Home Cinema ಅನುಮತಿಯಿಲ್ಲದೆ ಶೂಟಿಂಗ್ ಮಾಡಿದ್ದಕ್ಕೆ ಎದುರಾಯ್ತು ಅಂಬರೀಷ್ ಪುತ್ರನಿಗೆ ಆಪತ್ತು..?! ಫುಲ್ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಜಿಲ್ಲಾಧಿಕಾರಿ...

ಅನುಮತಿಯಿಲ್ಲದೆ ಶೂಟಿಂಗ್ ಮಾಡಿದ್ದಕ್ಕೆ ಎದುರಾಯ್ತು ಅಂಬರೀಷ್ ಪುತ್ರನಿಗೆ ಆಪತ್ತು..?! ಫುಲ್ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಜಿಲ್ಲಾಧಿಕಾರಿ | ಪೊಲೀಸರು ಗರಂ…

911
0
SHARE

ಅಭಿಷೇಕ್….ರೆಬಲ್ ಸ್ಟಾರ್ ಅಂಬರೀಶ್ ಪುತ್ರ.. ಅಮರ್ ಆಗಿ ಚಂದನವನಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿರೋ ವಿಷ್ಯ ನಿಮ್ಗೆ ಗೊತ್ತೆ .. ಅಭಿಷೇಕ್ ಅಮರ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.   ಶೂಟಿಂಗ್ ವೇಳೆ ಅಮರ್ ಟಿಂ ಸ0ಕಷ್ಟಗೆ ಸಿಲುಕಿದೆ.ಅಮರ್ ಆಗಿ ತೆರೆ ಮೇಲೆ ಬರ್ತಿರೋ ರೆಬಲ್ ಪುತ್ರ ಶೂಟಿಂಗ್ ವೇಳೆ ಪೊಲೀಸರ ಕೋಪಕ್ಕೆ ಗುರೀಯಾಗಿದ್ದಾರೆ…ಇದಕ್ಕೆ ರೀಸನ್ ರೋಲ್ಸ್ ಬ್ರೇಕ್ ಮಾಡಿರೋದು…

ಹೌದು, ಮಡಿಕೇರಿಯಲ್ಲಿ ಅಮರ್ ಚಿತ್ರದ ಚಿತ್ರೀಕರಣ ಕಳೆದ ಕೆಲ ದಿನಗಳಿಂದ ಬಿರಸಾಗಿ ನಡೆಯುತ್ತಿದೆ. ಇಡೀ ಅಮರ್ ಟೀಂ ಮಡಿಕೇರಿಯಲ್ಲಿ ಬೀಡು ಬಿಟ್ಟಿದೆ. ಮಳೆಯ ನಡುವೆಯೇ ನಡೆಯುತ್ತಿರುವ ಭರದ ಚಿತ್ರೀಕರಣಕ್ಕೆ ಪೋಲಿಸರು ಬ್ರೇಕ್ ಹಾಕಿದ್ದಾರೆ,,ಚಿತ್ರತಂಡಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಚಿತ್ರದ ಶೂಟಿಂಗ್  ಮಡಿಕೇರಿಯ ಕೆ.ಎಂ ಕಾರಿಯಪ್ಪ ಸರ್ಕಲ್ ಬಳಿ ನಡೆಸಲಾಗ್ತಿತ್ತು..ಇದಕ್ಕಾಗಿ ಸಿದ್ದಾಪುರ-ಮಡೀಕೇರಿ ರಸ್ತೆಯನ್ನು ಬಂದ್ ಮಾಡಿ ಚಿತ್ರೀಕರಣ ನಡೆಸಿದೆ ಅಮರ್ ಟೀಂ.. ರಸ್ತೆ ಯಲ್ಲಿ ಶೂಟಿಂಗ್ ನಡೆಸಲು ಅಲ್ಲಿನ ಸ್ಥಳೀಯ ಪೊಲೀಸರಿಂದ ಅನುಮತಿಯನ್ನ ಚಿತ್ರತಂಡ ಪಡೆದಿಲ್ಲ. ರಸ್ತೆ ಬಂದ್ ಮಾಡಿ ಚಿತ್ರೀಕರಣ ಮಾಡಿರೋದು ಪೋಲೀಸರ ಕೋಪಕ್ಕೆ ಕಾರಣವಾದ್ರೆ ಇದ್ರಿಂದಾದ  ಆ ಭಾಗದಲ್ಲಿ ಒಂದೆರಡು ಗಂಟೆಗಳ ಕಾಲ  ಟ್ರಾಫಿಕ್ ಜಾಮ್ ಉಂಟಾಗಿದೆ..

ಇದು ಅಲ್ಲಿನ ಸ್ಥಳೀಯ ವಾಹನ ಸವಾರರ ಕೋಪ ನೆತ್ತಿಗೇರುವಂತೆ ಮಾಡಿದೆ.  ಬರೀ ಇಷ್ಟೇ ಆಗಿದ್ರೆ ಸರಿ ಹೋಗ್ತಿತ್ತು..ಇದೇ ವೇಳೆ ಇಲ್ಲಿನ ಜಿಲ್ಲಾಧಿಕಾರಿ ಶ್ರಿ ವಿದ್ಯಾಗೂ ಟ್ರಾಫಿಕ್ ಜಾಮ್ ನ ಬಿಸಿ ಮುಟ್ಟಿದ್ದು, ಸೀದಾ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.ಚಿತ್ರತಂಡದ ನಡೆಯಿಂದ ಕೋಪಗೊಂಡ ಪೋಲಿಸರು ಶೂಟಿಂಗ್ ಸ್ಥಗಿತಗೊಳಿಸವಂತೆ ಹೇಳಿ.

ಅಲ್ಲಿಂದ ಪ್ಯಾಕಪ್ ಮಾಡಿಸಿದೆ..ಅಲ್ದೆ ಚಿತ್ರತಂಡದ ಎರಡು ವಾಹನಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ….ಈ ವೇಳೇ ಅಮರ್ ಟೀಂ ಹಾಗು ಪೋಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ..ನಂತರ ಸ್ಟೇಷನ್ ನಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಂಡು  ವಿವಾದಕ್ಕೆ ಮುಕ್ತಿ ಹಾಡಿ, ಸಂಕಷ್ಟದಿಂದ ಪಾರಾಗಿದೆ ಚಿತ್ರತಂಡ.

ಅಭಿಷೇಕ್ ನಾಯಕನಾಗಿ ತೆರೆ ಮೇಲೆ ಬರ್ತಿರೋ ಅಮರ್ ಚಿತ್ರಕ್ಕೆ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದು, ತಾನ್ಯ ಹೋಪ್ ಚಿತ್ರದ ನಾಯಕಿ..ಸಂದೇಶ್ ನಾಗರಾಜ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.

ಫಸ್ಟ್ ಲುಕ್ ಮೂಲಕ  ಟ್ರಿ ಕೋಟ್ಟಿರೋ ಅಮರ್ ಕೊಯಮತ್ತೂರಿನಲ್ಲಿ  ಚಿತ್ರದ ಸೀನ್ ಸೆರೆಹಿಡಿದು ಈಗ ಮಡೀಕೇರಿಯ ಸುಂದರ ಲೋಕೇಷನ್ ನಲ್ಲಿ ಚಿತ್ರವನ್ನ ಸೆರೆ ಹಿಡಿಯುತ್ತಿದೆ.ಸದ್ಯ ಸಂಕಷ್ಟದಿಂದ ಪಾರಾಗಿರುವ ಚಿತ್ರತಂಡ ನೆಮ್ಮದಿಯ ನಿಟ್ಟುಸಿರು ಬಿಟ್ಟು ಚಿತೀಕರಣದಲ್ಲಿ ತೊಡಗಿದೆ.

LEAVE A REPLY

Please enter your comment!
Please enter your name here