Home District ಅದೇ ಖದರ್.. ಅದೇ ಬಾಡಿ ಲಾಂಗ್ವೇಜ್..ಅದೇ ಸಿದ್ದರಾಮಯ್ಯ.. | ಸೈಲೆಂಟ್ ಆಗಿದ್ದ ಸಿದ್ದು ತೋರುಸ್ತಿದ್ದಾರೆ ಹಳೆ...

ಅದೇ ಖದರ್.. ಅದೇ ಬಾಡಿ ಲಾಂಗ್ವೇಜ್..ಅದೇ ಸಿದ್ದರಾಮಯ್ಯ.. | ಸೈಲೆಂಟ್ ಆಗಿದ್ದ ಸಿದ್ದು ತೋರುಸ್ತಿದ್ದಾರೆ ಹಳೆ ಖದರ್.! | ಮೂಲೆಗುಂಪು ಮಾಡಲೆತ್ನಿಸಿದವರಿಗೆ ಸಿದ್ದು ಕೊಟ್ಟಿದ್ದಾರೆ ವಾರ್ನಿಂಗ್.!

2634
0
SHARE

ಅದೇ ಮಾತು… ಅದೇ ಖದರ್… ಅದೇ ಬಾಡಿ ಲಾಂಗ್ವೇಜ್…. ಅದೇ ಸಿದ್ದರಾಮಯ್ಯ… ಆದ್ರೆ ಮುಖ್ಯಮಂತ್ರಿ ಅಲ್ಲ ಬದಲಾಗಿ ಮಾಜಿ ಮುಖ್ಯಮಂತ್ರಿ ಅಷ್ಟೆ… ಸಿದ್ದರಾಮಯ್ಯ ವೇದಿಕೆ ಮೇಲೆ ನಿಂತ್ರೆ ಮಜವಾದ ಮಾತಿಗೇನು ಬರ ಇರಲ್ಲ. ಅದು ಸಿಎಂ ಆದ್ರು ಅಷ್ಟೆ ಮಾಜಿ ಆದಾಗಲು ಅಷ್ಟೆ. ಫರ್ ಚೆಂಜ್ ಅನ್ನುವಂತೆ ಈ ಬಾರಿ ಸಿದ್ದರಾಮಯ್ಯ ತಮ್ಮ ಸೋಲಿನ ಅವಲೋಕನ ಮಾಡಿಕೊಂಡಿದ್ದಾರೆ, ಅಷ್ಟೆ ಅಲ್ಲ ಚಾಮುಂಡೇಶ್ವರಿಯಲ್ಲಿ ಆದ ಸೋಲಿಗೆ ಕಾರಣ ಏನು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ, ಅದು ಅವರದ್ದೇ ಶೈಲಿಯಲ್ಲಿ.ಕೇಳಿದ್ರಲ್ಲ ಹೇಗಿದೆ ಸಿದ್ದು ಪಂಚ್ ಅಂತಾ…… ರಾಹು, ಕೇತು, ಶನಿ ಎಲ್ಲಾ ಒಟ್ಟುಗೂಡಿ ಸೋಲಿಸಿಯೇ ಬಿಟ್ರು ಅನ್ನೋ ಸಿದ್ದು ಮಾತನ್ನ ಕೇಳಿದ್ರೆ , ಇಲ್ಲಿ ರಾಹು ಯಾರು, ಕೇತು ಯಾರು, ಶನಿ ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತೆ.

ಸಹಜವಾಗೀಯೇ ಸಿದ್ದು ಸಾಲಿನ ದಾರಿ ಹಿಡಿದು ಹೊರಟರೆ ಆ ರಾಹು, ಕೇತುಗಳು ಯಾರು ಅನ್ನೋ ಪ್ರಶ್ನೆಗೂ ಉತ್ತರ ಸಿಕ್ಕಿ ಬಿಡುತ್ತೆ… ಸಿದ್ದರಾಮಯ್ಯ ಇಂದು ರಾಹು, ಕೇತು ಅಂತಾ ಅಣಿಮುತ್ತುಗಳನ್ನ ಉದುರಿಸುತ್ತಿರೋದಕ್ಕೂ ಕಾರಣವಿದೆ. ವಿಧಾನಸಭಾ ಚುನಾವಣೆಯಲ್ಲಿ ಸಿದ್ದು ಕಾಂಗ್ರೆಸ್ ಪಾಲಿಗೆ ದಂಡನಾಯಕ ಆಗಿದ್ರು. ಕಳೆದ ಬಾರಿ ಉತ್ತಮ ಆಡಳಿತವನ್ನ ಕೊಟ್ಟಿದ್ದೇವೆ. ಮುಂದಿನ ಬಾರಿಯೂ ನಮ್ಮದೆ ಸರ್ಕಾರ ಅನ್ನೋ ಓವರ್ ಕಾನ್ಫಿಡೆನ್ಸ್ ಸಿದ್ದು ಅಂಡ್ ಟೀಂಗಿತ್ತು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದುಗಿದ್ದ ಆತ್ಮ ವಿಶ್ವಾಸ ಕಡಿಮೆಯಾಗ ತೊಡಗಿತು, ಚಾಮುಂಡೇಶ್ವರಿಯಲ್ಲಿ ನಿಂತ್ರು ಸಿದ್ದರಾಮಯ್ಯ ಗೆಲ್ಲಲ್ಲ ಅನ್ನೋ ಮಾತುಗಳು ಅಂದೇ ಕೇಳಿ ಬಂದ್ವು, ಸೇಫರ್ ಸೈಡ್ ಗೆ ಇರ್ಲಿ ಅಂತಾ ಮೈಸೂರು ಬಿಟ್ಟು ದೂರದ ಬಾಗಲಕೋಟೆಯ ಬದಾಮಿಗೆ ಹೋಗಿ ಸ್ಪರ್ಧೆ ಮಾಡುವ ತೀರ್ಮಾನ ಮಾಡಿದ್ರು.

ಫಲಿತಾಂಶದ ವೇಳೆಗೆ ಸಿದ್ದರಾಮಯ್ಯಗೆ ಬಂದ ಮಾಹಿತಿ ದೃಡವಾಯ್ತು. ಚಾಮುಂಡೇಶ್ವರಿಯಲ್ಲಿ ಸಿದ್ದು ಹೀನಾಯವಾಗಿ ಸೋತ್ರು, ರಾಜಕೀಯವಾಗಿ ಪುನರ್ಜನ್ಮ ಕೊಟ್ಟಿದ್ದ ಚಾಮುಂಡೇಶ್ವರಿ ಮತದಾರರು. ಸಿಎಂ ಅನ್ನೋದನ್ನು ನೋಡದೇ ಹೀನಾಯವಾಗಿ ಸೋಲಿಸಿ ಬಿಟ್ಟಿದ್ರು. ಸಿದ್ದು ಕೈ ಹಿಡಿಯುತ್ತಾರೆ ಅಂತಾ ಭಾವಿಸಿದ್ದ ಮತದಾರ ನಡು ನೀರಿನಲ್ಲೇ ಕೈ ಬಿಟ್ಟು ಹೋಗಿದ್ದ. ಅಲ್ಲಿಗೆ ಪುನರ್ಜನ್ಮ ಕೊಟ್ಟ ಕ್ಷೇತ್ರವೇ ರಾಜಕೀಯ ಜೀವನ ಮುಗಿಸುವ ಸೂಚನೆಯನ್ನು ನೀಡಿತ್ತು.ಅಂದಿನ ಫಲಿತಾಂಶವನ್ನ ನೋಡೋದ್ರೆ ಸಿದ್ದರಾಮಯ್ಯ ಹೀವಾಯವಾಗಿ ಸೋತಿದ್ರು, ಸಿದ್ದು ಎದುರಿಗೆ ನಿಂತಿದ್ದ ಜೆಡಿಎಸ್ ನ ಜಿಟಿ ದೇವೇಗೌಡ್ರು 36 ಸಾವಿರ ಮತಗಳ ಅಂತರದಲ್ಲಿ ಸಿದ್ದುರನ್ನ ಸೋಲಿಸಿ ಬಿಟ್ಟಿದ್ರು, ಅಂದು ಸಿದ್ದರಾಮಯ್ಯ ಅಕ್ಷರಶಃ ರಾಜಕೀಯ ಪತನದ ಹಾದಿ ಹಿಡಿದಿದ್ರು.

ಇದು ವಾಸ್ತವಾಗಿ ನಡೆದ ಘಟನೆ, ಈಗ ಅದೇ ಘಟನೆಯನ್ನ ಮೇಲುಕು ಹಾಕಿರೋ ಸಿದ್ದರಾಮಯ್ಯ ಎಲ್ಲಾ ನನ್ನ ವೈರಿಗಳು ಸೇರಿಕೊಂಡು ಸೋಲಿಸಿ ಬಿಟ್ಟಿದ್ದಾರೆ, ಅಂತಾ ಹೇಳ್ತಾ ಇರೋದನ್ನ ನೋಡಿದ್ರೆ , ರಾಹು ಸ್ಥಾನದಲ್ಲಿ ಯಾರಿದ್ದಾರೆ, ಕೇತು ಸ್ಥಾನದಲ್ಲಿ ಯಾರ್ ಇದ್ರು , ಶನಿ ಸ್ಥಾನದಲ್ಲಿ ಯಾರಿದ್ದಾರೆ ಅನ್ನೋದ ಊಹಿಸಿಕೊಳ್ಳಬಹುದು ಅಷ್ಟೆ, ಯಾಕೆಂದ್ರೆ ಸಿದ್ದು ಸೋಲಿಗೆ ಕಾರಣವಾಗಿದ್ದು, ಇದೇ ಎಚ್ ಡಿ ದೇವೇಗೌಡ್ರು, ಸಿಎಂ ಕುಮಾರಸ್ವಾಮಿ, ಅಂಡ್  ಜಿಟಿ ದೇವೇಗೌಡ್ರು, ಸಿದ್ದು ಈ ಮೂವರನ್ನೇ ಉದ್ದೇಶಿಸಿ ಈ ಮಾತನ್ನ ಹೇಳಿದ್ರ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರ್ತಾ ಇದೆ. ಆದ್ರೀಲ್ಲಿ ರಾಹು ಯಾರು, ಕೇತು ಯಾರು, ಶನಿ ಯಾರು ಅನ್ನೋದು ನಿಮ್ಮ ಆಲೋಚನೆಗೆ ಬಿಟ್ಟ ಬಿಚಾರ..

ಚಾಮುಂಡೇಶ್ವರಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ತೆಗೆದುಕೊಂಡ ಸ್ಥಾನಗಳ ಪರಿಣಾಮ ಸಿದ್ದರಾಮಯ್ಯ ನವರನ್ನ ಹೊಣೆಗಾರನ್ನಾಗಿ ಮಾಡಲಾಯ್ತು, ನೈತಿಕ ಹೊಣೆ ಹೊತ್ತಿದ ಸಿದ್ದರಾಮಯ್ಯ ಜೆಡಿಎಸ್ ಮುಂದೆ ಕೈ ಕಟ್ಟಿ ನಿಂತು ಸಿಎಂ ಸ್ಥಾನವನ್ನ ಬಿಟ್ಟು ಕೊಟ್ರು, ಅಲ್ಲಿಗೆ ಸಿದ್ದು ರಾಜಕೀಯವಾಗಿ ಮುಳುಗೇ ಹೋದ್ರು ಅನ್ನೋ ವಿಶ್ಲೆಷಣೆ ಕೇಳಿ ಬಂದ್ವು. ಎಲ್ಲಾ ಮುಗಿಯಿತು ಅನ್ನೊಷ್ಟರಳಗೆ ಸಿದ್ದು ಮತ್ತೆ ಫಿನಿಕ್ಸ್ ನಂತೆ ಎದ್ದು ಬಂದಿದ್ದಾರೆ. ಪಿಕ್ಚರ್ ಅಭಿ ಬಾಕಿ ಹೈ ಅಂತಾ ಘರ್ಜನೆ ಮಾಡುತ್ತಿದ್ದಾರೆ. ಸಧ್ಯದ ಮಟ್ಟಿಗೆ ಹೇಳಬೇಕು ಅಂದ್ರೆ ಸಿದ್ದು ಸಮ್ಮಿಶ್ರ ಸರ್ಕಾರಕ್ಕೆ ಆಪತ್ಭಾಂಧವ, ಅವರೇ ಹೇಳೋ ಪ್ರಕಾರ ಅವರೀಗ ದೋಸ್ತಿ ಪಾಳೆಯದ ಟ್ರಬಲ್ ಶೂಟರ್..

ಚುನಾವಣಾ ಫಲಿತಾಂಶ ಹೊರ ಬಿದ್ದ ನಂತರ ಸಿದ್ದರಾಮಯ್ಯ ದೋಸ್ತಿ ಸರ್ಕಾರದಲ್ಲಿ ಅಕ್ಷರಶಃ ಮೂಲೆ ಗುಂಪಾಗಿದ್ರು, ಎಲ್ಲರು ಸಿದ್ದರಾಮಯ್ಯ ಅನ್ನೋ ಮಾಜಿ ಮುಖ್ಯಮಂತ್ರಿ ನಮ್ಮ ಸರ್ಕಾರದಲ್ಲಿ ಇದ್ದಾರೆ ಅನ್ನೋದನ್ನೇ ಮರೆತು ಹೋಗಿದ್ರು. ಅವತ್ತಿನ ಪರಿಸ್ಥಿತಿಯಲ್ಲಿ ಹೇಳೋದ್ ಆದ್ರೆ ಸಿದ್ದು ಅಕ್ಷರಶಃ ಪಾತಾಳಕ್ಕೆ ಕುಸಿದು ಹೋಗಿದ್ರು. ಆದ್ರೆ ಕಾಲ ಚಕ್ರ ಉರುಳಿತು ನೋಡಿ ಪಾತಳಕ್ಕೆ ಇಳಿದಿದ್ದ ಸಿದ್ದು ಫಿನಿಕ್ಸ್ ಹಕ್ಕಿಯಂತೆ ಕ್ಷಣ ಮಾತ್ರದಲ್ಲಿ ಬಾನೆತ್ತರಕ್ಕೆ ಜಿಗಿದಿದ್ದಾರೆ. ಅಂದು ಯಾರೆಲ್ಲ ತಮ್ಮನ್ನ ಕೀಳಾಗಿ ಕಂಡಿದ್ರೋ ಅವರೆಲ್ಲಾ ಇಂದು ಸಿದ್ದು ಮನೆ ಬಾಗಿಲಿಗೆ ಬರ ಮಾಡಿಕೊಂಡಿದ್ದಾರೆ. ಎಲ್ಲರು ಪದ್ಮನಾಭ ನಗರವನ್ನ ಪವರ್ ಹೌಸ್ ಅಂದು ಕೊಂಡಿದ್ರು … ಆದ್ರೀಗ ಸಿದ್ದರಾಮಯ್ಯ ಅವರ ನಿವಾಸವೇ ಪವರ್ ಹೌಸ್ ಆಗಿದೆ.

ಸಧ್ಯ ಸಿದ್ದು ಕಿರೀಟವಿಲ್ಲದ ರಾಜ್….. ಅರ್ಥಾತ್ ರಾಜ್ಯದ ಸೂಪರ್ ಸಿಎಂ…..ಹೌದು ವೀಕ್ಷಕರೇ ಸಿದ್ದರಾಮಯ್ಯ ಸಧ್ಯಕ್ಕೆ ಸೂಪರ್ ಸಿಎಂ ಅನ್ನೋದನ್ನ ಎಲ್ಲರು ಒಪ್ಪಿಕೊಳ್ಳಲೇ ಬೇಕು .. ಏಕೆಂದ್ರೆ ಈ ಫೋಟೋವನ್ನ ಸೂಕ್ಷ್ಮವಾಗಿ ಗಮನಿಸಿ ನೋಡಿ.. ಮೊನ್ನೆ ಸರ್ಕಾರ ಇನ್ನೇನು ಬಿದ್ದೇ ಹೋಯ್ತು.. ಅನ್ನೋ ಸನ್ನಿವೇಷ ನಿರ್ಮಾಣವಾಗಿತ್ತು. ಕುಮಾರಸ್ವಾಮಿ ಹತಾಶ ಭಾವದಲ್ಲಿ ದಂಗೆ ಅದು , ಇದು ಅಂತಾ ಏನೇನೋ ಮಾತನಾಡುತ್ತಿದ್ರು. ಅದೇ ಸಮಯಕ್ಕೆ ಎಲ್ಲಾ ನಾಯಕರು ಸಿದ್ದು ನಿವಾಸಕ್ಕೆ ದೌಡಾಯಿಸಿದ್ರು.. ಆ ಸಮಯ ಫೋಟೋ ಇದು… ಸಿದ್ದರಾಮಯ್ಯ ತಾವೊಬ್ಬರೇ ಘನ ಗಾಂಭಿರ್ಯದಿಂದ ಕಾಲ ಮೇಲೆ ಕಾಲು ಹಾಕಿ ಕುಳಿತಿದ್ದರೆ..

ಅಂದು ಯಾವ ವ್ಯಕ್ತಿ ಅವರಪ್ಪನಾಣೆ ಸಿಎಂ ಆಗಲ್ಲ ಅಂದಿದ್ರೋ ಅವರೇ ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಕೂರಿಸಿದ್ದಾರೆ. ಅಪ್ಪ ಮಕ್ಕಳ ವಿರುದ್ಧ ಯಾವ ವ್ಯಕ್ತಿ ತೊಡೆ ತಟ್ಟಿದ್ರೋ ಅದೇ ವ್ಯಕ್ತಿ ಕುಮಾರಸ್ವಾಮಿ ಸರ್ಕಾರ ಕಾಪಾಡುವ ಜವಬ್ದಾರಿ ವಹಿಸಿಕೊಂಡಿದ್ದಾರೆ.. ಇದೇ ರಾಜಕೀಯ… ಆದ್ರೆ ಒಂದತ್ತು ಸತ್ಯ ಈ ಪ್ರೀತಿ, ಜವಾಬ್ದಾರಿ, ಕಾಳಜಿಗೆ ವ್ಯಾಲಿಡಿಟಿ ಏನಿದ್ರು  ಸರ್ಕಾರ ಇರೋವರ್ಗೂ ಮಾತ್ರ… ಮುಂದೇ ಏನು ಬೇಕಾದ್ರು ಆಗಬಹುದು…

ಯಾಕೆಂದ್ರೆ ಇದು ಚದುರಂಗದಾಟ.. ಇಲ್ಲಿ ದಾಳ ಉರುಳಿಸ ಬಲ್ಲ ಚತುರನೇ ರಾಜ, ಮಂತ್ರಿ, ಸೈನಿಕ ಎಲ್ಲಾ.. ಆ ಅರ್ಥದಲ್ಲಿ ನೋಡಿದ್ರೆ ಸಿದ್ದು ಸಧ್ಯಕ್ಕೆ ಸಮ್ಮಿಶ್ರ ಸರ್ಕಾರದ ಸೂಪರ್ ಸಿಎಂ ಅಂದ್ರೆ ತಪ್ಪಾಗಲ್ಲ. ಈ ಹಿಂದೆ ಮಾಡಿದ ತಪ್ಪನ್ನೇ ಕುಮಾರಸ್ವಾಮಿ ಮಾಡಿದ್ರೆ ಮತ್ತೆ, ಅಪಾಯ ಎದುರಿಸಲು ಸಜ್ಜಾಗಬೇಕಾಗುತ್ತೆ. ಒಟ್ಟಾರೆ ಸಿದ್ದು ನಾನ್ ಸಿಂಗಲ್ ಅಲ್ಲ ಅನ್ನೋದನ್ನ ಮತ್ತೆ ಸಾಬೀತು ಪಡಿಸಿದ್ದಾರೆ. ಸೋ ಸಿದ್ದು ಬಾಯಿಂದ ಸಿಡಿಯುತ್ತಿರೋ ಸಿಡಿಗುಂಡಿನಂತ ಮಾತುಗಳು, ಸರ್ಕಾರ ಆಳುತ್ತಿರೋ ದೊರೆಗೆ ಅದೇನೋ ಚುಚ್ಚಿದಂತೆ ಆಗುತ್ತಿರೋ ಮಾತ್ರ ಸುಳ್ಳಲ್ಲ.

LEAVE A REPLY

Please enter your comment!
Please enter your name here