Home Crime ಅನೈತಿಕ ಸಂಬಂಧಕ್ಕೆ ಬಲಿಯಾಯ್ತು ಪುಟ್ಟ ಬಾಲಕನ ಜೀವ..?! ತನ್ನ ಹೆಂಡತಿಯ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದವರ ಮೇಲೆ...

ಅನೈತಿಕ ಸಂಬಂಧಕ್ಕೆ ಬಲಿಯಾಯ್ತು ಪುಟ್ಟ ಬಾಲಕನ ಜೀವ..?! ತನ್ನ ಹೆಂಡತಿಯ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದವರ ಮೇಲೆ ಹೇಗೆ ಗೊತ್ತಾ ಈತ ಸೇಡು ತೀರಿಸಿಕೊಂಡಿದ್ದು..??

352
0
SHARE

ಅನೈತಿಕ‌ ಸಂಬಂಧ ವಿಚಾರಕ್ಕೆ ಏನು ಅರಿಯದ ಪುಟ್ಟ ಬಾಲಕನನ್ನೇ ಬಲಿಯಾಗಿದ್ದಾನೆ. ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡವರ ಫ್ಯಾಮಿಲಿ ಮೇಲೆ ಸೇಡು ತೀರಿಸಕೊಳ್ಳಲು ಹೋಗಿ ಮಗುವನ್ನು ಕೊಂದು ನೀಚ ಕೃತ್ಯ ಎಸಗಿದ್ದಾನೆ. ಯಾರದ್ದೋ ಮೇಲಿನ ಕೋಪಕ್ಕೆ ಮುಗ್ದ ಮನಸ್ಸಿನ ಬಾಲಕನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಿ ಕೆರೆಯಲ್ಲಿ ಎಸೆದಿದ್ದು ಪೊಲೀಸರ ಅತಿಥಿಯಾಗಿದ್ದಾನೆ.

ಆರ್ಮುಗಮ್ ಬೆಂಗಳೂರಿನ ಶಾಂತಿನಗರ ಭೀಮಣ್ಣ ಗಾರ್ಡನ್ ನಿವಾಸಿ ಸಣ್ಣ ಪುಟ್ಟ ಕೂಲಿ ಕೆಲಸ ಮಾಡಿಕೊಂಡ್ ಜೀವನ‌ ಸಾಗಿಸಿ ಇದ್ದಿದ್ರಲ್ಲಿ‌ ನೆಮ್ಮದಿಯಾಗಿದ್ದ ಆದ್ರೀಗ ಈತನ ಹೆಂಡತಿ ಮಾಡಿದ್ ತಪ್ಪಿಗೆ, ಸಣ್ಣ ಬಾಲಕನನ್ನ ಕೊಂದು ಜೈಲು ಸೇರಿದ್ದಾನೆ. ಆರ್ಮುಗಮ್ ಗೆ ಆತನ ಹೆಂಡತಿ ಚೈತ್ರಾ, ಮಣಿಪಾಲ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದು ತಿಳಿದಿದೆ.

ಇದನ್ನ ಪ್ರಶ್ನಿಸಿದ್ದಕ್ಕಾಗಿ ಆತನ ಚೈತ್ರಾ ಗಂಡನ ಜೊತೆ ಜಗಳ ಮಾಡಿಕೊಂಡು ತವರು ಮನೆ ಸೇರಿದ್ದಾಳೆ. ಆ ವಿಚಾರವಾಗಿ ಮಣಿಪಾಲ್ ನ ಸೋದರಿ ಅಭಿರಾಮಿ ಬಳಿ ಹೇಳಿದ್ರು, ತಮ್ಮನನ್ನ ಕಂಟ್ರೋಲ್ ಮಾಡೊದಕ್ಕೆ ಸಾಧ್ಯವಾಗಿರ್ಲಿಲ್ಲ. ಹೀಗಾಗಿ ಪದೇ ಪದೇ ಅರ್ಮುಗಮ್ ಹಾಗೂ ಅಭಿರಾಮಿ ಫ್ಯಾಮಿಯ ನಡುವೆ ಗಲಾಟೆ ನಡೆಯುತ್ತಿತ್ತು.

ಇನ್ನ ಯಾವಾಗ ಹೆಂಡ್ತಿ ಮಕ್ಕಳು ಮನೆ ಬಿಟ್ಟು ಹೋದ್ರೋ ಒಂಟಿಯಾದ ಆರ್ಮುಗಮ್ ಇದಕ್ಕೆಲ್ಲ ಮಣಿಪಾಲ್ ನೇ ಕಾರಣ ಅಂತ ಕುಪಿತಗೊಂಡಿದ್ದ. ಅವ್ರ ಫ್ಯಾಮಿಲಿಗೆ ಸರಿಯಾಗಿ ಪಾಠ ಕಲಿಸ್ಬೇಕು ಅಂತ ತೀರ್ಮಾನ ತೆಗೆದುಕೊಂಡಿದ್ದ. ಹಾಗೆ ತೀರ್ಮಾನ ಮಾಡಿಕೊಂಡ ಆರ್ಮುಗಮ್ ಆಟವಾಡ್ತಿದ್ದ ಅಭಿರಾಮಿಯ ಪುತ್ರ ಸಾಮ್ ವೀರ್ ನನ್ನ ಕಿಡ್ನಾಪ್ ಮಾಡಿದ್ದ.

ನಂತರ ನೀರು ತುಂಬಿದ್ದ ಡ್ರಮ್ ನಲ್ಲಿ ಮಗುವನ್ನ ಮುಳುಗಿಸಿ ಕೊಲೆ ಮಾಡಿ, ಶವವನ್ನ ಮೂಟೆಯಲ್ಲಿ ತುಂಬಿಕೊಂಡು ಬೆಳ್ಳಂದೂರು ಕೆರೆಯಲ್ಲಿ ಬಿಸಾಡಿದ್ದ. ಇತ್ತ ಮಗು ಕಾಣದೇ ಕಂಗಾಲಾಗಿದ್ದ ಸಾಮ್ ವೀರ್ ನ ತಾಯಿ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೈಂಟ್ ದಾಖಲಿದ್ರು.

ತನಿಖೆ ಕೈಗೊಂಡ ಪೊಲೀಸ್ರಿಗೆ ಸಿಕ್ಕ ಸಿಸಿಟಿವಿ ದೃ಼ಶ್ಯಗಳ ಆಧಾರದ ಮೇಲೆ ಆರ್ಮುಗಮ್ ನನ್ನ ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಆರೋಪಿ ತಾನು ಮಾಡಿದ ಕೃತ್ಯ ತುಟಿಕ್ ಪಿಟಿಕ್ ಅನ್ನದೆ ಒಪ್ಪಿಕೊಂಡಿದ್ದಾನೆ.ಇನ್ನ ತನಿಖೆ ಮುಂದುವರೆಸಿರುವ ಪೊಲೀಸ್ರು ಶವ ಪತ್ತೆಕಾರ್ಯ ಮುಂದುವ ರೆಸಿದ್ದಾರೆ. ಒಟ್ನಲ್ಲಿ ಯಾರೋದ್ದೋ ಚಪಲಕ್ಕೆ, ಮತ್ಯಾರೋ ಮಾಡಿದ ತಪ್ಪಿಗೆ ಏನು ತಿಳಿಯದ ಕಂದಮ್ಮ ಬಲಿಯಾಗಿದಂತು ದುರಂತವೇ ಸರಿ.

LEAVE A REPLY

Please enter your comment!
Please enter your name here