Home Cinema “ಅಂಬಿ ನಿಧನವಾಗಿರುವುದು ಗೊತ್ತೇ ಇಲ್ಲ” ಎಂದು ಹರ್ಷಿಕಾ ಟ್ವೀಟ್..! ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಬರದಲ್ಲಿ ಯಡವಟ್ಟು...

“ಅಂಬಿ ನಿಧನವಾಗಿರುವುದು ಗೊತ್ತೇ ಇಲ್ಲ” ಎಂದು ಹರ್ಷಿಕಾ ಟ್ವೀಟ್..! ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ಬರದಲ್ಲಿ ಯಡವಟ್ಟು ಮಾಡಿಕೊಂಡ್ರಾ ಹರ್ಷಿಕಾ..? ಅಂಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿ…

880
0
SHARE

ಹರ್ಷಿಕಾ ಪೊಣ್ಣಚ್ಚ.. ಕೊಡಗಿನ ಕಿನ್ನರಿ. ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿರುವ ಹರ್ಷಿಕಾಗೀಗ ಪ್ರಚಾರದ ಗೀಳು ಅಂಟಿಕೊಂಡಿದೆ. ಹೀಗಂತ ಈಡೀ ಗಾಂಧಿನಗರವೇ ಮಾತನಾಡಿಕೊಳ್ಳುತ್ತಿದೆ.
ಹೌದು, ಅಸಲಿಗೆ ಹರ್ಷಿಕಾ ಪೊಣ್ಣಚ್ಚ ಬೆಳ್ಳಿ ಪರದೆ ಮೇಲೆ ಒಂದು ವರ್ಷನೇ ಆಗ್ತಾ ಬಂದಿದೆ. ಸಿನಿಪ್ರಿಯರು.. ಇನ್ನೇನೂ, ಹರ್ಷಿಕಾ ಅನ್ನುವ ಸುಂದರಿ ಮುಖವನ್ನ ಬಹುತೇಕ ಮರೆಯುತ್ತಿದ್ದಾರೆ. ಇದೇ ದಿಗಿಲು ಹರ್ಷಿಕಾ ಪೊಣ್ಣಚ್ಚಳನ್ನೂ ಆವರಿಸಿಕೊಂಡಂತಿದೆ.

ಹಾಗಾಗೇ, ಇತ್ತೀಚಿನ ದಿನಗಳಲ್ಲಿ.. ಧೀಡಿರ ಅಂಥ ಪ್ರತ್ಯಕ್ಷವಾಗ್ತಿರುವ ಹರ್ಷಿಕಾ, ಇತ್ತೀಚಿಗೆ ಯಡವಟ್ಟೊಂದು ಮಾಡಿಕೊಂಡಿದ್ದಾರೆ.ಯಸ್, ನಿಮಗೆ ಗೊತ್ತಿರಲಿ ಭಾರತೀಯ ಸಿನಿರಂಗವೇ ಅಂಬಿ ಅಗಲಿಕೆ ನೋವಿನಲ್ಲಿದೆ. ನೆನಪುಗಳ ನಾವೆ ಕನ್ನಡ ಚಿತ್ರರಂಗದಲ್ಲಿ ಮುಂದುವರೆದಿದೆ. ಅಂಬಿಯನ್ನ ಕಳೆದುಕೊಂಡ ಚಿತ್ರರಂಗ ಅಕ್ಷರಶ ಅನಾಥವಾಗಿದೆ. ಹೀಗಿರುವಾಗ, ಹರ್ಷಿಕಾ ಪೊಣ್ಣಚ್ಚ ನನಗೆ ಅಂಬಿ ಅಂಕಲ್ ನಿಧನವಾಗಿರುವ ಸುದ್ದಿ ಗೊತ್ತೇ ಇರಲಿಲ್ಲ ಅಂದಿದ್ದಾರೆ. ಇದುವೇ, ಸಮಸ್ತ ಕನ್ನಡಿಗರ ಕಣ್ಣನ್ನ ಕೆಂಪಾಗಿಸಿದೆ.

ಅಸಲಿಗೆ, ನಿನ್ನೆ.. ನನಗೆ ಅಂಬರೀಶ್ ಅಗಲಿಕೆ ಸುದ್ದಿ ಗೊತ್ತಿರಲಿಲ್ಲ ಅಂದ ಹರ್ಷಿಕಾ ಮೇಲೆ ಕನ್ನಡಿಗರು ಮುನಿಸಿಕೊಳ್ಳಲು ಕಾರಣ, ಖುದ್ದು ಹರ್ಷಿಕಾನೇ. ಹೌದು, ಅಂಬರೀಶ್ ಕರುನಾಡಿನ ಜನರನ್ನ ಅಗಲಿದ ಬಳಿಕ.. ಸಾಮಾಜಿಕ ಜಾಲತಾಣದಲ್ಲಿ ಇದೇ ಹರ್ಷಿಕಾ ಸಂತಾಪ ಸೂಚಿಸಿದ್ದರು. ಅಂಬರೀಶ್ ಅವ್ರ ಜೊತೆಗಿನ ನೆನಪನ್ನ ಹಂಚಿಕೊಂಡಿದ್ದರು. ಮತ್ತೆ ಹುಟ್ಟಿ ಬನ್ನಿ ಅಂದಿದ್ದರು

ಮಿಸ್ ಯೂ ಅಂಕಲ್:ಅಂಬಿ ಅಂಕಲ್ ಬಗ್ಗೆ ತಿಳಿದುಕೊಂಡಿರುವ ನಾನೇ ಧನ್ಯ. ನಿಮ್ಮನ್ನ ನಾನು ಸದಾ ಮಿಸ್ ಮಾಡಿಕೊಳ್ಳುವೆ…ಹೀಗೆ. ಟ್ವೀಟ್ ಮೂಲಕ ಅಂದು ಸಂತಾಪ ಸೂಚಿಸಿದ ಹರ್ಷಿಕಾ, ನಿನ್ನೆ ಇದ್ದಕ್ಕಿದ್ದಂತೆ.. ನಿಧನದ ಸುದ್ದಿ ಗೊತ್ತೇ ಇರಲಿಲ್ಲ ಅಂದರು. ನಾನು ನೆಟವರ್ಕ್ ಇರದ ಜಾಗದಲ್ಲಿದ್ದೆ ಅಂದರು.ಕೊನೆಯದಾಗಿ ನೋಡುವ ಅವಕಾಶವೂ ನನಗೆ ಸಿಕ್ಕಿಲ್ಲ:ಇಂದು ನನ್ನ ಅತ್ಯಂತ ದುಃಖದ ದಿನ ??

ನಾನು ಒಂದು ಶೂಟ್‌ಗಾಗಿ ೨೩ ರ ರಿಂದ ನೆಟ್ವರ್ಕ್ ಇಲ್ಲದ ಪ್ರದೇಶದಲ್ಲಿ ಇರಬೇಕಾಯಿತು. ನನ್ನ ನೆಚ್ಚಿನ ಅಂಬರೀಷ್ ಅಂಕಲ್ ನಿಧನದ ಸುದ್ದಿ ನನಗೆ ಈಗ ತಿಳಿಯಿತು ??ಹರ್ಷಿಕಾರ ಇದೇ ಊಸರವಳ್ಳಿ ಟ್ವೀಟ್, ಕನ್ನಡಿಗರ ಪಿತ್ತವನ್ನ ನೇತ್ತಿಗೇರಿಸಿತ್ತು. ಹಾಗಾಗೇ, ಹರ್ಷಿಕಾ ಟ್ವೀಟ್ ಮಾಡಿದ್ದೇ ತಡ, ಮುಗಿ ಬಿದ್ದ ಅಭಿಮಾನಿಗಳು ಯದ್ವಾ ತದ್ವಾ ತರಾಟೆ ತೆಗೆದುಕೊಂಡರು. ಬಣ್ಣ ಹಾಗೂ ಬಣ್ಣದ ಮಾತುಗಳೂ ಬರೀ ಚಿತ್ರರಂಗದಲ್ಲಷ್ಟೇ ಇರ‍್ಬೇಕು ಹೊರ‍್ತು ನಿಜ ಜೀವನದಲ್ಲೂ ಇರಬಾರದೆನ್ನುವ ಉಪದೇಶ ಮಾಡಿದ್ದರು.

ಅಷ್ಟೇ ಅಲ್ಲ ಅಕೌಂಟ್ ಹ್ಯಾಕ್ ಆಗಿತ್ತು ಅಂದ್ರೆ ಇದೀಗ ಚೆನ್ನಾಗಿರಲ್ಲ ಅನ್ನುವ ಎಚ್ಚರಿಕೆಯನ್ನೂ ನೀಡಿದ್ದ ಅನೇಕರು, ಅವತ್ತು ಸಂತಾಪ ಸೂಚಿಸಿ ಟ್ವೀಟ್ ಮಾಡಿದ ಮಹಾತಾಯಿ ಯಾರಮ್ಮ ಅನ್ನುವ ಪ್ರಶ್ನೆಯನ್ನೂ ಕೇಳಿದ್ದರು.ಹೀಗೆ ಸಾಲು ಸಾಲು ಪ್ರಶ್ನೆಗಳು ಅದ್ಯಾವಾಗ ಸಿಡಿಮದ್ದಿನಂತೆ ಸಿಡಿಯಲಾರಂಭಿಸದ್ವೋ, ಮೊದಲೇ ಕೆಂಪಗಿರುವ ಹರ್ಷಿಕಾ ಮುಖ.. ಮತ್ತಷ್ಟು ಕೆಂಪಾಗೋಯ್ತು. ಹಾಗಾಗೇ ಏನೋ ಮುಜುಗರದಿಂದ್ಲೇ ಮತ್ತೆ ಸೊಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾದ ಹರ್ಷಿಕಾ, ಡ್ಯಾಮೇಜ್ ಆದ ಇಮೇಜ್‌ನ್ನ ಕಂಟ್ರೋಲ್ ಮಾಡಲು ಮುಂದಾದ್ರು.

ಅದೇನೆ ಇರ‍್ಲಿ.. ಸಾಮಾಜಿಕ ಜಾಲತಾಣದಲ್ಲಿ, ಪ್ರತಿಯೊಂದಕ್ಕೂ ಬಂದು, ಪ್ರತಿಯೊಂದನ್ನ ಹಂಚಿಕೊಳ್ಳುವ ತಾರೆಯರು.. ಇಂಥಾ ಸೂಕ್ಷ್ಮ ವಿಚಾರಗಳಲ್ಲಿ ತುಂಬಾನೇ ಜಾಗರೂಕ ವಾಗಿರಬೇಕಾಗುತ್ತೆ. ಅದು, ಬಿಟ್ಟು.. ಏನೋ ಮಾಡಲು ಹೋಗಿ, ಇನ್ನೇನೋ ಮಾಡಿದ್ರೆ.. ಹರ್ಷಿಕಾ ಪೊಣ್ಣಚ್ಚರಂತೆ ಇರುವದೆಲ್ಲವ ಬಿಟ್ಟುಕೊಂಡಂಥ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳಬೇಕಾಗುತ್ತೆ ಅನ್ನೋದಕ್ಕಿದು ಅತ್ಯುತ್ತಮ ಉದಾಹರಣೆ…

LEAVE A REPLY

Please enter your comment!
Please enter your name here