Home Cinema “ಅಖಂಡ ಕರ್ನಾಟಕ”ವನ್ನ ಒಡೆಯಲು ಮುಂದಾದವ್ರಿಗೆ ಡಾ.ಶಿವರಾಜ್ ಕುಮಾರ್ ಹೇಳಿದ್ದೇನು ಗೊತ್ತಾ..?! ವಿಡಿಯೋ ನೋಡಿ

“ಅಖಂಡ ಕರ್ನಾಟಕ”ವನ್ನ ಒಡೆಯಲು ಮುಂದಾದವ್ರಿಗೆ ಡಾ.ಶಿವರಾಜ್ ಕುಮಾರ್ ಹೇಳಿದ್ದೇನು ಗೊತ್ತಾ..?! ವಿಡಿಯೋ ನೋಡಿ

865
0
SHARE

ಡಾ.ಶಿವರಾಜ್ ಕುಮಾರ್. ಸರಳತೆಯ ಸಾರ್ವಭೌಮ. ನಾಡು-ನುಡಿ ಭಾಷೆ ವಿಚಾರದಲ್ಲಿ ಮೊದಲಿಂದನೂ ಮುಂಚೂಣಿಯಲ್ಲಿ ನಿಲ್ಲುವ, ಅಗತ್ಯ ಬಿದ್ದಾಗೆಲ್ಲಾ ಧ್ವನಿ ಎತ್ತುವ ಶಿವಣ್ಣ ಮತ್ತೊಮ್ಮೆ ಗುಡುಗಿದ್ದಾರೆ. ಅದುವೇ.. ಪ್ರತೈಕ ರಾಜ್ಯ ಬೇಕೆನ್ನುವ ಕೂಗಿನ ವಿರುದ್ಧ.ಹೌದು, ಕರ್ನಾಟಕವನ್ನ ಒಡೆಯುವ ಕೆಲ್ಸವನ್ನ ಕೆಲವರು ಮಾಡ್ತಿದ್ದಾರೆ. ಉತ್ತರ ಕರ್ನಾಟಕವನ್ನ ಪ್ರತೈಕ ಮಾಡಬೇಕೆಂದು ವಾದ ಮಂಡಿಸುತ್ತಿದ್ದಾರೆ.

ಇದೇ ವಾದ ವಿವಾದ ಶಿವನನ್ನ ಕೆರಳಿಸಿದೆ. ಹಾಗಾಗೇ, ಯಾವ್ದೇ ಕಾರಣಕ್ಕೂ ರಾಜ್ಯ ಒಡೆಯುವ ಕೆಲ್ಸಕ್ಕಿಳಿಬೇಡಿ ಅಂದಿರುವ ಸೆಂಚುರಿ ಸ್ಟಾರ್, ನಾವೆಲ್ಲ ಒಂದೇ ಅಂದಿದ್ದಾರೆ. ಒಟ್ಟಿಗೆ ಇರೋಣ ಎಂದು ಮನವಿ ಮಾಡಿದ್ದಾರೆ.ನಮ್ಮ ಸ್ವಂತಿಕೆಯನ್ನ ಬಿಟ್ಟುಕೊಡಬಾರದೆನ್ನುವ ಶಿವಣ್ಣ, ಇದೇ ವೇಳೆ ಪ್ರತೈಕ ರಾಜ್ಯ ಬೇಕು ಅನ್ನುತ್ತಿರುವವ್ರಿಗೆ ಬುದ್ದಿ ಹೇಳುವಷ್ಟು ನಾನ್ ದೊಡ್ಡವನಲ್ಲ ಅಂತಾನೂ ಅಂದಿದ್ದಾರೆ. ಒಟ್ಟಿಗೆ ಕುಂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಅಂದಿದ್ದಾರೆ.

ಅಂದ ಹಾಗೇ ಹ್ಯಾಟ್ರಿಕ್ ಹೀರೋನ ಮನಸಿನ ಇವೆಲ್ಲಾ ಮಾತುಗಳಿಗೆ ವೇದಿಕೆಯಾಗಿದ್ದು ಕವಚ ಚಿತ್ರತಂಡದ ಕೊನೆಯ ದಿನದ ಚಿತ್ರೀಕರಣ. ಕವಚ.. ಭರ್ತಿ ದಶಕದ ಬಳಿಕ ಶಿವಣ್ಣ ಮಾಡ್ತಿರುವ ರಿಮೇಕ್ ಸಿನಿಮಾ. ಮೊದಲಿಂದನೂ ಅತೀವ ಕೂತುಹಲವನ್ನ ಕೆರಳಿಸಿರುವ ಕವಚದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇದೇ ಖುಷಿಯಲ್ಲಿ ಶಿವಣ್ಣ ಮತ್ತು ಚಿತ್ರತಂಡ ಇತ್ತೀಚಿಗೆ ಮಾಧ್ಯಮದವ್ರ ಮುಂದೆ ಹಾಜರಾಗಿತ್ತು.

ಕವಚ ಶಿವಣ್ಣ ಪಾಲಿಗೆ ತುಂಬಾನೇ ಸ್ಪೆಷಲ್ ಸಿನಿಮಾ. ಕಾರಣ.. ಚಿತ್ರದಲ್ಲಿ ಶಿವಣ್ಣ ಅಂಧನ ಪಾತ್ರ ನಿರ್ವಹಿಸುತ್ತಿದ್ದಾರೆ. ತಮ್ಮ ಸುಧೀರ್ಘ ಸಿನಿಯಾನದಲ್ಲಿ ಇಂತಹದೊಂದು ಪಾತ್ರವನ್ನ ಶಿವಣ್ಣ ಮಾಡ್ತಿರೋದು ಇದೇ ಮೊದಲು. ಇದೇ ಚಿತ್ರೀಕರಣದ ಆರಂಭಕ್ಕೂ ಮುನ್ನ ಶಿವಣ್ಣ ಆತಂಕಕ್ಕೂ ಕಾರಣವಾಗಿದ್ದು ಸುಳ್ಳಲ್ಲ.ಅಂದ ಹಾಗೇ, ಕವಚ ರಿಮೇಕ್ ಸಿನಿಮಾ. ಹೀಗಿದ್ದೂ ಶಿವಣ್ಣ ಒಪ್ಪಿಕೊಂಡಿದ್ದಾರೆ. ಅಭಿನಯಿಸಿದ್ದಾರೆ.

ಇದಕ್ಕೆ ಕಾರಣ ಚಿತ್ರದ ಕಥೆ. ಹೌದು, ಕಥೆನೇ ಶಿವಣ್ಣರನ್ನ ರಿಮೇಕ್ ಮಾಡಬಾರದೆನ್ನುವ ತಮ್ಮದೇ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದ್ದು.ಇನ್ನು ಚಿತ್ರಕ್ಕೆ ಜಿವಿಆರ್ ವಾಸು ನಿರ್ದೇಶನವಿದೆ. ಬೆಸಿಕಲಿ ತೆಲುಗಿನವರಾಗಿರುವ ವಾಸುಗೆ ಕನ್ನಡದಲ್ಲಿದು ಮೊದಲ ಪ್ರಯತ್ನ. ಚೊಚ್ಚಲ ಕನ್ನಡ ಸಿನಿಮಾದಲ್ಲೇ ಶಿವಣ್ಣಗೆ ಆಕ್ಷನ್ ಕಟ್ ಹೇಳಿದ ಖುಷಿಯಲ್ಲಿದ್ದ ನಿರ್ದೇಶಕರ ಮಾತುಗಳು ಇಲ್ಲಿವೆ.ವಸಿಷ್ಠ ಸಿಂಹ ಕವಚದ ಮತ್ತೊಂದು ಅಟ್ರ್ಯಾಕ್ಷನ್.

ಶಿವಣ್ಣರೊಟ್ಟಿಗೆ ಬ್ಯಾಕ್ ಟು ಬ್ಯಾಕ್ ಸ್ಕ್ರೀನ್ ಸ್ಪೇಸ್ ಶೇರ್ ಮಾಡಿಕೊಳ್ತಿರುವ ವಸಿಷ್ಠ ಸಹಜವಾಗಿಯೇ ಖುಷಿಯಾಗಿದ್ದರು. ಇನ್ನು, ಬಿಟೌನ್‌ನ ಖಲ್ಲಾಸ್ ಗರ್ಲ್ ಇಶಾ ಕೊಪ್ಪಿಕರ್.. ಕವಚದ ಮತ್ತೊಂದು ಕೇಂದ್ರಬಿಂದು. ಇನ್ನುಳಿದಂತೆ ಮೀನಾಕ್ಷಿ, ಕೃತಿಕಾ. ರಾಜೇಶ್ ನಟರಂಗ ಚಿತ್ರದ ಪ್ರಮುಖ ಪಾತ್ರಧಾರಿಗಳು.ಕಿಲ್ಲಿಂಗ್ ವೀರಪ್ಪನ್ ಚಿತ್ರಕ್ಕೆ ಬಂಡವಾಳ ಹೂಡಿದ್ದ ಸುಧೀರ್ ಕವಚದ ನಿರ್ಮಾಪಕ. ಸದ್ಯ, ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಕವಚ, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ…

LEAVE A REPLY

Please enter your comment!
Please enter your name here