Home District ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ವ್ಯೂಹ ರಚಿಸುತ್ತಿರುವ ರಮೇಶ್ ಜಾರಕಿಹೊಳಿ..! ನಾಗೇಂದ್ರ ಜೊತೆ ಸಂಪರ್ಕದಲ್ಲಿರುವ ರಮೇಶ್…

ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ವ್ಯೂಹ ರಚಿಸುತ್ತಿರುವ ರಮೇಶ್ ಜಾರಕಿಹೊಳಿ..! ನಾಗೇಂದ್ರ ಜೊತೆ ಸಂಪರ್ಕದಲ್ಲಿರುವ ರಮೇಶ್…

1005
0
SHARE

ಮಂತ್ರಿ ಮಂಡಲದಿಂದ ಕಿತ್ತುಹಾಕಿದ್ದರಿಂದ ಅಸಮಾಧಾನಗೊಂಡಿರೋ ರಮೇಶ್ ಜಾರಕಿಹೊಳಿ ಯಾರ ಕೈಗೂ ಸಂಪರ್ಕಕ್ಕೆ ಸಿಗುತ್ತಿಲ್ಲ.ಹಾಗೇ ಸಚಿವ ಸ್ಥಾನ ಸಿಗದಿದ್ದಕ್ಕೆ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಕೂಡ ಸಿಡಿದೆದ್ದಿದ್ದಾರೆ.ಈ ಇಬ್ಬರು ಶಾಸಕರು ಒಳಗೊಳಗೆ ವ್ಯೂಹ ರಚಿಸುತ್ತಿದ್ದಾರೆ. ಬೆಳಗಾವಿಯ ಸಾಹುಕಾರ ಅವರು ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಹಾಗೂ ಇನ್ನೂ ಇಬ್ಬರ ಜತೆ ನಿಕಟ ಸಂಪರ್ಕದಲ್ಲಿದ್ದಾರೆ.

ರಾಜ್ಯ ‌ರಾಜಕಾರಣದ ಮಾಹಿತಿಯನ್ನು ನಾಗೇಂದ್ರ ಮೂಲಕ ಪಡೆಯುತ್ತಿದ್ದಾರೆ. ಪೋನ್ ಸ್ವಿಚ್ಡ್ ಆಫ್ ಇದ್ರೂ, ನಾಟ್ ರೀಚಬಲ್ ಎನ್ನುತ್ತಲೇ ನಾಗೇಂದ್ರ ಜತೆ ಸಂಪರ್ಕ ಹೊಂದಿದ್ದು, ರಾಜ್ಯ ರಾಜಕಾರಣದ ಆಗುಹೋಗುಗಳನ್ನು ನಾಗೇಂದ್ರ ಮೂಲಕ ತಿಳಿಯುತ್ತಿದ್ದಾರೆ.ಈ ನಡುವೆ, ಶಾಸಕ ನಾಗೇಂದ್ರ ಡಿಕೆಶಿ ವಿರುದ್ಧ ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದಾರೆ.

ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದ್ರು, ನಿಮ್ಮ ಸಹೋದರಗೆ ಎಂಪಿ ಚುನಾವಣೆ ಟಿಕೇಟ್ ನೀಡಲಾಗುತ್ತದೆ. ನೀವು ಕಾಂಗ್ರೆಸ್ ಬಂದರೆ ಉತ್ತಮ ಸ್ಥಾನಮಾನ ನೀಡಲಾಗುವುದು ಎಂದರು. ಎಂಪಿ ಉಪಚುನಾಣೆಯಲ್ಲಿ ಉತ್ತಮ ಕೆಲಸ ಮಾಡಿ, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ದೇವೆ. ಆದ್ರೆ, ಶಿವಕುಮಾರ್ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಡಿಕೆಶಿ ಎಂದು ಫೋನ್ ಸಂಭಾಷಣೆಯಲ್ಲಿ ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದಾರೆ.ರಮೇಶ್ ಜಾರಕಿಹೊಳಿ, ಇನ್ನೂ ನಾಗೇಂದ್ರ ಮೂಲಕವೇ ಕಾಂಗ್ರೆಸ್ ಗೆ ಸಂದೇಶ ರವಾನೆ ಮಾಡುತ್ತಿರುವ ಜಾರಕಿಹೊಳಿ, ಬಳ್ಳಾರಿ ಜಿಲ್ಲೆಯ ಮೂವರು ಶಾಸಕರ ಜತೆ ಸಂಪರ್ಕ ಹೊಂದಿದ್ದಾರೆ. ಇದರ ಜತೆಗೆ ಡಿಕೆಶಿ ವಿರುಧ್ಧ ಇಬ್ಬರು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಸ್ಥಾನ ವಂಚಿತ ರಮೇಶ್ ಜಾರಕಿಹೊಳಿ ನಡೆ ಇನ್ನೂ ನಿಗೂಢವಾಗಿಯೇ ಇದೆ. ನಮ್ಮ ಅಣ್ಣ ಎಲ್ಲೂ ಹೋಗಿಲ್ಲ…ಹೊರಗಡೆ ಹೋಗಿದ್ದಾರೆ ಅಂತ ಸಹೋದರ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಬೇಸರದಲ್ಲಿದ್ದಾರೆ, ಆದ್ರೆ ಅವರು ಪಕ್ಷ ಬಿಡೋದಿಲ್ಲ… ಎಲ್ಲವೂ ಎರಡ್ಮೂರು ದಿನಗಳಲ್ಲಿ ಸರಿಹೋಗಬಹುದು ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ..

ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು, ಬಿಡುವುದು ಸಹಜ ನಿಯಮ. ಸಿದ್ದರಾಮಯ್ಯ ಮತ್ತು ನಮ್ಮ ನಡುವೆ ಯಾವುದೇ ರೀತಿ ಸಿಟ್ಟಿಲ್ಲ, ಚೆನ್ನಾಗಿದ್ದೇವೆ. ಇನ್ನು ರಮೇಶ್ ಜಾರಕಿಹೊಳಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾದ್ರೆ ಸ್ಪರ್ಧಿಸಲಿ ಅಂತ ಸತೀಶ್ ಜಾರಕಿಹೊಳೆ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧವೂ ಕಡಿಕಾರಿದ್ದಾರೆ. ಉಮೇಶ್ ಕತ್ತಿ 24 ಗಂಟೆಯಲ್ಲಿ ಸರ್ಕಾರ ಪತನ ಅಂತ ಹೇಳುತ್ತಿದ್ದವರು ಈ 15 ದಿನ ಅಂತಿದ್ದಾರೆ ಅಂತ ಕಿಡಿಕಾರಿದ್ರು.

LEAVE A REPLY

Please enter your comment!
Please enter your name here