Home Cinema ಅರೇರೇ..! ರಜಿನಿ ಜಪಿಸುತ್ತಿರೋದೇಕೆ ಮತ್ತೆ ಕನ್ನಡದ ಮಂತ್ರ..! 27 ವರ್ಷಗಳ ಬಳಿಕ ರಜಿನಿಕಾಂತ್ ವಾಯ್ಸ್ ಕನ್ನಡ...

ಅರೇರೇ..! ರಜಿನಿ ಜಪಿಸುತ್ತಿರೋದೇಕೆ ಮತ್ತೆ ಕನ್ನಡದ ಮಂತ್ರ..! 27 ವರ್ಷಗಳ ಬಳಿಕ ರಜಿನಿಕಾಂತ್ ವಾಯ್ಸ್ ಕನ್ನಡ ಸಿನಿಮಾದಲ್ಲಿ ಕೇಳುವ ಭಾಗ್ಯ..!

278
0
SHARE

ಪೆಟ್ಟಾ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಸಿನಿಮಾ. ಇನ್ನೇನೂ ಎರಡು ದಿನದಲ್ಲಿ ಚಿತ್ರಮಂದಿರಗಳಲ್ಲಿ ತನ್ನ ಪರಾಕ್ರಮ ಪ್ರದರ್ಶನ ಮಾಡಲಿರುವ ಪೆಟ್ಟಾ, ಕನ್ನಡ ಚಿತ್ರರಂಗಕ್ಕೆ ತಲೆ ನೋವಿಗೆ ಕಾರಣವಾಗ್ತಾನೇ ಬರ‍್ತಿದೆ. ಅದು, ಡಬ್ಬಿಂಗ್ ವಿಚಾರದಲ್ಲಿ.ಹೌದು, ಹಿಂದೆ ಸುದ್ದಿಯಾದಂತೆ ಪೆಟ್ಟಾ.. ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗೋದು ಬಹುತೇಕ ಕನ್ಫರ್ಮ್ ಆಗಿದೆ. ಸದ್ಯ, ಕೇಳಿ ಬರ‍್ತಿರುವ ಸುದ್ದಿಯ ಪ್ರಕಾರ.. ಪೆಟ್ಟಾ, ಕನ್ನಡಿಕರಣವಾಗಿ..

ಜನವರಿ ಅಂತ್ಯಕ್ಕೆಲ್ಲಾ ಕರ್ನಾಟಕದಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ ಖುದ್ದು ರಜಿನಿಕಾಂತ್ ಪೆಟ್ಟಾಗೆ ಕನ್ನಡದ ಸ್ಫರ್ಶ ನೀಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ತಮ್ಮ ಪಾತ್ರಕ್ಕೆ ತಾವೇ ಕನ್ನಡದಲ್ಲಿ ಡಬ್ ಮಾಡಲಿದ್ದಾರೆ.ಇನ್ನೂ ಪೆಟ್ಟಾ ಏಕಕಾಲಕ್ಕೆ ಹಿಂದಿ, ತಮಿಳು ಹಾಗೂ ತೆಲುಗುದಲ್ಲಿ ತೆರೆಗೆ ಬರ‍್ತಿದೆ. ಕನ್ನಡದಲ್ಲೂ ಏಕಕಾಲಕ್ಕೆ ಬಿಡುಗಡೆ ಮಾಡುವ ಐಡಿಯಾ ಚಿತ್ರತಂಡಕ್ಕೆ ಬಂದಿದ್ದು ತಡವಾಗಿ.

ಹಾಗಾಗಿ, ಆತುರದಲ್ಲಿ ಡಬ್ಬಿಂಗ್ ಮಾಡಿದ್ರೆ ಪೆಟ್ಟಾ ಕನ್ನಡ ಡಬ್ ವರ್ಷನ್‌ಗೆ ಪೆಟ್ಟು ಬೀಳುತ್ತೆ ಅನ್ನುವ ಆಲೋಚನೆನಿಂದ, ಚಿತ್ರದ ಡಬ್ಬಿಂಗ್ ಕೆಲ್ಸವನ್ನ ನಿಧಾನವಾಗಿ ಮಾಡ್ತಿದೆ ಚಿತ್ರತಂಡ.ಒಂದ್ವೇಳೆ ಪೆಟ್ಟಾ ಕನ್ನಡಕ್ಕೆ ಡಬ್ ಆಗಿ ತೆರೆಗೆ ಬಂದಿದ್ದೇ ಆದಲ್ಲಿ, ಭರ್ತಿ ೩೭ ವರ್ಷಗಳ ಬಳಿಕ ರಜಿನಿಯ ಕನ್ನಡದ ಮಾತುಗಳನ್ನ ಕೇಳುವ ಭಾಗ್ಯ, ರಜಿನಿಯ ಕನ್ನಡದ ಅಭಿಮಾನಿಗಳಿಗೆ ಸಿಕ್ಕಂತಾಗಲಿದೆ. ಇನ್ನೂ ಇದೇ ವೇಳೆ ಕನ್ನಡ ಚಿತ್ರರಂಗಕ್ಕೂ ಇದು ಹೊಡೆತ ಬೀಳಲಿದೆ.

ಹೌದು, ಮೂಲ ಭಾಷೆಯ ಜೊತೆಗೆ ಕನ್ನಡಕ್ಕೆ ಡಬ್ ಆಗಿ ಪೆಟ್ಟಾ.. ಬಂದಿದ್ದೇ ಆದಲ್ಲಿ, ಬಹುತೇಕ ಚಿತ್ರಮಂದಿರಗಳೂ ಪೆಟ್ಟಾಗೆ ಮಣೆಹಾಕೋದು ಕಟ್ಟಿಟ್ಟ ಬುತ್ತಿ. ಇದುವೇ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳೂ ಸಿಗುತ್ವಾ ಅನ್ನುವ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಇನ್ನೂ ಡಬ್ಬಿಂಗ್ ವಿರೋಧಿಗಳ ವಿರೋಧದ ನಡುವೆಯೂ ಪೆಟ್ಟಾ ಕನ್ನಡಕ್ಕೆ ಡಬ್ ಆಗುತ್ತಾ.

LEAVE A REPLY

Please enter your comment!
Please enter your name here