Home Elections 2019 ಅಧಿಕಾರ ಕಳೆದುಕೊಳ್ಳುವ ಮೂಢನಂಬಿಕೆಯಿಂದ ಹಿಂದೆ ಸರಿದ್ರಾ CM HDK..?! ಬೆಂಗಳೂರಿನಲ್ಲೇ ಇದ್ರೂ ಕಾರ್ಯಕ್ರಮಕ್ಕೆ CM ಗೈರು,...

ಅಧಿಕಾರ ಕಳೆದುಕೊಳ್ಳುವ ಮೂಢನಂಬಿಕೆಯಿಂದ ಹಿಂದೆ ಸರಿದ್ರಾ CM HDK..?! ಬೆಂಗಳೂರಿನಲ್ಲೇ ಇದ್ರೂ ಕಾರ್ಯಕ್ರಮಕ್ಕೆ CM ಗೈರು, DCM, ಸಚಿವೆ ಜಯಮಾಲ ಭಾಗವಹಿಸದೆ ನಿರ್ಲಕ್ಷ..?!

1878
0
SHARE

ಇಂದು ಕಿತ್ತೂರು ಚೆನ್ನಮ್ಮ ವಿಜಯೋತ್ಸವ ಹಾಗೂ ಜಯಂತಿ. ರಾಣಿ ಚೆನ್ನಮ್ಮ ಬ್ರಿಟೀಷ್ ಅಧಿಕಾರಿ ಥ್ಯಾಕರೆಯನ್ನು ಕೊಂದ ದಿನ. ರಾಜ್ಯಾದ್ಯಂತ ಕಿತ್ತೂರು ಚೆನ್ನಮ್ಮ ಜಯಂತಿ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಆದರೆ,ಬೆಂಗಳೂರಿನ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಾಗಲೀ, ಕನ್ನಡ ಸಂಸ್ಕೃತಿ ಸಚಿವೆ ಜಯಮಾಲ ಅವರಾಗಲೀ ಭಾಗವಹಿಸದೆ ನಿರ್ಲಕ್ಷ ಮಾಡಿದ್ರು.

ಇದು ಇಡೀ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆಯಂತಾಯ್ತು.ಇಂದು ಕಿತ್ತೂರು ಚೆನ್ನಮ್ಮ ವಿಜಯೋತ್ಸವ ಹಾಗೂ ಜಯಂತಿ. ಕಳೆದ ವರ್ಷ ವಿಧಾನಸೌಧದ ಮುಂಭಾಗದಲ್ಲಿ ಅದ್ದೂರಿಯಾಗಿ ಆಚರಿಸಲಾಗಿತ್ತು. ಆದರೆ, ಈ ವರ್ಷ ಯಾಕೋ ಸರ್ಕಾರ ಕಿತ್ತೂರು ಚೆನ್ನಮ್ಮನ್ನು ಮರೆತೇ ಬಿಟ್ಟಿತ್ತು. ಕನ್ನಡ ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಾಟಾಚಾರಕ್ಕೆ ಎಂಬಂತೆ ಕಿತ್ತೂರು ಚೆನ್ನಮ್ಮ ಜಯಂತಿ ಉತ್ಸವ ಹಮ್ಮಿಕೊಂಡಿತ್ತು.

ಪುರಭವನದ ಬಳಿಯಿಂದ ಆರಂಭಗೊಂಡ ಮೆರವಣಿಗೆಯಲ್ಲಾಗಲೀ, ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಾಗಲೀ ಯಾವುದೇ ಜನಪ್ರತಿನಿಧಿಯೂ ಪಾಲ್ಗೊಂಡಿರಲಿಲ್ಲ.ಕಳೆದ ಇಪ್ಪತ್ತು ವರ್ಷಗಳಲ್ಲಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ಮುಖ್ಯಮಂತ್ರಿಗಳೇ ಉದ್ಗಾಟಿಸಿದ್ದಾರೆ. ಆದರೆ, ಈ ಬಾರಿ ಅದ್ಯಾಕೋ, ಮುಖ್ಯಮಂತ್ರಿ ಕುಮಾರಸ್ವಾಮಿ ಕಿತ್ತೂರು ಚೆನ್ನಮ್ಮ ಜಯಂತಿ ಬಗ್ಗೆ ಆಸಕ್ತಿಯೇ ತೋರಿಸಲಿಲ್ಲ. ಬೆಂಗಳೂರಲ್ಲೇ ಇದ್ದರೂ ಕಿತ್ತೂರು ಚೆನ್ನಮ್ಮ ಜಯಂತಿಯಲ್ಲಿ ಪಾಲ್ಗೊಳ್ಳಲಿಲ್ಲ.

ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವದಲ್ಲಿ ಪಾಲ್ಗೊಂಡರೆ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢ ನಂಬಿಕೆ ಕಾರಣಕ್ಕೆ ಸಿಎಂ ಕಿತ್ತೂರು ಚೆನ್ನಮ್ಮ ಜಯಂತಿಯಲ್ಲಿ ಪಾಲ್ಗೊಳ್ಳಲಿಲ್ಲ ಎನ್ನಲಾಗಿದೆ.ಮತ್ತೊಂದೆಡೆ ಡಿಸಿಎಂ ಪರಮೇಶ್ವರ್ ಉಪಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು..

ಕನ್ನಡ ಸಂಸ್ಕೃತಿ ಸಚಿವೆ ಜಯಮಾಲ ಅನಾರೋಗ್ಯದ ಕಾರಣ ಬಂದಿರಲಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದರೂ ಮೇಯರ್ ಗಂಗಾಂಬಿಕೆಗೆ ಕಿತ್ತೂರು ಚೆನ್ನಮ್ಮ ಜಯಂತಿ ನೆನಪೇ ಇರಲಿಲ್ಲ. ಕಳೆದ ವರ್ಷದಿಂದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ನೀಡಲಾಗುತ್ತಿದೆ. ಆದರೆ, ಈ ಪ್ರಶಸ್ತಿ ಅನರ್ಹರ ಪಾಲಾಗುತ್ತಿದೆ. ಲೆಟರ್ ಹೆಡ್ ತಂದವರಿಗೆಲ್ಲಾ ಪ್ರಶಸ್ತಿ ನೀಡಲಾಗುತ್ತಿದೆ. ಇದರಿಂದ ಪ್ರಶಸ್ತಿಯ ಮೌಲ್ಯವೇ ಕಳೆದುಕೊಳ್ಳುತ್ತಿದೆ ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ವಿಷಾಧಿಸಿದ್ರು.

ಇದೇ ಸಂದರ್ಭದಲ್ಲಿ ಬೆಳಗಾವಿಯ ಸುವರ್ಣ ಸೌಧದ ಎದುರು ಕಿತ್ತೂರು ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯಾಗಬೇಕು.. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚೆನ್ನಮ್ಮ ಹೆಸರು ನಾಮಕರಣವಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಯ್ತು.

LEAVE A REPLY

Please enter your comment!
Please enter your name here