Home Cinema ಅಯ್ಯೋ, ಸರ್ಜಾಗೆ ಮೀ ಟೂ ಅಂದ ಶ್ರುತಿ ದೇಶ ಬಿಟ್ಟು ಹೋದ್ರೇಕೇ. ಗುರು.? ಶ್ರುತಿ ಬೆಂಗಳೂರಿನಿಂದ...

ಅಯ್ಯೋ, ಸರ್ಜಾಗೆ ಮೀ ಟೂ ಅಂದ ಶ್ರುತಿ ದೇಶ ಬಿಟ್ಟು ಹೋದ್ರೇಕೇ. ಗುರು.? ಶ್ರುತಿ ಬೆಂಗಳೂರಿನಿಂದ ಗಾಯಬ್..???

961
0
SHARE

ಸಂಚಾರಿ ವಿಜಯ್ ಹಾಗು ಶೃತಿ ಹರಿಹರನ್ ಅಭಿನಯದ ನಾತಿಚರಾಮಿ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಯಿತು ಈ ಸಮಾರಂಭದಲ್ಲಿ ನಿರ್ಮಾಪಕ ಡಾ ಕೆ ಮಂಜು ಮುಖ್ಯ ಅತಿಥಿಯಾಗಿ ಭಾಗವಹಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು.

ಮೀಟೂ ಆರೋಪದ ಬಳಿ ಶ್ರುತಿ ಬೆಂಗಳೂರಿನಿಂದ ಗಾಯಬ್ ಆಗಿದ್ದಾರೆ. ಹಾಗಾಗಿನೇ ಈ ಸಮಾರಂಭದಲ್ಲಿ ಮೀ ಟೂ ಚೆಲುವೆ ಶೃತಿ ಮಾತ್ರ ಗೈರಾಗಿದ್ರು.. ಮೀ ಟೂ ಆರೋಪದ ನಂತ್ರ ಶೃತಿ ನಟನೆಯ ಮೊದಲ ಚಿತ್ರ ಬಿಡುಗಡೆಯಾಗುತ್ತಿದೆ . ಚಿತ್ರದ ಪ್ರಚಾರ ಕಾರ್ಯದಲ್ಲಿ ಶ್ರುತಿ ಮಾತ್ರ ಭಾಗವಹಿಸುತ್ತಿಲ್ಲ . ಶೂಟಿಂಗ್ ನೆಪ ಒಡ್ಡಿ ವಿದೇಶಕ್ಕೆ ತೆರಳಿದ್ದಾರೆ ಶ್ರುತಿ.

ಶ್ರುತಿ ಹರಿಹರನ್ ಸಿನಿಮಾ ವ್ಯಾಸಂಗಕ್ಕಾಗಿ ಅಮೆರಿಕಾಗೆ ತೆರಳಲಿದ್ದಾ. ಆದರೆ, ಅವರ ಸಿನಿಮಾದ ಪ್ರಚಾರಕ್ಕೆ ಅವರೇ ಇಲ್ಲದಿದ್ದರೆ ಹ್ಯಾಗೆ ಎನ್ನುವ ಮಾತು ಕೇಳಿ ಬರುತ್ತಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಚಿತ್ರದ ನಾಯಕನಾಗಿದ್ದು ಚಿತ್ರದ ಮೇಲೆ ಸಿಕ್ಕಾಪಟೆ ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ಹಾಗಾಗಿನೇ ಚಿತ್ರದ ಹಾಡುಗಳು ಕೂಡ ಗಾನಪ್ರಿಯರ ಮನಗೆಲ್ಲುತ್ತೆ ಅಂತಾರೆ.

ಇನ್ನು ಚಿತ್ರಕ್ಕೆ ಮಂಜು ಮಂಸೋರೆ ನಿರ್ದೇಶಕ. ಹರಿವು ಚಿತ್ರದ ಯಸ್ಸಿನ ಬಳಿಕ ಈಗ ನಾತಿಚರಾಮಿ ಚಿತ್ರದಲ್ಲಿ ಒಂದೊಳ್ಳೆ ಮೆಸೇಜ್ ಹೇಳಹೊರಟಿರುವ ಮಂಸೋರೆ ಹಾಡುಗಳು ಕಥೆಗೆ ಹೇಗೆ ಪೂರಕವಾಗಿದೆ ಎಂಬುದನ್ನು ಹೇಳೋದು ಹೀಗೆ.

ಚಿತ್ರಕ್ಕೆ ನಂದಿನಿ ನಂಜಪ್ಪ, ಮದನ್ ಬೆಳ್ಳಿ ಸಾಲು ಸಾಹಿತ್ಯ ಗೀಚಿದ್ದು, ನಾಲ್ಕು ಮಧುರ ಹಾಡುಗಳ ಮೂಲಕ ಮನಗೆಲ್ಲುತ್ತಿದೆ. ಅದೇನೇ ಇದ್ರು.. ಸದ್ಯ ಟ್ರೇಲರ್ ಮತ್ತು ಹಾಡುಗಳ ಮೂಲಕ ಭರವಸೆ ಮೂಡಿಸಿರುವ ನಾತಿಚರಾಮಿ ಸದ್ಯದಲ್ಲೇ ತೆರೆಗೆ ಬರಲಿದೆ. ಅಲ್ಲಿವರೆಗೂ ಹಾಡುಗಳನ್ನು ಕೇಳಿ ಎಂಜಾಯ್ ಮಾಡಿ.

LEAVE A REPLY

Please enter your comment!
Please enter your name here