Home KARNATAKA ಅಂದು ಪ್ರೇಕ್ಷಕರ ಗ್ಯಾಲರಿ ಕಡೆ ಮಧ್ಯದ ಬೆರಳು ತೋರಿಸಿದ್ದರು ವಿರಾಟ್..!? 6 ವರ್ಷಗಳ ಹಿಂದಿನ ವಿವಾದದ...

ಅಂದು ಪ್ರೇಕ್ಷಕರ ಗ್ಯಾಲರಿ ಕಡೆ ಮಧ್ಯದ ಬೆರಳು ತೋರಿಸಿದ್ದರು ವಿರಾಟ್..!? 6 ವರ್ಷಗಳ ಹಿಂದಿನ ವಿವಾದದ ಅಸಲಿ ಸತ್ಯ ಇದೀಗ ಆಗಿದೆ ರಿವೀಲ್..!!

3177
0
SHARE

ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನ ಏಕಚಕ್ರಾಧಿಪತಿ. ಸಾಲು ಸಾಲು ದಾಖಲೆಗಳು ವಿರಾಟ್ ಖಾತೆಯಲ್ಲಿದೆ. ಆದ್ರೆ ಕ್ರಿಕೆಟ್ ನಲ್ಲಿ ತಮ್ಮದೇ ಆದ ಮುದ್ರೆಯೊತ್ತಿರೋ ಯಂಗ್ ಟೈಗರ್ ಅಂದು ಆಸೀಸ್ ನೆಲದಲ್ಲಿ ಅತಿದೊಡ್ಡ ತಪ್ಪನ್ನ ಮಾಡಿದ್ದರು. ಅದೊಂದು ವಿವಾದದಿಂದ ಕೊಹ್ಲಿಯ ಕ್ರಿಕೆಟ್ ಜೀವನವೇ ಖಲ್ಲಾಸ್ ಆಗುವಂತಹ ಪರಿಸ್ಥಿತಿ ಕೂಡ ಬಂದೊದಗಿತ್ತು. ಹಾಗಿದ್ರೆ ವಿರಾಟ್ ಕೊಹ್ಲಿ ವೃತ್ತಿ ಬದುಕಲ್ಲಿ ನಡೆದಿದ್ದು ಅದೆಂಥ ಕಹಿ ಘಟನೆ…

ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಮೋಸ್ಟ್ ಸಕ್ಸಸ್ ಫುಲ್ ಕ್ಯಾಪ್ಟನ್… ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ತಲ್ಲಣ ಉಂಟುಮಾಡ್ತಿರೋ ಆಟಗಾರ… ಮೈದಾನದಲ್ಲಿ ವಿರಾಟ್ ಹೆಚ್ಚು ಅಗ್ರೆಸ್ಸಿವ್ ಆಗಿರಲು ಇಚ್ಛಿಸುತ್ತಾರೆ. ಮುಯ್ಯಿಗೆ ಮುಯ್ಯಿ, ಏಟಿಗೆ-ಎದುರೇಟು, ಅನ್ನೋದ ಜಾಯಮಾನವನ್ನ ಕಿಂಗ್ ಕೊಹ್ಲಿ ಮೈಗೂಡಿಸಿದ್ದಾರೆ. ಹೀಗಾಗಿ ಅವರನ್ನ ಕೆಣಕಲು ಎದುರಾಳಿಗಳು ಕೂಡ ಕ್ಷಣಕಾಲ ಯೋಚಿಸುತ್ತಾರೆ.

ಸದ್ಯ ಕ್ರಿಕೆಟ್ ದುನಿಯಾದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರೋ ಕೊಹ್ಲಿ ಸಾಲು ಸಾಲು ದಾಖಲೆಗಳನ್ನ ಮಾಡ್ತಿದ್ದಾರೆ. ಅಲ್ಲದೇ ಈ ಹಿಂದಿನ ದಾಖಲೆಗಳನ್ನ ಒಂದಾದಾಗಿ ಪುಡಿಗಟ್ಟುತ್ತಾ ಸಾಗ್ತಿದೆ. ಆದ್ರೆ ಟೀಂ ಇಂಡಿಯಾ ಈ ಸೆನ್ಸೇಶನ್ ಸ್ಟಾರ್ 6 ವರ್ಷಗಳ ಹಿಂದೆ ಅತಿದೊಡ್ಡ ತಪ್ಪೊಂದನ್ನ ಮಾಡಿಬಿಟ್ಟಿದ್ದರು. ಆಸೀಸ್ ನೆಲದಲ್ಲಿ ಮಾಡಿದ್ದ ಆ ಒಂದು ತಪ್ಪು ವಿರಾಟ್ ಕ್ರಿಕೆಟ್ ಜರ್ನಿಗೆ ಫುಲ್ ಸ್ಟಾಪ್ ಹಾಕುವ ಮಟ್ಟಕ್ಕೆ ತಲುಪಿತ್ತು. ಅಲ್ಲದೇ ಆ ವಿವಾದದಿಂದ ಕೊಹ್ಲಿಯನ್ನ ಲೈಫ್ ಲಾಂಗ್ ಬ್ಯಾನ್ ಮಾಡಬೇಕು ಅನ್ನೋ ಚರ್ಚೆ ಕೂಡ ನಡೆದಿತ್ತು.

ಈ ಫೋಟೋನೊಮ್ಮೆ ನೋಡಿ….. ಯೆಸ್. ಇದೇ ಇದೇ ವಿಷ್ಯಕ್ಕೆ ಕೊಹ್ಲಿ ಅಂದು ಇಕ್ಕಿಟ್ಟಿಗೆ ಸಿಲುಕ್ಕಿದ್ದರು. 2012ರಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಅತ್ಯಂತ ಕೋಪ ತೋಡಿಕೊಂಡಿದ್ದರು. ಕ್ಷೇತ್ರ ರಕ್ಷಣೆ ಮಾಡುತ್ತಿದ್ದಾಗ ಕೊಹ್ಲಿಯನ್ನ, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಆಸಿಸ್ ಅಭಿಮಾನಿಗಳು ಛೇಡಿಸಿದ್ದರು. ಅಲ್ಲದೇ ಅಸಹ್ಯವಾಗಿ ನಿಂದಿಸುತ್ತಿದ್ದರು. ಆಸೀಸ್ ಅಭಿಮಾನಿಗಳ ಉಪಟಳಕ್ಕೆ ರೊಚ್ಚಿಗೆದ್ದಿದ್ದ ವಿರಾಟ್ ತಮ್ಮ ಮಧ್ಯದ ಬೆರಳನ್ನ ತೋರಿಸಿದ್ದರು.

ಕೊಹ್ಲಿಯ ಕೆಟ್ಟ ವರ್ತನೆಗೆ ಗ್ಯಾಲರಿಯಲ್ಲಿ ಕೂತಿದ್ದ ಫ್ಯಾನ್ಸ್ ಕೂಡ ಕೆಂಡಾಮಂಡಲವಾಗಿದ್ದರು. ಅಲ್ಲದೇ ಫೋಟೋಗಳನ್ನು ತೆಗೆದುಕೊಂಡಿದ್ದರು. ಇದು ಮರುದಿನವೇ ಪತ್ರಿಕೆಯಲ್ಲಿ ಕೊಹ್ಲಿ ಮಧ್ಯದ ಬೆರಳಿನ ಚಿತ್ರ ರಾರಾಜಿಸುತ್ತಿತ್ತು.ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿ ಮಧ್ಯಮದ ಬೆರಳಿನ ವಿಚಾರ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಇದನ್ನ ಗಂಭೀರವಾಗಿ ಪರಿಗಣಿಸಿದ್ದ ಮ್ಯಾಚ್ ರೆಫ್ರಿ ರಂಜನ್ ಮದುಗಲೆ ನಡೆದ ಘಟನೆ ಬಗ್ಗೆ ಕೊಹ್ಲಿಯನ್ನ ಕೇಳಿದ್ದರು.

ವಿರಾಟ್ ಕೂಡ ನಡೆದ ಕೆಟ್ಟ ಪರಿಸ್ಥಿತಿಯ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ರು. ಅಲ್ಲದೇ ದಯಾವಿಟ್ಟು ತಮ್ಮನ್ನ ಬ್ಯಾನ್ ಮಾಡಬೇಡಿ ಅಂತಾ ಪರಿ ಪರಿಯಾಗಿ ಕೇಳಿಕೊಂಡಿದ್ದರು.ವಿರಾಟ್ ಕೊಹ್ಲಿ : ಏನು ಆಗಿಲ್ಲ, ಕೇವಲ ಪ್ರೇಕ್ಷಕರು ಕಿರುಚಾಡುತ್ತಿದ್ದರು.!ರಂಜನ್ ಮದುಗಲೆ : ಇಲ್ಲಿ ನೋಡು ಪತ್ರಿಕೆಯಲ್ಲಿ ನಿನ್ನ ಅವಾಂತರ, ನೀನು ಮಧ್ಯದ ಬೆರಳು ತೋರಿಸಿರುವುದು ಪ್ರಕಟವಾಗಿದೆ.

ವಿರಾಟ್ ಕೊಹ್ಲಿ :ದಯವಿಟ್ಟು ನನ್ನನ್ನ ಕ್ಷಮಿಸಿ, ನನ್ನನ್ನ ನಿಷೇಧಿಸಬೇಡಿ. ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ನನ್ನನ್ನ ಅಸಭ್ಯವಾಗಿ ನಿಂದಿಸಿದ್ದರು. ತಾಯಿ ಹಾಗೂ ಸಹೋದರಿಯರ ಬಗ್ಗೆ ಕೆಟ್ಟ ಮಾತುಗಳನ್ನು ಹೇಳುತ್ತಿದ್ದರು. ಇದನ್ನ ಕೇಳಿಕೊಂಡು ಸುಮ್ಮನೆ ಇರಲು ಸಾಧ್ಯವಾಗಲಿಲ್ಲ.ಅಂದು ವಿರಾಟ್ ಕೊಹ್ಲಿಯ ಅಂತರಾಳವನ್ನ ಅರಿತಿದ್ದ ಮ್ಯಾಚ್ ರೆಫ್ರಿ ರಂಜನ್ ಮದುಗಲೆ, ಮೃದುಧೋರಣೆ ತಾಳಿದ್ದರು.

ಅಲ್ಲದೇ ಕೊಹ್ಲಿಯನನ್ನ ಕ್ಷಮಿಸಿ ಮತ್ತೊಂದು ಅವಕಾಶವನ್ನ ನೀಡಿದ್ದರು. ರೆಫ್ರಿ ರಂಜನ್ ತೆಗೆದುಕೊಂಡ ಅತ್ಯಮೂಲ್ಯ ನಿರ್ಧಾರ ವಿರಾಟ್ ವೃತ್ತಿ ಬದುಕನ್ನ ಬದಲಾಗಿಸುವಂತೆ ಮಾಡಿತ್ತು. ಅಲ್ಲದೇ ಕೊಹ್ಲಿ ತಮ್ಮ ಆಕ್ರಮಣಕಾರಿ ಪ್ರವೃತ್ತಿಯನ್ನ ಬಿಡದಿದ್ದರೂ, ಸಂದರ್ಭ, ಪರಿಸ್ಥಿತಿಗಳಿಗೆ ತಕ್ಕಂತೆ ವರ್ತಿಸೋದನ್ನ ಕಲಿತಿದ್ದಾರೆ. ಹೀಗಾಗಿ ಅವರೊಬ್ಬ ಪ್ರಬುದ್ಧ ಕ್ರಿಕೆಟರ್ ಆಗಿ ಬೆಳೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here