Home Cinema ಅಯ್ಯೋ..!ಕಿರಾತಕನ ಕನಸಿಗೆ ಕೊನೆಗೂ ಬಿತ್ತು ಬೆಂಕಿ..! ಬದಲಾಯ್ತು ಲೆಕ್ಕಾಚಾರ..ಐ ಮ್ ಸಾರಿ ಅಂದ್ರು ರಾಕಿ..!

ಅಯ್ಯೋ..!ಕಿರಾತಕನ ಕನಸಿಗೆ ಕೊನೆಗೂ ಬಿತ್ತು ಬೆಂಕಿ..! ಬದಲಾಯ್ತು ಲೆಕ್ಕಾಚಾರ..ಐ ಮ್ ಸಾರಿ ಅಂದ್ರು ರಾಕಿ..!

1494
0
SHARE

ಯಶ್.. ಕೆ.ಜಿ.ಎಫ್ ಸಿನಿಮಾ ಮಾಡಿದ್ದು, ಭಾರೀ ಭಯಂಕರ ರಣಕೇಕೆ ಹಾಕಿದ್ದು, ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನ ವಿಶ್ವದ ಉದ್ದಗಲಕ್ಕೂ ಹಾರಿಸಿದ್ದು, ಎಲ್ಲ ಇದೀಗ ಹಳೆ ವಿಷಯ. ಬಟ್, ಇದೇ ಹಳೆ ವಿಷಯ ಇದೀಗ ಹೊಸದೊಂದು ಕನಸಿಗೆ ಕೊಳ್ಳಿ ಇಟ್ಟಿದೆ.

ಯಸ್.. ಹಿಂದೆ ನಾವ್ ನಿಮಗೆ ಯಶ್, ತನ್ನ ಕೈಯಾರೆ ಕಿರಾತಕನ ಕತ್ತು ಹಿಸುಕಿದ್ದಾರೆ ಅನ್ನುವ ಸ್ಫೋಟಕ ಸುದ್ದಿಯನ್ನ ಹೇಳಿದ್ವಿ. ನಮ್ಮ ಸುದ್ದಿಗೆ ಅವತ್ತು ಮಾತನಾಡಿದ್ದ ಯಶ್, ತಮ್ಮ ನೀಳ ಗಡ್ಡದ ಮೇಲೆ ಕೈಯಾಡಿಸಿದ್ದರು. ಚಿಕ್ಕದೊಂದು ಗೊಂದಲವಿದೆ. ಕೆ.ಜಿ.ಎಫ್ ಮೊದಲಾ.. ಮೈ ನೇಮ್ ಇಸ್ ಕಿರಾತಕಾ ಮೊದಲಾ ಅನ್ನುವ ಚರ್ಚೆ ನಡಿತಿದೆ ಅಂದಿದ್ದರು. ಯಶ್ ಕೊಟ್ಟಿದ್ದ ಇದೇ ಹೇಳಿಕೆ ಕಿರಾತಕನ ಕಥೆ ಮುಗಿದಿದೆ ಅನ್ನುವ ಅನುಮಾನವನ್ನೂ ಹೆಚ್ಚಿಸಿತ್ತು.

ಇದೀಗ ಅಂದು ಮನೆ ಮಾಡಿದ್ದ ಅನುಮಾನ.. ಅಕ್ಷರಶ ನಿಜಾ ಆಗುತ್ತಿದೆ. ಕಾರಣ.. ಯಶ್, ಮೈ ನೇಮ್ ಇಸ್ ಕಿರಾತಕವನ್ನ ಮುಂದೂಡಿದ್ದಾರೆ. ಅದು, ಒಂದಲ್ಲ ಭರ್ತಿ ಎರಡು ವರ್ಷ.ಹೌದು, ಮೈ ನೇಮ್ ಇಸ್ ಕಿರಾತಕನ ಕಥೆ. ೨೦೧೯ರಿಂದ ೨೦೨೧ಕ್ಕೆ ಶಿಫ್ಟ್ ಆಗಿದೆ. ಇದೇ ಜಾಗಕ್ಕೀಗ ಕೆ.ಜಿ.ಎಫ್ ಚಾಫ್ಟರ್೨ ಬಂದು ಕುಂತಿದೆ.

ಇದು, ಸಹಜವಾದ ಬೆಳವಣಿಗೆ ಅನ್ನುವ ವಿತ್ತಂಡ ವಾದಕ್ಕೆ ಗಾಂಧಿನಗರದ ಮಂದಿ ಮುಂದಾಗುವ ಮುನ್ನ, ಕಿರಾತಕನ ಕಥೆಗೆ ಪೂರ್ಣವಿರಾಮ ಬೀಳಲು ಅಸಲಿ ಕಾರಣಗಳೇನೂ ಅನ್ನೋದನ್ನ ಕೇಳಿ ಬಿಡಿ.ಅಸಲಿಗೆ, ಕೆ.ಜಿ.ಎಫ್.. ಇಂಥಹದ್ದೊಂದು ರಣಕೇಕೆ ಹಾಕುತ್ತೆ ಅನ್ನುವ ಚಿಕ್ಕ ಅಂದಾಜು ಖುದ್ದು ಯಶ್‌ಗಿರಲಿಲ್ಲ. ಹಾಗಾಗೇ, ಕೆ.ಜಿ.ಎಫ್ ಚಿತ್ರೀಕರಣ ಮುಗಿದ ಬಳಿಕ, ಪೊದೆಯಂತೆ ಬೆಳೆದಿದ್ದ ಗಡ್ಡಕ್ಕೆ ಯಶ್ ಕತ್ತರಿ ಹಾಕಿದ್ದರು.

ಇವತ್ತು, ದಿ ನೇಮ್ ಇಸ್ ಯಶ್ ಅನ್ನುತ್ತಿರುವ ನಟ, ಅವತ್ತು ಮೈ ನೇಮ್ ಇಸ್ ಕಿರಾತಕ ಅಂದಿದ್ದರು. ಹತ್ತು ದಿನಗಳ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರು. ಆದ್ರೆ ಅದ್ಯಾವಾಗ.. ಕೆ.ಜಿ.ಎಫ್ ಎಂಬ ಸುನಾಮಿಗೆ ಎಲ್ಲಡೆ ಬೇಡಿಕೆ ಬಂತೋ. ಹೈಫ್ ಹೆಚ್ಚಾಯ್ತೋ.. ಆಗ, ಯಶ್, ಕಾಲುಗಳೂ ಬೆಂಗಳೂರಿನಲ್ಲಿ ಇದ್ದಿದ್ದಕ್ಕಿಂತ, ಮುಂಬೈ, ಹೈದ್ರಾಬಾದ್, ಚೆನೈನಲ್ಲಿ ಇದ್ದಿದ್ದೇ ಹೆಚ್ಚು.

ಇದೆಲ್ಲದ್ರ ಪರಿಣಾಮ, ನ್ಯಾಶನಲ್ ಸ್ಟಾರ್ ಆಗಿರುವ ನಾನು, ಇಂಥ ಚಿಕ್ಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕಾ ಅನ್ನುವ ಅಸಡ್ಡೆನೂ ಶುರುವಾಗಿತ್ತು. ಇದಕ್ಕೆ ತಕ್ಕಂತೆ ಯಶ್ ಮತ್ತೆ ಗಡ್ಡನೂ ಬೆಳಸಲು ಶುರು ಮಾಡಿದ್ರು. ಅಲ್ಲಿಗೆ ಕಿರಾತಕನ ಕನಸು ಕಂಡಿದ್ದ ಅನಿಲ್ ಕುಮಾರ್ ಕನಸಿನ ಮೇಲೂ ನೀರು ಬಿದ್ದಿತ್ತು. ಇದೀಗ ಇದೆಲ್ಲದ್ರ ಫಲವೆನ್ನುವಂತೆ ಕಿರಾತಕನ ನಿರ್ಮಾಪಕ ಜಯಣ್ಣ ಚಿತ್ರವನ್ನ ಎರಡು ವರ್ಷ ಮುಂದೂಡಿರುವ ಮಾತನ್ನಾಡಿದ್ದಾರೆ.

ಮೊದಲು.. ಕೆ.ಜಿ.ಎಫ್ ಕಥೆ ಮುಗೀಲಿ, ಆಮೇಲೆ ಕಿರಾತಕ ಮಾಡ್ತೀವಿ ಅಂದಿದ್ದಾರೆ. ಆದ್ರೀದು ಸಾಧ್ಯವಾಗುವ ಮಾತಾ.. ಹೀಗೊಂದು ಅನುಮಾನದ ನೆರಳು ಖುದ್ದು ಯಶ್ ಬಳಗದಲ್ಲೇ ಇದೆ. ಯಾಕಂದ್ರೆ ಕೆ.ಜಿ.ಎಫ್ ೨ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳೂ ಆಗ್ಲೇ ಗರಿಗೇದರಿವೆ. ಇದೇ ನಿರೀಕ್ಷೆಗಳಿಂದ ಚಾಫ್ಟರ್ ೨ ಕೂಡಾ ಮತ್ತೊಮ್ಮೆ ಚಿನ್ನದ ಬೆಳೆಯನ್ನ ಗಲ್ಲಾಪೆಟ್ಟಿಗೆಯಲ್ಲಿ ಬೆಳೆಯುವ ಲಕ್ಷಣಗಳೂ ಇವೆ. ಒಂದ್ವೇಳೆ ಇದು..

ನಿಜವೇ ಆದಲ್ಲಿ, ಕೆ.ಜಿ.ಎಫ್ ೨ ಮತ್ತೊಂದು ದೊಡ್ಡ ಯಶಸ್ಸು ಕಂಡಿದ್ದೇ ಆದಲ್ಲಿ.. ಯಶ್, ಇಂಟರ್ ನ್ಯಾಶನಲ್ ಸ್ಟಾರ್ ಆದ್ರೂ ಅಚ್ಚರಿ ಇಲ್ಲ. ಅಲ್ಲಿಗೆ ಎಲ್ಲಿಯ ಕಿರಾತಕ ಅನ್ನುವ ಮಾತುಗಳೂ ಗಾಂಧಿನಗರದಲ್ಲಿ ಕೇಳಿ ಬರ‍್ತಿವೆ. ಇನ್ನೂ ಇದ್ರ ನಡುವೆ, ಪ್ರಶಾಂತ್ ನೀಲ್ ಸಿನಿಮಾಗಳೂ ಅಂದ್ರೆ ಪಂಚ ವಾರ್ಷಿಕ ಯೋಜನೆ ಇದ್ದಂತೆ, ಹಾಗಾಗಿ.. ಕೆ.ಜಿ.ಎಫ್ ಚಾಫ್ಟರ್ ೨ ಎರಡೇ ವರ್ಷದಲ್ಲಿ ಮುಗಿಯುತ್ತಾ ಅನ್ನುವ ಪ್ರಶ್ನೆನೂ ಗಾಂಧಿನಗರದ ಗಲ್ಲಿಗಳಲ್ಲಿ ಗಿರಕಿ ಹೊಡೆಯುತ್ತಿದೆ. ಅಲ್ಲಿಗೆ ಮೈ ನೇಮ್ ಇಸ್ ಕಿರಾತಕನ ಖೇಲ್ ಬಹುತೇಕ ಖತಂ ಆದಂತೆ..?

LEAVE A REPLY

Please enter your comment!
Please enter your name here