Home Cinema ಅಣ್ಣಾವ್ರನ್ನ ಏಕಾಏಕಿ ನೆನಪಿಸಿಕೊಂಡಿದ್ದೇಕೆ ದುರ್ಯೋಧನ ದರ್ಶನ್..?

ಅಣ್ಣಾವ್ರನ್ನ ಏಕಾಏಕಿ ನೆನಪಿಸಿಕೊಂಡಿದ್ದೇಕೆ ದುರ್ಯೋಧನ ದರ್ಶನ್..?

1593
0
SHARE

ದರ್ಶನ್ ಏನೇ ಹೇಳಿದ್ರೂ ಅದಕ್ಕೊಂದು ತೂಕವಿರುತ್ತೆ. ಹಾಗೆಯೇ ನಿನ್ನೆ ನಡೆದ ’ನನ್ನ ಪ್ರಕಾರ’ ಟ್ರೈಲರ್ ಲಾಂಚ್‌ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ ಈ ಸ್ಯಾಂಡಲ್‌ವುಡ್ ಸಾರಥಿ ಪೌರಣಿಕ ಸಿನಿಮಾ ಬಗೆಗಿನ ತಮ್ಮ ಮನಸ್ಸಿನ ನಿರ್ಧಾರವೊಂದನ್ನ ಹೊರಹಾಕಿದಾರೆ. ಅಕಸ್ಮಾತ್ ೭೦ರ ದಶಕದಲ್ಲಿ ನಿಮ್ಮ ಕುರುಕ್ಷೇತ್ರ ಸಿನಿಮಾ ನಿರ್ಮಾಣವಾಗಿದ್ರೆ ಯಾರನ್ನ ದುರ್ಯೋಧನನಾಗಿ  ನೋಡೊಕೆ ಇಷ್ಟಪಡ್ತಿದ್ರಿ ಎನ್ನುವ ಪ್ರಶ್ನೆಗೆ ಹಿಂದೆ ಮುಂದೆ ಯೋಚನೆ ಮಾಡದೇ ಅಣ್ಣವ್ರು ಎಂದಿದ್ದಾರೆ ಈ ಕರುನಾಡ ದಾಸ.

ಡಾ.ರಾಜ್‌ಕುಮಾರ್‌ರನ್ನ ಬಿಟ್ರೆ ದುರ್ಯೋಧನನ ಕ್ಯಾರೆಕ್ಟರ್‌ಗೆ ಯಾರು ಸೂಟ್ ಆಗೋಲ್ಲ ಅನ್ನೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ಟ್ರೈಟ್ ಓಪಿನಿಯನ್.ಅಸಲಿಗೆ ದರ್ಶನ್ ಅಭಿನಯದ ’ಕುರುಕ್ಷೇತ್ರ’ ಚಿತ್ರ ರಿಲೀಸ್ ಆದಾಗಿನಿಂದಲೂ ದುರ್ಯೋಧನನ ಪಾತ್ರ ಬಿಟ್ರೆ ಬೇರೆ ಯಾವ ಹೀರೊ ಕೂಡ ಆ ಪಾತ್ರಕ್ಕೆ ಒಪ್ಪಿಗೆಯಾಗ್ತಿರ್‌ಲಿಲ್ಲ. ದರ್ಶನ್‌ಗೆ ದರ್ಶನೇ ಸಾಟಿ ಎನ್ನುವ ಅಭಿಮಾನಿಗಳ ಅಭಿಪ್ರಾಯ ಸಿನಿಮಾಗೆ ಸಾಕಷ್ಟು ಮೈಲೇಜ್ ಕೊಟ್ಟಿತ್ತು.

ದುರ್ಯೋಧನ ಅಂದ್ರೆ ಅದು ನಮ್ಮ ಡಿ ಬಾಸ್ ಮಾತ್ರ ಎನ್ನುವ ವಾದದಲ್ಲೇ ಡಿ ಬಳಗ ಮುಳುಗಿಹೋಗಿತ್ತು. ಅದಕ್ಕೆ ಸರಿಯಾಗಿ ತೆರೆಯ ತುಂಬಾ ದುರ್ಯೋಧನನಾಗಿ ದರ್ಶನ್ ತುಂಬಿ ಕಾಣ್ತಿದ್ರು. ತಮ್ಮ ದೇಹಸಿರಿ ಹಾಗೂ ಡೈಲಾಗ್ ಡೆಲವರಿಯ ಮೂಲಕ ಕುರುಕ್ಷೇತ್ರ ಚಿತ್ರವನ್ನ ತಮ್ಮ ಹೆಗಲಿಗೆ ಹಾಕೊಂಡು ಸಾಗಿದ್ರು. ಪೌರಣಿಕ ಸ್ಟೋರಿಲೈನ್ ಇರೋ ಕಥೆಗಳಿಗೆ ಹೆಚ್ಚು ಮಣೆ ಹಾಕೋ ದಾಸನಿಗೆ ಇಂದಿಗೂ ಅಣ್ಣಾವ್ರೆ ಅಚ್ಚುಮೆಚ್ಚು ಅನ್ನೋದೆ ವಿಶೇಷ.’ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಚಿತ್ರರಂಗದಲ್ಲಿ ಡಾ.ರಾಜ್‌ಕುಮಾರ್ ಮಾಡದ ಪಾತ್ರಗಳಿಲ್ಲ. ಪೌರಣಿಕ ಚಿತ್ರಗಳಿಗೆ ತಮ್ಮದೇ ಫ್ಲೇವರ್ ಬೆರೆಸುತ್ತಿದ್ದ ವರನಟನ ಕೊಡುಗೆ ಏನು ಅಂತ ಹೇಳೊಕೆ ಟೈಮ್ ಸಾಕಾಗೋಲ್ಲ. ಅಣ್ಣಾವ್ರು ನಿಭಾಯಿಸದ ಪಾತ್ರಗಳೇ ಅಂತದ್ದು.

ಕವಿರತ್ನ ಕಾಳಿದಾಸ, ಬಬ್ರುವಾಹನ, ಭಕ್ತಪ್ರಹ್ಲಾದ, ಬೇಡರ ಕಣ್ಣಪ್ಪ, ಮಯೂರ, ರಣಧೀರ ಕಂಠೀರವ, ಭಕ್ತಕುಂಬಾರದಂತಹ ಗೋಲ್ಡನ್ ಟಚ್ ಇರೋ ಸಿನಿಮಗಳನ್ನ ಕೊಟ್ಟ ಅಣ್ಣವ್ರು ಎಲ್ಲ ಆಕ್ಟರ್‌ಗಳಿಗೂ ಟೆಕ್ಸ್ಟ್ ಬುಕ್ ಅಂತಾನೇ ಹೇಳಬಹುದು. ಚಾಲೆಂಜಿಂಗ್ ಸ್ಟಾರ್‌ಗೂ ಅಣ್ಣಾವ್ರೇ ದಿ ಬೆಸ್ಟು. ದರ್ಶನ್ ರಾಜ್‌ರಿಂದ ಪ್ರಭಾವಿತರಾಗಿಯೇ ಇಂತಹ ಹೇಳಿಕೆ ಕೊಟ್ಟಿದಾರೆ. ಸುಯೋಧನನಾಗಿ ಅಣ್ಣಾವ್ರು ಆಕ್ಟ್ ಮಾಡಿದ್ರೆ ಅದರ ಖದರ್ ಬೇರೆನೇ ಇರ‍್ತಿತ್ತು ಅನ್ನೋದು ದರ್ಶನ್ ಓವರ್‌ಆಲ್ ಮನಸ್ಥಿತಿ.ಇತ್ತೀಚೆಗೆ ಪೌರಣಿಕ ಚಿತ್ರಗಳ ಮೂಲಕವೂ ಪ್ರೇಕ್ಷಕನಿಗೆ ಮನರಂಜನೆ ಕೊಡಬಹುದು ಎಂಬ ಟ್ರೆಂಡ್ ಶುರುವಾಗಿದೆ. ಮೈಥಾಲಾಜಿಕಲ್ ಸಿನಿಮಾ ಅಂದ್ರೆ ಅಂದ್ರೆ ಸುಮ್ಮನೇ ಆಗುತ್ತಾ..? ಅದಕ್ಕೆ ಪೂರಕವಾದ ಸ್ಟೋರಿ ಇರಬೇಕು. ಒಳ್ಳೆ ಪ್ರೊಡಕ್ಷನ್ ಹೌಸ್ ಇರ್‌ಬೇಕು. ಸ್ಟಾರ್ ಕಾಸ್ಟ್‌ನ ಜಾತ್ರೆಯೇ ಅಲ್ಲಿರ್‌ಬೇಕು. ಹಾಗಿದ್ರೆ ಪೌರಣಿಕ ಸಿನಿಮಾ ಮಾಡಬಹುದು. ಅಂದಹಾಗೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನಸ್ಸು ಕೂಡ ಇಂತಹ ಪೌರಣಿಕ ಕಥಾಹಂದರವನ್ನ ಹೊಂದಿರೋ ಗಟ್ಟಿ ಸಿನಿಮಾಗಳ ವಾಲುತ್ತಿದೆ.

ನಿನ್ನೆ ಸುಯೋಧನನ ಪಾತ್ರವನ್ನ ಡಾ.ರಾಜ್‌ಕುಮಾರ್ ಮಾಡಬೇಕಿತ್ತು ಎನ್ನುವ ಆಸೆಯನ್ನ ವ್ಯಕ್ತಪಡಿಸಿದ ಹಿನ್ನಲೆಯಲ್ಲೇ ನನಗೆ ಮದಕರಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚೋಕೆ ಕನಸಿದೆ ಎಂದಿದ್ದಾರೆ.ಒಟ್ಟಿನಲ್ಲಿ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಪೌರಣಿಕ ಪಾತ್ರಗಳೆಂದ್ರೆ ನಟಸಾರ್ವಭೌಮ ಡಾ.ರಾಜ್‌ಕುಮಾರ್ ಮಾತ್ರ ನೆನಪಾಗೋದು ಸಾರ್ವಕಾಲಿಕ ಸತ್ಯ. ಎಲ್ಲಾ ನಟರಿಗೂ ಮಾದರಿಯಾಗಿದ್ದ ಅಣ್ಣಾವ್ರು ಎಲ್ಲ ಕ್ಯಾರೆಕ್ಟರ್‌ಗಳನ್ನೂ ನುಂಗಿನೀರು ಕುಡಿಯುತ್ತಿದ್ದ ವೈಖರಿಯಿಂದ ಇಂದಿನ ನಟರು ಸಾಕಷ್ಟು ಕಲಿಯಬೇಕಾಗಿದೆ. ಗಾಂಧಿನಗರದಲ್ಲಿ ತಯಾರಾಗ್ತೀರೊ ಹೊಸ ಪೌರಣಿಕ ಚಿತ್ರಗಳೂ ಇನ್ಮುಂದೆ ಅಡಿಯನ್ಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಸೌಂಡಿಂಗ್ ಮೈಥಾಲಾಜಿಕಲ್ ಸಿನಿಮಾವನ್ನ ಪ್ರೆಸೆಂಟ್ ಮಾಡೋದ್ರಲ್ಲಿ ಯಾವ ಡೌಟ್ ಬೇಡ ಬಿಡಿ. ಯಾಕಂದ್ರೆ ಕುರುಕ್ಷೇತ್ರ ಸಿನಿಮಾ ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿನೋಡುವ ಹಾಗೇ ಮಾಡಿದೆ.

ಮತ್ತೆ ಪೌರಣಿಕ ಅಭಿರುಚಿಯುಳ್ಳ ಸಿನಿಮಾ ಈ ಪಾಟಿ ದುಡ್ಡು ಮಾಡ್ತಿರೋದು ಚಿತ್ರರಂಗಕ್ಕೆ ಮತ್ತೆ ಇಂತಹ ಚಿತ್ರಗಳ ರುಚಿ ಹತ್ತಿಸಿದೆ. ದಿನದಿನದಿಂದ ದಿನಕ್ಕೆ ಬದಲಾಗೋ ಸಿನಿಮಾ ಟ್ರೆಂಡ್ ಈಗ ಪೌರಣಿಕ ಬಿಗ್‌ಬಜೆಟ್‌ಗಳತ್ತ ಮುಖ ಮಾಡಿದೆ. ಅದೇನೇ ಇರ‍್ಲಿ, ಇವುಗಳೆದರ ಮೂಲ ಡಾ.ರಾಜ್‌ಕುಮಾರ್ ಎನ್ನುವ ಮಹಾಅಧ್ಯಾಯ ಎನ್ನುವುದು ಮಾತ್ರ ಸಾರಥಿಯ ಬಾಯಲ್ಲಿ ಪ್ರೂವ್ ಆಗಿಹೋಗಿದೆ.

LEAVE A REPLY

Please enter your comment!
Please enter your name here