Home Cinema ಅಯ್ಯೋ…! ‘ಆ ರಾತ್ರಿ’ ಏನಾಯ್ತು ಚಂದನವನದ ‘ಚಿಟ್ಟೆ’ ಹರ್ಷಿಕಾ ಪೂಣಚ್ಚ ಜೊತೆ..! ಕಿರುಕುಳ ಕೊಟ್ಟವರ್ಯಾರು ಚಂದನವನದ...

ಅಯ್ಯೋ…! ‘ಆ ರಾತ್ರಿ’ ಏನಾಯ್ತು ಚಂದನವನದ ‘ಚಿಟ್ಟೆ’ ಹರ್ಷಿಕಾ ಪೂಣಚ್ಚ ಜೊತೆ..! ಕಿರುಕುಳ ಕೊಟ್ಟವರ್ಯಾರು ಚಂದನವನದ ‘ಚಿಟ್ಟೆ’ಗೆ!?

798
0
SHARE

ಹರ್ಷಿಕಾ ಪೂಣಚ್ಚ.. ಕೊಡಗಿನ ಕಿನ್ನರಿ. ಇತ್ತೀಚಿಗಷ್ಟೇ ಚಂದನವನದಲ್ಲಿ ಹತ್ತು ವರ್ಷ ಕಂಪ್ಲೀಟ್ ಮಾಡಿದ ಸಂಭ್ರಮದಲ್ಲಿದ್ದ ಹರ್ಷಿಕಾ ಇದೀಗ ಕಿರುಕುಳಕ್ಕೊಳಗಾಗಿದ್ದಾರೆ. ವಿಪರ್ಯಾಸ ಅಂದ್ರೆ ಅದು ಸಂಬಂಧಿಕರಿದಂನೇ.

ಯಸ್.. ಇತ್ತೀಚೆಗಷ್ಟೇ ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವಿನ ಪ್ರಕರಣದ ಸಂಭಂಧ ನ್ಯಾಯ ಸಿಗುವಂತೆ ಹೋರಾಟ ಮಾಡಿದ್ದ ಹರ್ಷಿಕಾ ಮೇಲೆ ಇಬ್ಬರು ವ್ಯಕ್ತಿಗಳು ಕಿರುಕುಳ ಮಾಡಿರುವ ಆರೋಪವೊಂದು ಕೇಳಿಬಂದಿದೆ. ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂರ್ಣಚ್ಚ ಮೇಲೆ ಕಿರುಕುಳದ ಆರೋಪವೊಂದು ಕೇಳಿಬಂದಿದ್ದು ಬೇರೆಯಾವುದೋ ಶೂಟಿಂಗ್ ಅಡ್ಡಾದಲ್ಲಿ ಅಲ್ಲ. ಬದ್ಲಿಗೆ, ಸಂಬಂಧಿಕರ ನಿಶ್ಚಿತಾರ್ಥಕೆಂದು ಕೊಡಗಿಗೆ ತೆರಳಿದ್ದ ಹರ್ಷಿಕಾ ಜೊತೆ ಅಸಭ್ಯ & ದುರ್ವರ್ತನೆ ತೋರಿಸಿರುವ ಘಟನೆಯೊಂದು ಜರುಗಿದೆ ಹೋಗಿದೆ.

ಬುಧುವಾರ ಅನಾಥ ಮಕ್ಕಳೊಂದಿಗೆ ಹರ್ಷಿಕಾ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ರು. ಅದೇ ಖುಷಿಯಲ್ಲಿ, ಅದೇ ಜೋಷ್‌ನಲ್ಲೇ ಹರ್ಷಿಕಾ ತವರೂರಿಗೆ ತೆರಳಿದ್ರು. ನಂತ್ರ ಗುರುವಾರ ರಾತ್ರಿ ಹರ್ಷಿಕಾ ಸಂಬಂಧಿಕರ ನಿಶ್ಚಿತಾರ್ಥ ಇತ್ತು. ಸಂಬಂಧಿಕರೊಬ್ಬರ ನಿಶ್ಚಿತಾರ್ಥ ನಿಮಿತ್ತ ಮಡಿಕೇರಿಯ ನೀಡುಕೊಲ್ಲಿ ಗ್ರಾಮದಲ್ಲಿನ ರೆಸಾರ್ಟ್‌ಗೆ ಹರ್ಷಿಕಾ ಮತ್ತು ಭುವನ್ ಕುಟುಂಬಸ್ಥರು ತೆರಳಿದ್ರು. ಈ ಸಂದರ್ಭದಲ್ಲಿ ಬನ್ನಿ ಪೊನ್ಣಪ್ಪ, ಬಿಪಿನ್ ದೇವಯ್ಯ ಎಂಬುವರು ಹರ್ಷಿಕಾ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದು. ಸಂಬಂಧಿಕರ ಮುಂದೆ ಮುಜುಗರ ಉಂಟಾಗುವಂತೆ ಮಾಡಿದ್ದಾರೆ. ಹೌದು, ಮಡಿಕೇರಿಯ ನೀರುಕೊಲ್ಲಿ ಗ್ರಾಮದಲ್ಲಿನ ರೆಸಾರ್ಟ್‌ನಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಚಿಟ್ಟೆ ಹುಡುಗಿ ಹರ್ಷಿಕಾ ಪೂರ್ಣಚ್ಛ ಮೇಲೆ ಸಂಬಂಧಿಕರೆ ಕಿರುಕುಳ ನೀಡಿದ್ದು.

ಹರ್ಷಿಕಾ ಜೊತೆಗೆ ಮಾತನಾಡುವ ಬಾ ಎಂದು ಕರೆದಿದ್ದಾರಂತೆ. ಹರ್ಷಿಕಾ ಜೊತೆಗೆ ಆ ಇಬ್ಬರು ಹುಡುಗರು ಮಿಸ್ ಬಿಯೇವ್ ಮಾಡಿದ್ದು. ಇದ್ರಿಂದ ಮಾತಿಗೆ ಮಾತು ಬೆಳೆದು ಗಲಾಟೆ ಜೋರಾದಾಗ ನಟ ಭುವನ್, ಹರ್ಷಿಕಾ ಪರ ನಿಂತಿದ್ದಾರೆ. ಆಗ ಹೊಡೆದಾಟ ನಡೆದಿದ್ದು, ಭುವನ್ ಅವರ ಕೈ ಹಾಗೂ ಮುಖಕ್ಕೆ ಗಾಯಗಳಾಗಿವೆ ಎಂದು ಹೇಳಲಾಗ್ತಿದೆ.ಇದರಿಂದ ಬೇಸತ್ತ ಹರ್ಷಿಕಾ ದುರ್ವರ್ತನೆ ತೋರಿದ ಬನ್ನಿ ಪೊನ್ಣಪ್ಪ, ಬಿಪಿನ್ ದೇವಯ್ಯ ಇಬ್ಬರ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸರಿಂದ ಪ್ರಕಣರ ದಾಖಲಿಸಿದ್ದಾರೆ. ಆ ಘಟನೆ ನಡೆದ ಕೆಲ ಘಂಟೆಯಲ್ಲೇ ಮಡಿಕೇರಿ ಪೋಲೀಸರು ಬನ್ಸಿ ನಾಣಯ್ಯನನ್ನು ಬಂಧಿಸಿದ್ದು. ಸೆಕ್ಷನ್ ೩೫೪, ೩೨೩, ೩೨೬ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಮಡಿಕೇರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬಂದಿತನನ್ನು ಹಾಜರುಪಡಿಸಿದ ಪೋಲೀಸರು. ತಲೆಮರೆಸಿಕೊಂಡಿರುವ ಬಿಪಿನ್ ದೇವಯ್ಯನಿಗಾಗಿ ಪೋಲೀಸರು ಹುಡುಕಾಟ ನಡೆಸಿದ್ದಾರೆ. ಅಸಲಿಗೆ ಗುರುವಾರ ರಾತ್ರಿ ನಡೆದ ಘಟನೆಯ ಸಂದರ್ಭದಲ್ಲಿ ಹರ್ಷಿಕಾ ಜೊತೆಗೆ ಭುವನ್ ಕೂಡ ಇದ್ರು. ಈ ವೇಳೆ ಭುವನ್ ಗಾಯಗೊಂಡಿದ್ದು. ಭುವನ್ ಕೂಡ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಈಗೆ ಸಂಬಂಧಿಕರೊಬ್ಬರ ನಿಶ್ಚಿತಾರ್ಥಕ್ಕೆ ಹೋಗಿದ್ದ ಸ್ಯಾಂಡಲ್‌ವುಡ್ ನಟಿ ಮೇಲೆ ಅಹಿತಕರ ಘಟನೆಯೊಂದು ನಡೆದುಹೊಗಿದ್ದು. ಹರ್ಷಿಕಾ ಮನೆಯವರು ಆತಂಕಕ್ಕೂ ಕಾರಣವಾಗಿತ್ತು. ಮೊನ್ನೆ ರಾತ್ರಿ ನಡೆದ ಘಟನೆಯಲ್ಲಿ ಗಾಯಗೊಂಡಿದ್ದ ಭುವನ್. ಭುವನ್ ಜೊತೆಯಲ್ಲೇ ಬೆಂಗಳೂರಿಗೆ ತೆರಳಿರುವ ಹರ್ಷಿಕಾ ಪೂರ್ಣಚ್ಛ ಮೊಬೈಲ್ ಸ್ವಿಚ್ ಆಫ್ ಆಗಿದ್ದು. ಘಟನೆಯಿಂದ ಬೇಸರಿಸಿಕೊಂಡಿದ್ದಾರೆನ್ನಲಾಗ್ತಿದೆ.

ಅದೇನೇ ಇದ್ರು..ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವಿನ ಪ್ರಕರಣದ ಸಂಭಂಧ ನ್ಯಾಯ ಸಿಗುವಂತೆ ಹೋರಾಟ ಮಾಡಿದ್ದ ಹರ್ಷಿಕಾಗೆ. ಕುಟುಂಬಸ್ಥರ ನಡುವಲ್ಲಿ ಈ ರೀತಿಯ ಘಟನೆ ನಡೆದಿದ್ದು… ಹರ್ಷಿಕಾ ಮುಂದೆ ಅದ್ಯಾವ ರೀತಿ ಕ್ರಮ ಕೈಗೊಳ್ತಾರೆ ಕಾದುನೋಡಬೇಕು.

LEAVE A REPLY

Please enter your comment!
Please enter your name here