Home Cinema ಅಮೀರ್ ಖಾನ್ ಡ್ರೀಮ್ ಪ್ರಾಜೆಕ್ಟ್‌ಗೆ ಮಿಸ್ಟರ್ ಪರ್ಫೆಕ್ಟ್ ಪ್ರಭಾಸ್‌ಗೆ ಹಾಕಿದ್ರು ಅಮೀರ್ ಗಾಳ..?! 1000 ಕೋಟಿ...

ಅಮೀರ್ ಖಾನ್ ಡ್ರೀಮ್ ಪ್ರಾಜೆಕ್ಟ್‌ಗೆ ಮಿಸ್ಟರ್ ಪರ್ಫೆಕ್ಟ್ ಪ್ರಭಾಸ್‌ಗೆ ಹಾಕಿದ್ರು ಅಮೀರ್ ಗಾಳ..?! 1000 ಕೋಟಿ ಬಿಗ್ ಬಜೆಟ್‌ಗೆ ನಾಂದಿ ಈ “ಮಹಾಭಾರತ”…

3037
0
SHARE

ಮಹಾಭಾರತ… ಬಾಲಿವುಡ್ ನಲ್ಲಿ ಸೆಟ್ಟೇರುತ್ತಿರುವ ಬಿಗ್ ಬಜೆಟ್ ಚಿತ್ರ …ಸೌತ್ ಸಿನಿ ದುನಿಯಾದಲ್ಲಿ ಬಾಹುಬಲಿ ನಂತ ಐತಿಹಾಸಿಕ ಚಿತ್ರಗಳು ಸೆಟ್ಟೇರಿ ವಲ್ಡ್ ವೈಡ್  ಸಖತ್ ಸುದ್ದಿ  ಸದ್ದು ಮಾಡೋದ್ರ ಜೊತೆ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಇದು ಬಿ ಟೌನ್ ಮಿಸ್ಟರ್ ಪರ್ಫೆಕ್ಟ್  ಆಮೀರ್ ನಿದ್ದೆ ಗೆಡಿಸಿತ್ತು. ಸೋ ಬಿ ಟೌನ್ ನಲ್ಲಿ  ಇಂತಹದ್ದೊಂದು ಐತಿಹಾಸಿಕ ಚಿತ್ರ ತೆಗಿಯಬೇಕು ಎಂಬ  ಅವ್ರ  ಕನಸಿಗೆ ಅಂದೇ ಅಂಕುಶ ಹಾಕಿದ್ರು ಅಮೀರ್.

ಮಹಾಭಾರತ ಬಿ ಟೌನ್ ನಲ್ಲಿ  ಸಖತ್ ಸುದ್ದಿ ಮಾಡ್ತಿರುವ ಚಿತ್ರ…ಮಿಸ್ಟರ್ ಪರ್ಫೆಕ್ಟ್ ಡ್ರೀಮ್ ಪ್ರಾಜೆಕ್ಟ್ ಮಹಾಭಾರತ.…ಈಗಾಗಲೇ ಮಹಾಭಾರತ ಚಿತ್ರದ  ಪ್ರಿ ಪ್ರೊಡಕ್ಷನ್ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ…ಬಿಟೌನ್ ನಲ್ಲಿ ಸಿದ್ದವಾಗುತ್ತಿರುವ ಮೆಗಾ ಬಜೆಟ್ ಚಿತ್ರ ಇದು..ಎಸ್, 1000 ಕೋಟಿ ಬಜೆಟ್ ನಲ್ಲಿ ಸೆಟ್ಟೇರುತ್ತಿರುವ ಬಿಟೌನ್ ನ ಮೊದಲ ಚಿತ್ರ ಎಂಬ ಖ್ಯಾತಿ ಈ ಚಿತ್ರಕ್ಕಿದೆ..ಸದ್ಯ ಅಮೀರ್ ಮಹಾಭಾರತ ಚಿತ್ರದ ಕೆಲಸದಲ್ಲಿ ತಲ್ಲೀನರಾಗಿದ್ದು,..ಪಾತ್ರಕ್ಕಾಗಿ ತಯಾರಿ ನಡೆಸುತ್ತಿರುವ ಬೆನ್ನಲ್ಲೆ ಆಮೀರ್ ಕಲಾವಿದರ ಆಯ್ಕೆಯಲ್ಲಿಯೂ ಬ್ಯುಸಿಯಾಗಿದ್ದಾರೆ..

ಅಮೀರ್ ತಮ್ಮ ಡ್ರೀಮ್ ಪ್ರಾಜೆಕ್ಟ್ ಗೆ ಘಟಾನುಘಟಿ ನಾಯಕರನ್ನು ಕರೆತರಲು ಮೂಮದಾಗಿದ್ದಾರೆ.. ಈ ಬಗ್ಗೆ  ಚಿಂತನೆ ನಡೆಸುತ್ತಿರೋ ಮಿಸ್ಟರ್ ಪರ್ಫೆಕ್ಟ್ ತಮ್ಮ ಮೊದಲ ಆಮಂತ್ರಣವನ್ನ  ಸೌತ್ ಸಿನಿ ದುನಿಯಾದ ಡಾರ್ಲಿಂಗ್ ಎಂದೇ ಖ್ಯಾತಿ ಪ್ರಭಾಸ್ ಗೆ ನೀಡಿದ್ದಾರೆ.. ಎಸ್..ಮಹಾಭಾತರದಲ್ಲಿ ನಟಿಸುವಂತೆ ಆಮೀರ್ ಬಾಹುಬಲಿ ಖ್ಯಾತಿ ಯ ಪ್ರಬಾಸ್ ಗೆ ಆಪರ್ ನೀಡಿದ್ದಾರೆ.. ಈ ಬಗ್ಗೆ ಡಾರ್ಲಿಂ ಗ್ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ… ಬಾಹುಬಲಿ ಮೂಲಕ ವಲ್ಡ್ ವೈಡ್ ಅಭಿಮಾನಿ ಬಳಗ ಹೊಂದಿರುವ, ಖ್ಯಾತಿಗಳಿಸಿರುವ ಪ್ರಭಾಸ್ ಮೇಲೆ ಆಮೀರ್ ಕಣ್ಣು ಬಿದ್ದಿದ್ದು, ಈಗಾಗಲೇ ಡಾರ್ಲಿಂಗ್ ರನ್ನ ಸಂಪರ್ಕ ಮಾಡಿದ್ದಾರೆ ಎನ್ನಲಾಗ್ತಿದೆ.. ಹೀಗೊಂದು ಸುದ್ದಿ ಈಗ ಬಿ ಟೌನ್ ಅಂಗಳಲ್ಲಿ ಬೇಜಾನ್ ಸದ್ದು ಮಾಡ್ತಿದೆ.

ಅಷ್ಟೇ ಅಲ್ಲ,  ತಮ್ಮ ಡ್ರೀಮ್ ಪ್ರಾಜೆಕ್ಟ್ ನಲ್ಲಿ ಅಮೀರ್ ಪ್ರಭಾಸ್ ಗೆ ಅರ್ಜುನನ ಪಾತ್ರವನ್ನ ಕೊಡಲು ನಿರ್ದಾರ ಮಾಡಿದ್ದಾರೆ ಎಂಬ ಸುದ್ದಿಯೂ ಚಾಲ್ತಿ ಯಲ್ಲಿದೆ..…ಚಿತ್ರದಲ್ಲಿ ಮಿಸ್ಟರ್ ಪರ್ಫೆಕ್ಟ್  ಎರಡೂ ಪಾತ್ರವನ್ನ ನಿಭಾಯಿಸಿಲಿದ್ದು, ಕೃಷ್ಣ ಹಾಗು ಕರ್ಣ ಎರಡೂ ಪಾತ್ರಕ್ಕೆ ಅಮಿರ್ ಖಾನ್ ಬಣ್ಣ  ಹಚ್ಚುತ್ತಿದ್ದಾರೆ ಅನ್ನೋದು ಸದ್ಯ ಬಿ ಟೌನ್ ಅಂಗಳದಲ್ಲಿ ಕೇಳಿ ಬರ್ತಿರೊ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ.

ಇನ್ನು  ಈ ಮೆಗಾ ಬಜೆಟ ಚಿತ್ರಕ್ಕೆ  ರಿಲಾಯನ್ಸ್ ಸಹಬಾಗಿತ್ವದಲ್ಲಿ ಅಮೀರ್ ಕೂಡ ನಿರ್ಮಾಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ…  ಮಹಾಭಾರತವನ್ನ ಐದು ಭಾಗಗಳಾಗಿ ತೆರೆ ಮೇಲೆ  ತರಲು ಅಮೀರ್ ಪ್ಲ್ಯಾನ್ ಮಾಡಿಕೊಂಡಿದ್ದು, ಮೊದಲ ಭಾಗಕ್ಕೆ ಸಿಕ್ರೇಟ್ ಸೂಪರ್ ಸ್ಟಾರ್ ಖ್ಯಾತಿಯ ಅದ್ವೈತ್ ಚಂದನ್  ಆಕ್ಷನ್ ಕಟ್ ಹೇಳಲಿದ್ದು, ಉಳಿದ ನಾಲ್ಕು ಭಾಗಗಳಿಗೆ ಸ್ವತಃ ಅಮೀರ್ ಖಾನ್ ಆಕ್ಷನ್ ಕಟ್ ಹೇಳಲು ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ.

ಒಂದು ವೇಳೆ ಪ್ರಭಾಸ್ ಆಮೀರ್ ಆಮಂತ್ರಣಕ್ಕೆ ಒಪ್ಪಿಕೊಂಡ್ರೆ, ಮಹಾಭಾರತ ಚಿತ್ರಕ್ಕೆ ಹೊಸ ಕಳೆ ಬಂದಂತಾಗುತ್ತದೆ.  ಸದ್ಯ ಪ್ರಬಾಸ್ ಸಾಹೋ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ, ಇತ್ತ ಆಮೀರ್ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿ, ಮಹಾಭಾರತ ಚಿತ್ರದತ್ತ ತಮ್ಮ ದೃಷ್ಟಿ ನೆಟ್ಟಿದ್ದಾರೆ. ಮುಂದಿನ ದಿನಗಳಲ್ಲಿ  ಬಿ ಟೌನ್ ನಮೆಗಾ ಬಜೆಟ್ ಚಿತ್ರಕ್ಕೆ ಇನ್ನು ಯಾವ್ಯಾವ ಘಟಾನುಘಟಿಗಳು ಸೇರಿಕೊಳ್ಳಲಿದ್ದಾರೆ ಅನ್ನೋದನ್ನ ಕಾದು ನೋಡ್ಬೇಕಿದೆ.

LEAVE A REPLY

Please enter your comment!
Please enter your name here