Home Crime ಅಧಿಕಾರಿಗಳೇ ಜನರ ಪ್ರಾಣಕ್ಕ ಬೆಲೆನೇ ಇಲ್ವಾ..? ಮಂಡ್ಯ ಕನಗನಮರಡಿ ದುರಂತ ನಡೆದ್ರು ಎಚ್ಚೆತ್ತುಕೊಳ್ಳದ ಸಾರಿಗೆ ಇಲಾಖೆ..!...

ಅಧಿಕಾರಿಗಳೇ ಜನರ ಪ್ರಾಣಕ್ಕ ಬೆಲೆನೇ ಇಲ್ವಾ..? ಮಂಡ್ಯ ಕನಗನಮರಡಿ ದುರಂತ ನಡೆದ್ರು ಎಚ್ಚೆತ್ತುಕೊಳ್ಳದ ಸಾರಿಗೆ ಇಲಾಖೆ..! ಆಕ್ಸೆಲ್ ಕಟ್ ಆಗಿ ಬಸ್‌ನಿಂದ ಬೇರ್ಪಟ್ಟ ಚಕ್ರಗಳು; ತಪ್ಪಿದ ದುರಂತ..!

809
0
SHARE

ರಾಜ್ಯದಲ್ಲಿನ ಬಸ್ ಗಳೆಂದ್ರೆ ಸಾಕು ಅವು ಜನ್ರನ್ನು ಯಮನ ಪಾದಕ್ಕೆ ಕಳಿಸೋ ಏಜೆಂಟರ ಥರಾ ಆಗಿವೆ. ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸಬೇಕಂದ್ರೆ ಜನ ತಮ್ಮ ಜೀವ ಕೈಲಿ ಹಿಡ್ಕೊಂಡೇ ಪ್ರಯಾಣಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಇದಕ್ಕೆ ಹೊಸ ಸೇರ್ಪಡೆ ಎನ್ನುವಂತೆ ಈಗ ಮತ್ತೊಂದು ಸರ್ಕಾರಿ ಬಸ್ ಅಪಘಾತಕ್ಕೀಡಾಗಿದ್ದು, ಸ್ವಲ್ಪದ್ರಲ್ಲೇ ಭಾರೀ ಅನಾಹುತ ತಪ್ಪಿದೆ. ಅನ್ ಫಿಟ್ ಬಸ್ ರಸ್ತೆಗಿಳಿಸಿದ್ದೇ ಘಟನೆಗೆ ಕಾರಣ ಅಂತ ಚಾಲಕ ತನ್ನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಗದಗ ಜಿಲ್ಲೆಯಲ್ಲಿ ರಾಜ್ಯ ಸರ್ಕಾರಿ ಬಸ್ ಅಪಘಾತವಾಗಿದ್ದು, ಸ್ವಲ್ಪದರಲ್ಲೇ ಭಾರೀ ಅವಘಡ ತಪ್ಪಿದೆ. ರೋಣ ಪಟ್ಟಣದಿಂದ ಗದಗಕ್ಕೆ ಬರುತ್ತಿದ್ದ ಬಸ್ ನ ಆಕ್ಸೆಲ್ ಕಟ್ ಆಗಿ, ಹಿಂದಿನ ನಾಲ್ಕು ಚಕ್ರಗಳು ಬೇರ್ಪಟ್ಟಿವೆ. ಆ ಬಸ್ ಸುಮಾರು 100 ಅಡಿ ದೂರ ಹೋಗಿ ಉರುಳಿದೆ. ಆದ್ರೆ ಅದೃಷ್ಟವಶಾತ್ ಭಾರಿ ದುರಂತ ತಪ್ಪಿದೆ. ಇಷ್ಟೆಲ್ಲಾ ಆದ್ರೂ ಕೂಡ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳದಿರೋದನ್ನು ನೋಡಿದ್ರೆ, ಜನರ ಪ್ರಾಣಕ್ಕೆ ಬೆಲೆನೇ ಇಲ್ವಾ ಅನ್ನೋ ಅನುಮಾನ ಮೂಡ್ತಿದೆ.

ಗದಗ ಜಿಲ್ಲೆ ರೋಣ ಘಟಕಕ್ಕೆ ಸೇರಿದ್ದ ಬಸ್ ಈಗ ಅಪಘಾತಕ್ಕೆ ಈಡಾಗಿರೋದನ್ನು ನೋಡಿದ್ರೆ, ಬಸ್ಸಿನ ಕಂಡಿಷನ್ ಹೇಗಿತ್ತು ಅನ್ನೋದನ್ನು ಸಾರಿ ಸಾರಿ ಹೇಳೋವಂತಿದೆ. ಸಾರಿಗೆ ಸಚಿವರು ಮಂಡ್ಯ ಜಿಲ್ಲೆಯ ಬಸ್ ದುರಂತ ಸಂಭವಿಸಿದ ವೇಳೆ ಹಳೇ ಸರ್ಕಾರಿ ಬಸ್ ಗಳನ್ನು ಸೇವೆಯಿಂದ ತೆರವುಗೊಳಿಸೋದಾಗಿ ಹೇಳಿಕೆ ನೀಡಿದ್ರು. ಆದ್ರೆ ಅಧಿಕಾರಿಗಳು ಮಾತ್ರ ಗುಜರಿಗೆ ಹಾಕಲು ಸಹ ಯೋಗ್ಯವಲ್ಲದ ಬಸ್ ಗಳನ್ನು ರಸ್ತೆಗೆ ಇಳಿಸಿ ಜನರ ಜೀವದ ಜೊತೆ ಚಲ್ಲಾಟವಾಡ್ತಿದ್ದಾರೆ.

ರೋಣದಿಂದ ಗದಗ ಕಡೆಗೆ ಹೊರಟಿದ್ದ ಬಸ್ ರಸ್ತೆಗೆ ಇಳಿಯಲು ಯೋಗ್ಯವಲ್ಲ ಅನ್ನೋದು ಅದನ್ನು ನೋಡಿದ್ರೆ ಗೊತ್ತಾಗುತ್ತೆ. ಇದನ್ನು ಬಸ್ ಡಿಪೋದಲ್ಲೇ ಚಾಲಕ ಅಧಿಕಾರಿಗಳ ಗಮನಕ್ಕೂ ಸಹ ತಂದಿದ್ದರಂತೆ. ಆದ್ರೆ ಹೆಚ್ಚುವರಿ ಬಸ್ ಇಲ್ಲದ ಕಾರಣ ಅಧಿಕಾರಿಗಳು ಅದೇ ಅನ್ ಫಿಟ್ ಬಸ್ ಅನ್ನು ಚಾಲನೆ ಮಾಡುವಂತೆ ಚಾಲಕನಿಗೆ ಫರ್ಮಾನು ಹೊರಡಿಸಿದ್ದರಂತೆ. ಗದಗ ತಾಲೂಕಿನ ಬೆನಕನಕೊಪ್ಪದ ಗದ್ದಿಹಳ್ಳದ ಬಳಿ ಬರುತ್ತಿದ್ದಂತೆ ಬಸ್ಸಿನ ಆಕ್ಸೆಲ್ ಕಟ್ ಆಗಿ, ಹಿಂಬದಿ ಚಕ್ರಗಳು ಬಸ್ ನಿಂದ ಕಳಚಿಕೊಂಡಿವೆ.

ಇದನ್ನರಿತ ಚಾಲಕ ಹಾಗೂ ಹೀಗೂ ಹರಸಾಹಸ ಪಟ್ಟು ರಸ್ತೆ ಬದಿಯ ದಿನ್ನೆಯೊಂದಕ್ಕೆ ಬಸ್ಸನ್ನು ನಿಲ್ಲಿಸಿದ್ದಾನೆ. ಬಸ್ ನಲ್ಲಿ 11 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಐವರಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇದ್ರಿಂದಾಗಿ ಆಕ್ರೋಶಗೊಂಡ ಪ್ರಯಾಣಿಕರು ಈ ರೀತಿ ಡಕೋಟಾ ಬಸ್ ಗಳನ್ನು ರಸ್ತೆಗೆ ಇಳಿಸೋ ಮೂಲಕ ಸಾರಿಗೆ ಅಧಿಕಾರಿಗಳು ಜನರ ಜೀವದ ಜೊತೆ ಚಲ್ಲಾಟವಾಡ್ತಿದ್ದಾರೆ.ಪ್ರಯಾಣಿಕರ ಸುರಕ್ಷತೆಗಾಗಿ ಸಾರಿಗೆ ಇಲಾಖೆ, ಪ್ರತಿ ವಾಹನಕ್ಕೂ ಇಂತಿಷ್ಟೇ ಅಂತ ಆಯಸ್ಸನ್ನು ನಿಗದಿಪಡಿಸಿದ್ದು, ಅದಾದ ಬಳಿಕ ಆ ವಾಹನವನ್ನು ರಸ್ತೆಗಿಳಿಸಬಾರದು ಅನ್ನೋ ನಿಯಮವನ್ನು ಜಾರಿ ಮಾಡಿದೆ.

LEAVE A REPLY

Please enter your comment!
Please enter your name here