Home KARNATAKA ಅಕ್ಷಯ ತೃತೀಯದಂದು ಏರಿಕೆಯಾಯ್ತು ಚಿನ್ನದ ದರ.!! ದರ ಏರಿಕೆ ಮಧ್ಯೆ ಕೂಡಾ ಚಿನ್ನ ಕೊಂಡುಕೊಳ್ಳಲು ಮುಗಿಬಿದ್ರು...

ಅಕ್ಷಯ ತೃತೀಯದಂದು ಏರಿಕೆಯಾಯ್ತು ಚಿನ್ನದ ದರ.!! ದರ ಏರಿಕೆ ಮಧ್ಯೆ ಕೂಡಾ ಚಿನ್ನ ಕೊಂಡುಕೊಳ್ಳಲು ಮುಗಿಬಿದ್ರು ಜನ…

3165
0
SHARE

ಅಕ್ಷಯ ತೃತೀಯದಂದು ಏರಿಕೆಯಾಯ್ತು ಚಿನ್ನದ ದರ.!ಇಂದು ಎಲ್ಲೆಡೆ ಅಕ್ಷಯ ತೃತೀಯದ ಸಂಭ್ರಮ ಮನೆ ಮಾಡಿದೆ…ಅಕ್ಷಯ ತೃತೀಯದಂದು ಚಿನ್ನಖರೀದಿಸಿದ್ರೆ ಖರೀದಿಸಿದ್ದೆಲ್ಲವೂ ವೃದ್ಧಿಸುತ್ತೆ ಅನ್ನೊ ಮಾತಿದೆ. ಹೀಗಾಗಿ ಜ್ಯುವೆಲ್ಲರಿಗಳಲ್ಲಿ ಚಿನ್ನದ ರೇಟು ಹೆಚ್ಚಾಗಿದ್ರೂ ಜನರು ತಲೆ ಕೆಡಿಸಿಕೊಳ್ಳದೇ ಚಿನ್ನದಂಗಡಿಯಲ್ಲಿ ಮುಗಿಬಿದ್ದು ಚಿನ್ನ ಖರೀದಿ ಮಾಡಿದ್ದಾರೆ.

ದರ ಏರಿಕೆ ಮಧ್ಯೆ ಕೂಡಾ ಚಿನ್ನ ಕೊಂಡುಕೊಳ್ಳಲು ಮುಗಿಬಿದ್ರು ಜನ..ಎಸ್ ಜನ ಎಷ್ಟೇ ಹೈಫೈಯಾಗಿ ಬದುಕುಸಾಗಿಸಿದ್ರು ಕೂಡಾ, ಪ್ರಾಚೀನ ಕಾಲದ ಕಟ್ಟು ಪಾಡುಗಳಿಗೆ ಮೊರೆ ಹೋಗ್ತಾರೆ ಅನ್ನೋದಕ್ಕೆ ಉತ್ತಮ ಉದಾಹರಣೆ ಅಕ್ಷಯ ತೃತೀಯ..

 

ಇಂದು ಚಿನ್ನ ಕೊಂಡುಕೊಂಡರೆ ಖರೀದಿಸಿದ್ದೆಲ್ಲವೂ ವೃದ್ಧಿಸುತ್ತೆ ಅನ್ನೊ ಮಾತಿದೆ.. ಹೀಗಾಗಿ ಹೆಂಗಳೆಯರಂತೂ ಚಿನ್ನದ ಮಳಿಗೆಗಳಲ್ಲಿ ಮುಗಿಬಿದ್ದು ಚಿನ್ನ ಖರೀದಿ ಮಾಡ್ತಾರೆ.. ಆದ್ರೆ ನಿನ್ನೆಯ ದರಕ್ಕೆ ಹೋಲಿಸಿದ್ರೆ ಇಂದು 100ರೂಪಾಯಿ ಏರಿಕೆಯಾಗಿದೆ.. ಒಂದು ಗ್ರಾಂ ಚಿನ್ನಕ್ಕೆ ನಿನ್ನೆ 2825 ರೂಪಾಯಿ ಇತ್ತು, ಇವತ್ತು 2,925ರೂಪಾಯಿಯಾಗಿದೆ… ಆದ್ರೆ ಜನರು ಮಾತ್ರ ತಮ್ಮ ನಂಬಿಕೆಯನ್ನು ಮತ್ತಷ್ಟು ಬಲಗೊಳಿಸಿ ಚಿನ್ನ ಖರೀದಿ ಮಾಡಿದ್ದಾರೆ.

ಚಿನ್ನದ ಹಬ್ಬವೆಂದೇ ಪ್ರಸಿದ್ದಿ ಪಡೆದಿರೋ ಅಕ್ಷಯ ತೃತೀಯಕ್ಕೆಂದೇ ಮಹಿಳೆಯರು ತುದಿಗಾಲಲ್ಲಿ ನಿಂತಿದ್ರು.. ಆದ್ರೆ ಇಂದು ಮಾತ್ರ ಹಬ್ಬವಾಗಿರೋದ್ರಿಂದ ರೇಟು ಕೂಡಾ ನೋಡದೆ ಆಭರಣ ಮಳಿಗೆಯಲ್ಲಿದ್ದ ಆಫರ್ ಗಳಿಗೆ ಮುಗಿಬಿದ್ದು ಚಿನ್ನಾಭರಣಕೊಂಡು ಕೊಂಡ್ರು…

 

ಆದ್ರೆ ವ್ಯಾಪಾರಿಗಳಂತೂ ಇಂದು ಹಬ್ಬವೋ ಹಬ್ಬವೋ ಯಾಕಂದ್ರೆ ದರ ಎಷ್ಟೇ ಏರಿಕೆಯಾದ್ರು ಕೂಡ ಜನರು ಮಾತ್ರ ತಮ್ಮ ನಂಬಿಕೆಯಂತೆ ಚಿನ್ನಾಭರಣ ಖರೀದಿ ಮಾಡಿದ್ದಾರೆ..

 

ಒಟ್ಟಿನಲ್ಲಿ ಚಿನ್ನದ ಹಬ್ಬ ಅಕ್ಷಯ ತೃತೀಯಗೆ ಆಭರಣ ಮಳಿಗೆ ಮಾಲೀಕರಿಗೆ ಭರ್ಜರಿ ಹಬ್ಬ.. ಯಾಕಂದ್ರೆ ದೇಶ ಎಷ್ಟೇ ಮುಂದುವರಿದರು ಪ್ರಾಚೀನ ಕಟ್ಟುಪಾಡುಗಳನ್ನ ಜನ ಮರೆಯದೆ ಅನುಸರಿಸಿಕೊಂಡು ಹೋಗ್ತಾ ಇರೋದು ಸಂತಸದ ಸಂಗತಿ…

 

LEAVE A REPLY

Please enter your comment!
Please enter your name here