Home Cinema ಅಬ್ಬಾ..!! ಅಪ್ಪು ಕೊನೆಗೂ ಕೊಟ್ರು ಲಕ್ಷಾಂತರ ಅಭಿಮಾನಿಗಳಿಗೆ ಸಿಹಿ ಸುದ್ದಿ..?! “ನಕಲಿ ಅಕೌಂಟ್‌ಗೇ ಮಿಲಿಯನ್ ಗಟ್ಟಲೆ...

ಅಬ್ಬಾ..!! ಅಪ್ಪು ಕೊನೆಗೂ ಕೊಟ್ರು ಲಕ್ಷಾಂತರ ಅಭಿಮಾನಿಗಳಿಗೆ ಸಿಹಿ ಸುದ್ದಿ..?! “ನಕಲಿ ಅಕೌಂಟ್‌ಗೇ ಮಿಲಿಯನ್ ಗಟ್ಟಲೆ ಫಾಲೋವರ್ಸ್, ಇನ್ನು ಅಪ್ಪು ಅಸಲಿ ಅಕೌಂಡ್ ಓಪನ್ ಮಾಡಿದ್ದಾರೆ”..?!

722
0
SHARE

ಪುನೀತ್ ರಾಜ್ ಕುಮಾರ್..ಅಭಿಮಾನಿಗಳ ಪ್ರೀತಿಯ ಅಪ್ಪು…ಡೊಡ್ಮನೆಯ ರಾಜರತ್ನ…ತಮ್ಮ ನಟನೆ ಹಾಗು ವ್ಯಕ್ತಿತ್ವದ ಮೂಲಕ ಸರಳತೆಯ ಸಾಮ್ರಾಟ ಎಂದೇ ಕರೆಸಿಕೊಳ್ಳೋ ಅಪ್ಪು ತಮ್ಮ ಅಭಿಮಾನಿ ಬಳಗಕ್ಕೆ ಸಿಹಿ ಸುದ್ದಿ ನೀಡಿದ್ದಾರೆ..ಅಭಿಮಾನಿಗಳ ಬಹುಕಾಲದ ಆಸೆಯನ್ನ ಈಡೇರಿಸಿದ್ದಾರೆ..ಎಸ್ ಪವರ್ ಸ್ಟಾರ್ ಪುನೀತ್ ಟ್ವಿಟ್ಟರ್ ಲೋಕಕ್ಕೆ ಪವರ್ ಪೂಲ್ ಎಂಟ್ರಿ ಕೊಟ್ಟಿದ್ದಾರೆ.

ಪವರ್ ಸ್ಟಾರ್ ಫೈನಲಿ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟಿದ್ದಾರೆ…ಆ ಮೂಲಕ ತಮ್ಮ ಅಭಿಮಾನಿಗಳ ಬಹುಕಾಲದ ಆಸೆ ಈಡೇರಿಸಿದ್ದಾರೆ ಅಪ್ಪು.. ಎಸ್,,,ಪವರ್ ಸ್ಟಾರ್ ಅಂದ್ರೆ ಸಾಕು ಡೊಡ್ಮನೆ ಬಳಗಕ್ಕೆ ಅದೇನೋ ವಿಶೇಷ ಪ್ರೀತಿ ಅಭಿಮಾನ.. ರಾಜರತ್ನನನ್ನ ಅತೀವವಾಗಿ ಪ್ರೀತಿಸೋ ಅಭಿಮಾನಿ ಬಳಗಕ್ಕೆ ಅಪ್ಪು ಮೇಲೆ ಒಂದು ಬೇಸರ ಇತ್ತು.. ಆ ಬೇಸರಕ್ಕೆ ಕಾರಣ ಅಪ್ಪು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿಲ್ಲ ಅನ್ನೋದು…

ಅಪ್ಪು ಸಿನಿಮಾಗಳ ಬಗ್ಗೆ ಅಪ್ ಡೇಟ್ ಸಿಗ್ತಿಲ್ಲ ಅನ್ನೋದು….ಆದ್ರೀಗ ಅಪ್ಪು ಟ್ವಿಟ್ಟರ್ ನಲ್ಲಿ ಖಾತೆ ತೆರೆಯೋದ್ರ ಮೂಲಕ ಅಭಿಮಾನಿಗಳ ಆಸೆ ಈಡೇರಿಸಿದ್ದಾರೆ..ಅಭಿಮಾನಬಳಗವನ್ನ ಖುಷಿ ಪಡಿಸಿದ್ದಾರೆ..ಅಭಿಮಾನಿಗಳ ಒತ್ತಾಯದ ಮೇಲೆ ಫೇಸ್ ಬುಕ್ ಖಾತೆ ತೆರೆದಿದ್ದ ಪವರ್ ಸ್ಟಾರ್ ಈಗ ಅದೇ ಅಭಿಮಾನಿಗಳ ಆಸೆಗೆ ಮಣಿದು ಅದೀಕೃತವಾಗಿ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿದ್ದಾರೆ..

ಅಪ್ಪು ಟ್ವಿಟ್ಟರ್ ನಲ್ಲಿ ಖಾತೆ ತೆರೆಯುತ್ತಿದ್ದಂತೆ ಅವ್ರ ಅಭಿಮಾನಿ ವಲಯ ಮುಗಿ ಬಿದ್ದು ಅಪ್ಪು ಟ್ವಿಟ್ಟರ್ ಖಾತೆಯನ್ನ ಫಾಲೋ ಮಾಡ್ತಿದ್ದು ಆರು ಸಾವಿರಕ್ಕು ಹೆಚ್ಚು ಜನ  ಪುನೀತ್ ರನ್ನ ಪಾಲೋ ಮಾಡ್ತಿದ್ದಾರೆ.. ಆದ್ರೆ ಅಪ್ಪು ಮಾತ್ರ ಇದುವರೆಗೂ ಯಾವುದೇ ಟ್ವೀಟ್ ಮಾಡಿಲ್ಲ.ಈ ಹಿಂದೆ ಅಪ್ಪು ಅಭಿಮಾನಿಯೊಬ್ಬ ಅಪ್ಪು ಹೆಸರಲ್ಲಿ ಫೇಕ್ ಟ್ವಿಟ್ಟರ್ ಅಕೌಂಟ್ ಕ್ರಿಯೇಟ್ ಮಾಡಿ ಎಲ್ರಿಗೂ ಯಾಮಾರಿಸಿದ್ದ…

ಇದನ್ನ ಕಂಡ ಪುನೀತ್ ಬಳಗ ಎದ್ವಾತದ್ವಾ ಖುಷಿ ಪಟ್ಟಿದ್ರು..ಪುನೀತ್ ಅಧೀಕೃತ ಖಾತೆ ಎಂದೇ ಎಲ್ಲರೂ ಫಾಲೋ ಮಾಡೋಕೆ ಶುರುವಿಟ್ಟುಕೊಂಡಿದ್ರು. ಆದ್ರೆ ಅದು ಯಾವಾಗ ಫೇಕ್ ಅಕೌಂಟ್ ಎಂದು ಗೊತ್ತಾಯ್ತೋ ಅಭಿಮಾನಿಗಳು ಭ್ರಮ ನಿರಸನ ಪಟ್ಟಿದ್ರು. ಪುನೀತ್ ಕೂಡ ಫೇಕ್ ಅಕೌಂಟ್ ಎಂದು ಸ್ಪಷ್ಟನೆ ಪಡಿಸಿದ್ರು..ಅಭಿಮಾನಿಯ ಈ ಹುಚ್ಚು  ಕೆಲಸಕ್ಕೆ ದೊಡ್ಮನೆ ಬಳಗ ಆಕ್ರೋಶಗೊಂಡಿತ್ತು..

ಆ ನಂತರ ಅಪ್ಪು ಹೆಸರಲ್ಲಿ ಫೇಕ್ ಅಕೌಂಟ್ ಸೃಷ್ಟಿಮಾಡಿದ್ದೇಕೆ ಎಂದು ಆತ ಸ್ಪಷ್ಟನೆ ನೀಡಿದ ಬಳಿಕ ಎಲ್ಲರೂ ಶಾಕ್ ಗೆ ಒಳಗಾಗಿದ್ರು..ಎಸ್..ಈ ಫೇಕ್ ಅಕೌಂಟ್ ನೋಡಿಯಾದ್ರು ಪುನೀತ್ ಟ್ವಿಟ್ಟರ್ ಅಕೌಂಟ್ ಒಪನ್ ಮಾಡ್ಲಿ ಅನ್ನೋದು ಆ ಅಭಿಮಾನಿಯ ಆಸೆಯಾಗಿತ್ತು. ಸೋ ಫೈನಲ್ಲಿ ಲಕ್ಷಾಂತರ ಅಭಿಮಾನಿಗಳ ಕೋರಿಕೆಗೆ ಮಣಿದಿದ್ದಾರೆ ಅಪ್ಪು.

ಪುನೀತ್ ಸೋಶಿಯಲ್ ಮೀಡೀಯಾದಲ್ಲಿ ಸಕ್ರಿಯರಾಗಿರಬೇಕು, ಟ್ವಿಟ್ಟರ್ ಗೆ ಕಾಲಿಡಬೇಕು ಅನ್ನೋದು ಅವ್ರ ಲಕ್ಷಾಂತರ ಅಭಿಮಾನಿಗಳ ಬಹುದಿನದ ಆಸೆ ಈಡೇರಿದೆ..ಇನ್ನು ಪುನೀತ್ ಇಲ್ಲಿ ವರೆಗೂ ಯಾವುದೇ ಟ್ವೀಟ್ ಮಾಡಿಲ್ಲ. ಯಾರನ್ನು ಫಾಲೋ ಕೂಡ ಮಾಡಿಲ್ಲ..ಸದ್ಯ ಈ ಕುತೂಹಲ ಎಲ್ಲರಲ್ಲೂ ಇದ್ದು, ಅವ್ರ ಮೊದಲ ಟ್ವೀಟ್ ಗಾಗಿ ಕಾದುಕುಳಿದ್ದಾರೆ ದೊಡ್ಮನೆ ಅಭಿಮಾನಿ ಬಳಗ.

LEAVE A REPLY

Please enter your comment!
Please enter your name here