Home Cinema ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಪ್ರೇಮ್..?! “ನಿರ್ಮಾಪಕರಿಗೆ ಹೆಚ್ಚಿನ ಷೇರು ಬರಬೇಕು” ಎಂದಿದ್ದೇಕೆ “ದಿ ವಿಲನ್”...

ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಪ್ರೇಮ್..?! “ನಿರ್ಮಾಪಕರಿಗೆ ಹೆಚ್ಚಿನ ಷೇರು ಬರಬೇಕು” ಎಂದಿದ್ದೇಕೆ “ದಿ ವಿಲನ್” ಟೀಮ್..?!

640
0
SHARE

ದಿ ವಿಲನ್.. ಎಲ್ಲರ ಚಿತ್ತವನ್ನ ಕದ್ದಿರುವ ಸಿನಿಮಾ. ಬಿಡುಗಡೆಗೂ ಮುನ್ನವೇ ಅನೇಕ ದಾಖಲೆಗಳ ಸರದಾರನಾಗ್ತಿರುವ ಸಿನಿಮಾ. ವಿಪರೀತ ನಿರೀಕ್ಷೆಯನ್ನೊತ್ತೇ ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿರುವ ದಿ ವಿಲನ್ ಇದೀಗ ಮಲ್ಟಿಪ್ಲೆಕ್ಸ್ ವಿರುದ್ಧ ಸಮರ ಸಾರಿದ್ದಾನೆ. ತೊಡೆ ತಟ್ಟಿದ್ದಾನೆ.ಯಸ್, ನಿಮಗೆ ಗೊತ್ತಿರಲಿ. ಕಾಲ ಮೊದಲಿನಂತಿಲ್ಲ. ಕನ್ನಡ ಚಿತ್ರರಂಗದ ಮಾರುಕಟ್ಟೆ ಈಗ ದೊಡ್ಡದಾಗಿದೆ. ಸಿನಿಮಾಗಳ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ.

ಇದರ ನಡುವೆ ಮಲ್ಟಿಪ್ಲೆಕ್ಸ್‌ಗಳು, ನಿರ್ಮಾಪಕರ ಜೇಬಿಗೆ ಕತ್ತರಿ ಹಾಕ್ತಿವೆ. ಪ್ರದರ್ಶನದ ಅರ್ಧ ಹಣವನ್ನು ಮಲ್ಟಿಪ್ಲೆಕ್ಸ್ ಮಾಲೀಕರು ಜೇಬಿಗೆ ಇಳಿಸಿಕೊಳ್ತಿದ್ದಾರೆ. ಇಂತಹ ಧೋರಣೆಯನ್ನು ‘ದಿ ವಿಲನ್ ಚಿತ್ರತಂಡ ಪ್ರಶ್ನಿಸಿದೆ. ಕನ್ನಡ ಚಿತ್ರರಂಗ -ನಿರ್ಮಾಪಕರ ಉಳಿವಿಗೆ ಹೊಸದೊಂದು ಮಾರ್ಗ ಹುಡುಕಿದೆ.ಹೌದು, ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಒಂದು ಕಡೆ ಪ್ರಯೋಗಾತ್ಮಕ ಸಿನಿಮಾಗಳೂ ಬರ್ತಿವೆ.

ಮತ್ತೊಂದೆಡೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಿನಿಮಾಗಳು ನಿರ್ಮಾಣವಾಗ್ತಿವೆ. ಗಲ್ಲಾ ಪೆಟ್ಟಿಗೆಯಲ್ಲೂ ಗಣನೀಯವಾಗಿ ಸದ್ದು ಮಾಡ್ತಿವೆ. ಆದರೆ, ಮಲ್ಟಿಪ್ಲೆಕ್ಸ್‌ನಿಂದ ಬರುವ ಲಾಭ ಮಾತ್ರ ನಿರ್ಮಾಪಕರ ಕೈ ಸೇರುತ್ತಿಲ್ಲ. ಯಾಕೆಂದ್ರೆ, ಪ್ರದರ್ಶನದಿಂದ ಬರೋ ಹಣವನ್ನು ನಿರ್ಮಾಪಕರು- ಮಲ್ಟಿಪ್ಲೆಕ್ಸ್ ಮಾಲೀಕರು ಸಮನಾಗಿ ಹಂಚಿಕೊಳ್ತಿದ್ದಾರೆ. ಅಂದರೆ ೫೦:೫೦ ಅನುಪಾತದಲ್ಲಿ ಹಂಚಿಕೆ ನಡೀತಿದೆ. ಆದರೆ, ಇದರಿಂದ ನಿರ್ಮಾಪರಿಗೆ ಹೆಚ್ಚಿನ ಹೊಡೆತ ಬೀಳುತ್ತಿದೆ.

ಮಲ್ಟಿಪ್ಲೆಕ್ಸ್‌ನವರ ಈ ಧೋರಣೆಯನ್ನು ಪ್ರಶ್ನಿಸಿ ‘ದಿ ವಿಲನ್ ಚಿತ್ರತಂಡ ನಿನ್ನೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದೆ. ನಿರ್ಮಾಪಕರಿಗೆ ಹೆಚ್ಚಿನ ಷೇರು ಬರಬೇಕು ಅಂತಾ ವಾದಿಸಿದೆ. ಕೋಟಿಗಟ್ಟಲೆ ಹಣ ಹೂಡಿ ಸಿನಿಮಾ ನಿರ್ಮಿಸೋ ನಿರ್ಮಾಪಕರಿಗೆ ಇದರಿಂದ ಮೋಸವಾಗ್ತಿದೆ. ಹೀಗಾಗಿ, ಹೆಚ್ಚಿನ ಷೇರು ನಿರ್ಮಾಪಕರಿಗೆ ಸಿಗಬೇಕು ಅಂತಾ ತಿಳಿಸಿದೆ. ಈ ಮನವಿ ಸಂಬಂಧವಾಗಿ ವಾಣಿಜ್ಯ ಮಂಡಳಿ ಸಭೆ ನಡೆಸಿದೆ.

ಸೋಮವಾರ ಮಲ್ಟಿಪ್ಲೆಕ್ಸ್ ಮಾಲೀಕರೊಂದಿಗೆ ಮತ್ತೊಂದು ಸಭೆ ನಡೆಯಲಿದೆ. ಆನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಇದರಿಂದ ಬರೀ ವಿಲನ್‌ ಸಿನಿಮಾವಲ್ಲ, ಎಲ್ಲಾ ಕನ್ನಡ ಸಿನಿಮಾಗಳಿಗೂ ಆರ್ಥಿಕ ಹೊರೆ ಕಡಿಮೆಯಾಗಲಿದೆ.. ನಿರ್ಮಾಪಕರಿಗೂ ಲಾಭ ಸಿಗಲಿದೆ.ಇನ್ನೂ ಮಲ್ಟಿಪ್ಲೆಕ್ಸ್‌ನಲ್ಲಿ ಆಗ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವ ಪ್ರೇಮ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇದಕ್ಕೆ ಪರಿಹಾರವನ್ನ ನೀಡುತ್ತೆ ಅನ್ನುವ ಭರವಸೆಯಲ್ಲಿದ್ದಾರೆ.

ಹಾಗಾಗೇ, ನಿನ್ನೆ.. ವಾಣಿಜ್ಯ ಮಂಡಳಿಯಲ್ಲಿ ಮನವಿ ಸಲ್ಲಿಸಿದ ಬಳಿಕ, ಕನ್ನಡ ಕಲಾಭಿಮಾನಿಗಳ ಮುಂದೆ ಇದೇ ವಿಚಾರವನ್ನ ಹಂಚಿಕೊಂಡಿದ್ದಾರೆ ಪ್ರೇಮ್.ಮಲ್ಟಿಪ್ಲೆಕ್ಸ್‌ಗಳಿಂದ ನಿರ್ಮಾಪಕರಿಗೆ ಶೇಕಡ ೫೦%ಗಿಂತ ಹೆಚ್ಚಿನ ಶೇರ್ ಕೊಡಬೇಕೆಂದು ವಿನಂತಿಸುತ್ತೇನೆ. ಇಲ್ಲವಾದಲ್ಲಿ ದೊಡ್ಡ ಚಿತ್ರ ಮಾಡಿರೋ ನಿರ್ಮಾಪಕರಿಗೆ ನಷ್ಟವಾಗುತ್ತೆ.

ಈ ಬಗ್ಗೆ ನಮ್ಮ ದಿ ವಿಲನ್ ಟೀಮ್‌ನಿಂದ ವಾಣಿಜ್ಯ ಮಂಡಳಿಗೆ ಇವತ್ತು ಮನವಿ ಸಲ್ಲಿಸಿದ್ದೇವೆ. ಆ ನಿರ್ಧಾರ ನಿರ್ಮಾಪಕರ ಪರವಾಗಿರಲಿ.ಅದೇನೆ ಇರ‍್ಲಿ, ಸದ್ಯ ದಿ ವಿಲನ್ ಮತ್ತೊಂದು ಕ್ರಾಂತಿಗೆ ಮುನ್ನುಡಿ ಬರೆದಿದ್ದಾನೆ. ಪ್ರೇಮ್ ಶುರುಮಾಡಿರುವ ಈ ಹೋರಾಟಕ್ಕೆ ಗೆಲುವು ಸಿಗುತ್ತಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪರಿಹಾರ ನೀಡುತ್ತಾ, ನಿರ್ಮಾಪಕರ ಆರ್ಥಿಕ ಹೊರೆ ಕಮ್ಮಿಯಾಗುತ್ತಾ.. ಉತ್ತರ ಸದ್ಯದಲ್ಲೇ ಗೊತ್ತಾಗಲಿದೆ.

LEAVE A REPLY

Please enter your comment!
Please enter your name here