Home District ಅನ್ನದಾತನಿಗೆ ಸ್ಪೂರ್ತಿ ತುಂಬಲು ಮುಂದಾದ HDK..! ನಾಳೆ ಮಂಡ್ಯದ ಸೀತಾಪುರ ಗ್ರಾಮದಲ್ಲಿ ಭತ್ತ ನಾಟಿ ಮಾಡಲಿದ್ದಾರೆ...

ಅನ್ನದಾತನಿಗೆ ಸ್ಪೂರ್ತಿ ತುಂಬಲು ಮುಂದಾದ HDK..! ನಾಳೆ ಮಂಡ್ಯದ ಸೀತಾಪುರ ಗ್ರಾಮದಲ್ಲಿ ಭತ್ತ ನಾಟಿ ಮಾಡಲಿದ್ದಾರೆ ನಾಡದೊರೆ

2177
0
SHARE

ಅನ್ನದಾತನಿಗೆ ಸ್ಫೂರ್ತಿ ತುಂಬಲು ನಾಡದೊರೆ ಹೆಚ್.ಡಿ.ಕುಮಾರಸ್ವಾಮಿ ಭತ್ತ ನಾಟಿ ಮಾಡಲಿದ್ದಾರೆ. ನಾಳೆ ಮಂಡ್ಯದ ಸೀಕಾಪುರ ಗ್ರಾಮದಲ್ಲಿ ಹಳೇ ಗದ್ದೆ ಬಯಲಿನಲ್ಲಿ ಭತ್ತ ನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 11ಗಂಟೆಗೆ ಕಾರ್ಯಕ್ರಮ ಆಯೋಜನೆಯಾಗಿದೆ.

ಇನ್ನು, 100 ರೈತ ಮಹಿಳೆಯರು ಹಾಗೂ 50 ಪುರುಷ ರೈತರೊಂದಿಗೆ ಸಿಎಂ ನಾಟಿ ಮಾಡಲಿದ್ದಾರೆ. ಪಾಂಡಪುರ ತಾಲೂಕಿನ ಹಳೇ ಗದ್ದೆಯಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ಇಂದು ರಾತ್ರಿ ಮೈಸೂರಿನಲ್ಲೇ ಸಿಎಂ ವಾಸ್ತವ್ಯ ಹೂಡಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಸುತ್ತೂರು ಮಠಕ್ಕೆ ಭೇಟಿ ಬಳಿಕ ನಾಟಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಗ್ರಾಮ ವಾಸ್ತವ್ಯದ ಮೂಲಕ ಹಿಂದೆ ಜನಪ್ರಿಯತೆ ಗಳಿಸಿದ್ದ ಕುಮಾರಸ್ವಾಮಿ ದೇಶದ ಗಮನ ಸೆಳೆದಿದ್ರು. ಈಗ ಒಂದು ಹೆಜ್ಜೆ ಮುಂದೆ ಹೋದಿ ಗದ್ದೆಗಿಳಿಯಲಿದ್ದಾರೆ.

ಇನ್ನು, ನಾಳೆ ಸಿಎಂರ ಭತ್ತ ನಾಟಿ ಮಾಡುವಾಗ 100 ರೈತ ಮಹಿಳೆಯರು, 50ಪುರುಷ ರೈತರು ಸಾಥ್ ನೀಡಲಿದ್ದಾರೆ. ಅಲ್ಲದೇ, ಈ ಕಾರ್ಯಕ್ರಮವನ್ನ ವೀಕ್ಷಿಸಲು ದೊಡ್ಡ-ದೊಡ್ಡ ಎಲ್ಇಡಿ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ.

25 ಜೋಡಿ ಎತ್ತುಗಳ ಮೂಲಕ ನಾಟಿ ಕೆಲಸ ಮಾಡಲಿದ್ದಾರೆ. 1972ರ ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದ ‘ಆಗದು ಎಂದು ಕೈ ಕಟ್ಟಿ ಕುಳಿತರೆ’ ಹಾಡು ನಾಡದೊರೆಗೆ ಸ್ಫೂರ್ತಿಯಾಗಿದೆ. ಹೀಗಾಗಿ, ರೈತರಿಗೆ ಸ್ಫೂರ್ತಿ ತುಂಬಲು ಸಿಎಂ ನಾಟಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here