Home District ಅಂತ್ಯಕ್ರಿಯೆ ವೇಳೆ ಎದ್ದು ಕುಳಿತ ಮಹಿಳೆ..! ಸತ್ತು ಹೋಗಿದ್ದ ಮಹಿಳೆ ಬದುಕಿ ಬಂದಾಗ..!

ಅಂತ್ಯಕ್ರಿಯೆ ವೇಳೆ ಎದ್ದು ಕುಳಿತ ಮಹಿಳೆ..! ಸತ್ತು ಹೋಗಿದ್ದ ಮಹಿಳೆ ಬದುಕಿ ಬಂದಾಗ..!

2885
0
SHARE

ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಭಾವಿಸಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಸಾವಿನ ಸುದ್ದಿ ತಿಳಿದು ಸವದತ್ತಿ ಯಲ್ಲಮ್ಮನ ದರ್ಶಕ್ಕೆ ಹೋಗಿದ್ದ ಗ್ರಾಮಸ್ಥರೆಲ್ಲರೂ ವಾಪಸ್ ಬಂದಿದ್ರು. ಅಂತ್ಯಕ್ರಿಯೆ ಸಿದ್ಧತೆ ವೇಳೆ ಮಹಿಳೆ ಎದ್ದು ಕುಳಿತು ಅಚ್ಚರಿ ಮೂಡಿಸಿದ್ದಾಳೆ. ಎಲ್ಲಿ ಅಂತೀರಾ..!? ಮಹಿಳೆಯೊಬ್ಬರು ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಭಾವಿಸಿದ್ದರು. ಅಷ್ಟೇ ಅಲ್ಲ ಇಡೀ ಗ್ರಾಮಕ್ಕೆ ಸಾವಿನ ಸುದ್ದಿ ತಿಳಿಸಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಂಡಿದ್ದರು.

ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೋಗಿದ್ದ ಗ್ರಾಮಸ್ಥರು, ಸಂಬಂಧಿಗಳು ವಾಪಸ್ ಬಂದಿದ್ದರು. ಅಷ್ಟರಲ್ಲಿಯೇ ಎಲ್ಲರಿಗೂ ಅಚ್ಚರಿಯೊಂದು ಕಾದಿತ್ತು. ಮೃತಪಟ್ಟಿದ್ದಾಳೆ ಎಂದು ಭಾವಿಸಿದ್ದ ಮಹಿಳೆ ಮಾಲು ಯಲ್ಲಪ್ಪ ಚೌಗುಲೆ ಧೀಡೀರ್ ಎದ್ದು ಕುಳಿತಿದ್ದರು. ಇದನ್ನು ನೋಡಿ ಶಾಕ್ ಆದ ಮುಚ್ಚಂಡಿ ಕುಟುಂಬಸ್ಥರು ಗ್ರಾಮಸ್ಥರು ಅಲ್ಲಿಂದ ಕಾಲ್ಕಿತ್ತಿದ್ದರು. ಈ ಬಗ್ಗೆ ಮಹಿಳೆಗೆ ಗೊತ್ತಾಗೊದು ಬೇಡ ಎಂದು ಎಲ್ಲರೂ ಹೊರಟು ಹೋಗಿದ್ದರು.ಅಷ್ಟಕ್ಕೂ ಮಹಿಳೆ ಮಾಲು ಯಲ್ಲಪ್ಪ ಚೌಗುಲೆ ಮೆದುಳು ಸಂಬಂಧಿ ಕಾಯಿಲೆಯಿಂದ ಬಳುತ್ತಿದ್ದರು. ಎರಡು ದಿನಗಳ ಹಿಂದೆ ಈಕೆಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಇನ್ನೇನು ಮಹಿಳೆ ಬದುಕೊದಿಲ್ಲ ನೀವು ಬೇಕಾದ್ರೆ ಮನೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸಲಹೆಯಂತೆ ಮಹಿಳೆಯನ್ನು ಮನೆಗೆ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಬರಲಾಗಿತ್ತು.

ಈ ವೇಳೆ ಹಂಪ್ಸ್ ಗೆ ಆ್ಯಂಬುಲೆನ್ಸ್ ಜಿಗಿದಿದೆ. ಮಹಿಳೆಯ ಉಸಿರಾಟದಲ್ಲಿ ತೊಂದರೆಯುಂಟಾಗಿದೆ. ಮಹಿಳೆ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಭಾವಿಸಿದ್ದಾರೆ. ಎಲ್ಲರಿಗೂ ಸಾವಿನ ಸುದ್ಧಿ ಮುಟ್ಟಿಸಿ ಅಂತ್ಯಕ್ರಿಯೆಗೆ ಸಜ್ಜಾಗಿದ್ರು ಕುಟುಂಬಸ್ಥರು.ಇನ್ನು ಆ್ಯಂಬುಲೆನ್ಸ್ ಮುಚ್ಚಂಡಿ ಗ್ರಾಮಕ್ಕೆ ಆಗಮಿಸುವಷ್ಟರಲ್ಲಿಯೇ ಗ್ರಾಮದ ಜನ ಹಾಗೂ ಸಂಬಂಧಿಕರಿಗೆ ಸಾವಿನ ಸುದ್ದಿಯನ್ನು ಮುಟ್ಟಿಸಲಾಗಿತ್ತು. ಅಂತ್ಯಕ್ರಿಯೆಗೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇನ್ನೂ ಹುಣ್ಣಿಮೆ ಹಿನ್ನೆಲೆಯಲ್ಲಿ ಗ್ರಾಮದ ಜನ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಹೋಗಿದ್ದರು. ಸಾವಿನ ಸುದ್ದಿ ತಿಳಿದು ಅವರೆಲ್ಲರೂ ವಾಪಸ್ ಗ್ರಾಮಕ್ಕೆ ಮರಳಿದ್ದರು. ಇನ್ನೇನು ಅಂತ್ಯಕ್ರಿಯೆ ನಡೆಸಬೇಕು ಎನ್ನುವಷ್ಟರಲ್ಲಿಯೇ ಮಹಿಳೆ ಎದ್ದು ಕುಳಿತಿದ್ದಾರೆ. ತಕ್ಷಣ ಆಕೆಯನ್ನು ಬೇರೊಂದು ಕೊಠಡಿಗೆ ಕರೆದುಕೊಂಡು ಹೋಗಿ ಆರೈಕೆ ಮಾಡಲಾಗಿದೆ. ಇನ್ನೂ ಮಹಿಳೆ ಬದುಕಿರೋದು ಸವದತ್ತಿ ಯಲ್ಲಮ್ಮನ ಪವಾಡ ಅಂತಾರೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು.

ಒಟ್ಟಿನಲ್ಲಿ ಕುಟುಂಬಸ್ಥರ ತಪ್ಪಿನಿಂದ ಜೀವಂತ ಮಹಿಳೆಯ ಅಂತ್ಯಕ್ರಿಯೆಗೆ ಸಿದ್ದತೆ ನಡೆಸಲಾಗಿತ್ತು. ಆದರೇ ಅದೃಷ್ಟವಾಶಾತ್ ಅನಾಹುತವೊಂದು ತಪ್ಪಿದೆ. ಸದ್ಯ ಮಹಿಳೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಾವಿನ ಬಗ್ಗೆ ವೈದ್ಯರಿಂದ ದೃಢಪಟ್ಟ ಬಳಿಕವಷ್ಟೇ ಸಂಬಂಧಿಕರು ಹಾಗೂ ನೆರೆ ಹೊರೆಯವರಿಗೆ ಹೇಳಿದ್ರೆ ಇಂತಹ ಅವಾಂತರಗಳು ತಪ್ಪಲಿವೆ.

LEAVE A REPLY

Please enter your comment!
Please enter your name here