Home Cinema ಅರ್ಜುನ್ ಕಪೂರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೇಗೆ ಸಲ್ಮಾನ್ ಅತ್ತಿಗೆ..! ಸಲ್ಮಾನ್ ಖಾನ್ ಬಂದು ಆಶೀರ್ವಾದ ಮಾಡ್ತಾರಾ...

ಅರ್ಜುನ್ ಕಪೂರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೇಗೆ ಸಲ್ಮಾನ್ ಅತ್ತಿಗೆ..! ಸಲ್ಮಾನ್ ಖಾನ್ ಬಂದು ಆಶೀರ್ವಾದ ಮಾಡ್ತಾರಾ ನವಜೋಡಿಗೆ..?

524
0
SHARE

ಮಲೈಕಾ ಅರೋರಾ ಖಾನ್..ಬಿಟೌನ್‌ನ ಬಳುಕುವ ಬಳ್ಳಿ. ಎಲ್ಲಕ್ಕಿಂತ ಹೆಚ್ಚಾಗಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮಾಜಿ ಪತ್ನಿ. ಅಖಂಡ ಒಂದೂವರೆ ದಶಕ, ಅರ್ಬಾಜ್ ಖಾನ್ ಪ್ರೀತಿಯ ಮಳೆಯಲ್ಲಿ ಮಿಂದೆದ್ದ ಮಲೈಕಾ, ಕಳೆದೆರಡು ವರ್ಷದಿಂದ..

ಗಂಡನಿಂದ ದೂರವಾಗಿದ್ದಳು. ಸೋಡಾಚೀಟಿ ಕೊಟ್ಟಿದ್ದಳು. ಹಮ್ ಆಪ್ಕೇ ಹೈ ಕೌನ್ ಅಂದಿದ್ದಳು.ಅಷ್ಟಕ್ಕೂ ಮನಪೂರ್ವಕವಾಗಿ ಪ್ರೀತಿಸಿ, ಮದುವೆಯಾಗಿದ್ದ ಮಲೈಕಾ ಅರ್ಬಾಜ್‌ನಿಂದ ದೂರವಾಗ್ತಿರೋದ್ಯಾಕೆ ಅನ್ನುವ ಪ್ರಶ್ನೆಗಳು ಎದ್ದಾಗ, ಬಿಟೌನ್ ಅಕ್ಷರಶ ದಂಗಾಗಿ ಹೋಗಿತ್ತು. ಕಾರಣ, ಮಲೈಕಾ.. ಅರ್ಜುನ್ ಕಪೂರ್ ತೆಕ್ಕೆಗೆ ಬಿದ್ದಿದ್ದಳು. ಅರ್ಜುನ್ ಕಪೂರ್ ಮೇಲಿನ ವ್ಯಾಮೋಹವೇ ಅರ್ಬಾಜ್‌ನಿಂದ ದೂರವಾಗುವಂತೆ ಮಾಡಿತ್ತು.ಕಳೆದೆರಡು ವರ್ಷದಿಂದ, ಹೋದಲ್ಲಿ ಬಂದಲ್ಲಿ.. ಕುಂತಲ್ಲಿ.. ನಿಂತಲ್ಲಿ.. ಶ್ರೀ ದೇವಿ ಪತಿ ಬೋನಿ ಕಪೂರ್‌ನ ಸುಪುತ್ರ ಅರ್ಜುನ್ ಕಪೂರ್ ಜೊತೆಗೆ ಸುತ್ತಾಡಿದ ಮಲೈಕಾ, ಇದೀಗ.. ಕೊನೆಗೂ ಅರ್ಜುನ್ ಬದುಕಿನ ಮಲ್ಲಿಕಾ ಆಗಲು ನಿರ್ಧರಿಸಿದ್ದಾಳೆ.

ಹೌದು, ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಮದುವೆಗೆ ದಿನಾಂಕ ನಿಕ್ಕಿಯಾಗಿದೆ. ಮುಂಬೈನ ಗಲ್ಲಿಗಳಿಂದ ತೂರಿ ಬಂದಿರುವ ಸುದ್ದಿಯ ಪ್ರಕಾರ ಇದೇ ಏಪ್ರಿಲ್ ೧೯ರಂದು, ಮಲೈಕಾ ಹಾಗೂ ಅರ್ಜುನ್ ಸಪ್ತಪದಿ ತುಳಿಯಲಿದ್ದಾರೆ. ಅಲ್ಲಿಗೆ.. ಮತ್ತೊಂದು ಅದ್ಧೂರಿ ಮದುವೆ ಸಂಭ್ರಮಕ್ಕೆ ಹಿಂದಿ ಚಿತ್ರರಂಗ ಸಾಕ್ಷಿಯಾಗಲಿದೆ.ಇನ್ನೂ ಅರ್ಜುನ್ ಹಾಗೂ ಮಲೈಕಾ ಮದುವೆ ದಿನಾಂಕ ಫಿಕ್ಸ್ ಆದ ಬೆನ್ನೇಟಿಗೆ, ಬಿಟೌನ್‌ನಲ್ಲಿ ಮತ್ತೊಂದು ಚರ್ಚೆ ಶುರುವಾಗಿದೆ. ಅದುವೇ ಅತ್ತಿಗೆ ಮದುವೆಗೆ ಸಲ್ಮಾನ್ ಖಾನ್ ಬರ‍್ತಾರಾ ಅನ್ನೋದು. ಹೌದು, ನಿಮಗೆ ಗೊತ್ತಿರಲಿ ಮಲೈಕಾ ಮೇಲೆ ಸಲ್ಮಾನ್‌ಗೆ ವಿಶೇಷ ಗೌರವವಿತ್ತು.

ಆದ್ರೆ ಇದೇ ಗೌರವ, ಅರ್ಜುನ್ ಕಪೂರ್ ಪ್ರೀತಿ ಮುಂದೆ ನಗಣ್ಯವಾಗಿತ್ತು. ಇಷ್ಟೇ ಅಲ್ಲ, ಅದ್ಯಾವಾಗ.. ಅರ್ಬಾಜ್‌ಗೆ ವಿಚ್ಚೇದನ ನೀಡುವ ಮನಸನ್ನ ಮಲೈಕಾ ಮಾಡಿದ್ದಳೋ, ಆಗ.. ಸಲ್ಮಾನ್, ಮಲೈಕಾ ಮನಸು ಒಲಿಸುವ ಥರೇವಾರಿ ಪ್ರಯತ್ನಗಳನ್ನ ಮಾಡಿದ್ದರು. ಆದ್ರೆ ಅದ್ಯಾವದು ಪ್ರಯೋಜನಕ್ಕೆ ಬರಲಿಲ್ಲ. ಇದು, ಸಲ್ಮಾನ್ ಆತ್ಮಗೌರವಕ್ಕೆ ಧಕ್ಕೆ ತಂದಿದ್ದು ಸುಳ್ಳಲ್ಲ. ಹಾಗಾಗೇ, ಮಲೈಕಾ ಅದ್ಯಾವಾಗ ಅರ್ಜುನ್ ಕಪೂರ್‌ಗಾಗಿ ಮನೆಯಾಚೆ ಕಾಲಿಟ್ಟಳೋ, ಆಗಲೇ.. ಸಲ್ಮಾನ್, ಮಲೈಕಾ ಅರೋರಾಳನ್ನ ತಮ್ಮ ಮುಂದಿನ ದಬಂಗ್ ೩ ಚಿತ್ರದಿಂದ ಹೊರ ಹಾಕಿದ್ದರು. ಇದೆಲ್ಲಾ ಕಾರಣದಿಂದ ಇದೀಗ, ಸಲ್ಮಾನ್ ಖಾನ್ ಮಲೈಕಾ ಮದುವೆಗೆ ಬರ‍್ತಾರಾ, ಬರಲ್ವಾ ಅನ್ನುವ ಚರ್ಚೆ ಶುರುವಾಗುವಂತೆ ಮಾಡಿದೆ.

ಇನ್ನೂ ಮದುವೆಗೆ ಕೆಲವೇ ಕೆಲ ಗಣ್ಯರಿಗಷ್ಟೇ ಆಹ್ವಾನ ನೀಡುವ ನಿರ್ಧಾರಕ್ಕೆ ಮಲೈಕಾ ಹಾಗೂ ಅರ್ಜುನ್ ಕಪೂರ್ ಬಂದಿದ್ದಾರೆ. ಇನ್ನು ಮದುವೆ ಎಲ್ಲಿ ನಡೆಯುತ್ತೆ ಅನ್ನೋದಕ್ಕಿನ್ನು ಉತ್ತರ ಸಿಕ್ಕಿಲ್ಲ. ಅಂದ ಹಾಗೇ ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಇದೆ. ಅದುವೇ ಇಬ್ಬರ ನಡುವಿನ ವಯಸಿನ ಅಂತರ.ಹೌದು, ಮಲೈಕಾ ಕೈ ಹಿಡಿಯಲು ಮುಂದಾಗಿರುವ ಅರ್ಜುನ್, ಮಲೈಕಾಗಿಂತ ಹನ್ನೆರಡು ವರ್ಷ ಚಿಕ್ಕವನು. ಇನ್ನೂ.. ಮಲೈಕಾ ಹಾಗೂ ಅರ್ಬಾಜ್ ಪ್ರೀತಿಯ ಸಂಕೇತವಾಗಿ ಹದಿನೆಂಟು ವರ್ಷದ ಪುತ್ರ ಇದ್ದಾನೆ.

ಇದುವೇ ಇದೀಗ ಮತ್ತೊಂದು ರೀತಿಯ ಚರ್ಚೆಗೂ ಕಾರಣವಾಗಿದೆ. ಮಲೈಕಾಗೆ ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ ಅನ್ನುವ ಪ್ರಶ್ನೆಗಳಿಗೂ ಕಾರಣವಾಗಿದೆ.ಅಂದ ಹಾಗೇ, ಮಲೈಕಾ ಹಾಗೂ ಅರ್ಜುನ್ ಕಪೂರ್ ಇಬ್ಬರ ಚೋಟಿ ಸಿ ಲವ್ ಸ್ಟೋರಿ ಶುರುವಾಗಿದ್ದು, ಲಾಕ್ಮೈ ಫ್ಯಾಶನ್ ವೀಕ್‌ನಲ್ಲಿ. ೨೦೧೬ರಲ್ಲಿ ನಡೆದ ಇದೆ ಫ್ಯಾಶನ್ ಶೋನಲ್ಲಿ ಕೈ ಕೈ ಹಿಡಿದು ಇಬ್ಬರು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು. ಅಲ್ಲೇ.. ಮನಸುಗಳೂ ಎಕ್ಸೇಂಜ್ ಆಗಿದ್ವು. ಇದೀಗ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಆನಿ ವೇಸ್, ಏಪ್ರಿಲ್ ಹತ್ತೊಂಬತ್ತಕ್ಕೆ ಮದುವೆಯ ಬಂಧನಕ್ಕೊಳಗಾಗಲಿರುವ ಅರ್ಜುನ್ ಹಾಗೂ ಮಲೈಕಾಳ ಬಾಳ ಪಯಣ ಸುಖಕರವಾಗಿರಲಿ ಅನ್ನೋದೇ ಮಲೈಕಾ ಅಭಿಮಾನಿಗಳ ಆಶಯ..

LEAVE A REPLY

Please enter your comment!
Please enter your name here