Home Crime ಅಕ್ರಮ ಸಂಬಂಧದ ಕಾಮ ದಾಹಕ್ಕೆ “ದೇಶ ಕಾಯ್ದು ಬಂದ ಯೋಧ ತನ್ನದೇ ಮನೆಯನ್ನ ಕಾಯ್ದುಕೊಳ್ಳೋಕೆ ಆಗಲಿಲ್ಲ”-ಸುಪಾರಿ...

ಅಕ್ರಮ ಸಂಬಂಧದ ಕಾಮ ದಾಹಕ್ಕೆ “ದೇಶ ಕಾಯ್ದು ಬಂದ ಯೋಧ ತನ್ನದೇ ಮನೆಯನ್ನ ಕಾಯ್ದುಕೊಳ್ಳೋಕೆ ಆಗಲಿಲ್ಲ”-ಸುಪಾರಿ ಸುಂದರಿ ಶ್ರೀದೇವಿ

2658
0
SHARE

ಈ ಸ್ಟೋರಿಯನ್ನ ಓದಿದ ಯಾವ ಭಾರತೀಯನಾಗಲೀ ಮರೆಯೋಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ ನಮ್ಮ ಹೆಮ್ಮೆಯ ಭಾರತೀಯ ಸೇನೆ ವೀರ ಯೋಧನೊಬ್ಬ ದೇಶಕ್ಕಾಗಿ ಗಡಿ ರಕ್ಷಣೆ ಮಾಡ್ತಿದ್ದಾಗ ಹಿಮಪಾತವಾಗಿ ಮಂಜಿನಲ್ಲಿ ಹೂತೋಗಿದ್ದ. ಹಿಮಾಯಲದ ಶಿಖರದ 25 ಅಡಿ ಆಳದಲ್ಲಿ ಮೂರು ದಿನ ಹೂತೋಗಿದ್ರೂ ದೇಶಕ್ಕಾಗಿ ಗುಟುಕು ಜೀವನನ್ನಾ ಹಿಡಿದು ಬದುಕಿದ್ದ ವೀರ ಯೋಧ. ಆದ್ರೆ.. ಶತೃಗಳೊಂದಿಗೆ ಮಾತ್ರವಲ್ಲಾ ಜವರಾಯನೊಂದಿಗೂ ಹೋರಾಡಿ ವೀರ ಮರಣವನ್ನಪ್ಪಿಬಿಟ್ಟಿದ್ದ. ಆ ವೀರ ಗಂಡುಮೆಟ್ಟಿದ ಭೂಮಿ ನಮ್ಮ ಹುಬ್ಬಳ್ಳಿ ಧಾರವಾಡದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್..

ವೈರಿಗಳ ಬಂದೂಕು ಗುಂಡಿಗೆ ಎದೆಯೊಡ್ಡಿ ಸತ್ತರೆ ಮಾತ್ರ ವೀರಮರಣವಲ್ಲಾ.. ದೇಶಕ್ಕಾಗಿ ಹೇಗೆ ಪ್ರಾಣ ತ್ಯಾಗ ಮಾಡಿದ್ರೂ ಅದು ವೀರ ಮರಣವೇ ಅಲ್ವಾ. ಹಿಮಾಲದ ಆ ಕೊರೆಯೋ ಚಳಿಯಲ್ಲಿ ಇರೋದೆ ದೊಡ್ಡ ಸಾಹಸ, ಅಂತಹದರಲ್ಲಿ 25 ಅಡಿ ಆಳದ ಹಿಮದಲ್ಲಿ ಮೂರುದಿನಗಳಾದ್ರೂ ಬದುಕೇ ಬದುಕುತ್ತೇನೆ ಅಂತ ಆತ್ಮವಿಶ್ವಾಸದಿಂದ ಪ್ರಾಣವನ್ನ ಹಿಡಿದಿಟ್ಟುಕೊಂಡಿರೋದು ಒಂದು ಪವಾಡವೇ ಸರಿ. ದೇಶಭಕ್ತಿ ಅಂದ್ರೆ ಅದೇ ತಾನೆ. ಅವತ್ತು ಹನುಮಂತಪ್ಪ ಕೊಪ್ಪದ್ ಸಾಹಸವನ್ನ ಭಾರತ ಮಾತ್ರ ಅಲ್ಲ ಇಡೀ ಜಗತ್ತೇ ಕೊಂಡಾಡಿತ್ತು. ಇನ್ನಾ ಗಂಡನನ್ನ ಕಳೆದುಕೊಂಡರೂ ಎದೆಗುಂದದೆ ಮಹಾದೇವಿ ಹೇಳಿದ್ದು ಒಂದೇ ದೇಶಕ್ಕಾಗಿ ನನ್ನ ಗಂಡ ಪ್ರಾಣ ತ್ಯಾಗ ಮಾಡಿದ.. ನನ್ನ ಮಗುವನ್ನೂ ಯೋಧನನ್ನಾಗಿ ಮಾಡ್ತೇನೆ ಅಂತ. ಗಡಿ ಕಾಯೋ ಸೈನಿಕನ ಹೆಂಡತಿ ಮಕ್ಕಳೂ ಅದೇ ತರ ಇರ್ತಾರೆ ಅನ್ನೋದಕ್ಕೆ ಹನುಮಂತಕೊಪ್ಪದ್ ಹಾಗೂ ಆತನ ಮಡದಿಯೇ ಸಾಕ್ಷಿ ಅಲ್ವಾ.

ಹೌದು ಅವತ್ತು ಜೂನ್ ಒಂದನೇ ತಾರೀಕು. ಗಡಿ ಜಿಲ್ಲೆಯ ಬೆಳಗಾವಿಯ ಚಿಕ್ಕೋಡಿ ತಾಲೂಕು ಉಮರಾಣಿ ಅನ್ನೋ ಗ್ರಾಮದ ಹೊರವಲಯದಲ್ಲಿ ಒಂದು ಅಫಘಾತ ನಡೆದೋಗಿತ್ತು. ಸ್ಕೂಟರ್ ಹಾಗೂ ಕ್ರೂಸರ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಒಬ್ಬ ಮಾಜಿ ಯೋಧ ಮೃತಪಟ್ಟಿದ್ದ. ಅಪಘಾತ ಎಸಗಿದ ಕ್ರೂಸರ್ ಸಹ ಪಲ್ಟಿಯಾಗಿ ಅದರಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿ , ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಅಮದ ಹಾಗೆ.. ಆ ಆಕ್ಸಿಡೆಂಟ್ನಲ್ಲಿ ಪ್ರಾಣಬಿಟ್ಟಿದ್ದ ಮಾಜಿ ಸೈನಿಕನೇ.. ಈ ಪ್ರಕಾಶ ಶಂಕರ ಈಟಿ…

ಹೌದು.. ಆ ಸಾವು ಯಾಕೋ ಅಪಘಾತದ ತರ ಕಾಣ್ತಿಲ್ಲ. ನಮಗ್ಯಾಕೋ ಸಂಶಯ ಇದೆ. ದಯವಿಟ್ಟು ತನಿಖೆ ನಡೆಸಿ ಸಾರ್ ಅಂತ ಪೊಲೀಸ್ರಿಗೆ ಮನವಿ ಮಾಡಿದ್ರು. ಅಷ್ಟೇ ಅಲ್ಲ.. ಅಪಘಾತ ಮಾಡಿದ ಕ್ರೂಸರ್ ಅನುಮಾನಾಸ್ಪದವಾಗಿ ಮೂರ್ನಾಲ್ಕು ಸಲ ಪ್ರಕಾಶ್ ಸ್ಕೂಟರ್ ನ ಹಿಂದು ಮುಂದು ಓಡಾಡಿದ್ದ ಸಿಸಿ ಕ್ಯಾಮರಾ ದೃಶ್ಯಗಳನ್ನೂ ಕಲೆ ಹಾಕಿ ಕೊಟ್ಟಿದ್ರು. ಆಗ್ಲೇ ನೋಡಿ.. ಎಲ್ಲರಿಗೂ ಶಾಕ್ ಆಗೋ ಸತ್ಯವೊಂದು ಬೆಳಕಿಗೆ ಬಂದಿತ್ತು. ಅದೇನೆಂದ್ರೆ.. ಮಾಜಿ ಸೈನಿಕ ಪ್ರಕಾಶ್ ಈಟಿಯ ಸಾವು ಆಕ್ಸಿಡೆಂಟಿಂದ ಸಂಭವಿಸಿದ್ದಲ್ಲ.. ಬದಲಾಗಿ ಅದೊಂದು ಪ್ರೀ ಪ್ಲಾನ್ಡ್ ಹಾಗೂ ಆಕ್ಸಿಡೆಂಟ್ ರೂಪದ ಕೊಲೆ ಅನ್ನೋದು. ಅಂದ ಹಾಗೆ.. ಆ ಮಜಿ ಸೈನಿಕನ ಕೊಲೆ ಹಿಂದೆ ಇದ್ದದ್ದು.. ಆತನ ಮುದ್ದಿನ ಮಡದಿ ಶ್ರೀದೇವಿ ಹಾಗೂ ಆಕೆಯ ಈ ಬೆಟಾಲಿಯನ್…

ತನ್ನ ಗಂಡ ಸತ್ತ ದಿನ ಸಪ್ಪೆಮೋರೆ ಹಾಕಿಕೊಂಡು ದುಖದಲ್ಲಿ ಇರೋ ತರಾ ನಾಟಕ ಮಾಡಿದ್ದ ಶ್ರೀದೇವಿಯ ಒಳಗೊಬ್ಬ ವಿಲಕ್ಷಣ ರಾಕ್ಷಸಿ ಕಿಲ್ಲನೆ ನಗ್ತಾ ಇರೋದನ್ನ ಚಿಕ್ಕೋಡಿಯ ಪೋಲಿಸರು ಅದಾಗಲೇ ಗುರುತಿಸಿದ್ದರಾದರೂ , ಸುಮ್ಮನೆ ಕೇಸು ದಾಖಲಿಸಿಕೊಂಡಿದ್ರು ಪೊಲೀಸರು. ಆದ್ರೆ ಯಾವಾಗ ಪ್ರಕಾಶ್ ಈಟಿಯ ಮನೆಯವರು ಮತ್ತೊಂದು ದೂರು ಕೊಟ್ರೋ ಆಗಿಂದಲೇ ಇನ್ವೆಸ್ಟಿಗೇಷನ್ ಸ್ಟಾರ್ಟ್ ಮಾಡಿದ್ದರು. ಘಟನೆ ನಡೆದ ದಿನ ಕ್ರೂಜರ್ ವಾಹನವೊಂದು ಮುಧೋಳ್ ನಿಪ್ಪಾಣಿ ಹೆದ್ದಾರಿಯಲ್ಲಿ ಎರಡುಮೂರು ಬಾರಿ ಅಡ್ಡಾ ದಿಡ್ದಿಯಾಗಿ ಚಲಿಸಿದ್ದನ್ನ ನಾಗರಮುನ್ನೋಳಿ ಗ್ರಾಮಸ್ಥರು ನೋಡಿದ್ದರು.. ಅಷ್ಟೇ ಅಲ್ಲದೆ ಪೆಟ್ರೋಲ್ ಪಂಪನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾವೂ ಸಹ ಕ್ರೂಸರ್ ಓಡಾಡೋದನ್ನ ಸೆರೆ ಹಿಡಿದಿತ್ತು..

ಆರಂಭದಲ್ಲಿ ಪೋಲಿಸರು ಶ್ರೀದೇವಿ ಹೆಂಗಸು ಅನ್ನೋ ಕಾರಣಕ್ಕೆ ನಿಧಾನವಾಗಿ ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅನ್ನೋತರದಲ್ಲೇ ಸೈಲೆಂಟಾಗಿ ಕೇಳಿದ್ದರು. ಆಗ ಮೂರು ಮತ್ತೊಂದು ಸಾರ್ ಅಂತೇಳಿದ್ಳು. ಆದ್ರೆ.. ಕಥೆ ಕಟ್ಟೋಕೆ ಶುರುವಿಟ್ಟುಕೊಂಡಾಗ.. ಲಾಠಿ ಮತ್ತು ಬೂಟಿನ ಸದ್ದಿಗೆ ಬೆಚ್ಚಿ ಬಿದ್ದವಳೇ ನಾಲ್ಕು ಸರ್ ಅಂತ ಅರಚತೊಡಗಿದ್ದಳು… ಸೋ.. ಎಲ್ಲ ಆರೋಪಿಗಳನ್ನ ಒಂದ್ಕಡೆ ಸೇರಿಸಿ ಲಾಸ್ಟ್ ಕೋಟಾ ಮುಗಿಸಿದಾಗ.. ಬಯಲಾಗಿದ್ದೇ ಮಾಜಿ ಸೈನಿನ ಪ್ರಕಾಶ್ ಈಟಿಯ ಕೊಲೆ ಕಥೆ. ಅಂದ ಹಾಗೆ.. ಕಟ್ಕೊಂಡ ಗಂಡನ ಕೊಲೆಗೇ ಸುಪಾರಿ ಕೊಟ್ಟಿದ್ದ ಈ ಗರತಿ ಯಾಕಾಗಿ ಕೊಲೆ ಮಾಡಿಸಿದ್ಳು ಅಂತ ನೋಡಿದ್ರೆ.. ಅಲ್ಲಿ ಪೊಲೀಸರ ಮೂಗಿಗೆ ಬಡಿದಿದ್ದು.. ಸುಪಾರಿ ಸುಂದರಿ ಶ್ರೀದೇವಿ ಅಕ್ರಮ ಸಂಬಂಧದ ಘಾಟು..

ಆದ್ರೆ.. ಹೆಂಡ್ತಿ ಮಾಡ್ತಿದ್ದ ಅನಾಚಾರವನ್ನೆಲ್ಲಾ ಹೊಟ್ಟೆಯಲ್ಲಿಟ್ಟುಕೊಂಡ ಪ್ರಕಾಶ್, ತನ್ನ ಮಗಳ ಮುಖ ನೋಡಿ.. ಇದೆಲ್ಲಾ ಸರಿ ಇರಲ್ಲ ಅಂತ ನಾಗರ ಮುನ್ನೋಳಿಯಿಂದ ಸ್ವಲ್ಪ ದೂರದ ಉಮರಾಣಿಯಲ್ಲಿ ಮನೆ ಮಾಡಿ ಹೆಂಡ್ತಿಯನ್ನ ರಾಣಿಯಂತೆ ಇಟ್ಟಿದ್ದ … ಆದ್ರೆ.. ಅಲ್ಲೂ ಕೂಡ ಅವಳ ಆಟ ಎಗ್ಗಿಲ್ಲದೇ ನಡೆದಿತ್ತು. ಗಂಡನಿಲ್ಲದ ಹೊತ್ತಲ್ಲಿ.. ಆ ಒಂಟಿ ಮನೆಗೆ ಹೋಗಿ ಬರ್ತಿದ್ದ ಸಂತೋಷ್ ಕಮತೆ. ಪೋನಲ್ಲಿ ಸಂತೋಷ ಕಮತೆಯ ಜೊತೆಗೆ ಗಂತೆಗಟ್ಟಲೆ ಹರಟೆ ಹೊಡೆಯುತ್ತಿದ್ದ ಶ್ರೀದೇವಿಯ ಬಗ್ಗೆ ಗಂಡ ಪ್ರಕಾಶನಿಗೂ ಕೂಡ ಅನುಮಾನ ಬರತೊಡಗಿತ್ತು. ಹೀಗಾಗಿ ಗಂಡ ಹೆಂಡತಿ ಯಾವಾಗಲೂ ಹಾವು ಮುಂಗುಸಿಯ ಥರ ಕಿತ್ತಾಡಿಕೊಳ್ತಿದ್ರು.ಸದ್ಯ ಮಾಡಿದ್ದುನ್ನೋ ಮಹರಾಯ ಅನ್ನೋ ಹಾಗೆ  ಶ್ರೀದೇವಿಯ ಸಹವಾಸ ಮಾಡಿದ್ದ  ಸಂತೋಷ್,  ಕ್ಷಣಿಕ ಸುಖಕ್ಕಾಗಿ ಹಾತೊರೆದು ತನ್ನ ಬದುಕಿನ ಸಂತೋಷವನ್ನೆ ಹಾಳು ಮಾಡಿಕೊಂಡ.. ಇನ್ನೂ ಕದ್ದು ಮುಚ್ಚಿ ಹಾಲು ಕುಡಿಯುವ ಬೆಕ್ಕಿನ ಕಣ್ಣಿನ ಶ್ರೀದೇವಿ ತನ್ನ ಏಳು ವರ್ಷದ  ಮಗಳನ್ನ ಅನಾಥಳನ್ನಾಗಿಸಿ ಬೆಳಗಾವಿಯ ಹಿಂಡಲಗಾ ಜೈಲಲ್ಲಿ ಖಡಕ್ ರೊಟ್ಟಿ ಗಟ್ಟಿ ಚಟ್ನಿ ತಿಂತೋತರ ಆಗಿದೆ…

LEAVE A REPLY

Please enter your comment!
Please enter your name here