Home Latest ಅಯ್ಯೋ ವಿಧಿಯೇ.. ತಂದೆ ಬರೆದಂತೆ ಆಯ್ತಲ್ಲ ಅಭಿಯ ಜೀವನ..! ಅಭಿನಂದನ್ ತಂದೆಗೆ ಮೊದಲೇ ಗೊತ್ತಿತ್ತಾ ಪುತ್ರನ...

ಅಯ್ಯೋ ವಿಧಿಯೇ.. ತಂದೆ ಬರೆದಂತೆ ಆಯ್ತಲ್ಲ ಅಭಿಯ ಜೀವನ..! ಅಭಿನಂದನ್ ತಂದೆಗೆ ಮೊದಲೇ ಗೊತ್ತಿತ್ತಾ ಪುತ್ರನ ಭವಿಷ್ಯ..?

2109
0
SHARE

ಸಿನಿಮಾಗೂ ನಿಜಜೀವನಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತೆ ಅಂತ ದೊಡ್ಡವರು ಹೇಳ್ತಾರೆ. ಆದರೆ ಮ್ಯಾಜಿಕ್ ಅನ್ನೋರೀತಿಯಲ್ಲಿ ಒಮ್ಮೊಮ್ಮೆ ರಿಯಲ್ ಲೈಫ್‌ಗೂ ರೀಲ್ ಲೈಫ್‌ಗೂ ಕನೆಕ್ಟ್ ಆಗಿ ದೊಡ್ಡ ಆಶ್ಚರ್ಯವನ್ನೇ ಸೃಷ್ಟಿಸಿಬಿಡುತ್ತೆ.

ಜೈಶ್ ಉಗ್ರತಾಣಗಳ ಮೇಲೆ ಭಾರತೀಯ ವಾಯುಪಡೆ ಯಾವಾಗ ಏರ್‌ಸ್ಟ್ರೈಕ್ ಮಾಡ್ತೋ ಆಗಿನಿಂದ ಪಾಕಿಸ್ತಾನಕ್ಕೂ ಭಾರತಕ್ಕೂ ಸೇಡಿನ ಜ್ವಾಲೆ ಕ್ರಿಯೆಟ್ ಆಗಿದೆ. ಪೈಲೆಟ್ ಅಭಿನಂದನ್ ಪಾಕ್ ಕೈಗೆ ಸಿಕ್ಕ ಕೂಡಲೇ ನಮ್ಮೆಲ್ಲರ ಮನಸ್ಸುಗಳಲ್ಲಿ ದ್ವೇಷದ ಬಾಂಬ್ ಸಿಡಿದುಬಿಟ್ಟಿದೆ. ಈಗ ಪಾಕಿಸ್ತಾನದ ವಶದಲ್ಲಿರುವ ನಮ್ಮ ದೇಶದ ಪಾಲಿನ ಹೀರೊ ಅಭಿನಂದನ್ ಜೀವನದ ಸರ್‌ಪ್ರೈಸಿಂಗ್ ವಿಷಯವೊಂದು ಈಗ ಬಯಲಾಗಿದೆ. ಯಾವ ಸಿನಿಮಾ ಸ್ಟೋರಿಗೂ ಕಡಿಮೆಯಿಲ್ಲದ ಅಭಿನಂದನ್ ಜೀವನದಲ್ಲಿ ವಿಧಿ ಯಾಕೆ ಈ ರೀತಿ ಆಟವಾಡ್ತು ಎನ್ನುವ ಕ್ವಾಷೆನ್ ಎಲ್ಲರಲ್ಲೂ ಕಾಡಿಬಿಡುತ್ತೆ.

ಅಸಲಿಗೆ ಅಭಿನಂದನ್ ಹೇಗೆ ಪಾಕಿಸ್ತಾನದ ವಶವಾದ್ರು ಎನ್ನುವ ಕಥೆ ಕೇಳಿದ್ರೆ ಮೈಜುಮ್ಮೆನಿಸುತ್ತೆ. ಇದೇ ಮಂಗಳವಾರ ಭಾರತದ ಗಡಿಯೊಳಗೆ ಯುದ್ಧ ವಿಮಾನಗಳನ್ನ ನುಗ್ಗಿಸಿ ಪಾಕಿಸ್ತಾನ ತನ್ನ ನರಿ ಬುದ್ದಿ ತೋರಿಸಿತ್ತು. ಪಾಕಿಸ್ತಾನದ ಈ ಹೇಯ ಕೃತ್ಯಕ್ಕೆ ತಕ್ಕ ಬಿಸಿ ಮುಟ್ಟಿಸೋಕೆ ಭಾರತದ ವಿಮಾನಗಳು ಎಫ್-೧೬ ಹೊಡೆದು ಉರುಳಿಸಿಬಿಟ್ಟಿತ್ತು. ಇನ್ನೆರಡು ಪಾಕ್ ವಿಮಾನಗಳನ್ನ ಬೆನ್ನಟ್ಟಿ ಹೋದ ಪೈಲೆಟ್ ಅಭಿನಂದನ್ ದುರದೃಷ್ಟವಶಾತ್ ಪಾಕ್ ನೆಲದಲ್ಲಿ ತಮ್ಮ ಪ್ಯಾರಾಚೂಟ್‌ನಿಂದ ಜಿಗಿದು ನೆಲಕ್ಕೆ ಬಿದ್ದುಬಿಟ್ಟಿದಾರೆ. ಭಾರತದ ವಾಯುಪಡೆಯ ಯೂನಿಫಾರಂ ಧರಿಸಿದ್ದ ಅಭಿನಂದನ್ ಅವರನ್ನ ಗಮನಿಸಿದ ಅಲ್ಲಿಯ ಸ್ಥಳಿಯರು ಪಾಕ್ ಸೇನೆಗೆ ಮೆಸೇಜ್ ಕೊಟ್ಟಿದಾರೆ.

ಕೂಡಲೇ ಪಾಕ್ ಸೈನಿಕರು ಅಭಿನಂದನ್‌ರನ್ನ ವಶಕ್ಕೆ ಪಡೆದುಕೊಂಡ್ರು. ಮೊದಲಿಗೆ ಮನಸೋ ಇಚ್ಛೆ ಅಭಿನಂದನ್ ಹೊಡೆದು ಅದನ್ನ ವಿಡಿಯೋ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದಾರೆ. ವಿಡಿಯೋ ನೋಡಿದ ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿರುವುದಂತೂ ಸುಳ್ಳಲ್ಲ.ಆಶ್ಚರ್ಯವೆಂದ್ರೆ ಈ ಎಲ್ಲ ಪ್ರಸ್ತುತ ಬೆಳವಣಿಗೆಗಳನ್ನ ನೋಡ್ತಿದ್ರೆ ನಮ್ಮ ಕಣ್ಣಿಗೆ ಎದುರಾಗೋದು ಮಣಿರತ್ನಂ ನಿರ್ದೇಶನದ ಕಾಟ್ರು ವೆಲೆಯಾಡು. ಸೇಮ್ ಟು ಸೇಮ್ ಇದೇ ಸ್ಟೋರಿಲೈನ್ ಹೊಂದಿರುವ ಈ ಸಿನಿಮಾ ಅಭಿನಂದನ್ ಜೀವನದ ಜೆರಾಕ್ಸ್ ಕಾಪಿಯಾಗಿದೆ. ನಟ ಕಾರ್ತಿ ಅಭಿನಯದ ಕಾಟ್ರು ವೆಲೆಯಾಡು ಪ್ರೇಕ್ಷಕನ ಮನಸ್ಸನ್ನ ಕದ್ದುಬಿಟ್ಟಿತ್ತು. ಈ ಸಿನಿಮಾದಲ್ಲೂ ಹೀರೊ ಪಾಕಿಸ್ತಾನಕ್ಕೆ ಸೆರೆ ಸಿಗುವ ಸೀನ್ ಮನ ಹಿಂಡುತ್ತೆ.

ಇಂತಹ ಎಪಿಕ್ ಸಿನಿಮಾದ ಕಥೆ ಹೆಣೆಯೋಕೆ ಮಣಿರತ್ಮಂಗೆ ಸಹಾಯ ಮಾಡಿದ್ದು ಇದೇ ಅಭಿನಂದನ್ ತಂದೆ ವಾರ್ತಮಾನ್ ಎನ್ನುವುದು ಒಂದು ವಿಷಾದನೀಯ ಸಂಗತಿ.ಭಾರತೀಯ ವಾಯುಸೇನೆಯಲ್ಲಿ ಏರ್‌ಮಾಷರ್ಲ್ ಆಗಿ ಸುಮಾರು ವರ್ಷ ದೇಶಸೇವೆ ಮಾಡಿದ ಅಭಿನಂದನ್ ತಂದೆ ವಾರ್ತಮಾನ್ ತಮ್ಮ ಮಗನ ಜೀವನದಲ್ಲೂ ಈ ಸನ್ನಿವೇಶ ಬರಬಹುದು ಅಂತ ಕನಸುಮನಸಿನಲ್ಲೂ ಎಣಿಸಿರಲಿಲ್ಲ. ಸಿನಿಮಾ ಕಥೆಯಂತೆ ಅಭಿನಂದನ್ ಜೀವನವೂ ಟರ್ನ್ ಪಡೆದುಕೊಳ್ಳತ್ತೆ ಅಂತ ಯಾರು ಲೆಕ್ಕಚಾರ ಹಾಕಿರಲಿಲ್ಲ ಬಿಡಿ. ಆದರೆ ಈಗ ಬಂದಿರೋ ಬಿಸಿಬಿಸಿ ಸುದ್ಧಿ ಎಲ್ಲ ಭಾರತೀಯರ ಕಣ್ಣುಗಳಲ್ಲಿ ಆನಂದಭಾಷ್ಪ ಸುರಿಸುತ್ತೆ. ಕತ್ತಲು ಕಳೆದ ಮೇಲೆ ಬೆಳಕು ಬರಲೇ ಬೇಕು ಎನ್ನುವ ಮಾತಿನಂತೆ ಅಭಿನಂದನ್ ನಾಳೆಯೇ ಬಿಡುಗಡೆಯಾಗುತ್ತಿರುವ ಹ್ಯಾಪಿ ನ್ಯೂಸ್ ಬಂದಿದೆ.

ಇದು ಇಡೀ ಭಾರತವೇ ಕುಣಿದು ಕುಪ್ಪಳಿಸುವ ಸಿಹಿ ಸುದ್ಧಿ. ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ನಾವು ನಾಳೆಯೇ ಪೈಲೆಟ್ ಅಭಿನಂದನ್‌ರನ್ನ ರಿಲೀಸ್ ಮಾಡ್ತೀವಿ ಅಂತ ಅನೌನ್ಸ್ ಮಾಡಿಬಿಟ್ಟಿದಾರೆ. ಇದು ನ್ಯಾಯಕ್ಕೆ ಸಿಕ್ಕ ಜಯವಲ್ಲದೇ ಮತ್ತಿನ್ನೇನು? ಒಟ್ಟಿನಲ್ಲಿ ಸಿನಿಮಾ ಕಥೆಯಂತೆ ಅಭಿನಂದನ್ ರಿಯಲ್ ಲೈಫ್‌ನಲ್ಲೂ ಗೆಲುವಿನನಗೆ ಬೀರಿದ್ದಾರೆ. ಪಾಪಿ ಪಾಕಿಸ್ತಾನದ ಕೈಯಲ್ಲಿ ಸೆರೆ ಸಿಕ್ಕರೂ ಜೀವದಭಯ ಬಿಟ್ಟು ನಾನು ನನ್ನ ಯಾವ ಸೀಕ್ರೇಟ್‌ಅನ್ನೂ ಬಿಟ್ಟುಕೊಡಲ್ಲ ಅಂತ ಸಿಂಹದಂತೆ ಘರ್ಜಿಸಿದ ಅಭಿನಂದನ್ ನಮ್ಮೆಲ್ಲರ ಹೀರೊ ಎನ್ನುವುದರಲ್ಲಿ ಯಾವ ಡೌಟೇ ಬೇಡ ಬಿಡಿ.

 

LEAVE A REPLY

Please enter your comment!
Please enter your name here