ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ: ನಾಲ್ವರು ಬಲಿ, ಆರೋಪಿ ಪರಾರಿ

ಅಂತರಾಷ್ಟ್ರೀಯ

ವಾಷಿಂಗ್ಟನ್: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ ನಡೆದಿದೆ. ಗುಂಡೇಟಿಗೆ ನಾಲ್ವರು ಅಮಾಯಕ ಜೀವಗಳು ಬಲಿಯಾಗಿದ್ದು ಓಹಿಯೋದ ಬಟ್ಲರ್ ಟೌನ್‍ಶಿಪ್‍ನಲ್ಲಿ ಘಟನೆ ನಡೆದಿದೆ. ಸದ್ಯ ಪೊಲೀಸರು ಆರೋಪಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಗುಂಡಿನ ದಾಳಿ ನಡೆಸಿದ ಬಳಿಕ ಆರೋಪಿ ಸ್ಟೀಫನ್ ಮಾರ್ಲೋನ ಎಸ್ಕೇಪ್ ಆಗಿದ್ದಾನೆ. ಡೇಟನ್‍ನ ಉತ್ತರದಲ್ಲಿರುವ ಸಣ್ಣ ಓಹಿಯೋ ಪಟ್ಟಣದಲ್ಲಿ ಗುಂಡಿನ ದಾಳಿ ನಡೆದಿದೆ. ಆರೋಪಿ ಸ್ಟೀಫನ್ ಮಾರ್ಲೋನ್ ಅಪಾಯಕಾರಿ ಆಯುಧಗಳನ್ನು ಇಟ್ಟುಕೊಂಡಿದ್ದು, ಯಾವ ಉದ್ದೇಶಕ್ಕೆ ಗುಂಡಿನ ದಾಳಿ ಮಾಡುತ್ತಿದ್ದಾನೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬಟ್ಲರ್ ಟೌನ್‍ಶಿಪ್ ಪೊಲೀಸ್ ಮುಖ್ಯಸ್ಥ ಜಾನ್ ಪೋರ್ಟರ್ ಹೇಳಿದ್ದಾರೆ.

 

ಮಾರ್ಲೋ ಓಹಿಯೋದಿಂದ ಪಲಾಯನ ಮಾಡಿದ್ದಾನೆ. ಆತ ಲೆಕ್ಸಿಂಗ್ಟನ್, ಕೆಂಟುಕಿ, ಇಂಡಿಯಾನಾಪೊಲಿಸ್ ಮತ್ತು ಚಿಕಾಗೋದೊಂದಿಗೆ ಸಂಬಂಧವನ್ನು ಹೊಂದಿದ್ದಾನೆ. ಪ್ರಸ್ತುತ ಆತನ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಈ ಸುತ್ತಮುತ್ತ ಇದೇ ಮೊದಲ ಹಿಂಸಾತ್ಮಕ ಕೃತ್ಯ ನಡೆದಿದೆ ಎಂದು ಜಾನ್ ಪೋರ್ಟರ್ ತಿಳಿಸಿದ್ದಾರೆ.

Leave a Reply

Your email address will not be published.