Home Cinema ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತ ಹರ್ಷಿಕಾ.?! “A ಲಿಸ್ಟ್‌ನಲ್ಲಿರುವ ಸ್ಟಾರ್‌ಗಳ ಮೇಲೆ ಆಪಾದನೆ ಮಾಡೋ ತಾಕತ್ತಿದ್ಯಾ”?...

ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತ ಹರ್ಷಿಕಾ.?! “A ಲಿಸ್ಟ್‌ನಲ್ಲಿರುವ ಸ್ಟಾರ್‌ಗಳ ಮೇಲೆ ಆಪಾದನೆ ಮಾಡೋ ತಾಕತ್ತಿದ್ಯಾ”? #WeToo ಅಭಿಯಾನ ಶುರುಮಾಡುವಂತೆ ಪುರುಷರಲ್ಲಿ ಹರ್ಷಿಕಾ ಮನವಿ..!

859
0
SHARE

ಮೀ ಟೂ ಅಲ್ಲ ವಿ ಟೂ ಶುರುಮಾಡಿ ಅಂದ ಹರ್ಷಿಕಾ:ನಮಸ್ಕಾರ. ನಾನು ಮೀ ಟೂ ಅಭಿಯಾನವನ್ನ ಗಮನಿಸುತ್ತಾನೇ ಇದ್ದೇನೆ. ಒಬ್ಬ ಧೈರ್ಯವಂತ ಮಹಿಳೆಯಾಗಿ, ಚಿತ್ರರಂಗವನ್ನ ಹತ್ತಿರದಿಂದ ನೋಡಿರುವ ನಾನು, ಮಹಿಳೆಯರಿಗೆ ಅಗೌರವವ ಕೊಡುವವರನ್ನ ನಾನು ಖಂಡಿಸುತ್ತೇನೆ. ಮಹಿಳೆಯರ ಪರ ನಿಲ್ಲುತ್ತೇನೆ. ಆದ್ರೆ sಸ್ತ್ರೀತನವನ್ನ ಬಳಸಿಕೊಂಡು ಪ್ರಚಾರ ಪಡೆಯುತ್ತಿರುವ ಕೆಲವರನ್ನ ನೋಡಿದ್ರೆ ನನಗೀಗ ಅಸಹ್ಯ ಅನಿಸುತ್ತಿದೆ.

ಪ್ರಚಾರ ಬೇಕು, ಬಟ್, ಈ ರೀತಿಯಲ್ಲಾ. ಒಂದು ಕುಟುಂಬವನ್ನ ಒಡೆದು, ಪತ್ನಿ ಹಾಗೂ ಪುತ್ರಿಯರನ್ನ ನಾಚಿಕೆ ಪಡುವ ಹಾಗೇ ಮಾಡೋದು.? ಒಬ್ಬ ವ್ಯಕ್ತಿಯ ವೃತ್ತಿಯನ್ನೇ ಬಲಿ ತೆಗೆದುಕೊಳ್ಳಲು ಮುಂದಾಗೋದು ಅದು ಬರೀ ಒಂದು ಹೇಳಿಕೆಯಿಂದ. ನಾನು ಇಲ್ಲಿ ನೇರವಾಗಿ ಹೇಳ್ತೀನಿನಾನು ಚಿತ್ರರಂಗದಲ್ಲಿ ಕಳೆದ ಹತ್ತು ವರ್ಷದಿಂದ ಇದ್ದೇನೆ. ಹಾಗೂ ಎಲ್ಲವನ್ನೂ ಕಣ್ಣಾರೆ ಕಂಡಿದ್ದೇನೆ. ತನ್ನನ್ನ ತಾನು ಆಕ್ಟಿವಿಸ್ಟ್ ಎಂದು ಕರೆದುಕೊಳ್ಳುವ ನಟಿಯರು ಆರಂಭದಲ್ಲಿ ಅವಕಾಶವಾದಿಗಳಾಗಿರ‍್ತಾರೆ.

ದುಡ್ಡು, ನೇಮು, ಫೇಮು ಬರೋವವರೆಗೂ ಪುರುಷರಿಗೆ ಸ್ವತಂತ್ರವನ್ನ ನೀಡಿರ‍್ತಾರೆ. ನಂತರ ಇದನ್ನೇ ಪ್ರಚಾರಕ್ಕೆ ಬಳಸಿಕೊಳ್ತಾರೆ. ಕೈ ಹಿಡಿದುಕೊಂಡು ನಡೆದವರನ್ನೇ ಟಾರ್ಗೆಟ್ ಮಾಡಲು ಶುರುವಿಟ್ಟುಕೊಳ್ತಾರೆ. ವ್ಯಯಕ್ತಿಕವಾಗಿ ನಾನು ನೋಡಿದ್ದೇನೆ ಆಕ್ಟಿವಿಸ್ಟ್‌ರಂತೆ ನಟಿಸುವ ನಟಿಯರು ವಿದೇಶದಲ್ಲಿ ಚಿತ್ರೀಕರಣವಿದ್ದಾಗ ಗಾಂಜಾ ಮತ್ತಿನಲ್ಲಿ ತೂರಾಡುತ್ತಾರೆ. ಬೇರೆಯವರ ಮೈ ಮೇಲೆ ಬೀಳ್ತಾರೆ.

[ ಬೇರೆ ಚಿತ್ರರಂಗದ ಕಲಾವಿದರು. ನಿರ್ಮಾಪಕರು, ನಿರ್ದೇಶಕರು, ರಿಯಲ್ ಎಸ್ಟೇಟ್ ಕುಳಗಳು ಮುಂತಾದವರು. ಮಲೆಶಿಯಾ, ದುಬೈನಲ್ಲಿ ನಡೆಯುವ ದೊಡ್ಡ ಪ್ರಶಸ್ತಿ ಸಮಾರಂಭದಲ್ಲಿ ] ಅವೆಲ್ಲಾ ಕೆಲ್ಸಗಳನ್ನೂ ಮಾಡ್ತಾರೆ, ಅದನ್ನ ನಾನು ಹೇಳಲು ಬಯಸುವುದಿಲ್ಲ. ಆಗ ಅದೆಲ್ಲಾ ಇವ್ರಿಗೆ ಸರಿ ಅನ್ಸುತ್ತೆ. ಓಕೆ ಅನ್ಸುತ್ತೆ. ಯಾಕಂದ್ರೆ ಆಗ ಅವಶ್ಯಕತೆ ಅನಿವಾರ್ಯತೆ ಇರುತ್ತೆ. ಈಗ ಅವೆಲ್ಲವನ್ನೂ ಪಡೆದ ಬಳಿಕ ಅವತ್ತು ಏಣಿಯಾಗಿ ಬಳಸಿಕೊಂಡವರ ವಿರುದ್ಧವೇ ಆರೋಪವನ್ನ ಮಾಡಲು ಶುರುಮಾಡುತ್ತಾರೆ.

ಹತ್ತು, ಐದು, ಎರಡು ವರ್ಷದ ಹಿಂದೆ ಇಂಥಹ ಘಟನೆಗಳು ಆದಾಗ ನಿಮ್ಮ ಮೀ ಟೂ ಫೀಲಿಂಗ್ ಎಲ್ಲಿ ಹೋಗಿತ್ತು. ಆಗ ಇದೆಲ್ಲಾ ಓಕೆ. ಆದ್ರೀಗ ಜಗತ್ತಿನಲ್ಲಿರುವ ಮಹಿಳೆಯರ ರಕ್ಷಣೆ ಮಾಡೋದು ನಮ್ಮ ಜವಾಬ್ಧಾರಿ ಅನ್ನುವ ಮೂಲಕ ಟೊಂಕ ಕಟ್ಟಿ ನಿಂತಿದ್ದೀರಿ. ಅಸಂಬದ್ಧ. ಮೂರ್ಖತನ. ನಿಮ್ಮಲ್ಲಿ ನಾನು ಒಂದು ಪ್ರಶ್ನೆ ಕೇಳಲು ಇಚ್ಚಿಸುತ್ತೇನೆ.ಎ ಲಿಸ್ಟ್ ಸ್ಟಾರ್ ನಟರ ಹೆಸರುಗಳನ್ನ ಹೇಳುವ ತಾಖತ್ತು ನಿಮಗಿದೆಯಾ. ಯಾಕೆ ಅನ್ಯಭಾಷಾ ಸೂಪರ್ ಸ್ಟಾರ್ ನಟಿಯರು ಆರೋಪಗಳನ್ನ ಮಾಡುತ್ತಿಲ್ಲ.

ನನಗೆ ತುಂಬಾ ಆಪ್ತರಾಗಿರುವ ನಿರ್ಮಾಪಕ ಹಾಗೂ ಒಳ್ಳೇಯದನ್ನ ಬಯಸುವರೊಬ್ಬರು ಒಂದು ವಿಡಿಯೋ ತೋರಿಸಿದ್ದರು. ಅದ್ರಲ್ಲಿ ಸದ್ಯ ಆಕ್ಟಿವಿಸ್ಟ್ ಅನ್ನುವಂತೆ ಪೋಸ್ ಕೊಡ್ತಿರುವ ನಟಿ ಗಾಂಜಾ ಮತ್ತಿನಲ್ಲಿ ಖ್ಯಾತ ವ್ಯಕ್ತಿಯೊಂದಿಗೆ ನೆಲದ ಮೇಲೆ ಹೊರಳಾಡುತ್ತಿದ್ದಳು. ಕೆಲವರ ಹೆಸರಿಗೆ ಮಸಿ ಬಳಿಯೋದು ಹೇಗೆ ಅನ್ನುವ ಚರ್ಚೆ ಮಾಡುತ್ತಿದ್ದಳು. ಇನ್ನೊಂದು ವಿಡಿಯೋದಲ್ಲಿ ಖ್ಯಾತ ನಟನೊಬ್ಬ, ತನ್ನದೇ ಸಹನಟಿಯ ಅರೆಬೆತ್ತಲೆ ವಿಡಿಯೋವನ್ನ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ.

ಅವಳು ತುಂಬಾ ಖುಷಿಯಲ್ಲೇ ನಿನ್ನ ಮುಂದಿನ ಸಿನಿಮಾಗೂ ನನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಬೇಕು ಅನ್ನುತ್ತಿದ್ದಳು. ಇದೆಲ್ಲ ಸರಿನಾ. ನಾನು ಒಬ್ಬ ನಟಿಯಾಗಿ ನನಗೂ ಅನೇಕ ಅನುಭವಗಳಾಗಿವೆ. ಸಹಾಯದ ನೆಪದಲ್ಲಿ ಅನೇಕರು ನನ್ನ ಬಳಸಿಕೊಳ್ಳುವ ಯತ್ನ ಮಾಡಿದ್ದಾರೆ. ಆದ್ರೆ ನಾನು ಅವ್ರ ಸಹಾಯವನ್ನ ನಯವಾಗಿ ಸರಾಸಗಟವಾಗಿ ತಿರಸ್ಕರಿಸಿದ್ದೇನೆ. ನಾನು ಏನೂ, ನನ್ನ ಆಧ್ಯತೆಗಳೇನು ಅನ್ನೋದನ್ನೂ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇದೀಗ ಹತ್ತು ವರ್ಷದ ಬಳಿಕ ನನ್ನ ಮೇಲೆ ನನಗೆ ಹೆಮ್ಮೆ ಇದೆ.

ಕಾರಣ ಚಿತ್ರರಂಗದಲ್ಲಿ ನನ್ನತ್ತ ಯಾರು ಬೊಟ್ಟು ಮಾಡುವದಿಲ್ಲ. ಯಾಕಂದ್ರೆ ನಾನು ಪ್ಯೂರ್ ಹಾಗೂ ಕ್ಲೀನಾಗಿ ಇದ್ದೇನೆ. ಇದಕ್ಕೆ ಕಾರಣ ಸ್ವಚ್ಚವಾದ ಪರಿಸರದಲ್ಲಿ ನಾನು ಕೆಲ್ಸ ಮಾಡಿದ್ದೇನೆ. ಕೆಲ ದೊಡ್ಡ ಅವಕಾಶಗಳು ನನ್ನ ಕೈ ತಪ್ಪಿ ಹೋಗಿರಬಹುದು. ಆದ್ರೆ ನಾನು ಖುಷಿಯಾಗಿದ್ದೇನೆ. ಇವತ್ತಿಗೂ ಚಿತ್ರರಂಗದಲ್ಲಿ ಎಲ್ಲರೊಂದಿಗೂ ಉತ್ತಮವಾದ ಸಂಬಂಧ ಹೊಂದಿದ್ದೇನೆ. ಇವತ್ತು ನನ್ನ ಹೇಳಿಕೆಯನ್ನ ಬಹುತೇಖರು ಖಂಡಿಸಬಹುದು.

ಆದ್ರೆ ಸತ್ಯ ಯಾವತ್ತಿಗೂ ಸತ್ಯನೇ. ಇಲ್ಲಿ ಮಹಿಳೆಯರನ್ನ ಬಳಸಿಕೊಳ್ಳುವ ಯತ್ನ ಮಾಡುವ ಅನೇಕ ಕೆಟ್ಟ ಪುರುಷರು ಇದ್ದಾರೆ. ಆದ್ರೆ ನೀವು ಗಟ್ಟಿಯಾಗಿ ನೋ ಅಂದ್ರೆ ನೋ ಅಂದಾಗ, ಅವರ‍್ಯಾರು ರೇಪ್ ಮಾಡಲ್ಲ, ದೌರ್ಜನ್ಯವೆಸಗಲ್ಲ. ಚಪ್ಪಾಳೆ ಒಂದೇ ಕೈಯಲ್ಲಿ ಹೊಡೆಯಲು ಆಗಲ್ಲ. ಎರಡು ಕೈ ಸೇರಿದ್ರೇನೇ ಚಪ್ಪಾಳೆಯಾಗೋದು. ಹಾಗಾಗಿ, ನಾನು ಪುರುಷರಲ್ಲಿ ಅಭಿಯಾನ ಶುರು ಮಾಡುವಂತೆ ಈ ಮೂಲಕ ಕೇಳಿಕೊಳ್ಳುತ್ತೇನೆ…

LEAVE A REPLY

Please enter your comment!
Please enter your name here