Home Cinema ಅಕ್ಷತಾ-ರಾಕಿ ಲವ್ ಕಿಚಡಿ, ಪುಕಪುಕ ಅಂದಿತ್ತು ಗಂಡನ ಹೃದಯ..! ಮದುವೆಯಾದ್ರೂ ಅಕ್ಷಿ ಬುದ್ಧಿಗೆ ಏನಾಗಿದೆ, ಹೀಗಂದಿತ್ತು...

ಅಕ್ಷತಾ-ರಾಕಿ ಲವ್ ಕಿಚಡಿ, ಪುಕಪುಕ ಅಂದಿತ್ತು ಗಂಡನ ಹೃದಯ..! ಮದುವೆಯಾದ್ರೂ ಅಕ್ಷಿ ಬುದ್ಧಿಗೆ ಏನಾಗಿದೆ, ಹೀಗಂದಿತ್ತು ದುನಿಯಾ..!

848
0
SHARE

ಅಕ್ಷತಾ ಪಾಂಡವಪುರ & ರಾಕೇಶ್. ಕಳೆದ ಸೀಝನ್‌ನಲ್ಲಿ ಸಿಕ್ಕಾಪಟ್ಟೆ ಗಮನಸೆಳೆದಿದ್ದ ಜೋಡಿ. ಹಾಗಂಥ, ಗೇಮ್ ಫ್ಲ್ಯಾನ್‌ನಿಂದನಾ ಅಂಥ ನೀವ್ ಅನ್ಕೋಳ್ಳೋ ಹಂಗಿಲ್ಲ. ಯಾಕಂದ್ರೆ ಇವರು ಗೇಮ್ ಫ್ಲ್ಯಾನ್‌ನಿಂದ ಸುದ್ದಿಯಾಗಿರಲಿಲ್ಲ.

ಬದ್ಲಿಗೆ ಅತಿಯಾದ ಆತ್ಮೀಯತೆನಿಂದನೇ ಇಬ್ಬರು ಸುದ್ದಿಯಾಗಿದ್ದರು.ಹೌದು, ಅಕ್ಷತಾ ಹಾಗೂ ರಾಕೇಶ್ ನಡುವಿನ ಆತ್ಮೀಯತೆ ವಿಪರೀತವಾಗಿ ಚರ್ಚೆಗೀಡಾಗಿತ್ತು. ಎಷ್ಟರ ಮಟ್ಟಿಗೆ ಅಂದ್ರೆ ಬಿಗ್ ಬಾಸ್ ಮನೆಯಾಚೆ ಅಕ್ಷತಾ ಬಂದ್ಮೇಲೆ, ಅಕ್ಷತಾ ಹಾಗೂ ಗಂಡ ಪ್ರಸನ್ನ ದೂರವಾಗ್ತಾರೆ ಅನ್ನುವಷ್ಟರ ಮಟ್ಟಿಗೆ ಮಾತುಗಳೂ ಕೇಳಿ ಬಂದಿದ್ವು.ಯಸ್, ನಿಮಗೆ ಗೊತ್ತಿರಲಿ ಅಕ್ಷತಾ, ರಾಕೇಶ್ ಮನೆಯೊಳಗೆ ಇದ್ದಾಗ, ರಾಕೇಶ್ ಬಳಿ ತನ್ನ ಪತಿಯ ಬಗ್ಗೆ ಕಮೆಂಟ್ ಮಾಡಿದ್ದಳು.

ಲೈಟ್ಸ್ ಆಫ್ ಆದ ನಂತರ ಅಕ್ಷತಾ ಹಾಗೂ ರಾಕೇಶ್ ಮೇಕಪ್ ರೂಮಿನಲ್ಲಿ ಅಂದು ಮಾತನಾಡುತ್ತಿದ್ದರು. ಈ ವೇಳೆ ಇಬ್ಬರು ಡ್ಯಾನ್ಸ್ ಮಾಡಿದ್ದರು. ಆಗ, ನನ್ನ ಗಂಡ ಇದನ್ನೆಲ್ಲ ನೋಡಿದರೆ, ಅವನ ಹೃದಯ ಪುಕ ಪುಕ ಪುಕ ಅಂತಿರುತ್ತೆ, ಎಲ್ಲಿ ನನ್ನನ್ನು ಬಿಟ್ಟು ಹೋಗಿಬಿಡ್ತಾಳೋ ಎಂಬ ಭಯ ಅವರಲ್ಲಿ ಕಾಡುತ್ತಿರುತ್ತೆ ಎಂದು ಅಕ್ಷತಾ ಹೇಳಿದ್ದಳು.

ಇದಕ್ಕೆ ಕಳಶವಿಟ್ಟಂತೆ, ತಾನು ರೇಡಿಯೋ ಜಾಕಿ, ಮಹಾನ್ ಸಾಧಕ ಮತ್ತು ಅಖಂಡ ಇನ್ನೂರು ಹುಡುಗೀರನ್ನು ಮೇಂಟೇನು ಮಾಡಿದ ಸಾಧಕ ಅಂತ ಪುಂಗುತ್ತಲೇ, ಇನ್ನೂರು ಹುಡುಗೀರ ಜೊತೆ ಚಕ್ಕಂದ ಆಡಿರೋದೇ ತನ್ನ ಜೀವಮಾನದ ಸಾಧನೆ ಎಂಬಂಥ ಮನಸ್ಥಿತಿಯ ರಾಕೇಶ್ ಜೊತೆ ಅಕ್ಷತಾ ಕೈ ಕೈ ಹಿಡಿದುಕೊಂಡು ಮನೆಯ ಒಂದು ಮೂಲೆಯನ್ನೂ ಬಿಡ್ದೇ ಸುತ್ತಾಡಿದ್ದಳು.

ಇನ್ನೂ ಮನೆ ಕ್ಯಾಮರಾ ಕಣ್ಗಾವಲಿನಲ್ಲಿ ಇದೆ ಅನ್ನುವದು ಗೊತ್ತಿದ್ದರೂ, ರಾತ್ರಿ ಎಲ್ಲ ಇಬ್ಬರದ್ದು ಗುಸು ಗುಸು ಪಿಸು ಪಿಸು ಜೋರಾಗೇ ಇತ್ತು.ಇನ್ನೂ ಮೇಕಪ್ ರೂಮಿನಲ್ಲಿದ್ದಾಗ ರಾಕೇಶ್ ನೀನು ಅಪರೂಪದ ಹುಡುಗಿ ಎಂದು ಅಕ್ಷತಾಳನ್ನ ಹೊಗಳಿದ್ದ. ರಾಕಿಯ ಇದೇ ಕಾಂಪ್ಲಿಮೆಂಟ್‌ಗೆ ನಾಚಿ ನೀರಾಗಿದ್ದ ಅಕ್ಷತಾ, ಥ್ಯಾಂಕ್ಯೂ ಅಂದಿದ್ದಳು. ಅಷ್ಟೇ ಅಲ್ಲ ಸಾಲದಕ್ಕೆ ಕೈ ಹಿಡಿದು ರೌಂಡ್ ಹಾಕಿ ಡ್ಯಾನ್ಸ್ ಕೂಡಾ ಮಾಡಿದ್ದರು ಇಬ್ಬರು.

ಇದನ್ನೆಲ್ಲಾ ನೋಡ್ತಿದ್ದ ಪ್ರೇಕ್ಷಕರು, ಮದುವೆಯಾಗಿದ್ದರೂ ಈವಮ್ಮನಿಗೆ ಏನಾಗಿದೆ ಅನ್ನುವ ಪ್ರಶ್ನೆಗಳನ್ನೂ ಕೇಳಿದ್ದರು. ರಾಕೇಶ್‌ಗೆ ಹಿಡಿಶಾಪನೂ ಹಾಕಿದ್ದರು. ಇನ್ನೂ ಸದ್ಯ ಕವಿತಾ ಗೌಡ ಕೆಂಗಣ್ಣಿಗೆ ಗುರಿಯಾಗಿರುವ ಆಂಡಿಯಂಥೂ ಇಬ್ಬರನ್ನೂ ಗಂಡ ಹೆಂಡತಿ ಅಂಥನೇ ಕರೆದಿದ್ದ.ಅಕ್ಷತಾ ಹಾಗೂ ರಾಕೇಶ್ ನಡುವಿನ ಇದೇ ಸಲುಗೆ, ಅಂದು.. ಅಕ್ಷತಾ ಕುಟುಂಬ ವರ್ಗದ ಆತಂಕಕ್ಕೂ ಕಾರಣವಾಗಿತ್ತು. ಹಾಗಾಗೇ, ಅಕ್ಷತಾ ಅಮ್ಮ ಮಗಳಿಗೊಂದು ಸಂದೇಶ ಕಳಿಸಿದ್ದರು. ರಾಕೇಶ್‌ನಿಂದ ದೂರ ಇದ್ದರೆ ಒಳ್ಳೇಯದು ಅಂದಿದ್ದರು…

 

LEAVE A REPLY

Please enter your comment!
Please enter your name here