Home Crime ಅಫ್ಘಾನಿಸ್ಥಾನದಲ್ಲಿ ಉಗ್ರರ ಗುಂಡಿಗೆ ಹೆಣವಾದ ಅಮಾಯಕ ಕನ್ನಡಿಗ..! ಮಗನ ಮುಖನೋಡಲು ಕಾದು ಕುಳಿತ ಕುಟುಂಬ..!

ಅಫ್ಘಾನಿಸ್ಥಾನದಲ್ಲಿ ಉಗ್ರರ ಗುಂಡಿಗೆ ಹೆಣವಾದ ಅಮಾಯಕ ಕನ್ನಡಿಗ..! ಮಗನ ಮುಖನೋಡಲು ಕಾದು ಕುಳಿತ ಕುಟುಂಬ..!

2107
0
SHARE

ಆ ಕನ್ನಡಿಗ ಕೆಲಸಕ್ಕಾಗಿ ದೂರದ ಅಫ್ಘಾನಿಸ್ಥಾನ ದೇಶಕ್ಕೆ ತೆರಳಿದ್ದ. ಅಫ್ಘಾನಿಸ್ಥಾನದಲ್ಲಿ ಪ್ರತಿಷ್ಟಿತ ಆಹಾರ ಕಂಪನಿಯೊಂದರಲ್ಲಿ ಕಳೆದ ಹನ್ನೆರಡು ವರ್ಷದಿಂದ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ತಾನಾಯಿತು, ತನ್ನ ಕೆಲಸ ಆಯಿತು, ಎಂದು ಜೀವನ ಸಾಗಿಸುತ್ತಿದ್ದ.. ಆದ್ರೆ, ಅಘ್ಘಾನಿಸ್ಥಾನದಲ್ಲಿ ಪ್ರತ್ಯೇಕತಾವಾದಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಕನ್ನಡಿಗ ಮೃತಪಟ್ಟಿದ್ದಾನೆ..

ಅಫ್ಘಾನಿಸ್ಥಾನದಲ್ಲಿ ಕನ್ನಡಿಗನ ಹತ್ಯೆ.ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕನ್ನಡಿಗನೊಬ್ಬ ಅಫ್ಘಾನಿಸ್ಥಾನದಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.. ಕಡವಾಡ ಗ್ರಾಮದ ಪ್ಯಾಟ್ಸನ್ ಎಂಬಾತ ಕಳೆದ 12 ವರ್ಷದಿಂದ ಅಫ್ಘಾನಿಸ್ಥಾನದಲ್ಲಿ ಸೋಡೆಸ್ಕೋ ಎನ್ನುವ ಪ್ರತಿಷ್ಟಿತ ಆಹಾರ ಕಂಪನಿಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ. ಆಗಾಗ ಭಾರತಕ್ಕೆ ಬಂದು ವಾಪಾಸ್ ತೆರಳುತ್ತಿದ್ದ…

ಅಗಸ್ಟ್ 2ರಂದು ಬೆಳಿಗ್ಗೆ ತಾನು ವಾಸಿಸುತ್ತಿದ್ದ ಅಫ್ಘಾನಿಸ್ಥಾನದ ಕಾಬೂಲ್ ಎನ್ನುವ ಪ್ರದೇಶದ ಮನೆಯಿಂದ ಕಂಪನಿಗೆ ತನ್ನಿಬ್ಬರು ಸ್ನೇಹಿತರ ಜೊತೆ ಕೆಲಸಕ್ಕೆ ಕಾರಿನಲ್ಲಿ ತೆರಳುತ್ತಿದ್ದ. ಈ ವೇಳೆ ಅಫ್ಘಾನಿಸ್ಥಾನದ ಪ್ರತ್ಯೇಕತಾವಾದಿ ಉಗ್ರರು ಪೆಡ್ಸನ್ ಹಾಗೂ ಜೊತೆಯಲ್ಲಿದ್ದ ಇಬ್ಬರನ್ನ ಕಿಡ್ನಾಪ್ ಮಾಡಿ ಸುಮಾರು 25 ಕಿಲೋ ಮೀಟರ್ ದೂರಕ್ಕೆ ಕರೆದುಕೊಂಡು ಹೋಗಿ ಗುಂಡಿಕ್ಕಿ ಮೂವರನ್ನೂ ಹತ್ಯೆ ಮಾಡಿದ್ದಾರೆ…

ಇನ್ನು ಪ್ಯಾಟ್ಸನ್‌ಗೆ ಹೆಂಡತಿ ಆರು ವರ್ಷದ ಮಗ ಸಹ ಇದ್ದಾರೆ. ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಮನೆಗೆ ಬಂದಿದ್ದ ಪ್ಯಾಟ್ಸನ್ ಕೆಲ ದಿನ ಮನೆಯಲ್ಲಿ ಇದ್ದು ವಾಪಾಸ್ ಅಪಘಾನಿಸ್ಥಾನಕ್ಕೆ ತೆರಳಿದ್ದ. ಇನ್ನು ಹೆಂಡತಿ ಕೆಲಸ ಬಿಟ್ಟು ಮನೆಗೆ ವಾಪಾಸ್ ಬರುವಂತೆ ಹೇಳಿದ್ದು ತನಗೆ ಕೆಲಸ ನಿರ್ವಹಿಸುವ ಕಂಪನಿಯಲ್ಲಿ ಪ್ರಮೋಷನ್ ಆಗಲಿದ್ದು ನಂತರ ಬಿಟ್ಟು ಬರುತ್ತೇನೆ ಎಂದಿದ್ದನಂತೆ…

ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಪ್ಯಾಟ್ಸನ್ ಅಗಲಿಕೆಯಿಂದ ಈಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.ಇನ್ನು ಅಪಘಾನಿಸ್ಥಾನದಲ್ಲಿ ಶುಕ್ರವಾರ ಹಾಗೂ ಶನಿವಾರ ರಜಾ ದಿನ.. ಭಾರತದಲ್ಲಿ ಭಾನುವಾರ ರಜೆಯ ದಿನ..ಈಗಾಗಿ ಶವ ಹಸ್ತಾಂತರಕ್ಕೆ ತಡವಾಗಲಿದೆ. ಒಟ್ಟಿನಲ್ಲಿ ಹೊಟ್ಟೆಪಾಡಿಗಾಗಿ ದೂರದ ಅಫ್ಘಾನಿಸ್ಥಾನಕ್ಕೆ ತೆರಳಿ ದುಡಿಯುತ್ತಿದ್ದ ಪ್ಯಾಟ್ಸನ್ ಉಗ್ರರ ಗುಂಡಿಗೆ ಬಲಿಯಾಗಿರುವುದು ನಿಜಕ್ಕೂ ದುರಂತ…

LEAVE A REPLY

Please enter your comment!
Please enter your name here