ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಜೆಡಿಎಸ್ ನಲ್ಲಿಯೇ ತೀವ್ರ ವಿರೋಧವಾಗಿದೆ. ಅನಿತಾ ಕುಮಾರಸ್ವಾಮಿಯೇ ಅಭ್ಯರ್ಥಿಯೆಂದು ಹೇಗೆ ಘೋಷಣೆ ಮಾಡುತ್ತಿರಾ, ಅನಿತಾ ಕುಮಾರಸ್ವಾಮಿ ನಾನೇ ಅಭ್ಯರ್ಥಿ ಎಂದು ಹೇಳಿದ್ದಾರಾ, ಇದುವರೆಗೂ ಬಂದು ಯಾವುದೇ ಕಾರ್ಯಕರ್ತರನ್ನ ಭೇಟಿ ಮಾಡಿ, ಸಭೆ ನಡೆಸಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಕಾರ್ಯಕರ್ತರನ್ನು ಗುರುತಿಸುವುದಿಲ್ಲ. ಕಾರಿನಿಂದ ಇಳಿಯುವುದಿಲ್ಲ. ಎಂದು ಆರೋಪಿಸಿದ್ದಾರೆ. ರಾಮನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಸುವಂತೆ ಒತ್ತಡ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ನಡೆಯುತ್ತಿರೋ ಸಭೆಯಲ್ಲಿ ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಡಲು ರಾಮನಗರ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರ ವಿಧಾನ ಸೌಧಕ್ಕೆ ಅಷ್ಟೇ ಸಿಮೀತ.ನಮ್ಮನ್ನ ಮತ್ತು ಕಾರ್ಯಕರ್ತರನ್ನ ಬಲಿ ಕೊಡಬೇಡಿ ಎಂದು ಮುಖಂಡರು ಪಟ್ಟು ಹಿಡಿದಿದ್ದಾರೆ.
ಎರಡು ಮೂರು ದಿನದ ಬಳಿಕ ಮತ್ತೆ ಸಭೆ ಸೇರೋಣ ಎಂದು ವೇಣುಗೋಪಾಲ್ ಮತ್ತು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಸಭೆ ಬಳಿಕ ಮಾತನಾಡಿದ ಸಿ.ಎಂ.ಲಿಂಗಪ್ಪ, ಸಭೆಯಲ್ಲಿ ಕಾರ್ಯಕರ್ತರ ಮನಸಲ್ಲಿ ಇರೋದನ್ನ ಹೇಳಿದ್ದೇವೆ. ಎರಡು ಮೂರು ದಿನದ ಬಳಿಕ ಮತ್ತೆ ಸಭೆ ಸೇರೋಣ. ಇಲ್ಲವೇ ನಾವೇ ನಿಮಗೆ ನಿರ್ಧಾರ ತೆಗೆದುಕೊಂಡು ಹೇಳುತ್ತೇವೆಂದು ವರಿಷ್ಠರು ಹೇಳಿದ್ದಾರೆ.
ಹೀಗಾಗಿ ಮುಂದೆ ಬರೋ ಜಡ್ಜ್ ಮೆಂಟ್ ಬಗ್ಗೆ ಈಗಲೇ ರಿಯಾಕ್ಟ ಮಾಡಲ್ಲ ಎಂದಿದ್ದಾರೆ. ರಾಮನಗರ ಸ್ಥಳೀಯ ಕಾಂಗ್ರೆಸ್ ಮುಖಂಡ ಹುಸ್ಸೇನ್ ಮಾತನಾಡಿ 69 ಸಾವಿರ ಮತಗಳು ಹಿಂದಿನ ಚುನಾವಣೆಯಲ್ಲಿ ಬಂದಿದೆ. ಹೀಗಾಗಿ ಕಾರ್ಯಕರ್ತರ ಅಹವಾಲು ಕೇಳಿ ಮುಂದೂವರೆಯಿರಿ ಅಂತ ಕೇಳಿಕೊಂಡಿದ್ದೇವೆ. ನಾನು ಕಾರ್ಯಕರ್ತರ ಪರ ಇರಬೇಕಾಗಿದೆ ಹೀಗಾಗಿ ಅವರ ಮನಸಲ್ಲಿ ಇರೋದು ಹೇಳಿದ್ದೇನೆ.ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡ್ರು ಬದ್ಧವಾಗಿರುತ್ತೇವೆ. ಎಂದು ಹುಸ್ಸೇನು ತಿಳಿಸಿದ್ದಾರೆ.
ರಾಮನಗರ ವಿಧಾನಸಭಾ ಚುನಾವಣೆ,ಮಿತ್ರ ಪಕ್ಷಗಳಲ್ಲಿ ಒಡಕು.ಕಾಂಗ್ರೆಸ್ ನಿಂದ ಇಕ್ಬಾಲ್ ಗೆ ಟಿಕೆಟ್ ಕೊಡುವಂತೆ ಕಾಂಗ್ರೆಸ್ ಕಾರ್ಯಕರ್ತರ ಒತ್ತಡ. ರಾಜರಾಜೇಶ್ವರಿ ನಗರದಲ್ಲಿ ಆದಂತೆ ಫ್ರಂಡ್ಲಿ ಪೈಟ್ ಎಂದುಕೊಂಡರೂ ಸರಿ.ಅನಿತಾ ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸಲೇಬೇಕೆಂದು ಪಟ್ಟು.ಇಲ್ಲವಾದಲ್ಲಿ ಬಂಡಾಯ ಸ್ಪರ್ಧೆ ಅಥವಾ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಮುಸ್ಲೀಂ ಮುಖಂಡರ ಬೆದರಿಕೆ.