Home Cinema ಅಗ್ನಿಸಾಕ್ಷಿ ರಾಜೇಶ್ ಧ್ರುವ ಪತ್ನಿಗೆ “ಅಬಾರ್ಶನ್” ಮಾಡಿಸಿದ್ದು ನಿಜಾನಾ..? “ರಾಜೇಶ್” ಆರೋಪಕ್ಕೆ ಬಿಕ್ಕಿ ಬಿಕ್ಕಿ ಹೇಳಿದ್ದೇನು...

ಅಗ್ನಿಸಾಕ್ಷಿ ರಾಜೇಶ್ ಧ್ರುವ ಪತ್ನಿಗೆ “ಅಬಾರ್ಶನ್” ಮಾಡಿಸಿದ್ದು ನಿಜಾನಾ..? “ರಾಜೇಶ್” ಆರೋಪಕ್ಕೆ ಬಿಕ್ಕಿ ಬಿಕ್ಕಿ ಹೇಳಿದ್ದೇನು “ಪತ್ನಿ”ಯ ಮನ..?

3381
0
SHARE

ಅಗ್ನಿಸಾಕ್ಷಿ ಧಾರಾವಾಹಿ ನಟ ರಾಜೇಶ್ ಧ್ರುವ ಸಂಸಾರದ ಜಗಳ ಸದ್ಯ ಅಕ್ಷರಶಃ ಮೆಗಾ ಸೀರಿಯಲ್‌ನಂತಾಗಿದೆ. ಶ್ರುತಿ ಎಂಬುವರನ್ನು ರಾಜೇಶ್ ೨೦೧೪ರಲ್ಲಿ ಪ್ರೀತಿಸಿದ್ರು.

ಕಾಲೇಜು ದಿನಗಳಲ್ಲಿ ಆದ ಪ್ರೀತಿಯಿಂದ ಕೆಲಕಾಲ ರಾಜೇಶ್ ಮತ್ತು ಶ್ರುತಿ ಲಿವಿಂಗ್ ಟು ಗೆದರ್ ರಿಲೇಶನ್ ಶಿಪ್‌ನಲ್ಲಿದ್ರು. ಆನಂತ್ರ ಮನೆಯವರ ಒಪ್ಪಿಗೆಯ ಮೇರೆಗೆ ೨೦೧೭ರಲ್ಲಿ ಮದುವೆಯಾಗಿ ಸಂಸಾರ ಮಾಡ್ತಿದ್ರು. ಮದುವೆ ಆಗಿ ಇನ್ನೇನ್ ಸಂಸಾರ ಚೆನ್ನಾಗಿ ಸಾಗ್ತಿದೆ ಅನ್ನುವಾಗ್ಲೇ ರಾಜೇಶ್ ಧ್ರುವ ಮತ್ತು ಶ್ರುತಿ ಬಾಳಲ್ಲಿ ಅಪಸ್ವರ ಕೇಳಿಬಂದಿದೆ. ವರದಕ್ಷಿಣೆಯ ಹುರುಳು ಸದ್ಯ ರಾಜೇಶ್ ಕೊರಳಿಗೆ ಸಿಕ್ಕಿಹಾಕಿಕೊಂಡಿದೆ.ಕಿರಿತೆರೆಯಲ್ಲಿ ಸೀರಿಯಲ್ ಮೂಲಕ ಹೊಸ ಕ್ರಾಂತಿ ಮಾಡಿದ್ದ ರಾಜೇಶ್ ಬದುಕು ಸಹ ಮೆಗಾಸೀರಿಯಲ್ ತಹ ಆಗಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿಯ ಅಖಿಲ್ ಪಾತ್ರದಲ್ಲಿ ರಾಜೇಶ್ ನಟಿಸುತ್ತಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಜೋಡಿಗಳು ಬದುಕು ಈಗ ಕ್ಷುಲ್ಲಕ ಕಾರಣಕ್ಕೆ ಸಂಸಾರದ ಕಥನ ಬಿದ್ದಿಗೆ ಬಿದ್ದಂತಾಗಿದೆ.ರಾಜೇಶ್ ಧ್ರುವ ಮೇಲೆ ಪತ್ನಿ ಶ್ರುತಿ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ರಾಜೇಶ್ ಶ್ರುತಿ ೨೦೧೭ರಲ್ಲಿ ಮದುವೆಯಾಗಿದ್ದರು. ಬಳಿಕ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಲ್ಲದೆ, ಮಾನಸಿಕ ಹಿಂಸೆ ನೀಡಿ ತಮ್ಮನ್ನು ಮೆನೆಯಿಂದ ಹೊರ ಹಾಕಿರುವುದಾಗಿ ಶ್ರುತಿ ರಾಜೇಶ್ ಮೇಲೆ ಆರೋಪ ಮಾಡಿದ್ದು. ಧ್ರುವ ವಿರುದ್ದ ಪತ್ನಿ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಬಸವನಗುಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವರದಕ್ಷಿಣೆ ತರುವಂತೆ ಟಾರ್ಚರ್ ನೀಡಿ ಮನೆಯಿಂದ ಹೊರಹಾಕಿ, ಮಾನಸಿಕ ಹಿಂಸೆ ನೀಡಿದಾರೆ ಅಂತ ಶ್ರುತಿ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ ಬೇರೆ ಯುವತಿಯರ ಜೊತೆ ಆಫೇರ್ ಇಟ್ಟುಕೊಂಡಿದ್ದ ಎಂದು ಶ್ರುತಿ ತಮ್ಮ ದೂರಿನಲ್ಲಿ ಹೇಳಿಕೊಂಡಿದ್ಧಾರೆ. ಈ ಹಿನ್ನೆಲೆಯಲ್ಲಿ ಬಸವನಗುಡಿಯ ಮಹಿಳಾ ಪೋಲಿಸ್ ಠಾಣೆಯಲ್ಲಿ ಶ್ರುತಿ ನಟನ ವಿರುದ್ದ ದೂರು ದಾಖಲಿಸಿದ್ದಾರೆ.ಶ್ರುತಿ ಮತ್ತು ರಾಜೇಶ್ ಪ್ರೀತಿಸಿ ಮದುವೆಯಾಗಿದ್ರು ಇಬ್ಬರ ನಡುವೆ ಜಾತಿ ಅಡ್ಡ ಬಂದಿದೆ. ಅದು ಮದುವೆ ನಂತ್ರ ಅಂದ್ರೆ ನೀವು ಅಚ್ಚರಿ ಪಡ್ಲೇಬೇಕು. ಹೌದು ಮೊದಲಿನಿಂದ್ಲೂ ರಾಜೇಶ್ ಅಮ್ಮನಿಗೆ ಶ್ರುತಿಯನ್ನು ಮದುವೆಯಾಗುವುದು ಇಷ್ಟವಿರಲಿಲ್ವಂತೆ. ಆಗಾಗಿನೇ ಮಗ ಸೀರಿಯಲ್ ಸ್ಟಾರ್ ಆಗಿದ್ದಾನೆ ಎಂಬ ಕಾರಣಕ್ಕೆ ನನಗೆ ಊಟ ತಿಂಡಿ ಕೊಡದೆ ಹಿಂಸೆ ನೀಡ್ತಿದ್ರು. ಒಂದೇ ಮನೆಯಲ್ಲಿದ್ರು ಎರಡು ಕಡೆ ಅಡುವೆ ಮಾಡುವಂತೆ ಮಾಡ್ತಿದ್ರು. ನನಗೆ ಮಾನಸಿಕವಾಗಿ ಹಿಂಸೆ ನೀಡಿದ್ರು ಎಂದು ಶ್ರುತಿ ರಾಜೇಶ್ ಮೇಲೆ ಆರೋಪ ಮಾಡುವುದರ ಜೊತೆಗೆ ರಾಜೇಶ್ ತಾಯಿಯ ಮೇಲೂ ಸಾಲು ಸಾಲು ಅರೋಪಗಳನ್ನು ಹೊರಿಸಿದ್ದಾರೆ.

ಇನ್ನು ಶ್ರುತಿ ದೂರಿನ ಸಂಬಂಧ ೨೩ರಂದು ರಾಜೇಶ್ ಬಸವನಗುಡಿ ಪೋಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ರು. ವರದಕ್ಷಿಣೆ ಕಿರುಕುಳದ ಆರೋಪ ಎದುರಿಸಿತ್ತಿರುವ ರಾಜೇಶ್ ಬಸವನಗುಡಿ ಮಹಿಳಾ ಠಾಣೆ ಇನ್ಸ್ಪೆಕ್ಟರ್ ಸತ್ಯವತಿ ಮುಂದೆ ರಾಜೇಶ್ ಹಾಜರಾಗಿ. ಶ್ರುತಿ ಮಾಡಿರುವ ಆರೋಪಗಳಿಗೆ ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ. ನಾನು ತಪ್ಪು ಮಾಡಿಲ್ಲ ಒಂದು ವೇಳೆ ಮಾಡಿದ್ರು. ಅದಕ್ಕೆ ಫ್ರೂವ್ ನೀಡ್ಲಿ ಅಂತ ಶ್ರುತಿಗೆ ಸವಾಲ್ ಹಾಕಿದ್ದಾರೆ. ಪತ್ನಿಯ ದೂರಿನ ವಿಚಾರವಾಗಿ ರಾಜೇಶ್‌ಗೆ ಬಂಧನ ಭೀತಿಯ ಇತ್ತು. ಈ ಹಿನ್ನೆಲೆಯಲ್ಲಿ ರಾಜೇಶ್ ಶುಕ್ರವಾರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ರು. ಇಬ್ಬರ ದೂರನ್ನು ಆಲಿಸಿ ಕೋರ್ಟ್‌ನಿಂದ ರಾಜೇಶ್‌ಗೆ ನಿರೀಕ್ಷಣಾ ಜಾಮೀನು ನೀಡಿಲಾಗಿದೆ. ಕಿರುತೆರೆ ಸ್ಟಾರ್ ಜೀವನ ಸದ್ಯ ಬಿದ್ದಿಗೆ ಬಂದಿದ್ದು. ರಾಜೇಶ್ ಜೀವನದಲ್ಲಿ ಶ್ರುತಿ ಬದುಕು ಹಾದಿ ತಪ್ಪಿದಂತಾಗಿದೆ. ಸಾಲು ಸಾಲು ಆಪಾದನೆಗಳಿಂದ ಬೇಸತ್ತಿರುವ ರಾಜೇಶ್ ಶ್ರುತಿ ವಿರುದ್ದ ತಿರುಗಿ ಬಿದ್ದಾರೆ. ವಿಚ್ಛೇದನಕ್ಕೆ ಮಾಡಿಕೊಳ್ಳುವ ಗಟ್ಟಿನಿರ್ಧಾರಕ್ಕೆ ಬಂದಿದ್ದಾರೆ.

ರಾಜೇಶ್ ಬದುಕಿನಲ್ಲಿ ಸದ್ಯ ಸುಂಟರಗಾಳಿ ಎದ್ದಿದ್ದು. ಶ್ರುತಿ ರಾಜೇಶ್ ಮೇಲೆ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ದಿನಕ್ಕೊಂದು ಆರೋಪ ಮಾಡ್ತಿರುವ ಶ್ರುತಿ ವಿರುದ್ದ ರಾಜೇಶ್ ವಿಡಿಯೋ ವಾರ್ ಮಾಡಿದ್ದು. ವಿಡಿಯೋ ಬಾಣ ಬಿಟ್ಟಿರುವ ರಾಜೇಶ್ ಕೈಯಲ್ಲಿ ಮನೆಯಲ್ಲಿ ಬಿಂದಾಸಾಗಿ ಕೈಲಿಯಲ್ಲಿ ಬಿಯರ್ ಬಾಟಲ್ ಹಿಡಿದು. ಕುಂತ್ಲೇ ತುರಾಡುತ್ತಾ. ಗಂಡನ ಜೊತೆಗೆ ಕಿರುಚಾಡುವ ವಿಡಿಯೋವನ್ನು ರಾಜೇಶ್ ಶೇರ್ ಮಾಡಿದ್ರು. ಶ್ರುತಿ ಸಾಮಾನ್ಯ ಹುಡುಗಿಯಲ್ಲಿ ಅಸಾಮಾನ್ಯ ಹುಡುಗಿ. ಇಂಥ ಹುಡುಗಿಯನ್ನು ನಾನು ಲವ್ ಮಾಡಿ ಮದುವೆ ಹೇಗೆ ಆದೆ ನೋಡಿ ಅಂತ ಹೇಳುತ್ತಾ. ವರದಕ್ಷಿಣೆ ಕಿರುಕುಳ ಕೊಡ್ತಿರೋದು ನಾನಾ ನೀವೆ ಹೇಳಿ ಅಂದಿದ್ದಾರೆ.

ಆರೋಪ-1
ಶ್ರುತಿ ಬರೀ ಆರೋಪ ಮಾಡಿ ಸುಮ್ಮನಾಗದೆ. ಅವರ ಬಳಿಯಿದ್ದ ಸಾಕ್ಷಿಯನ್ನು ಎಲ್ಲರ ಮುಂದೆ ಭಟಾ ಭಯಲು ಮಾಡಿದ್ದಾರೆ. ರಾಜೇಶ್ ಕಿರುಕುಳಕ್ಕೆ ಬೇಸತ್ತಿ ಶ್ರುತಿ, ಐದು ತಿಂಗಳಿನಿಂದ ಪತಿ ರಾಜೇಶ್ ಧ್ರುವ ಕೆಲವು ಹುಡುಗಿಯರ ಜೊತೆಗೆ ಮಾಡಿದ ಮೆಸೇಜ್ ಸ್ಕ್ರೀನ್ ಶಾರ್ಟ್‌ಗಳನ್ನು ಬಿಡುಗಡೆ ಮಾಡಿದ್ದಾರೆ.
ಆರೋಪ-2
ಇನ್ನು ರಾಜೇಶ್ ಬಗ್ಗೆ ಅವರ ತಾಯಿ ಸಮರ್ಥಿಸಿಕೊಂಡಿರುವ ಆಡಿಯೋ ತುಣುಕುಗಳನ್ನು ಶ್ರುತಿ ಹರಿಬಿಟ್ಟಿದ್ದು. ಈ ಮೂಲಕ ಶ್ರುತಿ ಸಂಸಾರದಲ್ಲಿ ಆಡಿಯೋ ವಿಡಿಯೋ ಕದನದ ಕಾವು ಹೆಚ್ಚಾಗುವಂತೆ ಮಾಡಿದ್ದಾರೆ.
ಆರೋಪ-3
ಶ್ರುತಿ ತಮ್ಮ ಬಳಿಯಿದ್ದ ಮೊಬೈಲ್ ಸ್ಕ್ರೀನ್ ಶಾರ್ಟ್‌ಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ರು. ಸಾಲದಕ್ಕೆ, ರಾಜೇಶ್ ಧ್ರುವ ತಾಯಿ ಧಮ್ಕಿ ಹಾಕಿರುವ ಆಡಿಯೋವನ್ನೂ ಮೀಡಿಯಾಗೆ ಶ್ರುತಿ ನೀಡಿದ್ರು. ಆ ಬಳಿಕ ರಾಜೇಶ್ ತಮ್ಮ ಬಳಿಯಿದ್ದ ಒಂದು ವಿಡಿಯೋವನ್ನು ರಿಲೀಸ್ ಮಾಡಿದ್ರು. ಈ ವಿಡಿಯೋದಲ್ಲಿ ಶ್ರುತಿ ಬಾಟಲ್ ಹಿಡಿದು ಹೊರಡುವಾಗ ಈ ವಿಡಿಯೋ ಮಾಡುವಾಗ ರಾಜೇಶ್ ಅವರು ಇದ್ದರು. ಈ ವಿಡಿಯೋವನ್ನು ಹೊಸ ವರ್ಷದಂದು ಮಾಡಲಾಗಿದ್ದು. ರಾಜೇಶ್ ಅವರ ಸ್ನೇಹಿತ ಈ ವಿಡಿಯೋವನ್ನು ಮಾಡಿದ್ದರು ಎನ್ನಲಾಗಿದೆ. ರಾಜೇಶ್ ಈ ವಿಡಿಯೋವನ್ನು ಮೊದಲೇ ಮಾಡಬಹುದಿತ್ತು. ಆದರೆ ನಾನು ಸಾಕ್ಷಿ ನೀಡಿದ ಬಳಿಕ ಅವರು ಈ ಮಧ್ಯಪಾನದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪ-4
ಬಂಧನದ ಭೀತಿಯಿಂದ ರಾಜೇಶ್ ಧ್ರುವ ಹೊರಬಂದಿದ್ದಾರೆ. ಈಗಿರುವಾಗ್ಲೇ ಶ್ರುತಿ ನಾನ್ನು ಗರ್ಭಧರಿಸಿದ್ರು. ಅಮ್ಮ ಮಗ ಸೇರಿ ನನಗೆ ಅಬಾರ್ಷನ್ ಮಾಡಿಸಿದ್ದಾರೆಂದು ರಾಜೇಶ್ ಧ್ರುವ ಮೇಲೆ ಆರೋಪ ಮಾಡಿದ್ಧಾರೆ.
ಆರೋಪ-5
ರಾಜೇಶ್ ಧ್ರುವ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದಾರೆ. ಅವರಿಗೆ ಗರ್ಲ್ ಫ್ರೆಂಡ್ಸ್ ಜಾಸ್ತಿ ಇದ್ದಾರೆ. ರಾಜೇಶ್ ಧ್ರುವಗೆ ೫ದಕ್ಕೂ ಹೆಚ್ಚಿನ ಹುಡುಗಿಯರ ಜೊತೆಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಒಂದು ಮಗು ಇರುವ ತಾಯಿಗೆ ಪಾರ್ಕ್‌ಗೆ ಹೋಗೋಣ ಬಾ, ಅಲ್ಲಿ ಮೀಟ್ ಮಾಡೋಣ. ಇಲ್ಲಿ ಮೀಟ್ ಮಾಡೋಣ ಅಂತೆಲ್ಲಾ ನನ್ನ ಗಂಡ ಚಾಟ್ ಮಾಡಿದ್ದಾರೆ ಎಂದು ಶ್ರುತಿ ಆರೋಪಿಸಿದ್ದಾರೆ.
ಆರೋಪ-6
ಅಕ್ರಮ ಸಂಬಂಧದ ಜೊತೆಗೆ ಅಮ್ಮ- ಮಗ ಸೇರಿ ಗರ್ಭಪಾತ ಮಾಡಿಸಿದ್ದಾರೆಂದು ಶ್ರುತಿ ಆರೋಪಿಸಿದ್ದಾರೆ. ಅಲ್ಲದೆ ೨ನೇ ಮದುವೆಗೆ ಪ್ಲಾನ್ ಮಾಡ್ತಿರುವ ರಾಜೇಶ್. ನನಗೆ ೩ ಲಕ್ಷ ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದಾರೆಂದು ಸಾಲು ಸಾಲು ಆರೋಪಗಳ ಸುರಿಮಳೆಯನ್ನೇ ಮಾಡಿದಾರೆ.

ಇಷ್ಟೆಲ್ಲಾ ರಾಜೇಶ್ ಮೇಲೆ ಆರೋಪ ಮಾಡಿರುವ ಶ್ರುತಿಯ ಹೇಳಿಕೆಗಳನ್ನು ತಳ್ಳಿ ಹಾಕಿರುವ ರಾಜೇಶ್. ಇದೆಲ್ಲವೂ ಕುತಂತ್ರ ಎಂದಿದ್ದಾರೆ. ನಮ್ಮ ಕೆರಿಯರ್‌ನ್ನು ಹಾಳು ಮಾಡುವುದು ಅವಳ ಉದ್ದೇಶವಾಗಿದೆ. ನನ್ನ ಫ್ಯಾನ್ಸ್ ಜೊತೆಗೆ ಸೀರಿಯಲ್‌ಗೆ ಸಂಬಂಧ ಪಟ್ಟ ಹಾಗೆ ಚಾಟ್ ಮಾಡಿದ್ದೇನೆ. ಅದು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಎಂದು ತಮ್ಮೆಲ್ಲಾ ಆರೋಪಗಳನ್ನು ರಾಜೇಶ್ ಅಲ್ಲ ಗಳೆದಿದ್ದಾರೆ. ಅಲ್ಲದೆ ನನ್ನ ಹೆಸರಿನಲ್ಲಿ ಕೆಲವು ಫೇಕ್ ಅಕೌಂಟ್ ಗಳಿವೆ ಎಂದು ಸಮಜಾಯಿಷಿಯನ್ನು ರಾಜೇಶ್ ಧ್ರುವ ನೀಡಿದ್ದಾರೆ. ಅದೇನೇ ಇದ್ರು ಸದ್ಯ ಪತಿ- ಪತ್ನಿಯ ಸಾಲುಸಾಲು ಆರೋಪಗಳ ಜೊತೆಗೆ ಆಡಿಯೋ ವಿಡಿಯೋ ವಾರ್ ಕದನ ದಿನದಿಂದ ದಿನಕ್ಕೆ ಜೋರಾಗಿತ್ತು. ಇಬ್ಬರು ಒಬ್ಬರಿಗೊಬ್ಬರು ಮಾಡ್ತಿರುವ ಆರೋಪದ ಬಗ್ಗೆ ಇಬ್ಬರು ಸಮಜಾಹಿಶಿ ನೀಡಿದ್ದಾರೆ. ಇಬ್ಬರು ೨೦೧೭ರಲ್ಲಿ ವಿಚ್ಛೇದನಕ್ಕೆ ಹಾಕಿದ್ದ ಅರ್ಜಿಯಂತೆ ದೂರ ಉಳಿಯುವ ಮನಸ್ಸು ಮಾಡ್ತಿದ್ದಾರೆ.

LEAVE A REPLY

Please enter your comment!
Please enter your name here