Home Crime “ಅಕ್ರಮ ಸಂಬಂಧವೇ ಕಾರಣ”..? ತಾಯಿ-ಮಗು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್..! ತನಿಖೆ ವೇಳೆ ಬಯಲಾಯ್ತು ಮರ್ಡರ್ ರಹಸ್ಯ..!

“ಅಕ್ರಮ ಸಂಬಂಧವೇ ಕಾರಣ”..? ತಾಯಿ-ಮಗು ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್..! ತನಿಖೆ ವೇಳೆ ಬಯಲಾಯ್ತು ಮರ್ಡರ್ ರಹಸ್ಯ..!

866
0
SHARE

ಆ ಜೋಡಿ ಪ್ರೀತಿಸಿ ಮದುವೆಯಾಗಿ ಆನಂದದಿಂದ ಸಂಸಾರ ಮಾಡ್ತಿದ್ರು. ಆದ್ರೆ ಮದುವೆಯಾದ ಒಂದೇ ವರ್ಷಕ್ಕೆ ಆಕೆ ಮತ್ತು ಆಕೆಯ ಮಗು ದುರಂತವಾಗಿ ಸಾವನ್ನಪ್ಪಿದ್ದರು. ವಿಷ ಕುಡಿದು ಸಾವನ್ನಪ್ಪಿದ್ದ ಈ ಪ್ರಕರಣ ಆತ್ಮಹತ್ಯೆಯೋ! ಅಥವಾ ಕೊಲೆಯೋ ಅನ್ನೋ ಸಂಶಯ ಪೊಲೀಸರಿಗೆ ವ್ಯಕ್ತವಾಗಿತ್ತು. ಯಾವಾಗ ಪೊಲೀಸರು ತಾಯಿ ಹಾಗೂ ಮಗುವನ್ನ ಶವ ಪರೀಕ್ಷೆಗೆ ಒಳಪಡಿಸಿದ್ರೊ, ಆಗ ಇದು ಆತ್ಮಹತ್ಯೆಯಲ್ಲ ಕೊಲೆ ಅನ್ನೋ ಸತ್ಯ ಬಯಲಾಯ್ತು.

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿ ಕೇಶವಾರ ಗ್ರಾಮದ ಶ್ರಾವಣಿ ಮತ್ತು ರಾಜೇಶ್ ಪ್ರೀತಿಸಿ ಮದುವೆಯಾಗಿದ್ದರು. ದೇವನಹಳ್ಳಿ ವಿಜಯಪುರ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇವರಿಬ್ಬರ ಸುಖ ಸಂಸಾರಕ್ಕೆ ಎರಡೂವರೆ ವರ್ಷದ ಮುದ್ದಾದ ಮಗು ಸಾಕ್ಷಿಯಾಗಿತ್ತು. ಹೀಗೆ ಜೀವನ ನಡೆಸುತ್ತಿದ್ದ ಕುಟುಂಬ ಅಲ್ಲೋಲ ಕಲ್ಲೋಲವಾಗುವಂತಹ ಘಟನೆಯೊಂದು ನಡೆದುಹೋಗಿತ್ತು.

ದಿಢೀರನೆ ಶ್ರಾವಣಿ ಹಾಗೂ ಮಗು ಸಾವನ್ನಪ್ಪಿದ್ರು. ಪ್ರಕರಣ ಸಂಬಂಧ ಶ್ರಾವಣಿ ತಂದೆ ನನ್ನ ಮಗಳು ಮನೆಯಲ್ಲಿ ಯಾರೂ ಇಲ್ಲದೆ ವೇಳೆ ವಿಷ ಕುಡಿದಿದ್ದಾಳೆ ಬಳಿಕ ನೋವು ತಾಳಲಾರದೆ ಟವೆಲ್ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರಿಗೆ ಹೇಳಿಕೆಯನ್ನೂ ನೀಡಿದ್ರು. ಆದ್ರೆ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಪೋಸ್ಟ್ ಮಾರ್ಟಂ ರಿಪೋರ್ಟ್‌ನಲ್ಲಿ ಅದು ಆತ್ಮಹತ್ಯೆ ಅಲ್ಲ ಮರ್ಡರ್ ಎಂದು ಕನ್ಫರ್ಮ್ ಆಗಿತ್ತು.

ಬಳಿಕ ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಶಿಡ್ಲಘಟ್ಟದ ಆನೂರು ಗ್ರಾಮದ ಹೇಮಂತ್ ಕುಮಾರ್ ಸಿಕ್ಕಿಬಿದ್ದ. ಈತನನ್ನು ವಿಚಾರಿಸಿದಾಗ ಕೊಲೆಯ ರಹಸ್ಯ ಬಯಲಾಯ್ತು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಹೇಮಂತ್ ಕುಮಾರ್ ಹಾಗೂ ಶ್ರಾವಣಿ ನಡುವೆ ಅಕ್ರಮ ಸಂಬಂಧ ಇತ್ತು. ಹೇಮಂತ್ ಯಾವಾಗಲೂ ಶ್ರಾವಣಿಗೆ ಗಂಡ ಹೇಮಂತ್‌ನನ್ನು ಬಿಟ್ಟು ಬರುವಂತೆ ಒತ್ತಾಯ ಮಾಡ್ತಿದ್ದ.

ಶ್ರಾವಣಿ ಇದಕ್ಕೆ ಒಪ್ಪದಿದ್ದಾಗ ಶ್ರಾವಣಿ ಮತ್ತು ಆಕೆಯ ಮಗನನ್ನು ಅಮಾನವೀಯವಾಗಿ ಕೊಲೆ ಮಾಡಿ ಕಾಲ್ಕಿತ್ತಿದ್ದಾನೆ.ಸದ್ಯ ಆರೋಪಿ ಹೇಮಂತ್‌ನ್ನನು ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ. ಒಟ್ಟಾರೆ ಅಕ್ರಮ ಸಂಬಂಧ ಸುಂದರ ಸಂಸಾರದ ಸಂತೋಷವನ್ನೇ ಸರ್ವನಾಶ ಮಾಡಿದೆ.

LEAVE A REPLY

Please enter your comment!
Please enter your name here