿಗೆ ಈ ಜೋಡಿ ಜೈ ಎಂದಿದ್ದು, ಹೊಸ ಬಾಳಿನ ಹಾದಿ ತುಳಿದಿದ್ದಾರೆ. ಒಡನಾಡಿ ಮಡಿಲಿನಲ್ಲಿ ಸತಿಪತಿಗಳಾಗಿದ್ದಾರೆ.

LEAVE A REPLY

Please enter your comment!
Please enter your name here