Home Cinema ಅಭಿಮಾನಿಗಳಿಗಾಗಿ ಪ್ರಜಾಕೀಯ ಬಿಡ್ತಾರಾ ಉಪೇಂದ್ರ..!? ಪ್ರಜಾಕೀಯದ ಕನಸು ಬದಿಗಿಟ್ರಾ ಉಪೇಂದ್ರ..!? ಅಭಿಮಾನಿಗಳ ಪ್ರೀತಿಗೆ ತಲೆಬಾಗಿದ ರಿಯಲ್...

ಅಭಿಮಾನಿಗಳಿಗಾಗಿ ಪ್ರಜಾಕೀಯ ಬಿಡ್ತಾರಾ ಉಪೇಂದ್ರ..!? ಪ್ರಜಾಕೀಯದ ಕನಸು ಬದಿಗಿಟ್ರಾ ಉಪೇಂದ್ರ..!? ಅಭಿಮಾನಿಗಳ ಪ್ರೀತಿಗೆ ತಲೆಬಾಗಿದ ರಿಯಲ್ ಸ್ಟಾರ್..!

2750
0
SHARE


ಉಪೇಂದ್ರ.. ಚಂದನವನದ ರಿಯಲ್ ಸ್ಟಾರ್. ಅಭಿಮಾನಿಗಳ ಪಾಲಿನ ಬುದ್ದಿವಂತ. ಇಷ್ಟೇ ಅಲ್ಲ ರಿಯಲ್ ಪ್ರಜಾಕಾರಣಿ. ಕಳೆದೊಂದುವರೆ ವರ್ಷದಿಂದ ಮೂರೊತ್ತು ಪ್ರಜಾಕೀಯದ ಧ್ಯಾನವನ್ನ ಮಾಡ್ತಿರುವ ಉಪ್ಪಿ ಇದೀಗ ತಮ್ಮ ಕನಸು ಪ್ರಜಾಕೀಯಕ್ಕೆ ಫುಲ್ ಸ್ಟಾಫ್ ಇಡಲು ನಿರ್ಧರಿಸಿದ್ದಾರೆ. ಹೀಗೊಂದು ಮಾತು ಇದೀಗ ಕತ್ರಿಗುಪ್ಪೆ ಕಾಲನಿಗಳಲ್ಲಿ ಕೇಳಿ ಬರ‍್ತಿದೆ. ಇದಕ್ಕೆ ಕಾರಣ.. ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂದು ಒಂದ್ಕಾಲದಲ್ಲಿ ಹಾಡಿ ಹೊಗಳಿದ್ದ ಇದೇ ರಿಯಲ್ ಅಭಿಮಾನಿಗಳು.

ಹೌದು, ಉಪ್ಪಿ ಅಭಿಮಾನಿಗಳಿಗೀಗ ಉಪ್ಪು ರುಚಿಸುತ್ತಿಲ್ಲ. ಹಾಗಾಗೇ, ಪ್ರಶ್ನೆ ಮಾಡಲು ಶುರುವಿಟ್ಟುಕೊಂಡಿದ್ದಾರೆ ಅಭಿಮಾನಿಗಳು. ಅಷ್ಟಕ್ಕೂ ಉಪ್ಪಿಯ ಅಬಲಿಟಿಯನ್ನೇ ಅಭಿಮಾನಿಗಳು ಪ್ರಶ್ನೆ ಮಾಡ್ತಿರೋದೇಕೆ. ಹೀಗೊಂದು ಪ್ರಶ್ನೆಗುತ್ತರವಾಗಿ ಕಾಣ್ಸೋದೇ ಕೆ.ಜಿ.ಎಫ್.ಯಸ್, ಕೆ.ಜಿ.ಎಫ್ ಇದೊಂದು ಸಿನಿಮಾ ಉಪ್ಪಿ ಕನಸಿನ ಪ್ರಜಾಕೀಯಕ್ಕೆ ಅಡ್ಡಾಗಿ ಬಂದಿದೆ. ನಿಮಗೆ ಗೊತ್ತಿರಲಿ ಪ್ರಶಾಂತ್ ನೀಲ್ ನಿರ್ದೇಶನದ ಕೆ.ಜಿ.ಎಫ್ ಕಂಡು.. ಭಾರತೀಯ ಚಿತ್ರರಂಗವೇ ಹೌಹಾರಿದೆ. ಕನ್ನಡ ಚಿತ್ರರಂಗದತ್ತ ತಿರುಗಿ ನೋಡಿದೆ. ಭರ್ತಿ ಐದು ಭಾಷೆಗಳಲ್ಲಿ ಬರಲಿರುವ ಕೆ.ಜಿ.ಎಫ್ ಕನ್ನಡದ ಕೀರ್ತಿ ಪತಾಕೆಯನ್ನ ದೇಶದ ಉದ್ದಗಲಕ್ಕೂ ಹಾರಿಸಿದೆ.

ಕನ್ನಡ ಚಿತ್ರರಂಗದ ಬಗ್ಗೆ ಇವತ್ತು ರಾಷ್ಟ್ರ ಮಟ್ಟದಲ್ಲಿ ಮಾತನಾಡುವಂತೆ ಮಾಡಿದ ಕೆ.ಜಿ.ಎಫ್, ಕನ್ನಡಿಗರ ಹೆಮ್ಮೆಗೂ ಕಾರಣವಾಗಿದೆ. ಹೀಗಿರುವಾಗ್ಲೇ.. ಉಪ್ಪಿ ಅಭಿಮಾನಿಗಳೂ ತಮ್ಮ ದೇವರು ಉಪ್ಪಿಗೆ ಪ್ರಶ್ನೆ ಕೇಳಲು ಶುರುವಿಟ್ಟುಕೊಂಡಿದ್ದಾರೆ. ಪ್ರಶಾಂತ್ ನೀಲ್‌ರಿಂದ ನೋಡಿ ಏನಾದ್ರೂ ಕಲಿತರಾ, ಇಲ್ಲಾ ರಿಮೇಕ್ ಸಿನಿಮಾಗಳಲ್ಲೇ ನಿಮಗೆ ತೃಪ್ತಿ ಸಿಗ್ತಿದೆಯಾ ಅನ್ನಲು ಶುರುವಿಟ್ಟುಕೊಂಡಿದ್ದಾರೆ. ಇದನ್ನ ನೋಡಿದ ಅಭಿಮಾನಿಯೊಬ್ಬ ’ಸಿನಿಮಾ ಹೇಗೆ ಮಾಡಬೇಕು ಎಂದು ತೋರಿಸುವ ಮೂಲಕ ಇಡೀ ಭಾರತದ ಗಮನ ಸೆಳೆದಿರುವ ಪ್ರಶಾಂತ್ ನೀಲ್ ಮತ್ತು ತಂಡದಿಂದ ನೀವು ಏನಾದರು ಕಲಿತುಕೊಂಡ್ರಾ.? ನಿಮಗೆ ಇದೆಲ್ಲಾ ಬೇಡ ಬಿಡಿ.

ಯಾಕಂದ್ರೆ, ನೀವು ಅಂದುಕೊಂಡಿದ್ದೀರಾ, ಇದೆಲ್ಲಾ ನಾನು ಆಗಲೇ ಮಾಡಿಬಿಟ್ಟಿದ್ದೀನಿ ಅಂತ. ಸತ್ಯ ಏನಪ್ಪಾ ಅಂದ್ರೆ, ಅಭಿಮಾನಿಗಳ ಬಗ್ಗೆ ಯೋಚನೆ ಮಾಡದೇ ನೀವು ಬರಿ ರೀಮೇಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೀರಾ.ಯಸ್, ಇದು.. ಅಭಿಮಾನಿಯೊಬ್ಬ ಉಪ್ಪಿಗೆ ಕೇಳಿದ ಪ್ರಶ್ನೆ. ತನ್ನ ಅಸಹನೆ ಅಸಮಾಧಾನವನ್ನ ಸಮಸ್ತ ರಿಯಲ್ ಸ್ಟಾರ್ ಫ್ಯಾನ್ಸ್ ಪರವಾಗಿ ಹೊರ ಹಾಕಿದ ಅಭಿಮಾನಿ, ಉಪ್ಪಿಯ ರಿಮೇಕ್ ಆಯ್ಕೆ ಬಗ್ಗೆಯೂ ಪ್ರಶ್ನೆಮಾಡಿದ್ದಾರೆ. ಬಹುಶ, ಇದೇ ಕಾರಣಕ್ಕೋ ಏನೋ.. ಅಭಿಮಾನಿಯ ಇದೇ ಪ್ರಶ್ನೆಗೆ ಉತ್ತರಿಸಿರುವ ಉಪೇಂದ್ರ ನಾನು ನಾನಲ್ಲ, ನಿಮ್ಮಿಂದ ನಾನು ಅಂಥ ಥೇಟ್ ಉಪೇಂದ್ರ ಸಿನಿಮಾದಲ್ಲಿನ ನಾನು ಪಾತ್ರದಂತೆ ಡೈಲಾಗ್ ಹೊಡೆದಿದ್ದಾರೆ.

’ನಾನು ನನಗೋಸ್ಕರ ಮಾಡಿದ್ರೆ ನಾನೊಬ್ಬ ಅತ್ಯುತ್ತಮ ನಟ, ನಿರ್ದೇಶಕ ಮತ್ತು ಸೂಪರ್ ಸ್ಟಾರ್ ಹಾಗೂ ಎಲ್ಲರಿಗಿಂತ ಉತ್ತಮ. ಆದ್ರೆ, ಆಕಸ್ಮಾತ್ ಆಗಿ ನಾನು ಬೇರೆಯವರಿಗಾಗಿ (ನಿಮಗಾಗಿ) ಬದುಕ್ತಿದ್ದೀನಿ. (ಸದಾ ನಾನು ಯಾವಾಗಲೂ ಬೇರೆಯವರ ಸಾಧನೆ ಮತ್ತು ಖುಷಿಯನ್ನ ಎದುರು ನೋಡುತ್ತೇನೆ) ಅದಕ್ಕಾಗಿಯೇ ಪ್ರಜಾಕೀಯ”. ಬೇರೆಯವ್ರಿಗಾಗಿ ಬದುಕುತ್ತಿದ್ದೇನೆ. ಸಾಧನೆ ಖುಷಿ ಎದುರು ನೋಡ್ತಿದ್ದೇನೆ. ಅಂದ ಉಪ್ಪಿ, ಇದೇ ಉತ್ತರ ಅಭಿಮಾನಿಗಳ ಅಸಮಾಧಾನ ಹೆಚ್ಚಿಸಿದೆ. ಇದಕ್ಕೆ ಕಾರಣ.. ಉಪೇಂದ್ರ ಉತ್ತರ ಕೊಡುವಾಗ ಬಳಿಸಿದ ಆಕಸ್ಮಾತ್ ಪದ. ಹಾಗಾಗೇ, ಉಪ್ಪಿಯನ್ನ ಬಿಡದ ಅಭಿಮಾನಿ ರಾಜಕೀಯಕ್ಕೆ ಹೋಗುವಂತೆ ಒತ್ತಾಯ ಮಾಡಿದ್ಯಾರು ಸ್ವಾಮಿ ಅನ್ನುವ ಪ್ರಶ್ನೆ ಕೇಳಿದ್ದಾನೆ.

ಬಾಸ್ ಒಂದು ಮಾತು ಹೇಳಿ, ನೀವು ಯಾಕೆ ಆಕಸ್ಮಾತ್ ಪದ ಬಳಿಸಿದ್ದೀರಾ. ನಾವು ನಿಮ್ಮನ್ನ ರಾಜಕೀಯಕ್ಕೆ ಬರುವಂತೆ ಒತ್ತಾಯ ಮಾಡಿಲ್ಲ. ನಮ್ಮನ್ನ ಹೇಗೆ ಅಪರಾಧಿ ಮಾಡ್ತೀರಾ. ಇದು ನಿಮ್ಮ ಆಯ್ಕೆ ಆದ್ರೆ, ಆಕಸ್ಮಾತ್ ಪದ ಬಳಸುತ್ತಿದ್ದೀರಾ”. ’ಉಪೇಂದ್ರ ಅವರು ರೀಮೇಕ್ ಮಾಡೋದು ಬಿಡಲ್ಲ, ಡೈರೆಕ್ಷನ್ ಮಾಡಲ್ಲ, ಒಳ್ಳೆಯ ಸ್ಕ್ರಿಪ್ಟ್ ಆಯ್ಕೆ ಮಾಡಲ್ಲ. ಯಾಕಂದ್ರೆ, ಅವರು ನಮ್ಮ ಬಗ್ಗೆ ಯೋಚನೆ ಮಾಡಲ್ಲ. ಥ್ಯಾಂಕ್ ಯೂ ಬಾಸ್”.ಅಭಿಮಾನಿಯ ಇದೇ ಆಕ್ರೋಶದ ನುಡಿ, ಬಹುಶ ಉಪ್ಪಿಯ ಆತ್ಮವಿಶ್ವಾಸವನ್ನೇ ಅಲ್ಲಾಡಿಸಿದಂಗಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ಮಾತನಾಡಿರುವ ಉಪೇಂದ್ರ ದಯವಿಟ್ಟು ಹೀಗೆಲ್ಲಾ ಮಾತನಾಡಬೇಡಿ ಅಂದಿದ್ದಾರೆ. ನಿಮಗೆ ಇಷ್ಟವಿಲ್ಲದಿದ್ದರೆ ಪ್ರಜಾಕೀಯಕ್ಕೆ ಫುಲ್ ಸ್ಟಾಫ್ ಇಡ್ತೀನಿ ಅಂದಿದ್ದಾರೆ.ದಯವಿಟ್ಟು ಹೀಗೆಲ್ಲಾ ಮಾತನಾಡಬೇಡಿ. ಅಭಿಮಾನಿಗಳು ಪ್ರಜಾಕೀಯ ಮಾಡೋದು ಬೇಡ, ಡೈರೆಕ್ಷನ್ ಮಾಡಿ’ ಅಂದ್ರೆ ನಾನು ಅದನ್ನೇ ಮಾಡ್ತೀನಿ.

ಉಪ್ಪಿ ಕೊಟ್ಟ ಇದೇ ಉತ್ತರ ಇದೀಗ, ಇನ್ನೊಂದು ಹಂತದ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದೆ. ಅಷ್ಟೇ ಅಲ್ಲ ಕೆಲ ಅಭಿಮಾನಿಗಳ ಆತಂಕಕ್ಕೂ ಕಾರಣವಾಗಿದೆ. ರಿಯಲ್ ಸ್ಟಾರ್ ರಿಯಲ್ ಪ್ರಜಾಕಾರಣಿ ಅನಿಸಿಕೊಳ್ಳುವ ಮೊದಲೇ ಶಸ್ತ್ರತ್ಯಾಗ ಮಾಡಲು ಸಿದ್ಧವಾಗಿ ಬಿಟ್ರಾ ಅನ್ನುವ ಅನುಮಾನಕ್ಕೂ ಕಾರಣವಾಗಿದೆ ಉಪ್ಪಿಯ ಉತ್ತರ…ಸದ್ಯ ಉಪೇಂದ್ರ ಹೇಳಿದಂತೆ, ಅಭಿಮಾನಿಗಳ ಒತ್ತಾಸೆಗಾಗಿ ನಿಜವಾಗ್ಲೂ ಪ್ರಜಾಕೀಯ ಬಿಟ್ಟು ಮತ್ತೆ ಸಿನಿಕೀಯವನ್ನ ಶುರು ಮಾಡ್ತಾರಾ..? ಅಪ್ಪಿ ತಪ್ಪಿ ಇದು ನಿಜವೇ ಆದಲ್ಲಿ ಇನ್ನೆಲ್ಲಿಯ ಬದಲಾವಣೆ ನಿರೀಕ್ಷೆ.. ಯಾರಿಂದ ನಿರೀಕ್ಷೆ ಇದಕ್ಕುತ್ತರ, ಉಪೇಂದ್ರ ಅವ್ರೇ ನೀಡಬೇಕು.

LEAVE A REPLY

Please enter your comment!
Please enter your name here