Home Crime ಅನೈತಿಕ ಸಂಬಂಧ ಟಾರ್ಚರ್‌ಗೆ ದಂಪತಿ ಸೂಸೈಡ್..?! ಒಂದೇ ವಾರದಲ್ಲಿ ಛಿದ್ರ ಛಿದ್ರವಾಯ್ತು ಸುಖಿ ಕುಟುಂಬ..!!

ಅನೈತಿಕ ಸಂಬಂಧ ಟಾರ್ಚರ್‌ಗೆ ದಂಪತಿ ಸೂಸೈಡ್..?! ಒಂದೇ ವಾರದಲ್ಲಿ ಛಿದ್ರ ಛಿದ್ರವಾಯ್ತು ಸುಖಿ ಕುಟುಂಬ..!!

968
0
SHARE

ಅವ್ರು ಸಪ್ತಪದು ತುಳಿದು 8 ವರ್ಷಗಳ ಕಾಲ ದಾಂಪತ್ಯ ಜೀವನ ಸಾಗಿಸ್ತಿದ್ರು. ಅವ್ರ ಕುಟುಂಬಕ್ಕೆ ದೇವ್ರು ಒಂದು ಮುದ್ದಾದ ಮಗುವನ್ನ ಸಹ ಕರುಣಿಸಿದ್ದ. ಆದ್ರೆ, ಪತಿ ಸ್ವಲ್ದ ದಾರಿ ತಪ್ಪಿದಕ್ಕೆ ಸಂಸಾರದಲ್ಲಿ ಎದ್ದ ಬಿರುಗಾಳಿ, ಇವತ್ತು ಆ ಸಂಸಾರದಲ್ಲಿ ಮಗು ಮಾತ್ರ ಉಳಿದುಕೊಂಡಿದ್ದು, ಗಂಡ ಹೆಂಡ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗಂಡ ಹೆಂಡ್ತಿ ಅನ್ನೋ ಸಂಬಂಧ ನೈತಿಕತೆಯ ಎಲ್ಲೆಯನ್ನ ಮಿರಿದ್ರೆ ಅಲ್ಲಿ ಏನು ಬೇಕಾದ್ರು ಆಗಬಹುದು ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್ ಎಕ್ಸಾಂಪಲ್. ಮನೆಯಲ್ಲಿ ಮುತ್ತಿನಂತ ಹೆಂಡ್ತಿಯಿಂದ್ರು, ಹೊರಗಡೆ ಒಂದಿರ್ಲಿ ಅಂತ ಪರಸ್ತ್ರೀ ಸಹವಾಸಕ್ಕೆ ಬಿದ್ದು, ತಾನು ಸತ್ತಿದಲ್ಲದೇ, ತನ್ನ ದಾರಿಯಲ್ಲೆ ಪತ್ನಿಯನ್ನು ಜೊತೆಯಲ್ಲೆ ಕರೆದುಕೊಂಡೋಗೋ ಮೂಲಕ ಮುದ್ದಾಗ ಮದುವನ್ನ ಅನಾಥನನ್ನಾಗಿ ಮಾಡಿದ್ದಾರೆ.

ಈತನ ಹೆಸ್ರು ಹರೀಶ್. ಹುಟ್ಟಿ ಬೆಳೆದಿದ್ದೆಲ್ಲವೂ ಬೆಂಗಳೂರಿನ ಕಸ್ತೂರ್ ಬಾ ನಗರದಲ್ಲಿ. 8 ವರ್ಷಗಳಿಂದೆ ಶಿಲ್ಪ ಎಂಬಾಕೆಯೊಂದೆಗೆ ಸಪ್ತಪದಿ ತುಳಿದಿದ್ದ ಹರೀಶ್ ಕುಟುಂಬಕ್ಕೆ ದೇವ್ರು ಒಂದ್ ಮುದ್ದಾಗ ಮಗುವನ್ನು ಕರುಣಿಸಿದ್ದ. ಇತ್ತ ಮನೆಯಲ್ಲಿ ಶಿಲ್ಪ ಮಗುವನ್ನ ನೋಡಿಕೊಂಡಿದ್ರೆ, ಇತ್ತ ಹರೀಶ್ ಜೆ.ಸಿ.ರೋಡ್ ನ ಆಟೋಮೊಬೈಲ್ ಅಂಗಡಿಯೊಂದ್ರಲ್ಲಿ ಕೆಲ್ಸ ಮಾಡ್ತಿದ್ದ.

ಆ ವೇಳೆ ಅದ್ಯಾವ್ದೋ ಗ್ಯಾಪ್ ನಲ್ಲಿ ಈ ಶಾಲಿನಿ ಅನ್ನೋಳ ಸಹವಾಸಕ್ಕೆ ಬಿದ್ದಿದ್ದ. ಈ ಶಾಲಿನಿಯು ಅಷ್ಟೇ ಮನೆಯಲ್ಲಿ ಗಂಡ ಇದ್ರು, ಹರೀಶನ ಹಿಂದೆ ಬಿದ್ದು, ಕೆಲ ದಿನಗಳ ಹಿಂದೆ ಗಂಡನಿಗೆ ಗುಡ್ ಬೈ ಹೇಳಿ ಹರೀಶ್ ನೊಂದಿಗೆ ಕಾಲ್ಕಿತ್ತಿದ್ಲಂತೆ.ಆ ವಿಷ್ಯ ಶಾಲಿನಿ ಗಂಡ ರೇವಣ್ಣನ ಕಿವಿಗೆ ಬಿದ್ದಿದ್ದು, ಹರೀಶನ ಪತ್ನಿ ಶಿಲ್ಪ ಹಾಗೂ ಶಾಲಿನಿ ಪತಿ ರೇವಣ್ಣ ಇಬ್ಬರು ಸಹ ಬ್ಯಾಟರಾಯನಪುರ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ರಂತೆ.

ಆ ವೇಳೆ ರೇವಣ್ಣನ ಕಡೆಯವ್ರು ಹರೀಶನ ಮೇಲೆ ಹಲ್ಲೆ ಮಾಡಿದ್ದು, ಅದ್ರಿಂದ ಬೇಸತ್ತ ಹರೀಶ್ ಕನಕಪುರ ಸಮೀಪದ ಅಕ್ಕನ ಮನೆಗೆ ಹೋಗೋದಾಗಿ ಹೇಳಿ ಹೋಗಿ ಎರಡು ದಿನಗಳ ಹಿಂದೆ ನೇಣಿಗೆ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಅಂತ್ಯ ಸಂಸ್ಕಾರ ಮಾಡಿ, ನಾಳೆ ಕಾರ್ಯಗಳನ್ನ ಮಾಡೋದಕ್ಕೆ ಪತ್ನಿ ಹಾಗೂ ಸಂಬಂಧಿಕರು ಸಿದ್ದತೆಗಳನ್ನ ಮಾಡಿಕೊಂಡಿದ್ರೆ,

ಇತ್ತ ರೇವಣ್ಣ ಶಿಲ್ಪಾಗೆ ಕರೆ ಮಾಡಿ ನಿನ್ನ ಕಥೆಯು ಮುಗಿಸ್ಬಿಡ್ತೀನಿ ಅಂತ ಬೆದರಿಕೆ ಹಾಕ್ತಿದ್ನಂತೆ. ಇದ್ರಿಂದ ಆತಂಕಕ್ಕೊಳಗಾದ ಶಿಲ್ಪಾ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ.
ಒಂದು ಕಡೆ ಮನೆಯಾಳು ಸಂಬಂಧಕ್ಕೆ ಬಿದ್ದು ಹರೀಶ ಸತ್ತರೆ. ಗಂಡನ ಪಾಪಕ್ಕೋ ರೆವಣ್ಣನ ಕಿರುಕುಳಕ್ಕೂ ಈಗ ಹೆಂಡತಿಯೂ ಬಲಿಯಾಗಿದ್ದಾಳೆ.. ಸದ್ಯ ಬ್ಯಾಟರಾಯನಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸ್ರು ಹೆಚ್ಚಿನ ತನಿಖೆ ನಡೆಸ್ತಾ ಇದ್ದಾರೆ.

 

LEAVE A REPLY

Please enter your comment!
Please enter your name here