Home Cinema ಅಬ್ಬಬ್ಬಾ..ನಿಗಿನಿಗಿ ಕೆಂಡ..ಡಾಲಿ ಧನಂಜಯ್ ಮಂಕಿ ಅವತಾರ..! ಡಾಲಿಗಿನ್ನೂ ಕ್ರೂರವಾಗಿದೆ ಧನು ಹೊಸ ಗೆಟಪ್..!

ಅಬ್ಬಬ್ಬಾ..ನಿಗಿನಿಗಿ ಕೆಂಡ..ಡಾಲಿ ಧನಂಜಯ್ ಮಂಕಿ ಅವತಾರ..! ಡಾಲಿಗಿನ್ನೂ ಕ್ರೂರವಾಗಿದೆ ಧನು ಹೊಸ ಗೆಟಪ್..!

586
0
SHARE

ಧನಂಜಯ್.. ಕನ್ನಡ ಚಿತ್ರರಂಗದ ಡಾಲಿ. ಯಸ್.. ಡಾಲಿ ಧನಂಜಯ್ ನಸೀಬು ಬದಲಾಗಿದೆ. ಆಫ್ಟರ್ ಟಗರು ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಧನು ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ.

ಅದ್ರಲ್ಲೂ ಖಳನಾಯಕನ ಪಾತ್ರಗಳಿಗೆ ಧನಂಜಯ್ ಇದೀಗ ಟಾಫ್ ಕ್ಯಾಂಡಿಟೇಟ್ ಕೂಡಾ ಹೌದು.ತಮ್ಮ ಅಭಿನಯದಿಂದನೇ ಟಗರುದಲ್ಲಿ ಅಭಿಮಾನಿಗಳ ಮನ ಗೆದ್ದ ಗಾಂಧಿನಗರದ ಈ ಸ್ಪೆಷಲ್ ಆಕ್ಟರ್, ತನ್ನಲ್ಲೂ ಕಿಚ್ಚಿದೆ ಅನ್ನುವದನ್ನೂ ಟಗರುದಲ್ಲಿ ತೋರಿಸಿದ್ದರು. ಇಂಥಹ ಧನಂಜಯ್ ಇದೀಗ ನಯಾ ಲುಕ್ಕಿನೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಅದು, ಅಂತಿಂಥದ್ದಲ್ಲ ಕಿಕ್ಕೇರಿಸುವ ಲುಕ್ಕು.
ಯಸ್, ಇದು, ಧನುವಿನ ನಯಾ ಅವತಾರ.

ಮಂಕಿ ಅವತಾರ. ಹೌದು, ಡಾಲಿ ಧನಂಜಯ್ ಅಭಿನಯದ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿವೆ. ಸದ್ಯ ಬಿಡುಗಡೆಯಾಗಿರುವ ಇದೇ ಲುಕ್ಕುಗಳೂ, ಕನ್ನಡ ಕಲಾಭಿಮಾನಿಗಳಿಗೆ ಇನ್ನಿಲ್ಲದ ಕಿಕ್ ಕೊಡ್ತಿವೆ. ಅಷ್ಟೇ ಅಲ್ಲ ಚಿತ್ರದ ಮೇಲೀನ ಕೂತುಹಲವನ್ನೂ ಇಮ್ಮಡಿಗೊಳಿಸಿವೆ.ಪಾಪ್‌ಕಾರ್ನ್ ಮಂಕಿ ಟೈಗರ್ ಸೂರಿ ಜೊತೆ ಧನಂಜಯ್ ಮಾಡ್ತಿರುವ ಮತ್ತೊಂದು ಮಹಾಯಾಗ. ಟಗರುದ ಪ್ರಚಂಡ ಗೆಲುವಿನ ಬಳಿಕ ಸೆಟ್ಟೇರಿದ್ದ ಪಾಪ್‌ಕಾರ್ನ್ ಮಂಕಿ ಟೈಗರ್ ನಂತ್ರ ಸುದ್ದಿಯಾಗಿದ್ದು ಬದಲಾದ ನಿರ್ಮಾಪಕರ ವಿಚಾರದಿಂದ.

ಹೀಗೆ ಸುದ್ದಿಯಾಗಿದ್ದ ವಿಚಾರ ಧನಂಜಯ್ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿದ್ದು ಸುಳ್ಳಲ್ಲ. ಆದ್ರೀಗ.. ಇದ್ದ ಆತಂಕ ಎಲ್ಲ ಮಾಯವಾಗಿದೆ. ಆತಂಕದ ಬದಲು ಸಂಭ್ರಮ ಅಭಿಮಾನಿಗಳಲ್ಲಿ ಮನೆ ಮಾಡಿದೆ.ಖಡಕ್ ಲುಕ್ಕಿನಲ್ಲಿ ಇಲ್ಲಿ ಕಣ್ಣಲ್ಲೇ ಬೆಂಕಿ ಉಗುಳುತ್ತಿರುವ ಧನಂಜಯ್, ಪಾತ್ರಕ್ಕೆ ನ್ಯಾಯ ಸಲ್ಲಿಸಲು ತಮ್ಮ ತಲೆಯನ್ನೂ ಬೋಳಿಸಿಕೊಂಡಿದ್ದಾರೆ. ಅಂದ ಹಾಗೇ ಧನುವಿನ ಇದೇ ನಯಾ ಅವತಾರ ನೋಡ್ತಿದ್ದರೆ, ಗಜನಿ ಚಿತ್ರ ಹಾಗೇ ಕಣ್ಮುಂದೆ ಬಂದು ಹೋಗುತ್ತೆ. ಹಾಗಂತ, ಗಜನಿ ನೆರಳು ಇರಬಹುದಾ ಅನ್ನುವ ತೀರ್ಮಾನಕ್ಕೆ ನೀವ್ ಬರುವಂಗಿಲ್ಲ.

ಕಾರಣ, ಇದು ಬೇರೆಯದ್ದೇ ಥರಹದ ಸಿನಿಮಾ. ಇಲ್ಲಿ, ಟಗರುದಲ್ಲಿದ್ದ ಕ್ರೂರಿ ಡಾಲಿಗಿಂತ, ಇನ್ನಷ್ಟು ಕ್ರೂರತನದ ಪಾತ್ರವನ್ನ ಧನಂಜಯ್ ನಿರ್ವಹಿಸುತ್ತಿದ್ದಾರೆ.ಮಿಠಾಯಿ ಸೂರಿಯನ್ನ, ಹಿಂದೆಂದೂ ಕಾಣದ ಅವತಾರದಲ್ಲಿ ಕರೆತಂದಿರುವ ಸುಕ್ಕಾ ಸೂರಿ, ಇದೇ ವೇಳೆ.. ಚಿತ್ರದ ಮೇಲಿನ ಕೂತುಹಲ ಕೌತುಕ ಹೆಚ್ಚಾಗಿಸುವಲ್ಲೂ ಯಶಸ್ವಿಯಾಗಿದ್ದಾರೆ. ಇನ್ನೂ ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದ ಚಿತ್ರೀಕರಣ ಬೆಂಗಳೂರಿನ ಸುತ್ತ ಮುತ್ತ ಮಾಡಲಾಗಿದೆ. ಇನ್ನೇನ್ ಇದ್ರೂ ಮುಂಬೈನ ಬೀದಿಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಬೇಕಿದೆ.

ಇದಕ್ಕೆ, ಚಿತ್ರತಂಡ ಹೊರಡಲು ಸಿದ್ಧವಾಗಿದೆ.ಇನ್ನು ಪಾಪ್‌ಕಾರ್ನ್ ಮಂಕಿ ಟೈಗರ್‌ನಲ್ಲಿ ಧನಂಜಯ್‌ಗೆ ನಾಯಕಿಯಾಗಿ ಸ್ಮಿತಾ ಅಲಿಯಾಸ್ ನಿವೇದಿತಾ ಕಾಣಸಿಗಲಿದ್ದಾರೆ. ಅಮೃತಾ ಹಾಗೂ ಸಪ್ತಮಿ ಕೂಡಾ ಚಿತ್ರದ ಇನ್ನುಳಿದ ನಾಯಕಿಯರು. ಒಟ್ನಲ್ಲಿ ಸದ್ಯ ಪಾಪ್ ಕಾರ್ನ್ ಮಂಕಿ ಟೈಗರ್, ಎಲ್ಲರನ್ನೂ ನಿಬ್ಬೇರಗಾಗಿಸಿದ್ದಾನೆ. ಮುಂದಿನ ದಿನಗಳಲ್ಲಿ ಇನ್ಯಾವ ಅಚ್ಚರಿಯ ಮೂಟೆಯನ್ನೊತ್ತು ಪಾಪ್‌ಕಾರ್ನ್ ಮಂಕಿ ಟೈಗರ್ ಬರ‍್ತಾನೆ ಅನ್ನುವದು ಸದ್ಯದ ಕೂತುಹಲ. ಅಲ್ಲಿವರೆಗೂ.. ಡಾಲಿ ಧನಂಜಯ್ ಅವ್ರ ಈ ರಾ ಲುಕ್‌ಗಳನ್ನೂ ನೆನಪಿನಲ್ಲಿಟ್ಟುಕೊಳ್ಳಿ…

LEAVE A REPLY

Please enter your comment!
Please enter your name here