Home KARNATAKA ಅನಾಥ ಮಗುವಿಗೆ ಹಾಲುಣಿಸಿದ ಮಹಿಳಾ ಪೇದೆ..! ಕಂದಮ್ಮನ ಹಸಿವು ನೀಗಿಸಿ ಹಾಲುಣಿಸದ ಮಹಾತಾಯಿ..! ಪೇದೆ ಮಾನವೀಯತೆಗೆ...

ಅನಾಥ ಮಗುವಿಗೆ ಹಾಲುಣಿಸಿದ ಮಹಿಳಾ ಪೇದೆ..! ಕಂದಮ್ಮನ ಹಸಿವು ನೀಗಿಸಿ ಹಾಲುಣಿಸದ ಮಹಾತಾಯಿ..! ಪೇದೆ ಮಾನವೀಯತೆಗೆ ಮೇಲಾಧಿಕಾರಿಗಳ ಮೆಚ್ಚುಗೆ

1788
0
SHARE

ಪ್ರತಿ ಹೆಣ್ಣಲ್ಲೂ ಒಬ್ಬ ತಾಯಿ ಇರ್ತಾಳೆ ಅನ್ನೋದಕ್ಕೆ ಈ ಪೊಲೀಸ್ ಪೇದೆಯೇ ಉದಾಹರಣೆ. ಯಾವುದೋ ಅನಾಥ ಮಗುವಿಗೆ ಹಾಲುಣಿಸಿರುವ ಈ ಮಹಿಳಾ ಪೊಲೀಸ್ ಪೇದೆ ಯಾರೂ ಮಾಡದಂತ ಕೆಲಸ ಮಾಡಿ ಮಾನವೀಯತೆ ಮೆರೆದಿದ್ದಾರೆ.ತಾಯಿ ಅಂದ್ರೆ ದೇವರು. ತಾಯಿಯ ಋಣ ಏಳೇಳು ಜನ್ಮದಲ್ಲೂ ತೀರಿಸೋಕೆ ಆಗಲ್ಲ ಅಂತಾರೆ.

ಆದ್ರೆ ಈ ಮುಗ್ಧ ಮಗುವಿನ ಮುಖವನ್ನ ಒಮ್ಮೆ ನೋಡಿ. ಏನೂ ಅರಿಯದ ಈ ಕಂದಮ್ಮನನ್ನ ಆ ಪಾಪಿ ತಾಯಿ ಅನಾಥವನ್ನಾಗಿಸಿ ನಗರದ ಜಿಕೆವಿಕೆ ಉದ್ಯಾನವನದ ಬಳಿ ಎಸೆದು ಹೋಗಿದ್ದಾಳೆ. ಅದೇ ಮಗುವಿಗೆ ಹಾಲುಣಿಸಿದ ಮಹಿಳಾ ಪೋಲೀಸ್ ಪೇದೆಯೊಬ್ಬರು ಮಾನವೀಯತೆ ಮರೆದಿದ್ದಾರೆ. ನಿನ್ನೆ ಬೆಳಗ್ಗೆ ಜಿಕೆವಿಕೆ ಉದ್ಯಾನವನದ ಬಳಿ ಅನಾಥ ಮಗುವನ್ನು ಕಂಡ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಮಗುವನ್ನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ಹಾಲು ಇಲ್ಲದೆ ಮಗು ಬಳಲುತ್ತಿತ್ತು. ಈಗಾಗಿ ಸ್ಥಳದಲ್ಲೇ ಯಲಹಂಕ ಠಾಣೆಯ ಮಹಿಳಾ ಪೋಲೀಸ್ ಪೇದೆ ಸಂಗೀತಾ ಹಳಿಮನಿ ಕೂಡಲೇ ಮಗುವಿಗೆ ಹಾಲು ಉಣಿಸಿ ಸಾರ್ಥಕತೆ ಮೆರೆದಿದ್ದಾರೆ. ಸಂಗೀತಾ ಅವರ ಈ ಕಾರ್ಯಕ್ಕೆ ಆಸ್ಪತ್ರೆ ಸಿಬ್ಬಂದಿ ಹಾಗೂ ಉನ್ನತ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸದ್ಯ ಮಗು ಆರೋಗ್ಯವಾಗಿದ್ದು, ವಾಣಿ ವಿಲಾಸ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಮಗುವಿನ ಸಂಪೂರ್ಣ ವಾಗಿ ಚೇತರಿಸಕೊಂಡ ನಂತರ ವೈದ್ಯರು ಮಗುವನ್ನ ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಿದ್ದಾರೆ. ಅದೇನೆ ಇರ್ಲಿ ಮಗು ಹಸಿವಿನಿಂದ ಬಳಲುತ್ತಿದೆ ಅಂತ ತಿಳಿಯುತ್ತಿದ್ದಂತೆ ಕಿಂಚಿತ್ತೂ ಯೋಚಿಸದೇ ಎದೆ ಹಾಲುಣಿಸಿದ ಈ ಮಹಾತಾಯಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು.

LEAVE A REPLY

Please enter your comment!
Please enter your name here