Home Cinema ಅಂಬಿ ಮೇಲೆ ರಶ್ಮಿಕಾಗಿರುವ ಪ್ರೀತಿ ಇಲ್ಲವಾಯ್ತಲ್ಲ ರಮ್ಯಾಗೆ..! ಸ್ವೀಡನ್ನಿಂದ ಓಡಿ ಬಂದೇ ಬಿಟ್ಟರು ರಶ್ಮಿಕಾ ಮಂದಣ್ಣ..!

ಅಂಬಿ ಮೇಲೆ ರಶ್ಮಿಕಾಗಿರುವ ಪ್ರೀತಿ ಇಲ್ಲವಾಯ್ತಲ್ಲ ರಮ್ಯಾಗೆ..! ಸ್ವೀಡನ್ನಿಂದ ಓಡಿ ಬಂದೇ ಬಿಟ್ಟರು ರಶ್ಮಿಕಾ ಮಂದಣ್ಣ..!

1051
0
SHARE

ಅಂಬರೀಶ್. ಕಲಿಯುಗದ ಕರ್ಣ. ಇದ್ದಕ್ಕಿದ್ದಂತೆ ಎದ್ದು ಹೋಗಿ ಎಲ್ಲರನ್ನೂ ದುಖದ ಕಡಲಿಗೆ ತಳ್ಳಿದ ಅಂಬರೀಶ್ ನಿಧನಕ್ಕೆ, ಪೂರ್ತಿ ಭಾರತೀಯ ಚಿತ್ರರಂಗವೇ ಕಣ್ಣೀರಿಟ್ಟಿದೆ. ಸಂತಾಪ ಸೂಚಿಸಿದೆ. ಇಷ್ಟೇ ಅಲ್ಲ ಮಂಡ್ಯದ ಗಂಡಿನ ಮೇಲೀನ ಪ್ರೀತಿಗೆ ರಜಿನಿಕಾಂತ್ ಸೇರಿ ಅನೇಕರು ಬಂದು ಅಂತಿಮ ದರ್ಶನ ಮಾಡಿದ್ದಾರೆ. ನಮನ ಸಲ್ಲಿಸಿದ್ದಾರೆ.ಅಂಬಿಯ ಸ್ನೇಹಶೀಲತೆ ಹಾಗೂ ಹೃದಯವಂತಿಕೆಯನ್ನ ಎಲ್ಲರೂ ಮಿಸ್ ಮಾಡಿಕೊಳ್ತಿರುವಾಗ್ಲೇ, ಮಾಜಿ ನಟಿ ಮತ್ತು ಹಾಲಿ ರಾಜಕಾರಣಿ ರಮ್ಯಾ ಗೈರುಹಾಜರಾತಿ ಮಂಡ್ಯದ ಜನರ ಸಿಟ್ಟಿಗೆ ಕಾರಣವಾಗಿದೆ.

ಅಷ್ಟೇ ಅಲ್ಲ. ಟ್ವಿಟರ್ ಮೂಲಕವೇ ಇಂಗ್ಲಿಷಿನಲ್ಲಿ ಸಂತಾಪದಂಥಾದ್ದನ್ನು ಸೂಚಿಸಿದ ರಮ್ಯಾ ದೆಹಲಿಯಲ್ಲೋ, ಇನ್ನೆಲ್ಲೋ ಕಳೆದು ಹೋಗಿದ್ದಾಳೆ, ಅಪ್ಪಿ ತಪ್ಪಿ ಮಂಡ್ಯದ ಮಣ್ಣಿಗೆ ಕಾಲಿಟ್ಟರೆ ಹುಶಾರ್ ಅನ್ನುವ ಎಚ್ಚರಿಕೆಗೂ ಕಾರಣವಾಗಿದೆ.ಎಚ್ಚರಿಕೆ ಕೊಡ್ತಾನೇ ಜಂಭದ ಕೋಳಿಗೆ ಮಕ ಮಕ ಉಗಿದು ಎಲ್ಲರು ಆಕ್ರೋಶ ವ್ಯಕ್ತಪಡಿಸುತ್ತಿರೋವಾಗ್ಲೇ, ಇದೀಗ ಇದೇ ಆಕ್ರೋಶ.. ಜ್ವಾಲಾಮುಖಿ ಯಾಗಿ ಬದಲಾಗುತ್ತಿದೆ. ಇದಕ್ಕೆ ಕಾರಣ, ರಶ್ಮಿಕಾ ಮಂದಣ್ಣ.ಹೌದು, ರಶ್ಮಿಕಾ ಮಂದಣ್ಣ ಸದ್ಯದ ಸೌಥ್ ಸೆನ್ಸೇಶನ್.

ಯಜಮಾನ ಚಿತ್ರೀಕರಣಕ್ಕಾಗಿ ಸ್ವೀಡನ್‌ನಲ್ಲಿದ್ದ ರಶ್ಮಿಕಾ, ಅಂಬಿ ಅಗಲಿದ ಕ್ಷಣಕ್ಕೆ ಬರಲು ಸಾಧ್ಯವಾಗಲಿಲ್ಲ. ಹಾಗಂತ, ರಮ್ಯಾರಂತೆ ಸ್ವೀಡನ್‌ನಲ್ಲೇ ಕುಂತು ಟ್ವೀಟ್ ಮಾಡಿದ್ದರೆ ಬಹುಶ ರಮ್ಯಗೂ ರಶ್ಮಿಕಾಗೂ ಅಂಥ ವ್ಯತ್ಯಾಸವೇನು ಇರ‍್ತಿರಲಿಲ್ಲ. ರಮ್ಯಾ ಮೇಲಿನ ಸಿಟ್ಟು ಮಂಡ್ಯ ಜನರಿಗೆ ಜಾಸ್ತಿನೂ ಆಗ್ತಿರಲಿಲ್ಲ. ಆದ್ರೆ ಟ್ವೀಟ್ ಮಾಡಿ ಸುಮ್ಮನಾಗದ ರಶ್ಮಿಕಾ, ಕೊನೆಗೆ ಅಸ್ಥಿ ಸಂಚಯನಕ್ಕೆ ಬಂದಿದ್ದಾರೆ. ಈ ಮೂಲಕ ಅಂಬಿ ಅಗಲಿಕೆನಿಂದ ತಮಗೆಷ್ಟರ ಮಟ್ಟಿಗೆ ನೋವಾಗಿದೆ ಅನ್ನೋದನ್ನೂ ರಶ್ಮಿಕಾ ತೋರಿಸಿದ್ದಾರೆ.

ಅಂಬಿ ಅಂಕಲ್ ಐ ಮಿಸ್ ಯೂ ಎಂದು ಮನಪೂರ್ವಕವಾಗಿ ಹೇಳಿದ್ದಾರೆ.ಹಾಗ್ ನೋಡಿದ್ರೆ ರಶ್ಮಿಕಾ, ರಮ್ಯರಂತೆ ಅಂಬಿ ಮನಸಿಗೆ ತೀರಾ ಹತ್ತಿರವಾದ ನಟಿಯೇನಲ್ಲ. ರಶ್ಮಿಕಾ ಇತ್ತೀಚಿಗಷ್ಟೇ ಬಂದ ನಟಿ. ಇನ್ನೂ ಒಡನಾಟದ ಬಗ್ಗೆ ಹೇಳುವಾದಾದ್ರೆ ಅದು ಕಮ್ಮಿ. ಹೀಗಿದ್ದೂ.. ದೂರದ ಸ್ವೀಡನ್‌ನಿಂದ ಬಂದು, ಅಂಬಿ ಅಣ್ಣನ ಅಸ್ಥಿ ಸಂಚಯನಕ್ಕೆ ಬಂದ ರಶ್ಮಿಕಾರನ್ನ ನೋಡಿ ರಮ್ಯ ಕಲಿಯೋದು ತುಂಬಾ ಇದೆ ಅನ್ನುವ ಮಾತುಗಳೂ ಇದೀಗ ಜೋರಾಗಿ ಕೇಳಿ ಬರ‍್ತಿವೆ.ಕೇಳಿ ಬರ‍್ತಿರುವ ಮಾತುಗಳೂ ನಿಜಾನೂ ಹೌದು.

ನಿಜಕ್ಕೂ ರಮ್ಯಾ ರಶ್ಮಿಕಾರಿಂದ ಕಲಿಯೋದು ಇದೆ. ಕಾಲು ನೋವು, ಅದ್ಯಾವದೋ ಭೇದಿ ಎಂದು ಕುಂಟು ನೆಪ ಹೇಳಿ ಮಂಡ್ಯ ಜನರ ಆಕ್ರೋಶ ತಣ್ಣಗಾಗಿಸುವ ವಿಫಲ ಯತ್ನ ಮಾಡ್ತಿರುವ ರಮ್ಯಾ, ಒಂದ್ವೇಳೆ ನಿಜಕ್ಕೂ ಮನಸು ಮಾಡಿದ್ದೇ ಇದ್ದಲ್ಲಿ ಬರುವದು ಕಷ್ಟವೇನಾಗ್ತಿರಲಿಲ್ಲ. ಅಭಿಮಾನಿಗಳ ಆಕ್ರೋಶನೂ ಭುಗಿಲೇಳುತ್ತಿರಲಿಲ್ಲ.ನಿಮಗೆ ಗೊತ್ತಿರಲಿ, ಸಿನಿಮಾ ನಟಿಯಾಗಿದ್ದ ರಮ್ಯಾ ಇವತ್ತು ರಾಜಕಾರಣಿಯಾಗಿ ಕಾಂಗ್ರೆಸ್‌ನ ಕೋಟೆ ಸೇರಿಕೊಂಡಿದ್ದಾರಲ್ಲಾ? ಅದಕ್ಕೆ ನಿಜವಾಗಿಯೂ ಕಾರಣವಾಗಿರೋದು ರೆಬೆಲ್ ಸ್ಟಾರ್ ಅಂಬರೀಶ್.

ರಮ್ಯಾ ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಜನ ಓಟು ಹಾಕಿ ಗೆಲ್ಲಿಸಿದ್ದೂ ಕೂಡಾ ಅಂಬರೀಷಣ್ಣನ ಮುಖ ನೋಡಿಯೇ. ಆದರೆ ರಮ್ಯಾ ಹಾಗೆ ಗೆದ್ದು ದೆಹಲಿ ಸೇರಿಕೊಂಡವಳೇ ಅಂಬಿಗೇ ಉಲ್ಟಾ ಹೊಡೆದದ್ದು, ಎರಡನೇ ಸಲ ಸ್ಪರ್ಧಿಸಿ ಗೋತಾ ಹೊಡೆದದ್ದೆಲ್ಲವೂ ಈಗ ಇತಿಹಾಸ.
ಅದೇನೆ ಇರ‍್ಲಿ, ಅಂಬರೀಶ್ ಅವರ ಪಾರ್ಥಿವ ದೇಹದ ದರ್ಶನದ ದೇಖಾರೇಖಿ ನೋಡಿಕೊಳ್ಳಬೇಕಿದ್ದ ರಮ್ಯಾ, ಅದಕ್ಕೂ ತನಗೂ ಸಂಬಂಧವೇ ಇಲ್ಲದಂತಿದ್ದರು. ಮಂಡ್ಯ ಜನ, ರಮ್ಯಾ ಹೆಸರು ಕೇಳಿ ಕೊತ ಕೊತ ಕುದಿಯುತ್ತಿದ್ದರು, ಕ್ಯಾರೇ ಅನ್ನದ ರಮ್ಯಾ ಅದೇ ಕುಂಟು ನೆಪದೊಂದಿಗೆ, ದೆಹಲಿಯಲ್ಲಿ ಕುಂತು..

ತಮ್ಮ ಪಕ್ಷದ ಸಾಧನೆಯ ಹಾಗೂ ವಿರೋಧ ಪಕ್ಷದ ವೇದನೆಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಕಾಟಾಚಾರಕ್ಕೆ ಅನ್ನುವಂತೆ ಅಂಬಿ ಬಗ್ಗೆ ಮಾಡಿದ್ದ ಅದೊಂದು ಟ್ವೀಟ್ ಬಿಟ್ಟರೆ, ಅಂಬಿ ಜೊತೆಗಿನ ಇನ್ಯಾವ ನೆನಪುಗಳನ್ನ ನೆನಪು ಮಾಡಿಕೊಳ್ಳುವ ಗೋಜಿಗೆ ರಮ್ಯಾ ಹೋಗಿಲ್ಲ. ಇತ್ತ, ರಶ್ಮಿಕಾ ಮಂದಣ್ಣ ಸೇರಿ ಇತ್ತೀಚಿಗೆ ಬಂದ ನಾಯಕಿಯರು, ಅಂಬಿ ಅಗಲಿಕೆನಿಂದ ಕಂಗಾಲಾಗಿದ್ದಾರೆ. ಚಿತ್ರರಂಗದ ಹಿರಿಯಣ್ಣ ಯಾರು, ಇನ್ನೂ ಚಿತ್ರರಂಗದಲ್ಲಿ ನಮಗೆಲ್ಲಾ ಯಾರು ದಿಕ್ಕು ಅನ್ನುವ ಅಳಲನ್ನ ತೋಡಿಕೊಳ್ಳುತ್ತಿದ್ದಾರೆ. ಆದರೆ ಹೈಫೈ ಗುಂಗಿನಲ್ಲೇ ಕಳೆದುಹೋಗಿರುವ ರಮ್ಯಾಗೆ ಇದೆಲ್ಲ ಅದು ಹೇಗೆ ಅರ್ಥವಾದೀತು.. ಅರ್ಥ ಮಾಡಿಸುವದಾದ್ರೂ ಯಾರು.

LEAVE A REPLY

Please enter your comment!
Please enter your name here