Home Crime ಅಪ್ಪನ ಕಣ್ಣೆದುರೆ ಹೊತ್ತಿ ಉರಿದ ಮುದ್ದಾದ ಮಗಳು..!!! ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮುರಿದು ಬಿತ್ತು ವಿದ್ಯುತ್ ತಂತಿ...

ಅಪ್ಪನ ಕಣ್ಣೆದುರೆ ಹೊತ್ತಿ ಉರಿದ ಮುದ್ದಾದ ಮಗಳು..!!! ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮುರಿದು ಬಿತ್ತು ವಿದ್ಯುತ್ ತಂತಿ …

588
0
SHARE

ಆಕೆ ಅಪ್ಪನ ಮುದ್ದಾದ ಮಗಳು. ಆಕೆಗೂ ಅಪ್ಪ ಅಂದ್ರೆ ಪ್ರಾಣ. ರಾತ್ರಿ ಕೆಲ್ಸಕ್ಕೆ ಹೋಗಿದ್ದ ಅಪ್ಪನ ಬಂದ್ರು ಅನ್ನೋ ಖುಷಿಯಲ್ಲಿ ಮನೆಯ ಪ್ಯಾಸೇಜ್ ಗೆ ಓಡಿ ಬಂದಿದ್ಲು. ಅಷ್ಟರಲ್ಲಿ ಅಲ್ಲೊಂದು ಅನಾಹುತ ಸಂಭವಿಸಿ, ಆಸ್ಪತ್ರೆ ಸೇರಿರೋ ಆಕೆ ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾಳೆ…

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮುರಿದು ಬಿತ್ತು ವಿದ್ಯುತ್ ತಂತಿ- ಅಪ್ಪನ ಕಣ್ಣೆದುರೆ ಹೊತ್ತಿ ಉರಿದ ಕಂದಮ್ಮ- ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ…

ಫೋಟೋದಲ್ಲಿ ಕಾಣಿಸುತ್ತಿರುವ ಈ ಮುದ್ದಾದ ಬಾಲಕಿಯ ಹೆಸರು ರೇಖಾ. ಮಹಾಗಣಪತಿನಗರ ಇಂದ್ರರಾಜು ದಂಪತಿಯ ಮುದ್ದಾದ ಮಗಳು. ಸ್ಕೂಲ್ ರಜೆ ಇರೋ ಕಾರಣ ಮನೆಯಲ್ಲಿ ಕಾಲ ಕಳೆಯುತ್ತಿದ್ದ ರೇಖಾ ಕೆಲ್ಸಕ್ಕೋದ ಅಪ್ಪ ಬರ್ಲಿಲ್ಲ ಅಂತ ಕಾದು ಕುಳಿತಿದ್ಲು. ರಾತ್ರಿ 9.45ರ ಸುಮಾರಿಗೆ ಕೆಲ್ಸಕ್ಕೆ ಹೋಗಿದ್ದ ತಂದೆ ಇಂದ್ರರಾಜು ಬೈಕ್ ಸೌಂಡ್ ಕೇಳ್ತು ಅಂತಾ ಮನೆಯ ಪ್ಯಾಸೇಜ್ ಬಳಿ ಬಂದು ಅಲ್ಲಿನ ಗ್ರಿಲ್ಸ್ ಮೇಲೆ ಕೈ ಹಾಕಿ ನಿಂತಿದ್ಲು…

ಅದೇ ಟೈಮ್ ಗೆ ಸಿಡಿಲು ಬಡಿದ ಶಬ್ದ ಕೇಳಿಸಿದ್ದು ಕರೆಂಟ್ ಹೋಗಿದೆ. ಅಯ್ಯೋ ಕರೆಂಟ್ ಹೋಯ್ತಲ್ಲ ಅಂತ ತಿರುಗೋಷ್ಟರಲ್ಲಿ ಮನೆಯ ಪಕ್ಕದಲ್ಲೆ ಹಾದು ಹೋಗಿದ್ದ ವಿದ್ಯುತ್ ತಂತಿಯೊಂದು ತುಂಡಾಗಿ ರೇಖಾ ಹಿಡಿದುಕೊಂಡಿದ್ದ ಗ್ರಿಲ್ಸ್ ಮೇಲೆ ಬಿದ್ದು, ಬೆಂಕಿ ಹೊತ್ತಿಕೊಂಡಿದೆ. ಅಷ್ಟೇ ಅಲ್ಲದೆ ಪಕ್ಕದಲ್ಲಿದ್ದ ರೇಖಾಳ ದೇಹ ಪ್ರವೇಶಿಸಿದ ವಿದ್ಯುತ್ ಆಕೆಯನ್ನ ಸುಟ್ಟು ಕರಕಲಾಗಿಸಿದೆ…

ಇತ್ತ ಕಣ್ಣೇದುರೇ ಕರೆಂಟ್ ಶಾಕ್ ಹೊಡೆದು ಮಗಳು ಸುಟ್ಟು ಕರಕಲಾದ ದೃಶ್ಯವನ್ನ ಕಂಡ ಆಕೆಯ ಪೋಷಕರು ನೆರೆಹೊರೆಯವ್ರ ಸಹಾಯದಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ. ಆದ್ರೆ, ವಿದ್ಯುತ್‌ನಿಂದ ಶೇ.40 ರಷ್ಟು ಸುಟ್ಟಿರುವ ರೇಖಾ ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿದ್ದಾಳೆ…

ಸಧ್ಯ ಘಟನೆ ಸಂಬಂಧ ಬಸವೇಶ್ವರನಗರ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇತ್ತ ಮಗಳು ಕ್ಷೇಮವಾಗಿ ಬರಲಿ ಅಂತಾ ರೇಖಾಳ ಪೋಷಕರು ದೇವರಿಗೆ ಮೊರೆ ಇಡ್ತಿದ್ದಾರೆ…

LEAVE A REPLY

Please enter your comment!
Please enter your name here