Home Cinema ಅಂದು ಮಾಸ್ತಿಗುಡಿ.. ಇಂದು ರಣಂ.. ಚಿತ್ರರಂಗಕ್ಕೆ ಮತ್ತೆ ಕಪ್ಪು ಚುಕ್ಕೆ..! ಬಲಿಯಾದ್ರು ಅಮಾಯಕರು, ಚಿತ್ರತಂಡದ ಬೇಜವಾಬ್ದಾರಿತನಕ್ಕೆ..!

ಅಂದು ಮಾಸ್ತಿಗುಡಿ.. ಇಂದು ರಣಂ.. ಚಿತ್ರರಂಗಕ್ಕೆ ಮತ್ತೆ ಕಪ್ಪು ಚುಕ್ಕೆ..! ಬಲಿಯಾದ್ರು ಅಮಾಯಕರು, ಚಿತ್ರತಂಡದ ಬೇಜವಾಬ್ದಾರಿತನಕ್ಕೆ..!

2026
0
SHARE

ಮಾಸ್ತಿಗುಡಿ ದುರಂತ ಕನ್ನಡ ಚಿತ್ರರಂಗದ ಬಹುದೊಡ್ಡ ಕಳಂಕ. ಈ ದುರಂತ ಸಂಭವಿಸಿದಾಗ ಸ್ಯಾಂಡಲ್‌ವುಡ್‌ಗೆ ಒಂದು ರೀತಿ ದಂಗು ಬಡಿಸಿದಂತ್ತು. ಈ ಘಟನೆ ಕನ್ನಡ ಚಿತ್ರರಂಗದಲ್ಲಿನ ಶೂಟಿಂಗ್ ಸಂದರ್ಭಗಳಲ್ಲಿನ ಅಜಾಗರೂಕತೆಗೆ ಕನ್ನಡಿ ಹಿಡಿದಿತ್ತು.

ಅಂತರಾಷ್ಟ್ರೀಯ ಮಟ್ಟದಲ್ಲಿ, ಕನ್ನಡ ಚಿತ್ರರಂಗದ ಮಾನ ಹರಾಜು ಹಾಕಿತ್ತು. ಈ ಘನಘೋರ ದುರಂತದ ಕಹಿ ನೆನಪು ಮಾಸುವ ಮುನ್ನವೇ ಇಂಥದ್ದೇ ಘಟನೆ ಮರುಕಳಿಸಿದೆ. ಬೇಜವಾಬ್ದಾರಿತನದಿಂದ ಸಿಲಿಂಡರ್ ಸ್ಟೋಟಗೊಂಡು ಎರಡು ಜೀವ ಬಲಿ ಪಡೆದುಕೊಂಡಿದೆ.ಯಸ್.. ಮಾಸ್ತಿಗುಡಿ ದುರಂತ ಸಂಭವಿಸಿ, ಎರಡು ವರ್ಷ ಆಗುತ್ತಾ ಬಂದಿದೆ. ಹೀಗಿದ್ದರೂ ಇನ್ನು ಚಿತ್ರರಂಗದವರ ಮನಸ್ಸಿನಿಂದ ಈ ಘಟನೆ ಮಾಸಿಲ್ಲ. ಇನ್ನು ದುರಂತವನ್ನ ನೆನೆದು ಮನೆಮಂದಿಯವರು ಕಣ್ಣೀರಿಡುತ್ತಿದ್ದಾರೆ.ಹೀಗಿರುವಾಗ್ಲೇ ಚಿರಂಜೀವಿ ಸರ್ಜಾ ಮತ್ತು ಆ ದಿನಗಳು ಚೇತನ್ ಅಭಿನಯಿಸುತ್ತಿರುವ ರಣಂ ಚಿತ್ರದ ಚಿತ್ರೀಕರಣದ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಇಬ್ಬರು ಅಮಾಯಕರನ್ನ ಬಲಿಪಡೆದುಕೊಂಡಿದೆ. ಘಟನೆ ನಡೆದ ಬಳಿಕ ಸ್ಥಳದಲ್ಲಿ ಪೋಲೀಸರಿಂದ ಮಹಜರ್ ಮಾಡಲಾಗಿದೆ.ಹೌದು.. ಅಂದು ಮಾಸ್ತಿಗುಡಿ ದುರಂತವಾದ ರೀತಿಯಲ್ಲಿಯೇ ರಣಂ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಸಿಲಿಂಡರ್ ಸ್ಟೋಟಗೊಂಡಿದೆ. ಬೆಂಗಳೂರಿನ ಬಾಗಲೂರು ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಚಿತ್ರದ ಸಾಹಸ ದೃಶ್ಯ ಚಿತ್ರೀಕರಣ ಮಾಡುವ ವೇಳೆ ಸ್ಫೋಟ ಸಂಭವಿಸಿದೆ.

ಬಾಗಲೂರಿನಿಂದ ಸೂಲಿಬೆಲೆಗೆ ಹೋಗುತ್ತಿದ್ದ ತಾಯಿ ಮಗಳು ರಸ್ತೆಯಲ್ಲಿ ಹಾದುಹೋಗ್ತಿದ್ರು. ಶೂಟಿಂಗ್‌ಗಾಗಿ ರೋಡ್ ಬ್ಲಾಕ್ ಮಾಡಿದ್ದರಿಂದ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಶೂಟಿಂಗ್ ವೀಕ್ಷಿಸುವಾಗ ಸಿಲಿಂಡರ್ ಸ್ಟೋಟಗೊಂಡು ಸ್ಥಳದಲ್ಲೇ ತಾಯಿ ಸುಮೇರಾತಾಜ್ ೨೮, ಮಗಳು ಅಹೇರಾ ೫ ವರ್ಷ ಮಗು ಸಾವಿಗೀಡಾಗಿದೆ.ಈ ದುರ್ಘಟನೆಯಲ್ಲಿ ಸುಮೇರಾ, ಅಹೇರಾ ಸ್ಥಳದಲ್ಲೇ ಸಾವಿಗೀಡಾದ್ರೆ. ಇನ್ನೊಂದು ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿಲಿಂಡರ್ ಹೊಡೆತಕ್ಕೆ ಸ್ಥಳದಲ್ಲೇ ದೇಹಗಳು ಛಿದ್ರ ಛಿದ್ರವಾಗಿದೆ.

ಕಳೆದ ಮೂರು ದಿನದಿಂದ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ವಿಜಯನ್ ಎಂಬ ಸಾಹಸ ನಿರ್ದೇಶಕ ಸ್ಟಂಟ್ ಕೋರಿಯಾಗ್ರಾಫ್ ಮಾಡ್ತಿದ್ರ. ಅದು ಶೆಲ್ ಕಂಪನಿ ಬಳಿ ಕಾರ್ ಬ್ಲಾಸ್ಟ್ ಮಾಡುವ ದೃಶ್ಯದ ಚಿತ್ರೀಕರಣ ಶೂಟ್ ಮಾಡಬೇಕಿತ್ತು. ಬಾಗಲೂರಿನಿಂದ ಸೂಲಿಬೆಲೆಗೆ ಹೋಗುತ್ತಿದ್ದ ಸಂಧರ್ಭದಲ್ಲಿ ಚಿತ್ರೀಕರಣ ನಡೆಯುತತಿದ್ದನ್ನ ಗಮನಿಸಿ ಆ ತಾಯಿ ಮತ್ತು ಮಕ್ಕಳು ಶೂಟಿಂಗ ನೋಡಲು ನಿಂತರು. ಅದೇ ಅವರ ಸಾವಿಗೆ ಕಾರಣವಾಗಿದ್ದು. ಅವರ ಸಂಬಂಧಿ ಚಿತ್ರತಂಡದ ನಿಲಕ್ಷಕ್ಕೆ ಹಿಡಿಶಾಪ ಹಾಕ್ತಿದ್ದಾರೆ.

ರಣಂ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಚೇತನ್‌ಗೆ ಟಾಲಿವುಡ್ ನಿರ್ದೇಶಕ ವಿ ಸಮುದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತೆಲುಗಿನಲ್ಲಿ ೨೦ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿರುವ ವಿ ಸಮುದ್ರ, ರಣಂ ಮೂಲಕ ಕನ್ನಡ ನಟನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ವಿಶೇಷ ಅಂದ್ರೆ ರಣಂ ತೆಲುಗು ಮತ್ತು ಕನ್ನಡ ಎರಡು ಭಾಷೆಯಲ್ಲು ತಯಾರಾಗುತ್ತಿದೆ. ಘಟನೆ ನಡೆದ ಸಂದರ್ಭದಲ್ಲಿ ನಟ ಚೇತನ್ ಹಾಜರಿರಲಿಲ್ಲ. ಈ ವಿಷಯ ತಿಳಿದ ಕೂಡಲೇ ಚೇತನ್ ಘಟನಾ ಸ್ಥಳಕ್ಕೆ ಆಗಮಿಸಿ. ಅವಘಡದ ಬಗ್ಗೆ ಬೇಸರ ವ್ಯಕ್ತಪಡಿದಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಆಗಿದ್ದು ನಿಜಕ್ಕೂ ಆಘಾತಕಾರಿ ವಿಚಾರ ಎನ್ನುವ ಚೇತನ್ ಮಾತುಗಳು ಇಲ್ಲಿದೆ.

ಸದ್ಯ ಘಟನೆಯ ಸಂಭಂದ ರಣಂ ಚಿತ್ರತಂಡದ ಆರ್. ಎಸ್. ಪ್ರೊಡಕ್ಷನ್ಸ್ ಮೇಲೆ ಎಫ್. ಐ. ಆರ್ ಕೂಡ ದಾಖಲಾಗಿದೆ. ಚಿತ್ರತಂಡದ ನಿರ್ಮಾಪಕ ಶ್ರೀನಿವಾಸ್ ಮತ್ತು ಇತರರ ಮೇಲೆ ಕೇಸ್ ದಾಖಲಾಗಿದೆ. ಐ. ಪಿ. ಸಿ ಸೆಕ್ಷನ್ ೩೦೪ ಅಡಿ ಎಫ್ ಐ ಆರ್ ದಾಖಲಾಗಿದೆ. ಅಲ್ಲದೆ ಚಿತ್ರ ನಟ ಚೇತನ್ ರಣನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಚೇತನ್ ಅವರ ಹೇಳಿಕೆಯನ್ನು ಪೋಲೀಸರು ದಾಖಲಿಸಿಕೊಂಡಿದ್ದಾರೆ.ಇನ್ನು ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಈ ರೀತಿ ಘಟನೆಗಳು ಆಗಿದ್ದಾಗ್ಲೇ ನಡೆಯುತ್ತಿರುತ್ತದೆ.

ಚಿತ್ರೀಕರಣಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ಸಹ ಚಿತ್ರತಂಡ ಮಾಡಿಕೊಳ್ಳ ಬೇಕಾಗುತ್ತದೆ. ಎಲ್ಲಾ ಅಂಶಗಳನ್ನು ಗಾಳಿಗೆ ತೂರಿ ಚಿತ್ರೀರಣಕ್ಕೆ ಬರುವುದರಿಂದ ದೊಡ್ಡ ಅನಾಹುತಗಳಿಗೆ ಎಡೆ ಮಾಡಿಕೊಟ್ಟಂತಾಗುತ್ತದೆ. ಶೂಟಿಂಗ್ ಸಮಯದಲ್ಲಿ ಚಿತ್ರತಂಡ ಸುರಕ್ಷಣಾ ಕ್ರಮಗಳನ್ನು ಬಳಸಿಕೊಂಡಿಲ್ಲ. ಸ್ಥಳದಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಸ್ಥಳಿಯ ಪೋಲೀಸರಿಂದ ಅನುಮತಿಯನ್ನು ಪಡೆದಿಲ್ಲ. ದುರ್ಘಟನೆ ನಡೆದ ಬಳಿಕ ಚಿತ್ರತಂಡ ಪ್ಯಾಕ್ ಆಪ್ ಮಾಡಿದೆ ಸ್ಥಳದಿಂದ ಕಾಲ್ಕಿತಿದ್ದು.

ತಪ್ಪಿಸುವ ಅವಕಾಶಗಳು ಅನೇಕ ರೀತಿಯಲ್ಲಿ ಇದ್ದದ್ರು, ಆದ್ರೆ ಅನ್‌ಫಾರ್ಚುನೆಟ್ಲಿ ತಪ್ಪಿಸಲು ಆಗದೆ ಇಬ್ಬರನ್ನು ಬಲಿ ಪಡೆದುಕೊಂಡಿದೆ.ಅದೇನೆ ಇದ್ರೂ ದುರಂತ ನಡೆದಿಹೋಗಿದೆ. ಇತ್ತ ಇಬ್ಬರನ್ನು ಕಳೆದುಕೊಂಡ ಸಂಬಂಧಿಕರ ಮನಸ್ಸು ಇವತ್ತು ಒದ್ದಾಡುತ್ತಿದೆ. ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡ ಸ್ಪೋಟ ನೆನಪಿನಲ್ಲಿ ಅಳುತ್ತಿದೆ. ಸ್ವಲ್ಪ ಮುಂಜಾಗೃತೆ.. ಸ್ವಲ್ಪ ಕಾಳಜಿ.. ಸ್ವಲ್ಪ ಪ್ರೊಪೆಷನಲಿಸಂ.. ಇಟ್ಟುಕೊಂಡು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ರೆ ರಣಂ ಚಿತ್ರದ ಸ್ಟೋಟಕ ದುರಂತ ನಡೆಯುತ್ತಿರಲಿಲ್ಲ ಅನ್ನೋದು ಅಷ್ಟೇ ಸತ್ಯ.

LEAVE A REPLY

Please enter your comment!
Please enter your name here