Home Cinema ಅಬ್ಬಬ್ಬಾ.. 2 ವರ್ಷಕ್ಕೊಮ್ಮೆ ಬಂದ್ರೂ ಕಮ್ಮಿ ಆಗಿಲ್ಲ ಇವರ ಹವಾ..! ಗೊತ್ತಾ, ಹೇಗಿದ್ದರು, ಹೇಗಾಗಿದ್ದಾರೆ ಬಹದ್ದೂರ್...

ಅಬ್ಬಬ್ಬಾ.. 2 ವರ್ಷಕ್ಕೊಮ್ಮೆ ಬಂದ್ರೂ ಕಮ್ಮಿ ಆಗಿಲ್ಲ ಇವರ ಹವಾ..! ಗೊತ್ತಾ, ಹೇಗಿದ್ದರು, ಹೇಗಾಗಿದ್ದಾರೆ ಬಹದ್ದೂರ್ ‘ಧ್ರುವ’..!

2489
0
SHARE

ಧ್ರುವ ಸರ್ಜಾ.. ಸ್ಯಾಂಡಲ್‌ವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಮೂಲಕ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ಬಹುಬೇಡಿಕೆಯ ನಟ. ಸಿನಿಮಾ ಬಗ್ಗೆ ತುಂಬಾ ಫ್ಯಾಷಿನೇಟೆಡ್ ಆಗಿರುವ ಧ್ರುವ ಸರ್ಜಾ ಚಿತ್ರಕ್ಕಾಗಿ ಏನ್ ಬೇಕಾದ್ರು ಮಾಡುವ ಪ್ರತಿಭಾವಂತ ಕಲಾವಿದ. ಸದ್ಯ ಪೋಗದಸ್ತಾನ ಪೊಗರು ಚಿತ್ರದ ಕೆಲಸದಲ್ಲಿ ಬಿಝೀಯಾಗಿರುವ ಧ್ರುವ ಅಡ್ಡಾದಿಂದ ಲೆಟೆಸ್ಟ್ ಮಾಹಿತಿಯೊಂದು ಹೊರಬಿದ್ದಿದೆ.

ಧ್ರುವ ನಟನೆಯಿಂದ, ಫ್ಲೆಕ್ಸಿ ಬಲ್ ಡ್ಯಾನ್ಸ್ ಮತ್ತು ಬಿಂದಾಸ್ ಲುಕ್, ಪಂಚಿಂಗ್ ಡೈಲಾಗ್ ಡಿಲಿವರಿ ಮೂಲಕ ಸಿಕ್ಕಾಪಟ್ಟೆ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಧ್ರುವಾ, ಸಿನಿಮಾ ಪ್ರೀತಿ, ಪಾತ್ರ ಗಳಿಗಾಗಿನ ಡೆಡಿಕೇಷನ್, ಸವಾಲುಗಳನ್ನು ಸ್ವೀಕರಿಸುವ ಪರಿ ನಿಜಕ್ಕೂ ಕುತೂಹಲಕರಿಯಾಗಿದೆ. ಎರಡು ವರ್ಷಕ್ಕೋಮ್ಮೆ ಸಿನಿಮಾ ಮಾಡಿದ್ರು ಅಭಿಮಾನಿಗಳ ಸಂಖ್ಯೆ ಕಡಿಮೆ ಮಾಡಿಕೊಳ್ಳದ ಧ್ರುವ್ ನ್ಯೂ ಲುಕ್ ಔಟ್ ಆಗಿದೆ. ಅದು ಅಂತಿಂಥ ಲುಕ್ ಅಲ್ಲ ಪೋಗರು ತುಂಬಿರುವ ಲುಕ್ ಅನ್ನೊದು ವಿಶೇಷ.

ಯಸ್.. ಧ್ರುವ ಸರ್ಜಾ ಸದ್ಯ ಪೊಗರು ಚಿತ್ರದ ಮೂಲಕ ಕಮಾಲ್ ಮಾಡಲು ಸಜ್ಜಾಗಿರುವ ನಾಯಕ. ಟೈಟಲ್ ಕೇಳಿ ಖುಷ್ ಆಗಿದ್ದ ಧ್ರುವ್ ಅಭಿಮಾನಿಗಳಿಗೆ ಆಕ್ಷನ್ ಪ್ರಿನ್ಸ್ ಹುಟ್ಟುಹಬ್ಬಕ್ಕೆ ಗಿಫ್ಟ್‌ವೊಂದು ಸಿಕ್ಕಿದೆ. ಧ್ರುವ ಹುಟ್ಟುಹಬ್ಬಕ್ಕೆ ಪೋಗರು ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಮಾಡಿದ್ದು.. ಎರಡು ಪೋಸ್ಟರ್‌ನಲ್ಲಿ ಆಕ್ಷನ್ ಪ್ರಿನ್ಸ್ ವಿಭಿನ್ನ ಮ್ಯಾನರಿಸಂನಲ್ಲಿ ಮಿಂಚಿದ್ದಾರೆ.ಅದ್ದೂರಿ, ಬಹದ್ದೂರ್, ಭರ್ಜರಿ ಸಿನಿಮಾಗಳಲ್ಲಿ ವಿಭಿನ್ನ ಲುಕ್‌ನಲ್ಲಿ ಪ್ರೇಕ್ಷಕರ ಚಿತ್ತ ಕದ್ದಿದ್ದ ಧ್ರುವ. ಪೋಗರು ಲುಕ್ ಯಾವರೀತಿ ಇರಬಹುದೆಂದು ಕಾದು ಕುಳಿತಿದ್ರು.

ಹೇರ್ ಸ್ಟೈಲ್ ಯಾವರೀತಿ ಇರಲಿದೆ. ಎಂಬ ಕುತೂಹಲದ ಕಣ್ಣುಗಳಿಂದ ಪೋಗರು ಚಿತ್ರದ ಕಡೆ ಎದುರು ನೋಡ್ತಿದ್ರು. ಇದೀಗ ರಿವೀಲ್ ಆಗಿರುವ ಪೋಸ್ಟರ್‌ನಲ್ಲಿ ಧ್ರುವ ಲುಕ್ ವಿಭಿನ್ನವಾಗಿ ಮೂಡಿಬಂದಿದ್ದು, ಉದ್ದ ಗಡ್ಡ, ಉದ್ದ ಕೂದಲಿನ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೋಟದಲ್ಲೇ ಕಿಚ್ಚು ಹಚ್ಚುವ ಧ್ರುವ ಈ ಹಿಂದಿನ ಹಿಟ್ ಚಿತ್ರಗಳಲ್ಲಿನ ಲುಕ್ ಎಲ್ಲಿಯೂ ರಿಪೀಟ್ ಆಗದಂತೆ ಚಿತ್ರತಂಡ ನೋಡಿಕೊಂಡಿದೆ.ಚಿತ್ರಕ್ಕೆ ನಂದ ಕಿಶೋರ್ ನಿರ್ದೇಶನ ಮಾಡ್ತಿದ್ದಾರೆ.

ಸಿನಿಮಾಕ್ಕೆ ತೂಕ ಹೆಚ್ಚಿಸಿ, ಇಳಿಸಿ ಸಾಕಷ್ಟು ಕಷ್ಟ ಪಟ್ಟಿರುವ ಧ್ರುವ ಲುಕ್‌ನ್ನು ಫಸ್ಟ್‌ಲುಕ್‌ನಲ್ಲಿ ಚೆನ್ನಾಗಿ ಮೂಡಿಬರಲು ನಿರ್ದೇಶಕ ನಂದ ಕಿಶೋರ್ ಶ್ರಮ ಇಲ್ಲಿ ಹೆಚ್ಚೇ ಕಷ್ಟಪಟ್ಟಿದ್ದಾರೆ. ನಂದು ಮತ್ತು ಧ್ರುವ ಇದೇ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡ್ತಿದ್ದಾರೆ. ಸಾಲು ಸಾಲು ಕಾಮಿಡಿ ಸಿನಿಮಾ ಮಾಡಿ ಗೆದ್ದಿರುವ ನಂದಕಿಶೋರ್ ಪೋಗರು ಮೂಲಕ ಯಾವರೀತಿ ಮಾಸ್ ಮಸಾಲಾ ಎಂಟಟೈನ್ಮೆಂಟ್ ಮೂವೀ ನೀಡಿಲಿದ್ದಾರೆ ಎಂಬ ಕಾತುರತೆ ಹೆಚ್ಚಾಗಿದೆ.ಹೌದು, ಪೋಗರು ಚಿತ್ರಕ್ಕೆ ಧ್ರುವ ಸಿಕ್ಕಾಪಟ್ಟೆ ತಮ್ಮನ್ನು ತಾವು ಮಾಡಿಫೈ ಮಾಡಿಕೊಂಡಿದ್ದಾರೆ.

ಯಾಕಂದ್ರೆ, ಪೋಗರು ಸಿನಿಮಾದ ಆರಂಭದ ಕಥೆಗಾಗಿ ಸ್ಕೂಲ್ ಹುಡುಗನ ಪಾತ್ರದಲ್ಲಿ ಧ್ರುವ ನಟಿಸುತ್ತಿದ್ದಾರೆ. ಫ್ಯಾಷ್ ಬ್ಯಾಕ್ ಸೀನ್‌ಗಾಗಿ ಧ್ರುವ ೩೦ಕೆ.ಜಿ ತೂಕವನ್ನು ಇಳಿಸಿಕೊಂಡಿದ್ರು. ಆದ್ರೆ ಅದೇನೋ ಚಿತ್ರತಂಡ ಕಥೆ ಬದಲಾವಣೆ ಮಾಡಿರುವ ಕಾರಣಕ್ಕೆ ಈಗ ಧ್ರುವ ಲುಕ್ ಕಂಪ್ಲೀಟ್ ಬದಲಾಗಿದೆ ಎನ್ನಲಾಗ್ತಿದೆ.ಇನ್ನು ಪೋಗರು ಚಿತ್ರದಲ್ಲಿ ಸಾಕಷ್ಟು ಕುತೂಹಲಕಾರಿ ಅಂಶಗಳನ್ನಿಟ್ಟಿರುವ ನಂದು, ಚಿತ್ರದಲ್ಲಿ ಊಹಿಸಲು ಅಸಾಧ್ಯವಾದಂತೆ ಕೆಲವು ಟ್ವಿಸ್ಟ್‌ಗಳನ್ನು ಚಿತ್ರದಲ್ಲಿ ಇಟ್ಟಿದ್ದಾರೆನ್ನಲಾಗ್ತಿದೆ.

ಇದೀಗ, ಟೀಸರನ್ನು ಅಷ್ಟೇ ಪೊಗದಸ್ತಾಗಿ ಮಾಡೋಕೆ ನಿರ್ದೇಶಕ ನಂದಕಿಶೋರ್ ಪ್ಲಾನ್ ಮಾಡಿಕೊಂಡಿದ್ದಾರೆ. ಸುಮಾರ್ ೧೫೦ ಸಹ ನಟರು ಹಾಗೂ ೫೦ ಫೈಟರ್ಸ್ ಬಳಸಿ ಟೀಸರ್ ನಿರ್ಮಿಸಲಾಗ್ತಿದೆ. ರ‍್ಯಾಪರ್ ಚಂದನ್ ಶೆಟ್ಟಿ ಸಂಗೀತದಲ್ಲಿ ಟೀಸರ್ ಮೂಡಬರಲಿದ್ದು, ಅಕ್ಟೋಬರ್ ನಂತರ ಶೂಟಿಂಗ್ ಆರಂಭವಾಗಲಿದೆ.ಅಧ್ಯಕ್ಷ ಸಿನಿಮಾದ ನಿರ್ಮಾಪಕ ಬಿ.ಕೆ ಗಂಗಾಧರ್ ಪೊಗರು ಸಿನಿಮಾಕ್ಕೆ ಬಂಡವಾಳ ಹೂಡ್ತಿದ್ದಾರೆ.

ಮಾಸ್ ಸಿನಿಮಾಗಳಿಗೆ ಫೇಮಸ್ಸಾಗಿರೋ ಧ್ರುವ ಸರ್ಜಾರ ಮತ್ತೊಂದು ಮಾಸ್ ಲುಕ್ ಮೂಲಕ ಎಂಟ್ರಿಕೊಟ್ಟಿರೋದು ಅಭಿಮಾನಿಗಳಿಗೆ ಪೋಗರು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಾಗುವಂತೆ ಮಾಡಿದೆ.ಅದೇನೇ ಇದ್ರು.. ಸದ್ಯ ಎರಡು ಪೋಸ್ಟರ್ ಮೂಲಕವೇ ಸಿಕ್ಕಾಪಟ್ಟೆ ಸೌಂಡ್ ಜೊತೆಗೆ ಉತ್ತಮ ಬ್ರ್ಯಾಂಡ್ ಸೃಷ್ಠಿಸಿರುವ ಪೋಗದಸ್ತಾದ ಪೋಗರಿನ ಪವರ್ ಮುಂದಿನ ದಿನಗಳಲ್ಲಿ ಯಾವರೀತಿ ಇರುತ್ತೆ ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here