Home Crime ಅಕ್ರಮ ಸಂಬಂಧಕ್ಕೆ ಸಿಲುಕಿ ಸ್ವಂತ ಮಗಳನ್ನೇ ಕೊಂದ ತಾಯಿ-ಅಣ್ಣ..!? ಅಕ್ರಮ ಸಂಬಂಧಗಳನ್ನು ಮುಚ್ಚಿಹಾಕಲು ಅಮಾನವೀಯ ಕೃತ್ಯಕ್ಕೆ...

ಅಕ್ರಮ ಸಂಬಂಧಕ್ಕೆ ಸಿಲುಕಿ ಸ್ವಂತ ಮಗಳನ್ನೇ ಕೊಂದ ತಾಯಿ-ಅಣ್ಣ..!? ಅಕ್ರಮ ಸಂಬಂಧಗಳನ್ನು ಮುಚ್ಚಿಹಾಕಲು ಅಮಾನವೀಯ ಕೃತ್ಯಕ್ಕೆ ಯುವತಿ ಬಲಿ…

2778
0
SHARE

ಇಂತಾ ಮುಳಬಾಗಿಲು ತಾಲೂಕಿನಲ್ಲಿ ಅನ್ಪಾರ್ಚುನೇಟ್ಲಿ ಒಂದು ಅಪವಿತ್ರ ಸಂಬಂಧಗಳ ಪರಿಣಾಮ ಒಂದು ಅನಾಹುತ ನಡೆದೋಗಿದೆ. ಈ ಸ್ಟೋರಿಯಲ್ಲಿ ಸುತ್ತಿ ಬಳಸಿ ಬರೋದೆಲ್ಲಾ ಅಕ್ರಮ ಸಂಬಂಧಗಳೇನೆ.. ಅಕ್ರಮ ಸಂಬಂಧಗಳದ್ದೇ ಕಾರುಬಾರು, ಅಕ್ರಮ ಸಂಬಂಧಗಳದ್ದೇ ತಕರಾರು. ಕಡೆಗೆ ಆ ಅಕ್ರಮ ಸಂಬಂಧಗಳ ಗುಟ್ಟು ರಟ್ಟಾಗೋ ಭಯದಿಂದ ನಡೆದೋಯ್ತು ಒಂದು ಅನಾಹುತ.  ಶಿರಿಷಾ ಹೆಸರಿನ ಇದೇ ಹುಡುಗಿಯ ಹೆಣವೇ ಅಲ್ಲಿ ಸುಟ್ಟು ಕರಕಲಾಗಿದ್ದು. ಕೇವಲ 14 ವರ್ಷದ ಹುಡುಗಿ ಶಿರಿಷಾಳ ಸಾವು ಒಂದು ಕೊಲೆಯಾಗಿತ್ತು. ಈ ಕೊಲೆ ಕೇಸ್ ಸಂಬಂಧ ಇಬ್ಬರು ಆರೋಪಿಗಳನ್ನೂ ಕೂಡ ಮಾಲೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ…ಸಂಶಯದಿಂದಲೇ ಇದು ನಿಮ್ಮ ಮಗಳ ಶವನೆನಾ ಅಂತ ಕೇಳಿದಾಗ, ಶವದ ಗುರುತು ಹಿಡಿದು ಇದು ಸಿರಿಷಾದ್ದೇ ದೇಹ ಅಂತ ಆಕೆಯ ತಾಯಿ ಹಾಗೂ ಆಕೆಯ ಅಣ್ಣ ಹೇಳಿರ್ತಾರೆ, ಆ ನಂತರ ಸಿರಿಷಾಳ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಅವರ ತಾಯಿಗೆ ಒಪ್ಪಿಸುತ್ತಾರೆ. ಆ ನಂತರ ಸಿರಿಷಾಳನ್ನು ಅದೇ ಭೀಮಾಪುರ ಗ್ರಾಮದಲ್ಲಿ ತೆಗೆದುಕೊಂಡು ಹೋಗಿ ಮಣ್ಣು ಮಾಡಲಾಗುತ್ತದೆ. ಇತ್ತ ಆರೋಪಿಗಳು ಅಬ್ಬಾ ಇಷ್ಟೊಂದು ಸಲೀಸಾಗಿ ಎಲ್ಲಾ ಮುಗಿದೋಯ್ತಲ್ಲ, ಇಷ್ಟೆನ್ನ ಖಾಕಿ ಅಂದ್ರೆ ಅಂತ ಪ್ರಣಯದಾಟ ಶುರು ಮಾಡಿಕೊಂಡಿರ‍್ತಾರೆ, ಆದ್ರೆ ಇದಾದ ನಂತರ ಮಾಲೂರು ಪೊಲೀಸ್ರು ಪ್ರಕರಣದ ತನಿಖೆ ಮುಂದುವರೆಸುತ್ತಾರೆ…

ಸಿರಿಷಾ ಕೊಲೆಯನ್ನು ಅವರ ತಾಯಿ ಹಾಗೂ ಅಣ್ಣ ರಮೇಶ್ ಮಾಡಿರಬಹುದು ಅನ್ನೋ ಗುಸು ಗುಸು ಕೂಡ ಆರಂಭವಾಗಿತ್ತು. ಈ ಎರಡು ಅನುಮಾನಗಳು ಆ ಗ್ರಾಮದಲ್ಲಿ ಸುತತಾಡುತ್ತಿದ್ದರಿಂದ ಮೊದಲಿಗೆ, ಆತ್ಯಾಚಾರ ಪ್ರಕರಣದಡಿ ಜೈಲಿಗಟ್ಟಿದ ಆ ಯುವಕನ ಕಡೆಯವರೇನಾದ್ರೂ ಕೊಲೆ ಮಾಡಿರಬಹುದಾ ? ಅನ್ನುವಂತಹ ಅನುಮಾನಗು ಶುರುವಗಿದ್ದವು…ಅಷ್ಟಕ್ಕೂ ಸಿರಿಷಾಳನ್ನು ಅವಳ ಹೆತ್ತ ತಾಯಿ ಹಾಗೂ ಅಣ್ಣ ಯಾಕೆ ಕೊಲೆ ಮಾಡಿದ್ರು ಅನ್ನೋದನ್ನ ಕೇಳುತ್ತಾ ಹೊರಟ ಪೊಲೀಸರಿಗೆಂತೂ ಶಾಕ್ ಮೇಲೆ ಶಾಕ್ ಆಗತೊಡಗಿತ್ತು. ಯಾಕಂದ್ರೆ ಅವರು ಹೇಳುತ್ತಿದ್ದ ಕಥೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗಹೊರಟಿತ್ತು. ಥೂತ್ ತೆರೆ ಎಂತಹ ದರಿದ್ರ ಕಥೆನಪ್ಪ ಇವರದ್ದು, ಇವರಿಗೆ ಮನಸ್ಸಾದ್ರು ಹೇಗೆ ಬಂತು, ಅಮ್ಮ ಅಣ್ಣ ಅನ್ನೋ ಪದಕ್ಕೆ ಕಳಂಕ ತಂದುಬಿಟ್ಟಿದ್ದಾರಲ್ಲ ಪೊಲೀಸ್ರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ತಾರೆ…

ಸಿರಿಷಾಳನ್ನ ಕೊಲೆ ಮಾಡೋಕೆ ಪ್ಲಾನ್ ಮಾಡಿದ್ದ ರಮೇಶ, ೨೩ ರ ಶನಿವಾರ ಸಂಜೆ ಮಾರಕ್ಕ ಹಾಗೂ ರಮೇಶ ಆತನದ್ದೆ ಕಾರ್ ನಲ್ಲಿ ಸಿರಿಷಾಳನ್ನ  ಮುಳಬಾಗಿಲು ಪಟ್ಟಣಕ್ಕೆ ಕರೆತರುತ್ತಾರೆ. ಮುಳಬಾಗಿಲಿಗೆ ಬಂದ ನಂತರ ಕಾರ್‌ನಲ್ಲಿಯೇ, ಆಕೆಯ ತಾಯಿ ಮಾರಕ್ಕ ತಮ್ಮ ಕೈಯಾರೆ ಶಿರಿಷಾಳ ಕುತ್ತಿಗೆ ಬಿಗಿದು ಅವಳನ್ನ ಕೊಲೆ ಮಾಡ್ತಾಳೆ.  ನಂತರ ತಾಯಿ ಹಾಗೂ ಅಣ್ಣ ರಮೇಶ್ ಅವಳ ಶವವನ್ನು ಮಾಲೂರು ತಾಲ್ಲೂಕು ತೊರ್ನಹಳ್ಳಿ ಗ್ರಾಮದ ಬಳಿ ತಂದು ಬಿಸಾಡಿ ಗುರುತು ಸಿಗಬಾರದೆಂದು ಪೆಟ್ರೋಲ್ ಸುರಿದು ಶವವನ್ನು ಸುಟ್ಟು ಹೋಗಿರ್ತಾರೆ…

ಆದ್ರೆ ಮಾರಕ್ಕ ಹಾಗೂ ರಮೇಶ ಎಲ್ಲಾ ಮುಗಿಯಿತು ಎಂದುಕೊಂಡಿದ್ರು ಆದ್ರೆ ಪೊಲೀಸರಿಗೆ ಸುಲಭವಾಗಿಯೇ ಸಿಕ್ಕಿಬಿದಿದ್ರು. ಅಕ್ರಮ ಸಂಬಂದಗಳನ್ನು ಮುಚ್ಚಿಹಾಕಲು, ಸಮಾಜದಲ್ಲಿನ ಪ್ರೀತಿ ಭಾಂದವ್ಯ, ಸಂಬಂದಗಳಿಗಿರುವ ಬೆಲೆಯೇ ಇಲ್ಲದಂತೆ ಜೀವನ ಮಾಡುತ್ತಿದ್ದ ರಮೇಶನಿಗೆ ಹಾಗೂ ತನ್ನ ಅಕ್ರಮ ಸಂಬಂದವನ್ನು ಉಳಿಸಿಕೊಳ್ಳಲು ತನ್ನ ಅಕ್ರಮಕ್ಕೆ ತನ್ನ ಮಗಳನ್ನು ಬಲಿಕೊಟ್ಟ ಮಾರಕ್ಕ ಇಬ್ಬರು ಜೈಲುಪಾಲಾಗಿದ್ದು, ಇಬ್ಬರು ಮಾಡಿರುವ ಇಂಥ ಅಮಾನವೀಯ ಕೃತ್ಯಕ್ಕೆ ತಕ್ಕ ಶಿಕ್ಷೆ ಆಗಬೇಕು ಇಲ್ಲವಾದಲ್ಲಿ ಸಮಾಜದಲ್ಲಿ ಮಾನವೀಯ ಮೌಲ್ಯಗಳಿಗೆ ಸಂಬಂದಗಳಿಗೆ ಬೆಲೆ ಇಲ್ಲದಂತಾಗುತ್ತದೆ…

 

LEAVE A REPLY

Please enter your comment!
Please enter your name here