Home Home ಅಯೋಧ್ಯೆಯ ಮಹಾ ಆಂದೋಲನಕ್ಕೆ ಅಡ್ವಾಣಿ ಅವರಿಗೆ ಸೋಮನಾಥ ದೇವಾಲಯದ ಹೋರಾಟವೇ ಸ್ಫೂರ್ತಿ ….?

ಅಯೋಧ್ಯೆಯ ಮಹಾ ಆಂದೋಲನಕ್ಕೆ ಅಡ್ವಾಣಿ ಅವರಿಗೆ ಸೋಮನಾಥ ದೇವಾಲಯದ ಹೋರಾಟವೇ ಸ್ಫೂರ್ತಿ ….?

891
0
SHARE

ಲಾಲ್ ಕೃಷ್ಣ ಅಡ್ವಾಣಿ ಮಾಜಿ ಉಪ ಪ್ರಧಾನಿ ಅಯೋಧ್ಯಾ ಮಹಾ ಆಂದೋಲನದ ಮುಂದಾಳು …. ಇಂದು ಶತಮಾನಗಳ ಹಿಂದೂಗಳ ಮಹದಾಸೆ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದಾಗ. ಶ್ರೀರಾಮನ ಜಯಘೋಷ ಇಡೀ ಭಾರತದಲ್ಲಿ ಜೈ ಶ್ರೀರಾಮ್ ಎಂದು ಮುಳುಗಿತು.

ಶ್ರೀರಾಮ ಮಂದಿರದ ಅಡಿಗಲ್ಲು ನಿರ್ಮಾಣದ ಹಿಂದೆ ಶತಶತಮಾನಗಳ ಹೋರಾಟದ ಇತಿಹಾಸವೇ ಇದೆ. ಈ ಅಯೋಧ್ಯೆಯ ಮಹಾ ಆಂದೋಲನದ ಮುಂದಾಳು ಲಾಲ್ ಕೃಷ್ಣ ಅಡ್ವಾಣಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಡ್ವಾಣಿ ಅವರಿಗೆ ಅಯೋಧ್ಯೆ ಮಹಾಂದೋಲನ ನೇತೃತ್ವವನ್ನು ಅದರ ‘ಮಹಾಯಾತ್ರಿಯ’ ರಥವನ್ನು ಎಳೆಯಲು ಸ್ಫೂರ್ತಿ ಗುಜರಾತ್‌‌ “ಸೋಮನಾಥ ಮಂದಿರದ” ಮರು ನಿರ್ಮಾಣದ ಕಥೆ. ಈ ವಿಚಾರವನ್ನು ಆಡ್ವಾಣಿ ಅವರು ಅವರ ಆತ್ಮಕತೆ “ನನ್ನ ದೇಶ ನನ್ನ ಜೀವನ” ಕೃತಿಯಲ್ಲಿ ಬರೆದುಕೊಂಡಿದ್ದಾರೆ.ಅದರ ಆಯ್ದ ಭಾಗಗಳನ್ನು ಇಲ್ಲಿ ಪ್ರಸ್ತಾಪಿಸಲಾಗುತ್ತಿದೆ.

ಜೈ ಸೋಮನಾಥ್ : ಹಿಂದೂ ಧರ್ಮದಲ್ಲಿ ಜ್ಯೋತಿರ್ಲಿಂಗಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ ಸಂಸ್ಕೃತದಲ್ಲಿ ಜ್ಯೋತಿ ಎಂದರೆ ಬೆಳಕು. ಹಿಮಾಲಯ ತಪ್ಪಲಿನ ಕೇದಾರನಾಥ್ ನಿಂದ ತಮಿಳುನಾಡಿನ ರಾಮೇಶ್ವರಂ ತನಕ ಒಟ್ಟು ಹನ್ನೆರಡು ಜ್ಯೋತಿರ್ಲಿಂಗಗಳು ನೆಲೆಗೊಂಡಿವೆ .ಇಂತಹ ಜ್ಯೋತಿರ್ಲಿಂಗದಲ್ಲಿ ಒಂದು ಗುಜರಾತ್ನ ಸೋಮನಾಥದಲ್ಲಿ ಇರುವ ಜ್ಯೋತಿರ್ಲಿಂಗ.

ಸೋಮನಾಥ ಮಂದಿರದ ಅಮೋಘ ವಾಸ್ತುಶಿಲ್ಪ ಮಾತ್ರವಲ್ಲ ಅದು ಇರುವ ಸ್ಥಳವು ರಮಣೀಯ ಸಮುದ್ರ ತಟದ ಬೆಟ್ಟದ ಶೃಂಗದಲ್ಲಿ ಇರುವ ಈ ಮಂದಿರ ವೀಕ್ಷಕರನ್ನು ಪುಳಕಿತಗೊಳಿಸುತ್ತದೆ.ಮಧ್ಯಕಾಲೀನ ಅವಧಿಯಲ್ಲಿ ವಿದೇಶಿ ದಾಳಿಕೋರರ ಆಕ್ರಮಣಕ್ಕೆ ಸೋಮನಾಥ ಮಂದಿರ ಹೇಗೆ ಪ್ರತ್ಯಕ್ಷ ಸಾಕ್ಷಿ ಮತ್ತು ಗುರಿಯಾಗಿತ್ತು ಎಂಬುದನ್ನು ಅಡ್ವಾಣಿಯವರು ತಮ್ಮ ಕೃತಿಯಲ್ಲಿ ವಿವರಿಸುತ್ತಾರೆ.

ಅಫ್ಘಾನಿಸ್ತಾನದ ಗಜಿನಿ ಪ್ರಾಂತ್ಯದ ಮಹಮ್ಮದ್ ಘಜ್ನಿ ಕ್ರಿಸ್ತಶಕ 1001 ರಿಂದ 1026 ರವರೆಗೆ ವರ್ಷಗಳ ಅವಧಿಯಲ್ಲಿ .ಭಾರತದ ಮೇಲೆ ಹದಿನೇಳು ಬಾರಿ ದಂಡೆತ್ತಿ ಬಂದಿದ್ದ.ಸೋಮನಾಥ ಮಂದಿರ ಆತನ ದಾಳಿಯ ಮುಖ್ಯ ಗುರಿಯಾಗಿತ್ತು. ಕ್ರಿ.ಶ.1024ರಲ್ಲಿ ಸೋಮನಾಥ ಮಂದಿರ ರಕ್ಷಿಸಲು ಮುಂದಾದ ಸುಮಾರು 50 ಸಾವಿರ ಹಿಂದೂಗಳನ್ನು ಆತ ಬಲಿ ತೆಗೆದುಕೊಂಡ . ಸ್ವತಃ ಗಜಿನಿ ಮಹಮ್ಮದ್ ಮಂದಿರದೊಳಗೆ ಕಾಲಿಟ್ಟು ಜ್ಯೋತಿರ್ಲಿಂಗವನ್ನು ಪುಡಿಗಟ್ಟಿ ದೇವಸ್ಥಾನವನ್ನು ವಿಧ್ವಂಸಗೊಳಿಸಿದ ಬಳಿಕ ಅಲ್ಲಿನ ಭಾರಿ ಪ್ರಮಾಣದಲ್ಲಿ ಬಂಗಾರ ಮತ್ತು ಅಮೂಲ್ಯ ಆಸ್ತಿಯನ್ನು ಅಫ್ಘಾನಿಸ್ಥಾನಕ್ಕೆ ಕೊಂಡೊಯ್ದಿದ್ದ.ಸೋಮನ ಮಂದಿರದ ಮೇಲೆ ದಾಳಿ ಮಾಡಿದವರು ಮಹಮ್ಮದ್ ಗಜಿನಿ ಒಬ್ಬನೇ ಅಲ್ಲ.

1706 ರಲ್ಲಿ ಮೊಗಲ್ ಸಾಮ್ರಾಜ್ಯದ ವೈಸರ್ ಆಗಿದ್ದ ಮೊಹಮ್ಮದ್ ಅಜಂ ಇಂಥದ್ದೇ ಕೃತ್ಯ ಎಸಗಿದ್ದ ಆಗಿನ ಮೊಘಲ್ ದೊರೆ “ಔರಂಗ ಜೇಬ್” ಸೋಮನಾಥ ದೇವಾಲಯವನ್ನು ಇನ್ನೆಂದೂ ದುರಸ್ತಿ ಮಾಡಲಾಗದಂತೆ ನಾಶಪಡಿಸಿ ಎಂದು ಆದೇಶ ಹೊರಡಿಸಿದ್ದ. ಇದಿಷ್ಟು ಸ್ವಾತಂತ್ರ್ಯಪೂರ್ವದಲ್ಲಿ ಆದರೆ,ಸ್ವಾತಂತ್ರ್ಯದ ನಂತರ ದೇಶಕ್ಕೆ ಸ್ವಾತಂತ್ರ್ಯ ಬಂತೆಂಬ ಸಂಭ್ರಮದ ನಡುವೆ ಪಾಕಿಸ್ತಾನದ ಮುಸ್ಲಿಂ ಲೀಗ್ ನ ಕೋಮು ಆಧರಿತ ದೇಶ ವಿಭಜನೆಯ ಬೇಡಿಕೆ ರಕ್ತದ ಓಕುಳಿಯನ್ನೇ ಹರಿಸಿತು.

ಗುಜರಾತ್ ನ ಸೌರಾಷ್ಟ್ರ ವಲಯದಲ್ಲಿರುವ ಸಂಪದ್ಭರಿತ ಜುನಾಗಡ ರಾಜ್ಯದ ಮೇಲೂ ವಿಭಜನೆಯ ಛಾಯೆ ಆವರಿಸಿತ್ತು. ಐತಿಹಾಸಿಕ ಸೋಮನಾಥ ಮಂದಿರ ಇರುವುದು ಇದೇ ಜುನಾಗಡ ಜಿಲ್ಲೆಯಲ್ಲಿ ಇರುವುದು. ಈ ಜುನಾಗಡ ಪ್ರಾಂತ್ಯದಲ್ಲಿ ಶೇ 80 ರಷ್ಟು ಹಿಂದೂಗಳಿದ್ದಾರೆ ಆದರೆ ಅದರ ನವಾಬ ಮಾತ್ರ ಮುಸ್ಲಿಂ..!! ಈ ನವಾಬ ” ನಮ್ಮ ರಾಜ್ಯ ಪಾಕಿಸ್ತಾನಕ್ಕೆ ಸೇರ್ಪಡೆಯಾಗುತ್ತದೆ” ಎಂದು ಘೋಷಿಸಿಬಿಟ್ಟ ಈ ನಿರ್ಧಾರದಿಂದ ಅಲ್ಲಿಯ ಹಿಂದೂಗಳು ದಂಗೆ ಎದ್ದರು.

ಗುಜರಾತ್ ನ ಹಿರಿಯ ಕಾಂಗ್ರೆಸ್ಸಿಗ ಸಮಲ್ ದಾಸ್ ಗಾಂಧಿ ನೇತೃತ್ವದಲ್ಲಿ ನವಾಬನ ಆಳ್ವಿಕೆಯ ವಿರುದ್ಧ ಪರ್ಯಾಯ ಸರ್ಕಾರವೇ ಸ್ಥಾಪನೆಯಾಗಿ ಬಿಟ್ಟಿತ್ತು. ಸಮಸ್ತ ಭಾರತೀಯರ ಹೋರಾಟದ ಫಲವಾಗಿ “ಸಮಲ್ ದಾಸ್ ಗಾಂಧಿ” ಮತ್ತು ಜುನಾಗಡದ ದಿವಾನ “ಸರ್ ನವಾಬ್ ಭುಟ್ಟೊ (ಇವರು ಪಾಕಿಸ್ತಾನದ ಪ್ರಧಾನಿ ಯಾಗಿದ್ದ ಜುಲ್ಫಿಕರ್ ಅಲಿ ಭುಟ್ಟೊ ಅವರ ತಂದೆ) ಒಂದಾಗಿ ನಿಂತು “ಜುನಾಗಡ” ಭಾರತದ ಗಣರಾಜ್ಯದಲ್ಲಿ ವಿಲೀನವಾಗುತ್ತಿದೆ ಎಂದು ಸಾರಿದರು, ಭಾರತದ ಉಕ್ಕಿನ ಮನುಷ್ಯ ಎಂದೇ ಕರೆಯಲಾಗುವ ಅಂದಿನ ಗೃಹ ಸಚಿವ ಮತ್ತು ಭಾರತ ಒಕ್ಕೂಟ ಶಿಲ್ಪಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಈ ವಿಷಯವನ್ನು ನೆಹರು ಅವರಿಗೆ ತಿಳಿಸಲು “ಜೈ ಸೋಮನಾಥ್”! ಎಂದು ಟೆಲಿಗ್ರಾಂ ಮಾಡಿದರಂತೆ.

ಜವಹರ್ ಲಾಲ್ ನೆಹರು ಅವರ ಸಂಪುಟದಲ್ಲಿದ್ದ ಸರ್ದಾರ್ ವಲ್ಲಭಾಯಿ ಪಟೇಲರ ಗಟ್ಟಿ ನಿಲುವು ಕೆ.ಎಂ.ಮುನ್ಸಿ ಅಂತಹ ಸಚಿವರ ಒತ್ತಡದ ಫಲವಾಗಿ ಸೋಮನಾಥ ದೇವಾಲಯ ಮರು ವಿನ್ಯಾಸಗೊಂಡು “ಜಾತ್ಯತೀತ” ಎಂಬ ಹೋರಾಟದ ನಡುವೆಯೂ ಸೋಮನಾಥ ದೇವಾಲಯ ಉದ್ಘಾಟನೆಗೊಂಡಿದ್ದು ಅಡ್ವಾಣಿಯವರಿಗೆ ಸ್ಫೂರ್ತಿ. ಅದನ್ನು ಬಾಲ್ಯ ಜೀವನದಲ್ಲಿ ಅಡ್ವಾಣಿಯವರು ಕಣ್ಣಾರೆ ನೋಡಿದ ದೃಶ್ಯ. ಅಯೋಧ್ಯೆಯ ಮಹಾ ಆಂದೋಲನದಲ್ಲಿ ಸೋಮನಾಥ ಪ್ರತಿಧ್ವನಿಯೇ ಇತಿಹಾಸ.

LEAVE A REPLY

Please enter your comment!
Please enter your name here