Home Cinema ಅರ್ಜುನ್ ಸರ್ಜಾ-ಶ್ರುತಿ ಹರಿಹರನ್ ಮನ ಒಲಿಸುವ ಯತ್ನ ಮಾಡುವಲ್ಲಿ ಸೋತ ಅಂಬಿ..!! ಗೊತ್ತೇ, ಯಶಸ್ವಿಯಾಗಲಿಲ್ಲವೇಕೆ ರೆಬೆಲ್...

ಅರ್ಜುನ್ ಸರ್ಜಾ-ಶ್ರುತಿ ಹರಿಹರನ್ ಮನ ಒಲಿಸುವ ಯತ್ನ ಮಾಡುವಲ್ಲಿ ಸೋತ ಅಂಬಿ..!! ಗೊತ್ತೇ, ಯಶಸ್ವಿಯಾಗಲಿಲ್ಲವೇಕೆ ರೆಬೆಲ್ ಸಂಧಾನ..!

2144
0
SHARE

ಅಸಲಿಗೆ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್, ಕಾನೂನಿನ ಮೆಟ್ಟಿಲು ಹತ್ತಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಿಡುವದಿಲ್ಲ. ಪ್ರಕರಣವನ್ನ ವಾಣಿಜ್ಯ ಮಂಡಳಿ ಇತ್ಯರ್ಥ ಮಾಡುತ್ತೆ ಅನ್ನುವ ವಿಶ್ವಾಸದಲ್ಲೇ ಚಿತ್ರರಂಗದವರಿದ್ದರು. ಇದಕ್ಕೆ ತಕ್ಕಂತೆ ರೆಬೆಲ್ ಸ್ಟಾರ್ ಅಂಬರೀಶ್ ಇಬ್ಬರ ನಡುವಿನ ರಾಜಿ ಸಂಧಾನದ ಉಸ್ತುವಾರಿಯನ್ನೂ ವಹಿಸಿದ್ದರು.

ಬಟ್, ಸುಧೀರ್ಘ ಎರಡು ಘಂಟೆಗೂ ಹೆಚ್ಚು ಕಾಲ ನಡೆದ ಸಭೆ ಸಫಲವಾಗುವ ಬದಲು ವಿಫಲವಾಗಿ ಹೋಯ್ತು. ಇದಕ್ಕೆ ಒಂದು ಇಬ್ಬರು ಹಿಡಿದ ಬಿಗಿಯಾದ ಪಟ್ಟು, ಇನ್ನೊಂದು ಪ್ರತಿಷ್ಠೆಯ ಪ್ರಶ್ನೆ. ಇನ್ನೂ ಸಂಧಾನ ಸಭೆಗೂ ಮುನ್ನ ಅರ್ಜುನ್ ಸರ್ಜಾ ಶ್ರುತಿ ವಿರುದ್ಧ ಕೊಟ್ಟಿದ್ದ ದೂರು ಇನ್ನೊಂದು ಕಾರಣ. ಹಾಗಾಗೇ, ಮನ ಒಲಿಸುವ ಯತ್ನ ಮಾಡುವಲ್ಲಿ ಸೋತ ಅಂಬಿ,

ನಾನೇನೂ ಜಡ್ಜ್ ಅಲ್ಲ ಕೋರ್ಟಿನಲ್ಲೇ ಬಗೆಹರಿಸಿಕೊಳ್ಳಿ ಅನ್ನುವ ಮೂಲಕ ಕೈ ತೊಳೆದುಕೊಂಡು ಬಿಟ್ಟರು.ಇನ್ನೂ ಇದೇ ವಿವಾದದ ಬಗ್ಗೆ ಮಾತನಾಡಿದ ಅರ್ಜುನ್ ಸರ್ಜಾ, ಕಾಂಪ್ರಮೈಸ್ ಮಾಡಿಕೊಳ್ಳುವ ಮಾತೇ ಇಲ್ಲ, ಸತ್ಯ ಹೊರಬರುವವರೆಗೂ ನಾನು ಹೋರಾಟ ನಿಲ್ಲಿಸುವದಿಲ್ಲ ಅನ್ನುವ ಆಕ್ರೋಶದ ಮಾತುಗಳನ್ನಾಡಿ, ವಾಣಿಜ್ಯ ಮಂಡಳಿನಿಂದ ನಿರ್ಗಮಿಸಿದ್ರು.ಶ್ರುತಿ ಹರಿಹರನ್ ಕೂಡಾ ತಮ್ಮ ಪಟ್ಟನ್ನ ಸಡಿಲುಗೊಳಿಸಲಿಲ್ಲ.

ನಾನ್ಯಾಕೆ ಕ್ಷಮೆ ಕೇಳಬೇಕು, ನಮ್ಮ ಸಮಾಜ ಎಷ್ಟೊಂದು ಕೆಳಗೆ ಬಿದ್ದಿದೆ ಅನ್ನೋದಕ್ಕೆ ಇದೇ ಪ್ರಕರಣ ಅತ್ಯುತ್ತಮ ಸಾಕ್ಷಿ ಅನ್ನುವ ಶ್ರುತಿ, ಕ್ಷಮೆ ಕೇಳೋದೇ ಪರಿಹಾರವಲ್ಲ ಅನ್ನುತ್ತಾರೆ.ಅದೇನೆ ಇರ‍್ಲಿ, ಸದ್ಯ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಕದನ, ಮತ್ತೊಂದು ಹಂತಕ್ಕೆ ತಲುಪಿದೆ. ಕೋರ್ಟಿನ ಅಂಗಳ ತಲುಪಿದೆ. ಮುಂದಿನ ದಿನಗಳಲ್ಲಿ ಇದೇ ಮೀ ಟೂ ಪ್ರಕರಣ, ಇನ್ನೆಲ್ಲಿ ಹೋಗಿ ಮುಟ್ಟುತ್ತೆ, ಇನ್ಯಾವ ಸುನಾಮಿಯನ್ನ ಮೀ ಟೂ ಎಬ್ಬಿಸುತ್ತೆ ಅನ್ನೋದು ಸದ್ಯದ ಕೂತುಹಲ…

LEAVE A REPLY

Please enter your comment!
Please enter your name here