Home Crime ಅಪಘಾತದಲ್ಲಿ ಟ್ಯಾಂಕರ್ ಚಾಲಕ ಸತ್ತು ಹೋಗಿದ್ರು ಡೋಂಟ್ ಕೇರ್..! ಬಿಂದಿಗೆ, ಬಕೆಟ್ ಹಿಡಿದು ಅಡುಗೆ ಎಣ್ಣೆ...

ಅಪಘಾತದಲ್ಲಿ ಟ್ಯಾಂಕರ್ ಚಾಲಕ ಸತ್ತು ಹೋಗಿದ್ರು ಡೋಂಟ್ ಕೇರ್..! ಬಿಂದಿಗೆ, ಬಕೆಟ್ ಹಿಡಿದು ಅಡುಗೆ ಎಣ್ಣೆ ತುಂಬಿಸಿಕೊಳ್ಳುವಲ್ಲಿ ಜನ ಬ್ಯುಸಿ..!

2156
0
SHARE

ನಮ್ಮ ಜನ ಹೆಂಗೆ ಅಂದ್ರೆ ಯಾರು ಏನಾದ್ರು ಆಗ್ಲಿ ಅವರಿಂದ ನಮಗೆ ಲಾಭ ಆದ್ರೆ ಸಾಕು, ಅವರು ಹೇಗಾದ್ರು ಇರಲಿ ನಾವು ಚೆನ್ನಾಗಿರಬೇಕು ಅಷ್ಟೇ ಎಂದು ಅನ್ಕೊಂಡಿರುತ್ತಾರೆ, ಅಪಘಾತವಾಗಿ ಒಬ್ಬ ವ್ಯಕ್ತಿ ನರಳಾಡಿದ್ರೂ ಜನರು ಮಾನವೀಯತೆ ಇಲ್ಲದೆ ಅದನ್ನು ವಿಡಿಯೋ ಮಾಡ್ತಾ ಇರ್ತಾರೆ, ಅದೇ ರೀತಿಯ ಅಮಾನವೀಯ ಘಟನೆ ಬಾಗಲಕೋಟೆಯಲ್ಲೂ ನಡೆದಿದೆ.

ಆದ್ರೆ ಇಲ್ಲಿ ವಿಡಿಯೋ ಮಾಡ್ತಿಲ್ಲ, ಬದಲಾಗಿ ಅಡುಗೆ ಎಣ್ಣೆ ತುಂಬಿಕೊಳ್ಳುತ್ತಿದ್ದಾರೆ.ಇದು ಬಾಗಲಕೋಟೆ ಜಿಲ್ಲೆ ಇಳಕಲ್ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದ ಘಟನೆ. ಇಳಕಲ್ ಹೊರವಲಯದಲ್ಲಿ ಬೆಳಿಗ್ಗೆ ಎಣ್ಣೆ ತುಂಬಿದ ಕ್ಯಾಂಟರ್ ಗೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಆಯಿಲ್ ಕ್ಯಾಂಟರ್ ನಲ್ಲಿನ ಎಣ್ಣೆ ಸೋರಿಕೆ ಶುರುವಾಗಿದೆ.

ಈ ಸುದ್ದಿ ತಿಳಿಯುತ್ತಿದ್ದೆ ತಡ ಸ್ಥಳೀಯರು ಎಣ್ಣೆ ಹೊತ್ತೊಯ್ಯಲು ಹೈವೆಯಲ್ಲಿ ಮುಗಿಬಿದ್ದಿದ್ದರು. ಬಕೆಟ್, ಕ್ಯಾನ್, ಕೊಡ, ಚಂಬು ಕೈಗೆ ಸಿಕ್ಕಿದ್ದನ್ನೆಲ್ಲಾ ಹಿಡಿದು ಎಣ್ಣೆಗಾಗಿ ಬಡಿದಾಡುತ್ತಿದ್ರು, ಆದರೆ ಲಾರಿ ಚಾಲಕ ನುಜ್ಜುಗುಜ್ಜಾದ ವಾಹನದಲ್ಲಿ ಸಿಲುಕಿ ನರಳಾಡಿದ್ರು ಯಾರೂ ಕೂಡಾ ಅತ್ತ ಕಡೆ ಗಮನಿಸಲಿಲ್ಲ. ಕನಿಷ್ಟ ಪಕ್ಷ ಚಾಲಕ ಬದುಕಿದ್ದಾನಾ ಮೃತನಾಗಿದ್ದಾನಾ ಎಂದು ಕೂಡ ನೋಡದೆ ಅಮಾನವೀಯತೆ ಮೆರೆದಿದ್ದಾರೆ.

ಇನ್ನು ರಸ್ತೆ ಮೇಲೆ ಎಣ್ಣೆ ಬಿದ್ದ ಪರಿಣಾಮ ಬಳ್ಳಾರಿ ಮೂಲದ ಟಾಟಾ ಸುಮೊ ಒಂದು ಸ್ಕಿಡ್ ಆಗಿ ಮುಳ್ಳಿನ ಕಂಟಿಗೆ ನುಗ್ಗಿತ್ತು. ಜೊತೆಗೆ ಏಳು ಬೈಕ್ ಗಳು ಎಣ್ಣೆಯಲ್ಲಿ ಸ್ಕಿಡ್ ಆಗಿ ಬಿದ್ದಿವೆ. ಈ ವೇಳೆ ಸ್ಥಳಕ್ಕೆ ಬಂದ ಇಳಕಲ್ ಗ್ರಾಮೀಣ ಠಾಣೆ ಪೊಲೀಸರು ಜನರನ್ನು ಚದುರಿಸಿದ್ದಾರೆ. ಕ್ರೇನ್ ಮೂಲಕ ಕಾರ್ಯಾಚರಣೆ ನಡೆಸಿ ಚಾಲಕನ ಶವ ಹೊರತೆಗೆದಿದ್ದಾರೆ, ಇನ್ನು ರಸ್ತೆಯಲ್ಲಿ ಬಿದ್ದ ಎಣ್ಣೆಯನ್ನು ಇಳಕಲ್ ನಗರಸಭೆ ಕಾರ್ಮಿಕರಿಂದ ಕಸಗೂಡಿಸಿ ತೆರವುಗೊಳಿಸಿದ್ದಾರೆ.

ಇನ್ನು ಘಟನೆ ಬಗ್ಗೆ ಮಾತನಾಡಿದ ಬಾಗಲಕೋಟೆ ಎಸ್ ಪಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಆಂದ್ರ ಮೂಲದ ತಪರಾಜ ಗಾರಿ ಎಂಬ ವ್ಯಕ್ತಿ ಮೃತನಾಗಿದ್ದಾನೆ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಅಂದ್ರು.ಒಟ್ಟಿನಲ್ಲಿ ಅಪಘಾತದಲ್ಲಿ ಚಾಲಕ ಮೃತಪಟ್ರೆ, ಸ್ಥಳೀಯರು ಮಾನವೀಯತೆ ಮರೆತು ಎಣ್ಣೆಗಾಗಿ ಬಡಿದಾಡಿದ್ರು. ಅದೇನೆ ಇದ್ರೂ ಓರ್ವನ ಶವದ ಮುಂದೆ ಎಣ್ಣೆಗಾಗಿ ಮುಗಿಬಿದ್ದಿದ್ದು ಮಾತ್ರ ವಿಪರ್ಯಾಸವೇ ಸರಿ.

LEAVE A REPLY

Please enter your comment!
Please enter your name here