Home KARNATAKA ಅನರ್ಹ ಶಾಸಕರ ಭವಿಷ್ಯ ಇನ್ನೂ ಅತಂತ್ರ ಸ್ಥಿತಿ! ಹದಿನೇಳು ಅನರ್ಹ ಶಾಸಕರಿಗೆ ಭಾರಿ ನಿರಾಸೆ, ಆತಂಕ!

ಅನರ್ಹ ಶಾಸಕರ ಭವಿಷ್ಯ ಇನ್ನೂ ಅತಂತ್ರ ಸ್ಥಿತಿ! ಹದಿನೇಳು ಅನರ್ಹ ಶಾಸಕರಿಗೆ ಭಾರಿ ನಿರಾಸೆ, ಆತಂಕ!

2010
0
SHARE

ಬಿಜೆಪಿ ಸರ್ಕಾರ ರಚನೆಗೆ ಮುನ್ನುಡಿ ಬರೆದಿದ್ದ ಅನರ್ಹ ಶಾಸಕರ ಭವಿಷ್ಯ ಇನ್ನೂ ಅತಂತ್ರ ಸ್ಥಿತಿಯಲ್ಲಿದೆ. ಉಪಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸ್ಪಷ್ಟ ಚಿತ್ರಣ ಬರುತ್ತದೆಯೆಂಬ ನಿರೀಕ್ಷೆಯಲ್ಲಿದ್ದ ಹದಿನೇಳು ಅನರ್ಹ ಶಾಸಕರಿಗೆ ಭಾರಿ ನಿರಾಸೆಯಾಗಿದೆ. ಸುದೀರ್ಘ ವಿಚಾರಣೆಯ ಅಗತ್ಯ ಇರುವುದರಿಂದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

ಇನ್ನೂ ಆ ಕಡೆಯೂ ಇಲ್ಲದೇ ಈ ಕಡೆಯೂ ಇರಲಾರದೇ ಅನರ್ಹ ಶಾಸಕರು ಅತಂತ್ರರಾಗಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ ಮುನ್ನುಡಿ ಬರೆದಿದ್ದ ಅನರ್ಹ ಶಾಸಕರ ಭವಿಷ್ಯ ಇನ್ನೂ ಅತಂತ್ರ ಸ್ಥಿತಿಯಲ್ಲಿದೆ. ಉಪಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸ್ಪಷ್ಟ ಚಿತ್ರಣ ಬರುತ್ತದೆಯೆಂಬ ನಿರೀಕ್ಷೆಯಲ್ಲಿದ್ದ ಹದಿನೇಳು ಅನರ್ಹ ಶಾಸಕರಿಗೆ ಭಾರಿ ನಿರಾಸೆಯಾಗಿದೆ..

ಅನರ್ಹತೆ ಪ್ರಶ್ನಿಸಿ ಹದಿನೇಳು ಅನರ್ಹ ಶಾಸಕರು ಹಾಕಿದ್ದ ಅರ್ಜಿ ಯ ವಿಚಾರಣೆಯನ್ನು ನಡೆಸಿದ ಸುಪ್ರೀಂಕೋರ್ಟ್, ಯಾವುದೇ ಮಧ್ಯಂತರ ಆದೇಶ ನೀಡದೆ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಸುದೀರ್ಘ ವಿಚಾರಣೆಯ ಅಗತ್ಯ ಇರುವುದರಿಂದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡುತ್ತಿರುವುದಾಗಿ ತ್ರಿಸದಸ್ಯ ಪೀಠ ಹೆಳಿದೆ. ಬುಧವಾರದಂದು ಅನರ್ಹ ಶಾಸಕರ ಪರ ವಕೀಲರಿಗೆ ವಾದ ಮಂಡಿಸಲು ಅವಕಾಶ ನೀಡಲಾಗಿದೆ.ನ್ಯಾಯಮೂರ್ತಿ ಎಸ್.ವಿ. ರಮಣ, ನ್ಯಾಯಮುರ್ತಿಗಳಾದ ಸಂಜೀವ ಖನ್ನಾ ಹಾಗೂ ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠದ ಮುಂದೆ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೊಹಟಗಿ ವಾದ ಮಂಡಿಸಿದ್ರು.

ವಕೀಲ ಮುಕುಲ್ ರೊಹಟಗಿ ವಾದ : “ರಾಜೀನಾಮೆ ಸಲ್ಲಿಸಿದ್ದ ಶಾಸಕರಿಗೆ ಯಾವುದೇ ನೋಟಿಸ್ ಜಾರಿ ಮಾಡದೆ ಸ್ಪೀಕರ್ ಅವರು ಅನರ್ಹಗೊಳಿಸಿದ್ದಾರೆ. ಒಂದು ವಾರ ಮೊದಲೇ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು ಎಂಬ ನಿಯಮ ಇದ್ದರು ಈ ಶಾಸಕರ ವಿಚಾರದಲ್ಲಿ ಅದನ್ನು ಪಾಲಿಸಿಲ್ಲ.. ಇಲ್ಲಿ ಯಾವುದೇ ವಿಚಾರಣೆ ನಡೆಸದೇ ಶಾಸಕರ ಶಾಸಕತ್ವವನ್ನು ಅನರ್ಹಗೊಳಿಸಲಾಗಿದೆ. ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿದ್ದು ಸ್ಪೀಕರ್ ಆದೇಶದಂತೆ ತಮ್ಮ ಕಕ್ಷಿದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ..ಹಾಗಾಗಿ ಒಂದೋ ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ನೀಡಿ ಇಲ್ಲವೇ ಉಪಚುನಾವಣೆಗೆ ತಡೆನೀಡಿ” ಎಂದು ತಮ್ಮ ವಾದವನ್ನು ಮಂಡಿಸಿದ ಮುಕುಲ್ ರೊಹ್ಟಗಿ ತ್ರಿಸದಸ್ಯ ಪೀಠಕ್ಕೆ ಮನವಿ ಮಾಡಿಕೊಂಡರು…

ಇನ್ನೂ ಕೆಪಿಸಿಸಿ ಪರ ವಾದ ಮಂಡಿಸಿದ ವಕೀಲ ಕಪಿಲ್​ ಸಿಬಲ್, ಪ್ರಕರಣದಲ್ಲಿ ಯಾವುದೇ ಮಧ್ಯಂತರ ಪರಿಹಾರವನ್ನೂ ಅನರ್ಹ ಶಾಸಕರಿಗೆ ನೀಡಬಾರದು ಎಂದು ಮನವಿ ಮಾಡಿದ್ರು.. ಸ್ಪೀಕರ್ ಅವರ ಅನರ್ಹತೆಯ ತೀರ್ಪನ್ನು ಎತ್ತಿಹಿಡಿಯಬೇಕೆಂದು ವಾದಿಸಿದರು. ಉಪಚುನಾವಣೆಗೆ ತಡೆಯಾಜ್ಞೆ ನೀಡಬಾರದೆಂದೂ ಮನವಿ ಮಾಡಿದರು.ಇದೇ ವೇಳೆ ವಿಚಾರಣೆ ವೇಳೆ ಸ್ವಯಂ ಪ್ರೇರಿತವಾಗಿ ವಾದ ಮಂಡಿಸಿದ ಕೇಂದ್ರ ಚುನಾವಣಾ ಆಯೋಗದ ಪರ ವಕೀಲ ರಾಕೇಶ್​ ದ್ವಿವೇದಿ, ಅನರ್ಹ ಶಾಸಕರ ಸ್ಪರ್ಧೆಗೆ ಅಭ್ಯಂತರ ಇಲ್ಲ ಎಂದು ಆಯೋಗದ ಪರವಾಗಿ ಹೇಳಿದ್ರು.. ಆದರೆ, ಚುನಾವಣೆಯನ್ನು ಯಾವ ಕಾರಣಕ್ಕೂ ಮುಂದೂಡಬಾರದು ಎಂದು ವಾದ ಮಂಡಿಸುವ ಮೂಲಕ ಪ್ರಕರಣಕ್ಕೆ ದ್ವಿವೇದಿ ಟ್ವಿಸ್ಟ್ ನೀಡಿದ್ರು..

ಎರಡೂ ಕಡೆಯ ವಾದ ಆಲಿಸಿದ ತ್ರಿಸದಸ್ಯ ಪೀಠ, ಯಾವುದೇ ಮಧ್ಯಂತರ ಆದೇಶವನ್ನು ನೀಡದೆ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ. ಇದರ ಜೊತೆಗೆ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ನೊಟೀಸ್ ನೀಡಿದೆ. ಜೆಡಿಎಸ್ ರಾಜ್ಯಾಧ್ಯಕ್ಷರಿಗೂ ನೊಟೀಸ್ ನೀಡಿದೆ.

 

LEAVE A REPLY

Please enter your comment!
Please enter your name here