Home Crime ಅಕೆಯದ್ದು ಆಸ್ತಿಗಾಗಿ 30 ವರ್ಷಗಳ ಸುದೀರ್ಘ ಹೋರಾಟ..! ಅವಳು ದಕ್ಕಿಸಿಕೊಂಡಿದ್ಲು ಬರೋಬ್ಬರಿ 20 ಎಕರೆ ಜಮೀನು..!...

ಅಕೆಯದ್ದು ಆಸ್ತಿಗಾಗಿ 30 ವರ್ಷಗಳ ಸುದೀರ್ಘ ಹೋರಾಟ..! ಅವಳು ದಕ್ಕಿಸಿಕೊಂಡಿದ್ಲು ಬರೋಬ್ಬರಿ 20 ಎಕರೆ ಜಮೀನು..! ಆದ್ರೆ ದಕ್ಕದ ಭೂಮಿ..!???

815
0
SHARE

ಅದು ದೂರದ ಊರಿನ ಗುಲ್ಬರ್ಗಾದ ಸೇಡಂನಲ್ಲಿ ನಡೆದ ಕಥೆ.. ಈ ಸೇಡಂನಲ್ಲಿ ಪ್ರತಿ ಭಾನುವಾರ ವಾರದ ಸಂತೆ ನಡೆಯುತ್ತೆ. ಸಂತೆ ಅಂದ್ರೆ ಗೊತ್ತಲ್ವಾ ಅವತ್ತು ಹತ್ತು ಊರಿನ ಜನ ಅಲ್ಲಿಗೆ ಬಂದು ತಮ್ಮ ದಿನನಿತ್ಯದ ಜೀವನಕ್ಕೆ ಏನು ಬೇಕು ಅದನ್ನ ತಗೊಂಡು ಹೋಗ್ತಾರೆ. ಸಂತೆ ಅನ್ನೋದು ವಾರಕ್ಕೊಮ್ಮೆ ಬರೋ ಹಬ್ಬ ಇದ್ದ ಹಾಗೆ.

ಜನ ವಾರ ಪೂರ್ತಿ ದುಡಿದು ಅದನ್ನ ಹಾಗೆ ಕೂಡಿಟ್ಟುಕೊಂಡು ವಾರದ ಸಂತೆಗೆ ಬರ್ತಾರೆ. ಒಂದು ವಾರಕ್ಕೆ ಆಗೋ ಹಾಗೆ ಸಮಾನುಗಳನ್ನ ಖರೀದಿ ಮಾಡ್ಕೊಂಡು ಹೋಗ್ತಾರೆ. ವಾರಕ್ಕೊಂದು ಸಂತೆ ಆದ ಕಾರಣ ಅಲ್ಲಿ ಸಾವಿರಾರು ಜನ ಸೇರಿರ್ತಾರೆ.ಹೀಗೆ ಹೋದ ತಿಂಗಳು 27ನೇ ತಾರೀಖಿನ ಭಾನುವಾರ ಸೇಡಂನಲ್ಲಿ ಸಂತೆ ನಡೆಯುತ್ತಿತ್ತು. ಅದಾಗ್ಲೇ ನಿಗಿ ನಿಗಿ ಅಂತ ಉರಿಯುತ್ತಿದ್ದ ಸೂರ್ಯ ತಣ್ಣಗಾಗಿ ತನ್ನ ಮನೆ ಸೇರಿಕೊಳ್ತಿದ್ದ. ತಲೆ ಮೇಲೆ ಸೂರ್ಯನ ಕಿರಣಗಳು ಬೀಳ್ತಿಲ್ಲ ಇನ್ನು ಅರಾಮಾಗಿ ಸಂತೆಗೆ ಹೋಗಬಹುದು ಅಂತ ಜನ ಸಂತೆ ಕಡೆ ಬರ್ತಿದ್ರು. ಬಿಸಿಲು ಜಾಸ್ತಿ ಅನ್ನೋ ಕಾರಣಕ್ಕೆ ಜನ ಸಂಜೆಯಾದ ಮೇಲೆ ಮಾರ್ಕೆಟ್ ಕಡೆ ಬರ್ತಾ ಇದ್ರು. ಆ ಸಂತೆಯಲ್ಲಿ ಆ ಸಂಜೆಯ ಕೊನೆಯ ವ್ಯಾಪಾರ ಬಹಳ ಜೋರಾಗಿಯೇ ನಡೆಯುತ್ತಿತ್ತು.

ಕೆಲವು ವಸ್ತುಗಳು ಸಂಜೆಯಾದ ಕಾರಣ ಅಗ್ಗಕ್ಕೆ ಸಿಕ್ಕರೆ, ಇನ್ನು ಕೆಲವು ವಸ್ತುಗಳಿಗೆ ಜನ ಚೌಕಾಸಿ ಮಾಡ್ತಿದ್ರು.ಹೀಗೆ ಆ ಸಂತೆಯ ಸಾವಿರಾರು ಜನರ ಮಧ್ಯೆ ಮಹಿಳೆಯೊಬ್ಬಳು ತರಕಾರಿ ಹಣು ಹಂಪಲುಗಳನ್ನ ತೆಗೆದುಕೊಳ್ತಿದ್ಲು. ಹಾಗೆ ಆಕೆ ತರಕಾರಿ ತೆಗೆದುಕೊಳ್ಳೋದಕ್ಕೆ ಅಂತ ಕೆಳಗೆ ಬಗ್ಗಿದ್ಲು. ಆಗ ಅದೇ ಸಮಯಕ್ಕೆ ಹಿಂದಿನಿಂದ ಬಂದ ಇಬ್ಬರು ಆಕೆಯನ್ನ ಗಟ್ಟಿಯಾಗಿ ಹಿಡ್ಕೊಂಡು ಆಕೆಯ ಕುತ್ತಿಗೆಯನ್ನ ಕತ್ತರಿಸಿ ಬಿಟ್ಟಿದ್ರು. ಒಂದು ಕ್ಷಣ ಅಲ್ಲಿದ್ದವರಿಗೆ ಏನಾಯ್ತು ಅನ್ನೋದು ಗೊತ್ತೇ ಆಗಲಿಲ್ಲ. ಆಕೆ ಹಾಗೆ ಕೂಗಾಡಿಕೊಳ್ಳುತ್ತಾ, ಒದ್ದಾಡಿಕೊಳ್ಳುತ್ತ ನೆಲದ ಮೇಲೆ ಕುಸಿದು ಬಿದ್ದು ಬಿಟ್ಟಿದ್ಲು. ಜನ ಏನಾಯ್ತು ಅಂತ ನೋಡ್ತಿದ್ದ ಹಾಗೆ ಕುತ್ತಿಗೆಗೆ ಇರಿದಿದ್ದ ಇಬ್ಬರು ಬೈಕ್ ಹತ್ತಿಕೊಂಡು ಅಲ್ಲಿಂದ ಪರಾರಿಯಾಗಿಬಿಟ್ಟಿದ್ರು.

ಆಕೆಯ ಜೀವ ಇನ್ನು ಇತ್ತು ಹೀಗಾಗಿ ಆಕೆಯನ್ನ ಸ್ಥಳೀಯರು ಆಸ್ಪತ್ರೆಗೆ ಕರ್ಕೊಂಡು ಹೋಗಿದ್ರು. ಆದ್ರೆ ಆಸ್ಪತ್ರೆಗೆ ಹೋದ್ರು ಆಕೆಯ ಜೀವವನ್ನ ಉಳಿಸೋದಕ್ಕೆ ಸಾಧ್ಯವಾಗಲೇ ಇಲ್ಲ.ನಂತ್ರ ಆ ಘಟನೆಯನ್ನ ನೋಡಿದ ಜನ ಸೇಡಂ ಪೊಲೀಸ್ರಿಗೆ ಫೋನ್ ಮಾಡಿ ತಿಳಿಸಿದ್ರು. ಸಂತೆಯಲ್ಲಿ ಕೊಲೆ ನಡೆದಿದೆ ಅಂದ್ರೆ ಅದ್ರಲ್ಲು ಸಾವಿರಾರು ಜನ ಇರೋ ಸ್ಥಳದಲ್ಲಿ ಅಷ್ಟೊಂದು ಭೀಕರವಾಗಿ ಕೊಲೆಯಾಗಿದೆ ಅಂದಾಕ್ಷಣ ಪೊಲೀಸ್ರು ಅಲ್ಲಿಗೆ ಟೆನ್ ಷನ್ ನಲ್ಲಿ ಓಡಿ ಬಂದಿದ್ರು. ಅದಾಗ್ಲೇ ಜನ ತಮ್ಮ ಸಂತೆಯನ್ನ ಬಿಟ್ಟು ಆ ಕೊಲೆಯ ಬಗ್ಗೆಯೇ ಮಾತನಾಡೋದಕ್ಕೆ ಶುರುಮಾಡಿದ್ರು. ಬೇರೆ ಬೇರೆ ಕಡೆಯಿದ್ದವರೆಲ್ಲಾ ಆ ಕೊಲೆಯ ವಿಷಯ ತಿಳಿದ ತಕ್ಷಣ ಅಲ್ಲಿಗೆ ಓಡಿ ಬಂದಿದ್ರು.

ಒಬ್ಬರಿಗೆ ಕುತೂಹಲವಾದ್ರೆ, ಇನ್ನೊಬ್ಬರಿಗೆ ಆತಂಕ ಹೀಗೆ ಅಲ್ಲಿದ್ದವರಲ್ಲಿ ಒಬ್ಬೊಬ್ಬರಿಗೆ ಒಂದು ರೀತಿಯ ಅನುಭವವಾಗಿತ್ತು. ಪೊಲೀಸ್ರು  ಕೂಡಾ ಅಲ್ಲಿಗೆ ಬಂದು ಜನರಿಂದ ಮಾಹಿತಿ ಪಡ್ಕೊಂಡಿದ್ರು. ಆದ್ರೆ ಅಲ್ಲಿದ್ದ ಜನಕ್ಕೆ ಕೊಲೆ ಮಾಡಿದವರು ಯಾರು ಅನ್ನೋದು ಗೊತ್ತಿರಲಿಲ್ಲ. ಅವರು ಕೇವಲ ಕೊಲೆ ಮಾಡಿ ಬೈಕ್ ನಲ್ಲಿ ಆ ದಿಕ್ಕಿಗೆ ಹೋದ್ರು ಅಂತ ಹೇಳಿದ್ರು.ಅಷ್ಟೊತ್ತಿಗೆ ಆ ಮಹಿಳೆಯ ಕೊಲೆ ಆಗಿದೆ ಅನ್ನೋದು ಗೊತ್ತಾಗ್ತಿದ್ದ ಹಾಗೆ ಆಕೆಯ ಮನಯವರೆಲ್ಲಾ ಆಸ್ಪತ್ರೆಗೆ ಓಡಿ ಬಂದಿದ್ರು. ಹಾಗೆ ಕೊಲೆಯಾದ ಮಹಿಳೆ ಶಬರವತಿ ಅಂತ. ಇದೇ ಸೇಡಂನಲ್ಲಿ ಆಕೆ ಪತಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದಾಳೆ. ಈಕೆ ಮೂಲತಃ ಕಾಳಗಿ ತಾಲೂಕಿನ ಕೊಡದೂರು ಗ್ರಾಮದವಳು. ಕೆಲವು ವರ್ಷಗಳಿಂದ ಆಕೆ ಇಲ್ಲಿ ಬಂದು ಸೆಟ್ಲ್ ಆಗಿದ್ಲು. ಜೀವನ ನಿರ್ವಹಣೆಗೆ ಅಂತ ಸಣ್ಣಪುಟ್ಟ ಕೆಲಸ ಮಾಡ್ಕೊಂಡಿದ್ಲು.

ಅವತ್ತು ಆ ಮಹಿಳೆಯದ್ದೇ ಕೊಲೆಯಾಗಿ ಹೋಗಿತ್ತು. ಅದಕ್ಕೆ ಇಡೀ ಸಂತೆಯೇ ಸಾಕ್ಷಿಯೂ ಆಗಿತ್ತು.ಶಬರವಾತಿಯ ಮೂಲ ಊರು ಕೊಡದುರ ಗ್ರಾಮ. ತವರು ಮನೆಯೂ ಅದೆ, ಗಂಡನ ಮನೆಯೂ ಅದೆ.  ಶಬರವತಿ ತಂದೆ ಶಿವಶರಣಪ್ಪ. ಶಿವಶರಣಪ್ಪಗೆ ಇಬ್ಬರು ಮೂರು ಜನ ಸಹೋದರಿಯರು ಮತ್ತು ಓರ್ವ ಸಹೋದರನಿದ್ದ. ಒಟ್ಟು ಕುಟುಂಬಕ್ಕೆ ನಲವತ್ತೊಂಬತ್ತು ಎಕರೆ ಕೃಷಿ ಜಮೀನಿತ್ತು. ಆದ್ರೆ ಶಿವಶರಣಪ್ಪ ಶಬರವತಿ ಹುಟ್ಟುವ ಮೊದಲೇ ತೀರಿ ಹೋಗಿದ್ದ. ಇನ್ನು ಈ ಶಿವಶರಣಪ್ಪಗೆ ಇದ್ದಿದ್ದು ಒಬ್ಬಳೇ ಮಗಳು, ಅದು ಶಬರಾವತಿ.   ಇನ್ನು ಆತ ನಿಧವಾಗುತ್ತಿದ್ದಂತೆ,ಶಬರವತಿ ತಾಯಿ ಬೇರೊಂದು ಮದುವೆಯನ್ನು ಮದುವೆ ಮಾಡಿಕೊಂಡಿದ್ಲು. ಹೀಗಾಗಿ ಶಿವಶರಣಪ್ಪನ ಸಹೋದರ ನಾಗೇಂದ್ರಪ್ಪ ಎಲ್ಲಾ ಆಸ್ತಿಯೂ ತನಗೆ ಬರುತ್ತೆ ಅಂತ ಅಂದುಕೊಂಡಿದ್ದ.

ಒಟ್ಟು ನಲವತ್ತೊಂಬತ್ತು ಎಕರೆ ಭೂಮಿಯಲ್ಲಿ ಒಂಬತ್ತು ಎಕರೆ ಭೂಮಿಯನ್ನು ಸಹೋದರಿಯರಿಗೆ ನೀಡಿ, ಉಳಿದ ನಲವತ್ತು ಎಕರೆ ಭೂಮಿಯನ್ನು ತಾನೆ ಉಳುಮೆ ಮಾಡ್ತಾಯಿದ್ದ. ಫ್ಲೋ..,ಆದ್ರೆ ಶಬರವತಿ ದೊಡ್ಡವಳಾಗಿ ಮದುವೆಯಾಗುತ್ತಿದ್ದಂತೆ ತನ್ನ ತಂದೆಯ ಆಸ್ತಿಯಲ್ಲಿ ಪಾಲು ನೀಡುವಂತೆ ತನ್ನ ಚಿಕ್ಕಪ್ಪ ನಾಗೇಂದ್ರಪ್ಪನಿಗೆ ಕೇಳಿದ್ದಳು. ಮತ್ತೊಂದಡೆ ನಾಗೇಂದ್ರಪ್ಪನ ಮಕ್ಕಳು ಕೂಡಾ ಬೆಳೆದು ದೊಡ್ಡವರಾಗಿದ್ರು. ಹೀಗಾಗಿ ಯಾವುದೇ ಕಾರಣಕ್ಕೂ ಕೂಡಾ ಶಬರಾವತಿಗೆ ಆಸ್ತಿಯಲ್ಲಿ ಪಾಲು ಕೊಡಲು ಒಪ್ಪಿಕೊಂಡಿರಲಿಲ್ಲ. ಕಾನೂನು ಪ್ರಕಾರವಾಗಿ ಶಬರವತಿಗೆ ತನ್ನ ತಂದೆಯ ಪಿತ್ರಾರ್ಜಿತ ಆಸ್ತಿಯ ಪಾಲು ಇಪ್ಪತ್ತು ಎಕರೆ ಬರಬೇಕಿತ್ತು. ಆದ್ರೆ ಆಸ್ತಿಯನ್ನ ಆಕೆಗೆ ಕೊಡೋದಕ್ಕೆ ನಾಗೇಂದ್ರಪ್ಪ ಮತ್ತು ಆತನ ಮಕ್ಕಳು ಒಪ್ಪಿರಲಿಲ್ಲ. ನಂತ್ರ ಅದೇ ಊರಿನಲ್ಲ ಹಿರಿಯರೆಲ್ಲ ಸೇರಿ ಮಧ್ಯಸ್ಥಿಕೆ ಮಾಡಿದ್ರು.

ನಾಗೇಂದ್ರನ ಫ್ಯಾಮಿಲಿಯವರಿಗೆ ಎಲ್ಲಾ ಕೋರ್ಟ್ ನಲ್ಲಿ ಸೋಲಾಗಿತ್ತು. ಆದ್ರೆ ತನ್ನ ತಂದೆಯ ಆಸ್ತಿಯನ್ನ ದಕ್ಕಿಸಿಕೊಳ್ಳೋದ್ರಲ್ಲಿ ಆಕೆ ಯಶಸ್ವಿಯಾಗಿದ್ರು. ಸುಮಾರು 30 ವರ್ಷಗಳ ಕಾಲ ಅದಕ್ಕಾನಿ ನಿರಂತರವಾಗಿ ಹೋರಾಟ ನಡೆಸಿದ್ಲು. ನಂತ್ರ ತನ್ನ ಹಠದಂತೆ ಕಾನೂನಿನ ಪ್ರಕಾರವಾಗಿಯೇ ಪಡೆದುಕೊಂಡಿದ್ಲು.  ಬೈಟ್: ಶಶಿಕುಮಾರ್  ಗುಲ್ಬರ್ಗ ಎಸ್ ಪಿ     01:04  ರಿಂದ   01:37ಇಲ್ಲಿಂದ ಆಕೆ ಇನ್ನೊಂದು ಸುತ್ತಿನ ಹೋರಾಟವನ್ನ ನಡೆಸೋದಕ್ಕೆ ಶುರುಮಾಡಿದ್ಲು. ಯಾಕಂದ್ರೆ 6 ತಿಂಗಳ ಹಿಂದೆಯಷ್ಟೇ ಕೋರ್ಟ್ ಈಕೆಯ ಪರವಾಗಿ ತೀರ್ಪು ನೀಡಿತ್ತು. ಆದ್ರು ಆಕೆಗೆ ತನ್ನ ಸಹೋದರರು ಆ ಜಮೀನನ್ನ ಬಿಟ್ಟು ಕೊಡ್ತಾರೆ ಅನ್ನೋ ನಂಬಿಕೆಯಿರಲಿಲ್ಲ.

ಯಾಕಂದ್ರೆ ಅವ್ರು ಒಂದಿಂಚು ಭೂಮಿಯನ್ನು ಕೊಡಬಾರದು ಅಂತ ತೀರ್ಮಾನಿಸಿಯಾಗಿತ್ತು. ಹೀಗಾಗಿ ಆಕೆ ಕೂಡಾ ಇವತ್ತಲ್ಲ ನಾಳೆ ಅದರಲ್ಲಿ ನಾನು ಉಳುಮೆ ಮಾಡ್ತೀನಿ. ಅಲ್ಲೇ ನನ್ನ ಬದುಕು ಕಟ್ಟಿಕೊಳ್ತೀನಿ ಅಂತ ತೀರ್ಮಾನಿಸಿದ್ಲು. ನನ್ನ ನಂತ್ರ ನನ್ನ ಪೀಳಿಗೆ ಕೂಡಾ ಅದೇ ಜಮೀನಿನಲ್ಲಿ ಬದುಕ್ತಾರೆ ಅಂತ ಆಕೆ ಅಂದುಕೊಂಡಿದ್ಲು.ಆದ್ರೆ ಇತ್ತ ದಿನೇಶ್ ಮಾತ್ರ ಅವಳನ್ನ ಹ್ಯಾಗೆ ಮಟ್ಟ ಹಾಕೋದು. ಆಕೆಯಿಂದ ಹೇಗೆ ಆಸ್ತಿಯನ್ನ ಕಿತ್ತುಕೊಳ್ಳೋದು ಅಂತ ಯೋಚಿಸ್ತಿದ್ದ. ಹೀಗಾಗಿ ಆತ ಆಕೆಯನ್ನ ಕೊಲೆ ಮಾಡೋದಕ್ಕೆ ಪ್ಲಾನ್ ಮಾಡಿದ್ರು. ಆಕೆಯೇ ಸತ್ತು ಹೋದ್ರೆ ಇನ್ಯಾರು ಈ ಹೊಲದ ವಿಚಾರವಾಗಿ ಬರೋದಿಲ್ಲ.

ಅದ್ಯಾವಾಗ ಪೊಲೀಸ್ರಿಗೆ ಇದು ಆಸ್ತಿಯ ವಿಚಾರವಾಗಿ ನಡೆದ ಕೊಲೆ ಅನ್ನೋದು ಗೊತ್ತಾಯ್ತೋ ಆಗ ನೇರವಾಗಿ ನಾಗೇಂದ್ರಪ್ಪನ ಮನೆಗೆ ಹೋಗಿದ್ದಾರೆ. ಅಲ್ಲಿ ತನಗೆ ಏನು ಗೊತ್ತಿಲ್ಲದೇ ಇರೋ ಹಾಗೆ ನಾಗೇಂದ್ರ ಖುಷಿಯಿಂದ ಕೂತಿದ್ದ. ಇನ್ನು ಮೇಲೆ ಆ ನಲವತ್ತು ಎಕರೆ ಜಮೀನು ನಮ್ಮದೆ ಅಂತ ಆತ ಖುಷಿಯಿಂದ ಇದ್ದ. ಅದ್ಯಾವಾಗ ಪೊಲೀಸ್ರು ಮನೆ ಮುಂದೆ ಜೀಪ್ ನಿಲ್ಲಿಸಿ ಒಳಗೆ ಹೋದ್ರೋ ಆಗ ನಾಗೇಂದ್ರನ ಮುಖದಲ್ಲಿದ್ದ ನಗು ಮಾಯವಾಗಿ ಆತಂಕ ಶುರುವಾಗಿತ್ತು. ನಂತ್ರ ಆತನನ್ನ ಪೊಲೀಸ್ರು ಒದ್ದು ಸ್ಟೇಷನ್ ಗೆ ಕರ್ಕೊಂಡು ಬಂದಿದ್ರು. ಆಗ ಆತ ಆಕೆಯನ್ನ ಕೊಲೆ ಮಾಡಿದ್ದು ನನ್ನ ಮಕ್ಕಳೆ ಅವರಿಬ್ಬರು ಪರಾರಿಯಾಗಿದ್ದಾರೆ  ಅಂತ ಹೇಳಿದ್ದ. ಫ್ಲೋ..,ಪೊಲೀಸ್ರು ನಾಗೇಂದ್ರನನ್ನೇ ಕರ್ಕೊಂಡು ಬಂದಿದ್ದ ಕಾರಣ ಅವರಿಬ್ಬರು ಸ್ಟೇಷನ್ ಗೆ ಬರೋದು ಜಾಸ್ತಿ ಟೈಂ ಹಿಡಿಯಲಿಲ್ಲ. ನಂತ್ರ ಪೊಲೀಸ್ರು ಮೂವರನ್ನ ಬಂಧಿಸಿ ವಿಚಾರಣೆ ಶುರುಮಾಡಿದ್ರು.

ಆಗ ಅವ್ರು ಈ ಕೊಲೆ ಕಾರಣವೇನು ಅನ್ನೋದರ ತಮ್ಮ ವರ್ಷನ್ ಅನ್ನ ಹೇಳೋದಕ್ಕೆ ಶುರುಮಾಡಿದ್ರು. ಶರಬವತಿ ನಮ್ಮ ಸಂಬಂಧಿಯೇ. ಆದ್ರೆ ಆಕೆ ಅಪ್ಪ ಸತ್ತು ಹೋದ ನಂತ್ರ ಅವಳು ಹುಟ್ಟಿದ್ಲು. ಹೀಗಾಗಿ ಆ ಆಸ್ತಿ ಅವಳಿಗೆ ಸೇರೋದಕ್ಕೆ ನಾವು ಬಿಡಬಾರದು ಅಂತ ಅಂದುಕೊಂಡಿದ್ವಿ. ಆಕೆಯ ಅಪ್ಪ ಸತ್ತ ನಂತ್ರ ಆಕೆ ಹುಟ್ಟಿದ್ಲು. ಅದು ನಮ್ಮ ಮನೆತನದ ಕುಡಿಯಲ್ಲ ಹೀಗಾಗಿ ನಾವು ಆಕೆಯನ್ನ ನಮ್ಮವಳು ಅಂತ ಒಪ್ಪಿಕೊಳ್ಳೋದಿಲ್ಲ ಆಸ್ತಿಯನ್ನ ಕೊಡೋದಿಲ್ಲ ಅಂತ. ಅಲ್ಲದೆ ಆಕೆ ನನ್ನ ಮಕ್ಕಳಿಗೆ ಮದುವೆಗೆ ಹುಡುಗಿಯನ್ನ ಹುಡುಕೋದಕ್ಕೆ ಹೋದ್ರೆ ಆಕೆ ಅವರಿಗೆ ಫೋನ್ ಮಾಡಿ ಕೆಟ್ಟದಾಗಿ ಹೇಳ್ತಿದ್ರು. ಹೀಗಾಗಿ ಮದುವೆ ಕೂಡ ನನ್ನ ಮಕ್ಕಳಿಗೆ ಆಗಿರಲಿಲ್ಲ ಅಂತ ನಾಗೇಂದ್ರಪ್ಪ ಸತೀಶ್ ಮತ್ತು ದಿನೇಶ್ ನ ಬಗ್ಗೆ ಹೇಳಿದ್ದ.

ನಂತ್ರ ಪೊಲೀಸ್ರು ಅಪ್ಪ ಮಕ್ಕಳನ್ನ ಅರೆಸ್ಟ್ ಮಾಡಿ ತನ್ನ ಮುಂದಿನ ಕೆಲಸ ಶುರುಮಾಡಿದ್ರು. ಈ ವೇಳೆ ದಿನೇಶ್ ಕೊಲೆ ಮಾಡಿದ್ದ ಮಾರಕಾಸ್ತ್ರವನ್ನ ಕೊಡದೂರು ಬಳಿಯಿರುವ ಸೇತುವೆಯೊಂದರ ಕೆಳಗೆ ಇಟ್ಟಿದ್ದ. ಅದನ್ನ ರಿಕವರಿ ಮಾಡಿ ಮಹಜರ್ ಮಾಡೋದಕ್ಕೆ ಅಂತ ಪೊಲೀಸ್ರು ಆತನನ್ನ ಅಲ್ಲಿಗೆ ಕರ್ಕೊಂಡು ಹೋಗಿದ್ರು.ಫ್ಲೋ…,ಈ ವೇಳೆ ದಿನೇಶ್ ಪೊಲೀಸ್ರಿಂದ ತಪ್ಪಿಸಿಕೊಂಡು ಹೋಗಬೇಕು ಅಂತ ತೀರ್ಮಾನಿಸಿದ್ದ. ಯಾಕಂದ್ರೆ ಪೊಲೀಸ್ರು ಇನ್ನು ನನಗೆ ಕೇಸ್ ಮುಗಿಯೋವರೆಗು ಆಗಾಗ ರಿಪೇರಿ ಮಾಡ್ತಿರ್ತಾರೆ ಅದಕ್ಕೆ ಇಲ್ಲೇ ತಪ್ಪಿಸಿಕೊಂಡು ಹೋಗೋಣ ಅಂತ ತೀರ್ಮಾನಿಸಿದ್ದ. ಬನ್ನಿ ಸಾರ್ ನಾನು ಕೊಲೆದ ಆಯುಧವನ್ನ ಇಲ್ಲೇ ಇಟ್ಟಿದ್ದೀನಿ ಅಂತ ಪೊಲೀಸರನ್ನ ಕರ್ಕೊಂಡು ಹೋಗಿದ್ದ. ನಂತ್ರ ಅಲ್ಲಿಗೆ ಹೋದ ಮೇಲೆ ಪೊಲೀಸ್ರ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ತಪ್ಪಿಸಿಕೊಂಡು ಹೋಗೋದಕ್ಕೆ ಟ್ರೈ ಮಾಡಿದ್ದ.

ಆಸ್ಪತ್ರೆ ಬೆಡ್ ಮೇಲೆ ಕಾಲು ಮುರ್ಕೊಂಡು ಮಲಗಿಕೊಂಡ ಮೇಲೆ ಆತ ಅಯ್ಯೋ 20 ಎಕರೆ ಆಸ್ತಿಗಾಗಿ ಇನ್ನು ಜೈಲಲ್ಲೇ ಝಾಂಡಾ ಊರ್ಕೊಂಡು ಕೂತ್ಕೊಬೇಕಲ್ಲ ಅಂತ ಪಶ್ಛತ್ತಾಪವಾಗಿದೆ. ಸುಮ್ಮನೆ ಅವಳು ಕೇಳಿದಷ್ಟು ಆಸ್ತಿಯನ್ನ ಕೊಟ್ಟಿದ್ರೆ ಅರಾಮಾಗಿ ಮನೆಯಲ್ಲಿ ರಾಜರಂತೆ ಇರಬಹುದಿತ್ತು ಅಂತ ಅಂದುಕೊಂಡಿದ್ದ. ಆದ್ರೆ ಏನು ಮಾಡೋದು ಅದಾಗ್ಲೇ ಎಲ್ಲಾ ಮುಗಿದು ಹೋಗಿತ್ತು. ಅವನಿಗೆ ಈಗ ಬದುಕಿನಲ್ಲಿ ಜೈಲಿನಲ್ಲಿ ಇರೋದಲ್ಲದೆ ಬೇರೇನೋ ಆಪ್ ಷನ್ ಇರಲಿಲ್ಲ. ಅದನ್ನ ಕೊಲೆ ಮಾಡುವ ಮೊದಲೇ ಯೋಚನೆ ಮಾಡಿದ್ರೆ ಇವತ್ತು ಹೀಗೆ ಪರಿತಪಿಸೋದು ತಪ್ಪುತ್ತಿತ್ತು. ಫ್ಲೋ..,ಆಸ್ತಿ ಒಂದೇ ನೆಮ್ಮದಿಯನ್ನ ಕೊಡೋದಿಲ್ಲ.

ಅವ್ರು ತಕ್ಕಮಟ್ಟಿಗೆ ಆಕೆಗೆ ಮೊದಲೇ ಆಸ್ತಿಯನ್ನ ಕೊಟ್ಟಿದ್ರೆ ಇವತ್ತು ಅಪ್ಪ ಮಕ್ಕಳು ಮನೆಯಲ್ಲಿ ಮರ್ಯಾದೆಯಿಂದ ಬದುಕಬಹುದಿತ್ತು. ಆದ್ರೆ ಅವರ ತಲೆಯಲ್ಲಿ ಯಾವತ್ತು ಅಂತಹ ಒಳ್ಳೆಯ ಯೋಚನೆ ಬರಲೇ ಇಲ್ಲ. ದ್ವೇಷದಿಂದ ದಶಕಗಳವರೆಗೆ ಕಾದಾಡಿದವರು ಕೊನೆಗೆ ಅದೇ ದ್ವೇಷಕ್ಕೆ ತಮ್ಮನ್ನೇ ಸರ್ವನಾಶ ಮಾಡಿಕೊಂಡಿದ್ದಾರೆ. ಮದುವೆ ಸಂಸಾರ ಮಕ್ಕಳು ಅಂತ ನೋಡಬೇಕಾದ ವಯಸ್ಸಲ್ಲಿ ಅವರಿಬ್ಬರು ಜೈಲಲ್ಲಿ ಬೇಲು ಸಿಗುತ್ತೋ ಇಲ್ವೋ ಅಂತ ಯೋಚಿಸಿದ್ದಾರೆ. ಅಲ್ಲದೆ ಕೊಲೆ ಕೇಸ್ ನಲ್ಲಿ ಸಿಕ್ಕಿಹಾಕೊಂಡಿರೋದ್ರಿಂದ ಮತ್ತೊಮ್ಮೆ ಸೂರ್ಯೋದಯವನ್ನ ಹೊರಗಿನಿಂದ ನೋಡ್ತೀವ ಅಂತ ಲೆಕ್ಕ ಹಾಕ್ತಾ ಕೂತಿದ್ದಾರೆ.

LEAVE A REPLY

Please enter your comment!
Please enter your name here