Home Cinema ಅಬ್ಬಾ! ನಡು ಬೀದಿಗೆ ಬಂತು “ಗಂಡ ಹೆಂಡ್ತಿ” ಜಗಳ..! ನಟಿ ಸಂಜನಾ-ನಿರ್ದೇಶಕ ಶ್ರೀವತ್ಸ ನಡುವೆ ಕೆಸರೆರಚಾಟ..!!...

ಅಬ್ಬಾ! ನಡು ಬೀದಿಗೆ ಬಂತು “ಗಂಡ ಹೆಂಡ್ತಿ” ಜಗಳ..! ನಟಿ ಸಂಜನಾ-ನಿರ್ದೇಶಕ ಶ್ರೀವತ್ಸ ನಡುವೆ ಕೆಸರೆರಚಾಟ..!! ಹಾಟ್ ನಟಿ “Me Too” ಆರೋಪಗಳಿಗೆ ಡೈರೆಕ್ಟರ್ ತಿರುಗೇಟು..!?

904
0
SHARE

ಗಾಂಧಿನಗರದ ಗಂಡ ಹೆಂಡ್ತಿ ಜಗಳ ತಾರಕಕ್ಕೇರಿದೆ… ‘ಗಂಡ ಹೆಂಡತಿ’ ಸಿನಿಮಾದಲ್ಲಿ ವೇಳೆ ತಮಗೆ ಕೆಟ್ಟ ಅನುಭವ ಆಗಿದೆ ಎಂದು ಹಾಟ್ ನಟಿ ಎಂದೇ ಖ್ಯಾತಿ ಹೊಂದಿರೋ ಸಂಜನಾ ಮೀ ಟೂ ಅಭಿಮಾನಕ್ಕೆ ಸೇರಿಕೊಂಡಿದ್ದರು. ಈ ಸಿನಿಮಾ ಚಿತ್ರೀಕರಣದಲ್ಲಿ ಒಂದು ಕಿಸ್ ಸೀನ್ ಅಂತಾ ಹೇಳಿ 50 ಕಿಸ್ಸಿಂಗ್ ಸೀನ್ ಸೇರಿಸಿದ್ದಾರೆ.

ಚಿತ್ರದ ಅನೇಕ ದೃಶ್ಯಗಳಲ್ಲಿ ಅಶ್ಲಿಲವಾಗಿ ನನ್ನನ್ನು ತೋರಿಸಿದ್ದಾರೆ’ ಎಂದು ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ಮೇಲೆ ಸಂಜನಾ ಆರೋಪ ಮಾಡಿದ್ದರು.ಇದೀಗ ಸ್ಯಾಂಡಲ್ ವುಡ್ ನ ಡೆಡ್ಲಿ ಡೈರೆಕ್ಟರ್ ರವಿ ಶ್ರೀವತ್ಸ ಈಗ ಸಿಡಿದೆದ್ದಿದ್ದಾರೆ. ಇಂದು ಸುದ್ದಿಗೋಷ್ಠಿ ನಡೆಸಿ ರವಿ ಶ್ರೀವತ್ಸ ಅವರು ನಟಿ ಸಂಜನಾ ಮಾಡಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದರು.

ಮರ್ಡರ್’ ಸಿನಿಮಾ ರಿಮೇಕ್ ಅಂತ ತಿಳಿದಿರಲಿಲ್ಲವೆ?:ಚಿತ್ರದಲ್ಲಿ ಒಂದು ಕಿಸ್ ಅಂತ ಮಾತ್ರ ಹೇಳಿದ್ದರು ಎಂದು ಸಂಜನಾ ಆರೋಪ ಮಾಡಿದ್ದಾರೆ. ಆದ್ರೆ ಅದು ಸುಳ್ಳು ಎಂದು ಶ್ರೀವತ್ಸ ಹೇಳಿದ್ದಾರೆ. ಸಂಜನಾಳನ್ನು ಚಿತ್ರಕ್ಕೆ ಆಯ್ಕೆ ಮಾಡಿದ ತಕ್ಷಣ ಆಕೆಗೆ ಹಿಂದಿಯ ಮರ್ಡರ್ ಚಿತ್ರವನ್ನು ಡಿವಿಡಿ ಪ್ಲೈಯರ್ ನಲ್ಲಿ ತೋರಿಸಲಾಗಿತ್ತು. ಆಕೆಗೆ ಆಗ ಅನಿಸಲಿಲ್ಲವೇ ಚಿತ್ರದಲ್ಲಿ ಕಿಸ್ಸಿಂಗ್ ದೃಶ್ಯಗಳು ಇರುತ್ತದೆ ಎಂದು ಶ್ರೀವತ್ಸ ಪ್ರಶ್ನಿಸಿದ್ದಾರೆ.

ರಾತ್ರಿ ಪೂರ ಶಾಪಿಂಗ್ ಮಾಡುತ್ತಿದ್ದರು!:ಬ್ಯಾಂಕಾಕ್ ಗೆ ಹೋಗಿದ್ದಾಗ ರಾತ್ರಿ ಪೂರ ಶಾಪಿಂಗ್ ಮಾಡುತ್ತಿದ್ದರು. ಬೆಳಗ್ಗೆ ಶೂಟಿಂಗ್ ಮಾಡುವಾಗ ಕಣ್ಣು ಪೂರ ಕೆಂಪಾಗಿ ಇರುತ್ತಿತ್ತು. ಆ ರೀತಿ ಇರುವಾಗ ಹೇಗೆ ಶೂಟಿಂಗ್ ಮಾಡಲು ಸಾಧ್ಯ. ಈ ರೀತಿ ಮಾಡಿದಾಗ ನಿರ್ದೇಶಕ ಬೈಯುವುದು ತಪ್ಪೇ ಎಂದು ಶ್ರೀವತ್ಸ ಸಂಜನಾ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

16 ವರ್ಷ ಹೇಗೆ ಆಯ್ತು?:ಸಂಜನಾ ಗಂಡ-ಹೆಂಡತಿ ಚಿತ್ರವನ್ನು ಮಾಡುವಾಗ ತನಗೆ 16 ವರ್ಷವಾಗಿತ್ತು. ಹೆದರಿಸಿ, ಬೆದರಿಸಿ ನನ್ನ ಕೈಯಲ್ಲಿ ಚುಂಬನ ದೃಶ್ಯಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ರೆ ಆಕೆಯ ಮಾತುಗಳು ಸತ್ಯಕ್ಕೆ ದೂರವಾಗಿವೆ. ಸಂಜನಾ ನನ್ನ ಚಿತ್ರದಲ್ಲಿ ನಟಿಸುವುದಕ್ಕೂ ಮುನ್ನ ನಾಲ್ಕೈದು ಚಿತ್ರಗಳಲ್ಲಿ ನಟಿಸಿದ್ದು ಆಕೆಗೆ ಚಿತ್ರರಂಗದ ಆಳ ಗೊತ್ತಿರಲಿಲ್ಲವೇ ಎಂದು ಶ್ರೀವತ್ಸ ಕಿಡಿಕಾರಿದ್ದಾರೆ.

ಸಂಜನಾ ಶ್ರೀಮಂತಳಾಗಿದ್ದು ಹೇಗೆ?:ಕೆಲವೇ ಕೆಲವು ಸಿನಿಮಾದಲ್ಲಿ ನಟಿಸಿರೋ ಸಂಜನಾ ಕೋಟಿ ಕೋಟಿ ಆಸ್ತಿ ಸಂಪಾದನೆ ಮಾಡಿದ್ದು ಹೇಗೆ ಎಂದು ಶ್ರೀವತ್ಸ ಪ್ರಶ್ನಿಸಿದ್ದಾರೆ.. ಐಷಾರಾಮಿ ಕಾರು, ಬಂಗಲೆಗಳು ಎಲ್ಲಿಂದ ಬಂತು… ಅವರ ಆದಾಯದ ಮೂಲ ಯಾವುದು ಎಂದು ಶ್ರೀವತ್ಸ ಕೇಳಿದ್ದಾರೆ.ಇದೇ ವೇಳೆ, ರಾಜಸಿಂಹ ಚಿತ್ರದಲ್ಲಿ ಅನಿರುದ್ ಜೊತೆ ಸಂಜನಾ ಎದೆಗಾರಿಕೆ ತೋರಿದ್ದರಲ್ಲಾ, ಆವಾಗ ಆಕೆಗೆ ಎಷ್ಟು ವಯಸ್ಸಾಗಿತ್ತು ಎಂದು ಶ್ರೀವತ್ಸ ವ್ಯಂಗ್ಯವಾಡಿದ್ದಾರೆ.

LEAVE A REPLY

Please enter your comment!
Please enter your name here