Home Cinema ಅರ್ಜುನ್ ರೆಡ್ಡಿ ಆಗ್ತಾರಾ ಆಗಲ್ವಾ, ರಶ್ಮಿಕಾ ಮಂದಣ್ಣ ಗಂಡ..?! ಗೀತಾ ತುಟಿ ಚುಂಬಿಸಿದ್ದೇ ತಪ್ಪಾಯ್ತು ಅಂದಿದ್ದೇಕೆ...

ಅರ್ಜುನ್ ರೆಡ್ಡಿ ಆಗ್ತಾರಾ ಆಗಲ್ವಾ, ರಶ್ಮಿಕಾ ಮಂದಣ್ಣ ಗಂಡ..?! ಗೀತಾ ತುಟಿ ಚುಂಬಿಸಿದ್ದೇ ತಪ್ಪಾಯ್ತು ಅಂದಿದ್ದೇಕೆ ಗೊತ್ತಾ ವಿಜಯ್ ದೇವರಕೊಂಡ..? ಲಿಪ್ ಲಾಕ್ ಸೀನ್ ಚಿತ್ರದಿಂದ ಮಾಯವಾಗಿದ್ದು ಯಾವ ಕಾರಣಕ್ಕೆ..??

3603
0
SHARE

ರಕ್ಷಿತ್ & ರಶ್ಮಿಕಾ..ಕನ್ನಡ ಚಿತ್ರರಂಗದ ಮುದ್ದಾದ ಜೋಡಿ. ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡು.. ಅಭಿಮಾನಿಗಳಿಗೆ ಸರ್‌ಫ್ರೈಸ್ ನೀಡಿದ್ದ ರಕ್ಷಿತ್ & ರಶ್ಮಿಕಾ ಇದೀಗ ದೂರ ದೂರ ಆಗಿದ್ದಾರೆ ಅನ್ನೋ ವಿಷಯ ಎಲ್ಲರಿಗೂ ಗೊತ್ತು.  ಇದು ಗೀತ ಗೋವಿದಂನ ಸೈಡ್ ಎಫೆಕ್ಟ್ & ರಿಸಲ್ಟ್ ಅಂತಲೂ ಗೊತ್ತು. ಅಸಲಿಗೆ ರಶ್ಮಿಕಾ.. ತೆಲುಗು ಸಿನಿರಂಗಕ್ಕೆ ಹೋದಾಗ, ಅನೇಕರು.. ರಶ್ಮಿಕಾ & ರಕ್ಷಿತ್ ಇಬ್ಬರು ಮದುವೆಯಾಗ್ತಾರಾ ಅನ್ನುವ ಅನುಮಾನ ವ್ಯಕ್ತಪಡಿಸಿದ್ದರು. ಇದೇ ಅನುಮಾನಕ್ಕೆ ಗೀತ ಗೋವಿಂದಂ ಸಿನಿಮಾ ಮತ್ತೊಂದಷ್ಟು ಜೀವ ತುಂಬಿತ್ತು.

ಆದರೆ ಈಗ ರಕ್ಷಿತ್ ಮತ್ತು ರಶ್ಮಿಕಾ ಬ್ರೇಕಪ್ ಬಗ್ಗೆ ವಿಜಯ್ ದೇವರಕೊಂಡ ಮಾತನಾಡಿದ್ದಾರೆ ಅನ್ನೋದು ವಿಶೇಷ.ಎರಡು ವರ್ಷದಲ್ಲಿ ಐದು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ, ಗೆಲುವಿನ ಕೀರ್ತಿ ಪತಾಕೆಯನ್ನ ಐದು ಸಿನಿಮಾಗಳಲ್ಲಿ ಹಾರಿಸಿದರು.. ಇದೇ ಕಾರಣಕ್ಕೆ, ಅನೇಕ ಸಿನಿಮಾಗಳು ರಶ್ಮಿಕಾರನ್ನ ಅರಸಿ ಬಂದವು.. ಅದ್ರಲ್ಲೂ ತೆಲುಗು ಸಿನಿ ಉದ್ಯಮ ರಶ್ಮಿಕಾ ನಾಮ ಸ್ಮರಣೆಯನ್ನ ಹಗಲಿರುಳು ಮಾಡ್ತಿದೆ. ಇದಕ್ಕೆ ಸಾಕ್ಷಿ ಅನ್ನುವಂತೆ ರಶ್ಮಿಕಾ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಕ್ಷಿತ್ & ರಶ್ಮಿಕಾ ಎಂಗೇಜ್ ಆದಾಗ..

ಎರಡು ವರ್ಷದ ಬಳಿಕ ಮದುವೆಯಾಗುವದಾಗಿ ಹೇಳಿದ್ದರು. ಆದ್ರೀಗ ಒಂದು ವರ್ಷ ಕಳೆಯುಷ್ಟರಲ್ಲೇ ಎಲ್ಲ ಬದಲಾಗಿದೆ. ಪ್ರೀತಿಯ ಕೊಂಡಿ ಕಳಚಿ ಬಿದ್ದಿದೆ.ರಶ್ಮಿಕಾ, ವಿಜಯ್ ದೇವರಕೊಂಡ ಅಭಿನಯದ ಗೀತ ಗೋವಿಂದಂ ಚಿತ್ರದ ಟೀಸರ್ ಹೊರ ಬಿದ್ದಾಗ್ಲೇ, ಅನೇಕರು.. ಹೌಹಾರಿದ್ದರು. ಕಾರಣ, ಟೀಸರ್‌ನಲ್ಲಿನ ರೊಮ್ಯಾಂಟಿಕ್ ಸೀಕ್ವೆನ್ಸ್. ಹೌದು, ಟೀಸರ್ ನೋಡಿ ಅವತ್ತೇ ಗೀತ ಗೋವಿದಂ ಪಕ್ಕಾ ರೊಮ್ಯಾಂಟಿಕ್ ಸಿನಿಮಾ ಅನ್ನುವ ನಿರ್ಧಾರಕ್ಕೆ ಬಂದಿದ್ದ ಅನೇಕರು, ರಶ್ಮಿಕಾ ವಿಜಯ್ ದೇವರಕೊಂಡ ತುಟಿಗೆ ತುಟಿಯೊತ್ತಿದ್ಮೇಲೆ ತಲೆ ಮೇಲೆ ಕೈ ಇಟ್ಕೊಂಡು ಕುಂತಿದ್ದರು.

ಬಿಡುಗಡೆಗೂ ಮುನ್ನವೇ ಹೊರ ಬಿದ್ದ ಲಿಪ್ ಲಾಕ್ ಸೀನ್, ರಕ್ಷಿತ್ ಮನಸಿಗೂ ಬೇಸರ ತಂದಿದ್ದು ಸುಳ್ಳಲ್ಲ. ಇದೇ ಬೇಸರ.. ಅನೇಕ ರೀತಿಯ ಗಾಸಿಪ್‌ಗೂ ಕಾರಣವಾಗಿದ್ದು ಸುಳ್ಳಲ್ಲ. ಇಬ್ಬರು ಬೇರೆಯಾಗ್ತಾರೆ ಅನ್ನುವ ಮಾತುಗಳಿಗೂ ಕಾರಣವಾಗಿದ್ದು ಸುಳ್ಳಲ್ಲ. ಹೀಗಿದ್ದೂ ಹರಿದಾಡ್ತಿದ್ದ ಸುದ್ದಿಗಳಿಗೆಲ್ಲಾ ಅವತ್ತು ಬ್ರೇಕ್ ಹಾಕಿದ ಇಬ್ಬರು, ಹಾಗೇನ್ ಇಲ್ಲ.. ನಾವ್ ಇಬ್ಬರು ಒಟ್ಟಿಗೆ ಇದೀವಿ ಅಂದಿದ್ದರು. ಸುಖಾ ಸುಮ್ಮನೆ ಸುಳ್ಳು ಸುದ್ದಿಗಳನ್ನ ಹಬ್ಬಿಸಬೇಡಿ ಅಂದಿದ್ದರು.

ಇದೆಲ್ಲದ್ರ ನಡುವೆ, ತೆಲುಗು ಸಿನಿಪ್ರಿಯರು ಒಂದು ಅಭಿಯಾನವನ್ನ ಸಾಮಾಜಿಕ ಜಾಲತಾಣದಲ್ಲಿ ಮಾಡಲು ಶುರುವಿಟ್ಟುಕೊಂಡಿದ್ದರು. ಅದುವೇ ವಿಜಯದೇವರಕೊಂಡ ನೀನಾಗು ರಶ್ಮಿಕಾ ಗಂಡ ಅನ್ನೋದು. ಹೌದು, ಗೀತ ಗೋವಿಂದಂ ಚಿತ್ರದಲ್ಲಿನ ಇಬ್ಬರ ಕೆಮೆಸ್ಟ್ರೀ ಕಂಡ ಅನೇಕರು, ಇಬ್ಬರು ನಿಜ ಜೀವನದಲ್ಲಿ ಒಂದಾದ್ರೆ ಎಷ್ಟೊಂದು ಚೆಂದವಾಗಿರುತ್ತೆ ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೇ ಅಭಿಪ್ರಾಯವನ್ನ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದ ಅನೇಕರು ತೆಲುಗು ನಾಡಿನ ಸೊಸೆ ರಶ್ಮಿಕಾ ಆಗಬೇಕು ಅಂದಿದ್ದರು.

ಇನ್ನು, ಗೀತ ಗೋವಿಂದ ನೂರು ಕೋಟಿ ದಾಟಿದ್ಮೇಲೆ ಪೂರ್ತಿ ಸಕ್ಸಸ್ ಕ್ರೆಡಿಟ್‌ನ್ನ ರಶ್ಮಿಕಾಗೆ ಅರ್ಪಿಸಿದ ವಿಜಯ್ ದೇವರಕೊಂಡ ಅಭಿಮಾನಿಗಳ ಆಸೆಗೆ ಮತ್ತಷ್ಟು ಜೀವ ತುಂಬಿದ್ದರು. ಇದು ಕೂಡಾ, ರಕ್ಷಿತ್ ಇರಿಸು ಮುರಿಸಿಗೆ ಕಾರಣವಾಗಿತ್ತು.ಈ ಎಲ್ಲದರ ಪರಿಣಾಮವಾಗಿ ರಕ್ಷಿತ್ ಮತ್ತು ರಶ್ಮಿಕಾ ಅವರ ಎಂಗೇಜ್ ಮೆಂಟ್ ಮುರಿದುಬಿದ್ದಿತ್ತು. ಅದಕ್ಕೆ ಕಾರಣ ವಿಜಯ್ ದೇವರಕೊಂಡ ಇರಬಹುದೇನೋ ಅಂತ ಅಡ್ಡ ಗೋಡೆ ಮೇಲೆ ದೀಪ ಇಟ್ಟವರಂತೆ ಎಲ್ಲರೂ ಮಾತನಾಡುತ್ತಿದ್ದರು.

ಆದರೆ ಇತ್ತೀಚೆಗೆ ಸಿನಿಮಾ  ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವಿಜಯ್ ದೇವರಕೊಂಡ ಈ ಬಗ್ಗೆ ಈಗ ಸ್ಪಷ್ಟನೆ ನೀಡಿದ್ದಾರೆ.ಇಷ್ಟು ದಿನ ಈ ವಿಷಯದ ಬಗ್ಗೆ ಅಷ್ಟಾಗಿ ಮಾತನಾಡಿರದ ವಿಜಯ್ ದೇವರಕೊಂಡ, ಈಗ ನೋಟ ಸಿನಿಮಾದ ಕಾರ್ಯಕ್ರಮದಲ್ಲಿ ರಶ್ಮಿಕಾ ಮತ್ತು ರಕ್ಷಿತ್ ಬಗ್ಗೆ ಮಾತನಾಡಿದ್ದಾರೆ. ಅವರಿಬ್ಬರೂ ಎಷ್ಟು ನೋವು ಅನುಭವಿಸುತ್ತಿದ್ದಾರೆ ನಾನು ಅರ್ಥ ಮಾಡಿಕೊಳ್ಳಬಲ್ಲೆ. ಇನ್ನೊಬ್ಬರ ನೋವನ್ನು ಯಾರೂ ಕ್ಯಾಷ್ ಮಾಡಿಕೊಳ್ಳಬಾರದು.

ಅವರಿಬ್ಬರೂ ನಟ ನಟಿಯರು. ಅವರು ಈಗ ಕಷ್ಟದಲ್ಲಿದ್ದಾರೆ. ಅವರಿಗೆ ಸ್ವಲ್ಪ ಸಮಯ ಕೊಡಬೇಕು. ಸುಮ್ಮನೇ ಅದನ್ನೇ ಮಾತನಾಡಿ ಅವರಿಗೆ ಇನ್ನಷ್ಟು ಹರ್ಟ್ ಮಾಡಬಾರದು ಅಂತಾರೆ ವಿಜಯ್.ರಶ್ಮಿಕಾ ಜೊತೆ ನಿಮ್ಮ ರಿಲೇಶನ್ ಏನು ಅಂದ್ರೆ ಆಕೆ ಒಬ್ಬ ಅದ್ಭುತ ನಟಿ, ಅವರಿಂದಾಗಿ ಗೀತ ಗೋವಿಂದಂ ಚಿತ್ರಕ್ಕೆ ಹೆಚ್ಚು ವ್ಯಾಲ್ಯೂ ಸಿಕ್ತು ಅಂತಾರೆ ವಿಜಯ್. ಗೀತ ಗೋವಿಂದ ಚಿತ್ರದ ಕಿಸ್ಸಿಂಗ್ ಸೀನ್ ಬಗ್ಗೆ ಕೇಳಿದಾಗ, ಇಂಥ ಘಟನೆಗಳು ದುರದೃಷ್ಠಕರ. ಕಿಸ್ಸಿಂಗ್ ಸೀನ್ ಲೀಕ್ ಆಗಿದ್ದು ಅಚ್ಚರಿಯ ವಿಷಯ.ಅಲ್ಲದೆ ಅದರಿಂದ ಅಷ್ಟೊಂದು ರಂಪ ಆಗಿದ್ದು ಇನ್ನೂ ದೊಡ್ಡ ವಿಪರ್ಯಾಸ.

ಅದರಿಂದಾಗಿ, ರಕ್ಷಿತ್ ರಶ್ಮಿಕಾ ಇಬ್ಬರೂ ಅದರಿಂದಾಗಿ ಎಷ್ಟು ಹರ್ಟ್ ಆಗಿದ್ದಾರೆ ಅನ್ನೋದು ನಂಗೆ ಗೊತ್ತು. ಅದರಿಂದ ನನಗೂ ತುಂಬಾ ಬೇಸರವಾಗಿದೆ. ಅದರ ಬಗ್ಗೆ ಹೆಚ್ಚು ಮಾತನಾಡಬಾರದು. ನಾನು ಅವರಿಬ್ಬರನ್ನೂ ಗೌರವಿಸುತ್ತೇನೆ ಎಂದು ಹೇಳಿ ಮಾತು ಮುಗಿಸಿದ್ದಾರೆ ವಿಜಯ್ ದೇವರಕೊಂಡ.ಒಟ್ಟಿನಲ್ಲಿ ರಕ್ಷಿತ್ ರಶ್ಮಿಕಾ ನಡುವೆ ವಿಜಯ್ ದೇವರಕೊಂಡ ಇದ್ದಾರೆ ಅನ್ನೋ ಹಲವರ ಅನಿಸಿಕೆಗಳನ್ನು ಸುಳ್ಳು ಮಾಡುವಂತೆ ಸ್ಥಿತಪ್ರಜ್ಞತೆಯಿಂದ ಮಾತನಾಡಿ ಈ ವಿವಾದಕ್ಕೊಂದು ಪಾಸಿಟಿವ್ ಟಚ್ ಕೊಡುವ ಪ್ರಯತ್ನ ಮಾಡಿದ್ದಾರೆ ವಿಜಯ್ ದೇವರಕೊಂಡ.

ಸಾಮಾನ್ಯವಾಗಿ ಇಂಥ ಬ್ರೇಕಪ್ ಗಳು ಆದಾಗ ಮಾಧ್ಯಮಗಳಲ್ಲಿ ಅದರ ವೈಭವೀಕರಣ ಆಗುತ್ತದೆ. ಹಾಗಾಗಿ ಬಹಳಷ್ಟು ಜನ ಇದಕ್ಕೆ ಮಾಧ್ಯಮಗಳನ್ನೇ ಹೊಣೆ ಮಾಡುತ್ತಾರೆ. ಆದರೆ ಈ ಪ್ರಕರಣದಲ್ಲಿ ಮಾಧ್ಯಮಗಳಿಗಿಂತ, ಸಾಮಾಜಿಕ ಜಾಲತಾಣಗಳಲ್ಲಿನ ಜನರಂತೆ ಈ ರಕ್ಷಿತಾ ರಶ್ಮಿಕಾ ನಡುವಿನ ಹಳಸಿರೋ ಸಂಬಂಧಕ್ಕೆ ಯಾವ ಕಾರಣಗಳು ಇವೆಯೋ  ಗೊತ್ತಿಲ್ಲ. ಆದರೆ ಸದ್ಯಕ್ಕಂತೂ ನಾನಂತೂ ಇದಕ್ಕೆ ಕಾರಣ ಅಲ್ಲ ಅನ್ನೋದನ್ನ ವಿಜಯ್ ದೇವರಕೊಂಡ ಸ್ಪಷ್ಟವಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here