Home Cinema ಅಬ್ಬಬ್ಬಾ..!! ಭಾವನಾ “ಸೆಕ್ಸಿ” ಅವತಾರ ಕಂಡ್ರೆ ಪಡ್ಡೆಗಳಿಗೆ ಬರುತ್ತೆ ಪಕ್ಕಾ ಬೆವರು..! ಹೊಸ ಅವತಾರದಲ್ಲಿ ಭಾವನಾ...

ಅಬ್ಬಬ್ಬಾ..!! ಭಾವನಾ “ಸೆಕ್ಸಿ” ಅವತಾರ ಕಂಡ್ರೆ ಪಡ್ಡೆಗಳಿಗೆ ಬರುತ್ತೆ ಪಕ್ಕಾ ಬೆವರು..! ಹೊಸ ಅವತಾರದಲ್ಲಿ ಭಾವನಾ ಪ್ರೇಕ್ಷಕರಿಗೆ ಕಿಕ್..!!

5018
0
SHARE

ನಟಿ ಭಾವನಾ ಮತ್ತೆ ಸ್ಯಾಂಡಲ್‌ವುಡ್‌ಗೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಬಹಳ ದಿನಗಳ ಗ್ಯಾಪ್‌ನ ನಂತರ ಹೊಸ ಅವತಾರದಲ್ಲಿ ಭಾವನಾ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದಾರೆ. ಭಾವನಾರ ಕಿಚ್ಚು ಹಚ್ಚುವ ಹಾಟ್‌ಲುಕ್ ನೋಡಿ ಪಡ್ಡೆಹುಡುಗರು ಸುಸ್ತಾಗಿಬಿಟ್ಟಿದಾರೆ..!ಇದು ನಾವು ಹಿಂದೆಂದೂ ನೋಡಿರದ ಭಾವನಾರ ಸ್ಪೆಷಲ್ ಕಥೆ ಕಣ್ರೀ.

ಇವರ ಹೊಸ ಫೋಟೊಶೂಟ್ ಈಗ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಟಾಕ್ ಆಗ್ತಿದೆ. ಸಿನಿರಸಿಕರು ಭಾವನಾರ ಹೊಸ ದರ್ಶನ ಪಡೆದು ಬೆವರು ಸುರಿಸಿಕೊಳ್ಳುತ್ತಿದಾರೆ. ಏನ್ ಗುರು? ಇದು ನಮ್ಮ ಭಾವನಾನಾ ಅಥವಾ ಯಾವುದೋ ಬಾಲಿವುಡ್‌ನ ಮಾದಕನಟಿನಾ ಎನ್ನೋ ರೇಂಜ್‌ಗೆ ಭಾವನಾರ ಹೊಸ ಫೋಟೊಗಳು ಸೌಂಡ್ ಮಾಡಿರೋದಂತು ಸುಳ್ಳಲ್ಲ.

ಅಷ್ಟಕ್ಕೂ ಭಾವನಾ ಹೊಸ ಗೆಟಪ್‌ಗೆ ಒಂದು ಕಾರಣವಿದೆ. ’ಸುರಗಿ’ ಅನ್ನೋ ಹೊಸ ಸಿನಿಮಾ ಗೋಸ್ಕರ ಹುಟ್ಟಿಕೊಂಡಿರುವ ಸೆನ್ಸೆಷನಲ್ ಲುಕ್ ಇದು. ’ಸುರಗಿ’ ಚಿತ್ರದ ಒಂದು ಬೋಲ್ಡ್ ಕ್ಯಾರೆಕ್ಟರ್‌ಗೆ ಭಾವನಾ ಜೀವ ತುಂಬಲಿದ್ದಾರೆ. ಆದರೆ ಭಾವನಾ ಎಲ್ಲೂ ಪಾತ್ರದ ಸೀಕ್ರೆಟ್ ಬಿಟ್ಟುಕೊಡಲಿಲ್ಲ. ಬಟ್, ತಮ್ಮ ಫೋಟೊಶೂಟ್ ಬಗ್ಗೆ ಸಿಕ್ಕಾಪಟ್ಟೆ ಎಕ್ಸಾಯಟ್ ಆಗಿರುವ ಭಾವನಾ ’ಫೋಟೊಶೂಟ್ ಮಾಡಿಸುವುದಕ್ಕೆ ಒಂದು ಉದ್ದೇಶವಿದೆ.

ಸಾಮಾನ್ಯವಾಗಿ ಹೆಣ್ಮಕ್ಳು ಸಿನಿಮಾ ಪೋಸ್ಟರ್‌ಗಳಲ್ಲಿ ಕಾಣಿಸೋದೆ ಇಲ್ಲ. ಹಾಗಾಗೀ, ಒಬ್ಬ ಹೆಣ್ಣಿನ ನ್ಯಾಚುರಲ್ ಬ್ಯೂಟಿಯನ್ನ ಪ್ರದರ್ಶಿಸುವುದೇ ನಮ್ಮ ಸಣ್ಣ ಪ್ರಯತ್ನ’ ಎಂದ್ರು.ಇನ್ನು ’ಸುರಗಿ’ ಚಿತ್ರಕ್ಕೆ ಆಕ್ಷನ್-ಕಟ್ ಹೇಳೊಕೆ ರೆಡಿಯಾಗಿರೋದು ಸ್ಯಾಂಡಲ್‌ವುಡ್‌ನ ಕ್ರಿಯಾಶೀಲ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ’ಜಟ’ ಖ್ಯಾತಿಯ ಗಿರಿರಾಜ್. ’ಮೈತ್ರಿ’ ಹಾಗೂ ’ಅಮರಾವತಿ’ ಚಿತ್ರಗಳ ಮೂಲಕ ಚಿತ್ರರಂಗದಲ್ಲಿ ಹೊಸ ಅಲೆಯನ್ನ ಕ್ರಿಯೆಟ್ ಮಾಡಿದ ಗಿರಿರಾಜ್ ’ಸುರಗಿ’ ಚಿತ್ರದಿಂದ ಮತ್ತೆ ತಮ್ಮ ಮ್ಯಾಜಿಕ್ ತೋರಿಸಲಿದ್ದಾರೆ.

ಮುಲತಃ ರಂಗಭೂಮಿಯಿಂದ ಬಂದ ಗಿರಿರಾಜ್ ನಟರನ್ನ ರಿಹರ್ಸಲ್ ಮಾಡಿಸಿಯೇ ಫೀಲ್ಡ್‌ಗೆ ಬಿಡ್ತಾರೆ. ಸೋ, ತಮ್ಮ ಸಿನಿಮಾದ ಕೆಲವು ವಿಷಯಗಳನ್ನ ಗಿರಿರಾಜ್ ಹಂಚಿಕೊಂಡಿದ್ದು ಹೀಗೆ.
ಇನ್ನು ’ಸುರಗಿ’ ಚಿತ್ರದ ನಾಯಕ ಮನು ಹೆಗಡೆ ಮಾತನಾಡಿ ’ನಿಜವಾದ ಹೀರೊ ನಾನಲ್ಲ, ಬದಲಾಗಿ ಚಿತ್ರದ ಕಥೆಯೇ ರಿಯಲ್ ಹೀರೊ.

ಗಿರಿರಾಜ್ ಸಿನಿಮಾ ಮೇಕಿಂಗ್ ಬಗ್ಗೆ ತುಂಬಾ ವಿಶ್ವಾಸವಿದೆ. ’ಸುರಗಿ’ ಖಂಡಿತ ಒಳ್ಳೆ ಚಿತ್ರವಾಗೋದ್ರಲ್ಲಿ ಡೌಟೇ ಇಲ್ಲ’ ಎಂದ್ರು.ವಿಶೇಷವೆಂದ್ರೆ, ನಟಿ ಭಾವನಾ ಚಿತ್ರಕ್ಕೆ ಬಂಡವಾಳವನ್ನೂ ಹೂಡಿ, ಆಕ್ಟ್ ಮಾಡೋದರ ಜೊತೆಗೆ ನಿರ್ಮಾಪಕಿಯ ಹೊಣೆಯನ್ನು ಹೊತ್ತಿದಾರೆ. ಜನೆವರಿಯ ಸಂಕ್ರಾತಿ ಹಬ್ಬಕ್ಕೆ ’ಸುರಗಿ’ ಸಿನಿಮಾದ ಮುರ್ಹೂತವಾಗಲಿದೆ.

ಅಂತೂ ಇತ್ತೀಚೆಗೆ ಬರ‍್ತೀರೊ ಪ್ರಯೋಗತ್ಮಾಕ ಚಿತ್ರಗಳ ಸಾಲಿಗೆ ’ಸುರಗಿ’ ಹೊಸ ಸೇರ್ಪಡೆ ಎನ್ನಬಹುದು. ಬೇರೆಬೇರೆ ಜಾನರ್‌ಗಳನ್ನ ಒಂದೇ ಸಿನಿಮಾದಲ್ಲಿ ತೋರಿಸೋ ’ಸುರಗಿ’ ಪ್ರಯತ್ನ ಯಶಸ್ವಿಯಾಗುತ್ತಾ? ಭಾವನಾರ ಈ ಹೊಸ ಎಂಟ್ರಿಗೆ ಪ್ರೇಕ್ಷಕ ಮಹಾಫ್ರಭು ಜೈ ಅಂತನಾ ಸದ್ಯದಲ್ಲೇ ಕಾದುನೋಡಬೇಕಾಗಿದೆ.

LEAVE A REPLY

Please enter your comment!
Please enter your name here